ಮೌನ : ಸಾದಿ ಶಿರಾಝಿಯ ಪದ್ಯ : ಸೂಫಿ ಕಾರ್ನರ್

ಮೂಲ :  ಶೇಖ್ ಸಾದಿ ಶಿರಾಝಿ | ಕನ್ನಡಕ್ಕೆ: ಸುನೈಫ್

ಮೂರ್ಖನಿಗೆ ಮೌನವೇ ಕಿರೀಟ
ಮತ್ತು, ಇದನವ ಅರಿತ ದಿನ
ಮೂರ್ಖನಾಗಿ ಉಳಿದಿರುವುದಿಲ್ಲ

ನಿನ್ನ ಮಾತುಗಳು ಗೌಣವಾಗುವ ಕಡೆ
ನಾಲಗೆ ಮಡಚಿಟ್ಟು ಸುಮ್ಮನಿದ್ದು ಬಿಡು.
ಜಗಳವಿರದು, ನಾಲಗೆ ತೂಕವಿದ್ದರೆ;
ತಿರುಳಿಲ್ಲದ ಕಾಯಿಗೆ ತೂಕವೂ ಕಮ್ಮಿ.

ಪಶುಗಳು ನಿನ್ನ ಮಾತು ಕಲಿಯುವುದಿಲ್ಲ,
ಅವುಗಳ ಮೌನವನ್ನು ನೀನೇ ಕಲಿತು ಬಿಡು.
ಆಡುವ ಮಾತಿನಲ್ಲಿ ಉತ್ತರವಿಲ್ಲದಿದ್ದರೆ
ಅವನ ಮಾತುಗಳ ಕಡೆಗಣಿಸಿ ಬಿಡು.

ಬಾ ಗೆಳೆಯನೇ, ನಿನ್ನ ಮಾತುಗಳ ದಾಖಲಿಸು
ಅಥವಾ, ಮೂಕಪ್ರಾಣಿಯಂತೆ ಮೌನವಾಗಿರು.

 

Leave a Reply