ರಥ ಸಪ್ತಮಿ, ಸೂರ್ಯಾರಾಧನೆಯ ಉತ್ಸವ. ಹಾಗೆಂದೇ ಈ ದಿನ ಸೂರ್ಯ ನಮಸ್ಕಾರಕ್ಕೆ ವೀಶೇಷ ಮಹತ್ವ. ಇದು 12 ಆಸನಗಳ ಒಂದು ಗುಚ್ಛ. ಪ್ರತಿ ದಿನ 108 ಸೂರ್ಯನಮಸ್ಕಾರಗಳನ್ನು ಮಾಡಿದರೆ ಒಳ್ಳೆಯದು. ಗರಡಿಮನೆಗಳಲ್ಲಿ 1008 ಸೂರ್ಯ ನಮಸ್ಕಾರಗಳನ್ನು ಮಾಡಿಸುವುದೂ ಉಂಟು!
ವಾಸ್ತವದಲ್ಲಿ ಸೂರ್ಯ ನಮಸ್ಕಾರ ಪ್ರತಿನಿತ್ಯದ ಅಭ್ಯಾಸವಾಗಬೇಕು. ಇದನ್ನು ಸೂರ್ಯ ದೇವನೆಂಬ ಭಾವನೆ ಇಲ್ಲದ ನಾಸ್ತಿಕರು ವ್ಯಾಯಾಮ ಎಂದಾದರೂ ಮಾಡಲಿ. ಪ್ರಕೃತಿ ಆರಾಧಕರು ದಿನವೂ ಬೆಳಕು, ಶಾಖ ಮತ್ತೆಲ್ಲ ಜೀವ ಚೈತನ್ಯಕ್ಕೆ ಕಾರಣವಾದ ಮಹತ್ ತತ್ತ್ವ ಎಂಬ ಗೌರವ ಸಮರ್ಪಣೆಗಾದರೂ ಮಾಡಲಿ. ಅಥವಾ ಶ್ರದ್ಧಾವಂತರು ಸೂರ್ಯ ಭಗವಾನನೆಂಬ ಭಕ್ತಿಯಿಂದಲಾದರೂ ಮಾಡಲಿ. ಇದರ ಲಾಭವಂತೂ ಶತಃಸಿದ್ಧ.
ಸೂರ್ಯನಮಸ್ಕಾರ ಸ್ನಾಯುಗಳಿಗೆ ಬಲ ತುಂಬುತ್ತದೆ. ಕೊಬ್ಬು ಕರಗಿಸುತ್ತದೆ. ಇದನ್ನು ಪ್ರತಿದಿನ ನಡೆಸುವುದರಿಂದ ಪಕ್ಕೆಲುಬು ಮತ್ತು ಬೆನ್ನೆಲುಬುಗಳು ಹುರಿಗೊಂಡು ಕಾರ್ಯಚಟುವಟಿಕೆ ತೀವ್ರವಾಗುತ್ತದೆ.
ಈ ವಿಡಿಯೋ ಕಿರುಚಿತ್ರಿಕೆಯಲ್ಲಿ ಸೂರ್ಯ ನಮಸ್ಕಾರದ ವಿವಿಧ ಆಸನಗಳು, ಅವುಗಳ ಹೆಸರು, ಮಾಡುವ ವಿಧಾನ ಮತ್ತು ಪ್ರತಿ ಆಸನದ ಜೊತೆಯಲ್ಲಿ ಉಚ್ಚರಿಸಬೇಕಾದ ಮಂತ್ರಗಳನ್ನು ನೀಡಲಾಗಿದೆ. ನೋಡುವವರ ಅನುಕೂಲದ ದೃಷ್ಟಿಯಿಂದ ನಿಧಾನಗತಿಯಲ್ಲಿ ಈ ಚಿತ್ರಿಕೆಯನ್ನು ರೂಪಿಸಿದ್ದೇವೆ.
ಸಾಧ್ಯವಾದರೆ, ಪ್ರತಿದಿನವೂ ಸೂರ್ಯ ನಮಸ್ಕಾರ ಅಭ್ಯಾಸ ಮಾಡಿ; ಸದೃಢ ದೇಹ ಮತ್ತು ಪ್ರಫುಲ್ಲಿತ ಮನಸ್ಸನ್ನು ನಿಮ್ಮದಾಗಿಸಿಕೊಳ್ಳಿ!