ಆಧುನಿಕ ಜಗತ್ತು ನಿಮ್ಮ ಸಮಸ್ಯೆಯಲ್ಲ: ಆಧುನಿಕ ಮನುಷ್ಯನ ಮೇಲೆ ಕೆಲಸದ ಹೊರೆ ಹೆಚ್ಚಾಗಿದೆ ಎಂದು ಯೋಚಿಸಬೇಡಿ. ನಿಮ್ಮ ಸಮಸ್ಯೆ ನೀವೇ ಆಗಿದ್ದೀರಿ… | ಸಂಗ್ರಹ ಮತ್ತು ಅನುವಾದ: ಧ್ಯಾನ್ ಉನ್ಮುಖ್
ಓಶೋ, ಆಧುನಿಕ ಮನುಷ್ಯ ಈ ಕೈಗಾರಿಕಾ ಯುಗದಲ್ಲಿ ವೇಗದ ಬದುಕಿನಲ್ಲಿ, ಒತ್ತಡದಲ್ಲಿ, ಸದಾ ಚಟುವಟಿಕೆಯಲ್ಲಿ ಕಳೆದುಹೋಗಿದ್ದಾನೆ ದಿನದ ಕೊನೆಯಲ್ಲಿ ಸಂಪೂರ್ಣವಾಗಿ ಬರಿದಾಗಿರುತ್ತಾನೆ. ಇಂತಹ ಸನ್ನಿವೇಶದಲ್ಲಿ ಅವನಿಗೆ ಅವನ ಆಂತರಿಕ ಮೌನ ಮತ್ತು ಸ್ಥಿರತೆ ಕಾಯ್ದುಕೊಳ್ಳುವುದು ಕಷ್ಟವಾಗಿದೆ. ಇದಕ್ಕೆ ಕಾರಣಗಳೇನು ಹಾಗೂ ಇದರಿಂದ ಹೊರಬರುವುದ ಹೇಗೆ ?
ಪರಿಸ್ಥಿತಿ ಹಾಗೆ ತೋರುತ್ತಿದೆ. ಆದರೆ ವಾಸ್ತವಸ್ಥಿತಿ ಹಾಗಿಲ್ಲ. ಬದಲಾಗಿ, ಪರಿಸ್ಥಿತಿ ತದ್ವಿರುದ್ದವಾಗಿದೆ. ಈ ಕೈಗಾರಿಕಕ್ರಾಂತಿ ಇಂದಾಗಲಿ, ನಿಮ್ಮ ಕೆಲಸದ ಒತ್ತಡದಿಂದಾಗಲಿ ನೀವು ದಣಿಯುತ್ತಿಲ್ಲ. ನಿಮ್ಮ ಆಂತರಿಕ ಸ್ಥಿರತೆಯ ಸಂಪರ್ಕವನ್ನು ಕಳೆದುಕೊಂಡಿರುವುದರಿಂದ ನೀವು ದಣಿದಿದ್ದೀರಿ. ಕೆಲಸ ನಿಮ್ಮ ಸಮಸ್ಯೆಯಲ್ಲ: ನೀವೇ ಸಮಸ್ಯೆಯಾಗಿದ್ದೀರಿ.
ಆಧುನಿಕ ಜಗತ್ತು ನಿಮ್ಮ ಸಮಸ್ಯೆಯಲ್ಲ: ಆಧುನಿಕ ಮನುಷ್ಯನ ಮೇಲೆ ಕೆಲಸದ ಹೊರೆ ಹೆಚ್ಚಾಗಿದೆ ಎಂದು ಯೋಚಿಸಬೇಡಿ. ನಿಮ್ಮ ಸಮಸ್ಯೆ ನೀವೇ ಆಗಿದ್ದೀರಿ. ಪ್ರಾಚೀನ ಮನುಷ್ಯನಿಗೆ ಹೋಲಿಸಿದಲ್ಲಿ ನಿಮಗೆ ಕಡಿಮೆ ಸಮಸ್ಯೆಗಳಿವೆ, ಯಾಂತ್ರೀಕರಣ, ಕೈಗಾರಿಕೀಕರಣ, ಇವೆಲ್ಲವೂ ಸಮಯವನ್ನು ಉಳಿಸಲು ಸಹಾಯ ಮಾಡುತ್ತಿವೆ.
ಆದರೆ ನಿಮಗೆ ಈಗ ಸಮಯವಿದೆ. ಆದರೆ ಸ್ಥಿರತೆ ಇಲ್ಲದಿರುವುದರಿಂದ, ನಿಮಗೆ ಈಗ ಸಮಯವನ್ನು ಬಳಸುವು ರೀತಿ ಹೇಗೆಂದು ಗೊತ್ತಾಗುತ್ತಿಲ್ಲ, ಅದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
ಒಬ್ಬ ಪ್ರಾಚೀನ ಮನುಷ್ಯನಿಗೆ ಕಡಿಮೆ ಸಮಸ್ಯೆಗಳಿದ್ದವು, ಅದರ ಅರ್ಥ ಅವನು ಮೌನವಾಗಿದ್ದ ಎಂದಲ್ಲ ಅವನಿಗೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳವಷ್ಟು ಸಮಯವಿರಲಿಲ್ಲ. ನಿಮಗೆ ಹೆಚ್ಚು ಸಮಯವಿದೆ ಮತ್ತು ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲ. ಈ ಸಮಯವನ್ನು ಅಂತರ್ ಯಾತ್ರೆಗೆ ಬಳಸಬಹುದು. ಇನ್ನೂ ಯಾವುದೇ ಭರವಸೆಯಿಲ್ಲ ಇನ್ನು ಹೆಚ್ಚು ಹೆಚ್ಚು ಸಮಯ ಸಿಗುವುದು. ಆಂತರ್ ಯಾತ್ರೆ ಪ್ರಾರಂಬಿಸದೆ ಹೋದರೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಹೋಗುವಿರಿ.