ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #27

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಭಗವಂತನ ಸೃಷ್ಟಿಯಲ್ಲಿ
ಮನುಷ್ಯನ ಸ್ಥಾನ ಅನನ್ಯ.

“ನನ್ನ ಚೇತನವನ್ನೇ
ಮನುಷ್ಯನಿಗಾಗಿ ಧಾರೆ ಎರೆದಿದ್ದೇನೆ” ಎನ್ನುತ್ತಾನೆ ಭಗವಂತ.

ಭೂಮಿಯ ಮೇಲೆ ಭಗವಂತನ ರಾಯಭಾರಿಗಳನ್ನಾಗಿ
ನಮ್ಮನ್ನು (ಯಾವ ವಿನಾಯತಿಯೂ ಇಲ್ಲದೆ)
ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಆದರೆ
ಯಾವತ್ತಾದರೂ ನಾವು
ಭಗವಂತನ ಪ್ರತಿನಿಧಿಗಳ ಹಾಗೆ ವರ್ತಿಸಿದ್ದೀವಾ?

ನೆನಪಿರಲಿ
ನಮ್ಮೊಳಗಿನ ದಿವ್ಯ ಚೇತನವನ್ನು ಕಂಡುಕೊಳ್ಳುವುದು
ಮತ್ತು ಅದನ್ನು ಜೀವಿಸುವುದು
ಮಾತ್ರ
ಭಗವಂತನಿಗೆ ನಾವು ಸಲ್ಲಿಸಬಹುದಾದ
ನಿಜವಾದ ಕೃತಜ್ಞತೆ.

26ನೇ ನಿಯಮ ಇಲ್ಲಿ ನೋಡಿ : https://aralimara.com/2020/01/29/sufi-79/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

3 Responses

  1. Shashanka

    ಸರ್ ನಮಸ್ಕಾರ, ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳಲ್ಲಿ #12 ಬಂದಿಲ್ಲ ಮಿಸ್ ಆಗಿದೆ. ದಯವಿಟ್ಟು ಪ್ರಕಟಿಸಿ

Leave a Reply