ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #32

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನನ್ನ ಬದುಕನ್ನು
ಬದಲಾಯಿಸಿಕೊಳ್ಳಲು ನಾನು ಸಿದ್ಧನೆ ?
ನನ್ನ ಒಳಗನ್ನು
ಬದಲಾಯಿಸಿಕೊಳ್ಳಲು ನಾನು ಸಿದ್ಧನೆ ?

ಈ ಪ್ರಶ್ನೆಗಳನ್ನು ಕೇಳಿಕೊಳ್ಳಲು
ಎಲ್ಲ ಸಮಯವೂ ಶುಭ ಮಹೂರ್ತವೇ.

ನಿಮ್ಮ ಜೀವನದ ಒಂದು ದಿನ
ಥೇಟ್ ಹಿಂದಿನ ದಿನದ ಹಾಗಿದ್ದರೆ
ಇದಕ್ಕಿಂತ ಕರುಣಾಜನಕ ಸಂಗತಿ ಇನ್ನೊಂದಿಲ್ಲ.

ಪ್ರತೀ ಕ್ಷಣದ ಜೊತೆ
ಪ್ರತೀ ಉಸಿರಿನೊಂದಿಗೆ
ಹೊಸತಾಗುತ್ತಲೇ ಇರಬೇಕು.

ಹೊಸ ಬದುಕಿನಲ್ಲಿ ಕಾಲಿಡಲು
ಇರುವ ದಾರಿ ಒಂದೇ

ಸಾಯುವುದು, ಸಾವಿಗಿಂತ ಮೊದಲು.

31ನೇ ನಿಯಮ ಇಲ್ಲಿ ನೋಡಿ : https://aralimara.com/2020/02/10/sufi-85/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply