ಸೂಕ್ಪ್ಮ ಶರೀರಯಾನ : ಹಾಗೆಂದರೇನು? (ಭಾಗ 2)

ಸೂಕ್ಪ್ಮ ಶರೀರ ಭೌತಿಕವಾಗಿ ಅತಿಯಾಗಿ ಹೊಂದಿಕೊಂಡಿದೆ. ಕಾರಣ ಸೂಕ್ಪ್ಮ ಶರೀರಕ್ಕೆ ಬಹಿರ್ಮುಖ ಚಲನೆಯಲ್ಲಿ ತೋಡಗಿಸಿದ್ದೆವೆ. ಹೀಗಾಗಿ ದೇಹದೊಂದಿಗೆ ಅತಿಹೆಚ್ಚು ಗುರುತಿಸಿಕೊಂಡಿರುವ ಸೂಕ್ಪ್ಮಶರೀರ ಯಾವಾಗಲೂ ಇಂದ್ರಿಯಗಳ ಮೂಲಕ ಬಹಿರ್ಮುಖವಾಗಿ ಚಲಿಸುತ್ತದೆ  । ಜಯದೇವ ಪೂಜಾರ್

ವಿಜ್ಞಾನಕ್ಕೆಯಾಗಲೀ ಅಥವ ಮನಶಾಸ್ತ್ರಕ್ಕೆಯಾಗಲೀ ದಕ್ಕದ ವಿಷಯವೆಂದರೆˌ ಅದು ಸೂಕ್ಪ್ಮಶರೀರಯಾನ. ಆದರೆˌ ಅದರ ಹುಡುಕಾಟ, ಶೋಧನೆಯೆಲ್ಲ ಭೌತಿಕ ಪ್ರಪಂಚಕ್ಕೆ ಸೇರಿದ್ದು. ಮನಶಾಸ್ತ್ರ ಮಾನವನ ವರ್ತನೆಯನ್ನು ಅಭ್ಯಸಿಸುತ್ತದೆ. ಆದರೆˌ ಅತಿ ಸೂಕ್ಪ್ಮ ವಿಷಯಗಳಾದ ಸೂಕ್ಪ್ಮಶರೀರಯಾನ ಕುರಿತಾಗಿ ಅವುಗಳಿಗೆ ತಿಳುವಳಿಕೆಯಿಲ್ಲ. ಇವೇಲ್ಲ ಆಧ್ಯಾತ್ಮಿಕವಾದ ಅನುಭವಗಳು.

ಈ ಆಧ್ಯಾತ್ಮಿಕ ಅನುಭವವಾದ ಸೂಕ್ಪ್ಮ ಶರೀರ ವೆಂದರೇನು? ಎಂದು ಮೊದಲು ತಿಳಿಯಬೇಕು. ಭೌತಿಕ ಶರೀರ ( physical body), ಸೂಕ್ಪ್ಮ ಶರೀರ ( molecular body), ಕಾರಣ ಶರೀರ ( casual body). ಬಹುತೇಕರು ಭೌತಿಕ ಶರೀರದಲ್ಲಿ ವಾಸಿಸುತ್ತಾರೆˌ ಭೌತಿಕ ಶರೀರದೊಂದಿಗೆ ಗುರುತಿಸಿಕೊಳ್ಳುತ್ತಾರೆˌ ಭೌತಿಕ ಶರೀರವನ್ನೆ ಎಲ್ಲದಕ್ಕೂ ಕಾರಣವೆಂದು ಕೊಳ್ಳುತ್ತಾರೆ. ಸುಖˌ ಸಂತೋಷವೇಲ್ಲ ಭೌತಿಕವಾದ ಶರೀರದಿಂದಲೆ ಹೊಂದಲು ಆತುರವಾಗಿರುತ್ತಾರೆ.

ನಿಮಗೆ ತಿಳಿದಿರಲಿˌ ಯಾರೆಲ್ಲ ಭೌತಿಕ ಶರೀರವನ್ನು ಅತಿ ಹೆಚ್ಚು ನೆಚ್ಚಿಕೊಂಡಿರುತ್ತಾರೆˌ ಅತಿಹೆಚ್ಚು ಭೌತಿಕವಾಗಿ ಬದುಕುವರೋ ಅವರೆಲ್ಲ ಅತಿ ಹೆಚ್ಚು ನೋವುˌ ದುಃಖˌ ಸಂಕಟˌ ಯಾತನೆˌ ಭಯ ಅನುಭವಿಸುತ್ತಾರೆ.

ಸೂಕ್ಪ್ಮಶರೀರ ಅಂದರೆ ನಮ್ಮ ಮನಸ್ಸು. ನಮ್ಮ ಮನಸ್ಸೆಂದರೆ ಆಲೋಚನೆ. ಆಲೋಚನೆಯೆಂದರೆ ಚಲನೆ. ಆಲೋಚನೆಗಳಾದರೂ ಏನು? ನಾವು ನಿಜವಾಗಿಯೂ ಆಲೋಚಿಸುತ್ತೆವೆಯೆ? ಆಲೋಚಿಸುವುದಿಲ್ಲ. ಬರೀ ನಿರ್ಣಯಿಸುತ್ತೇವೆ. ನಮಗೆ ಆಲೋಚನೆ ಶಕ್ತಿ ಕಡಿಮೆ. ಅದಕ್ಕಾಗಿ ನಿರ್ಣಯಿಸುತ್ತೇವೆ. ನಿಜವಾದ ಆಲೋಚನೆಗಳು ಸ್ವತಂತ್ರವಾಗಿರುತ್ತವೆ. ಹೀಗೆ ಸ್ವತಂತ್ರವಾಗಿ ಆಲೋಚಿಸುವುದರಿಂದ ಅಪಾರವಾದ ಬುದ್ದಿಶಕ್ತಿ ವೃದ್ದಿಯಾಗುವದು.

ಆದರೆ ಆಗುತ್ತಿರುವದು ಏನು? ನಮ್ಮ ಆಲೋಚನೆಗಳನ್ನು ಗಮನಿಸಿ ನೋಡಿ. ನಮ್ಮೆಲ್ಲ ಆಲೋಚನೆಗಳಲ್ಲಿ ಶೇ.90 ರಷ್ಟು ನಿರ್ಣಯಗಳೇ ಆಗಿವೆ. ಅದರಲ್ಲಿಯೂ ಬಹುತೇಕ ನಿರ್ಣಯಗಳು ನಕಾರತ್ಮಾಕವಾಗಿವೆ. ಇರಲಿˌ ಈ ಆಲೋಚನೆಗಳು ಚಲನೆಗೆ ಕಾರಣವಾಗಿವೆ. ನಮ್ಮ ನಕಾರತ್ಮಾಕ ನಿರ್ಣಯಗಳಿಂದಾಗಿ ನಾವೂ ಸದಾ ನಕಾರತ್ಮಕವಾಗಿ ವಿಚಾರ ಮಾಡುತ್ತ ನಕಾರದೆಡೆಗೆ ಚಲಿಸುತ್ತಿರುತ್ತೇವೆ. ನಾವು ಭೌತಿಕವಾಗಿ ಹೇಗೆ ವರ್ತಿಸುತ್ತೇವೆ. ಹೇಗೆ ಕ್ರೀಯೆ ಮಾಡುತ್ತೇವೆˌ ಹೇಗೆ ಪ್ರತಿಕ್ರಿಯಿಸುತ್ತೇವೆ  ಎಂದು ತುಂಬ ಆಳವಾಗಿ ಅಧ್ಯಯನ ಮಾಡಬೇಕು. ಆಗ ನಿಮಗೆ ನಮ್ಮ ವರ್ತನೆˌ ಕ್ರೀಯೆˌ ಪ್ರತಿಕ್ರೀಯೆ ಹಿಂದೆಯಿರುವˌ ಕಾರಣವಾಗಿರುವ ಮನಸ್ಸಿನ ಬಗ್ಗೆ ತಿಳುವಳಿಕೆ ಬರುವದು.

ಸೂಕ್ಪ್ಮ ಶರೀರ ಭೌತಿಕವಾಗಿ ಅತಿಯಾಗಿ ಹೊಂದಿಕೊಂಡಿದೆ. ಕಾರಣ ಸೂಕ್ಪ್ಮ ಶರೀರಕ್ಕೆ ಬಹಿರ್ಮುಖ ಚಲನೆಯಲ್ಲಿ ತೋಡಗಿಸಿದ್ದೆವೆ. ಹೀಗಾಗಿ ದೇಹದೊಂದಿಗೆ ಅತಿಹೆಚ್ಚು ಗುರುತಿಸಿಕೊಂಡಿರುವ ಸೂಕ್ಪ್ಮಶರೀರ ಯಾವಾಗಲೂ ಇಂದ್ರಿಯಗಳ ಮೂಲಕ ಬಹಿರ್ಮುಖವಾಗಿ ಚಲಿಸುತ್ತದೆ. ಯಾವಾಗ ಸೂಕ್ಪ್ಮ ಶರೀರ ಅದು ದೇಹದೊಂದಗಿನ ತಾದ್ಯಾತ್ಮ ಭಾವವನ್ನು ಕಳೆದುಕೊಂಡು ಅಂತರ್ಮುಖಿಯಾಗಿ ಚಲಿಸಲು ಪ್ರಾರಂಭವಾಗುವದೋ ಆಗ ಸೂಕ್ಪ್ಮ ಶರೀರಯಾನದ ಪಯಣ ಪ್ರಾರಂಭವಾಗುವದು.

ಆಲೋಚನೆಗಳು ಚಲನೆಗೆ ಕಾರಣವೆಂಬುವದನ್ನು ನಾವು ತಿಳಿದೆವೂˌ ಆಲೋಚನೆಗಳು ಚಲನೆಯಾಗಿವೆ. ಅಂದರೆˌ ಮನಸ್ಸು ಇಂದ್ರಿಯಗಳ ಮೂಲಕ ದೇಹವನ್ನು ಓಡಿಸುತ್ತಲೆ ಇರುತ್ತದೆ. ದಣಿಸುತ್ತದೆ ಮತ್ತು ಕೊನೆಗೆ ಸವೆಯುತ್ತದೆ. ಈ ಚಲನೆ ಹೇಗೆ ಆಗುತ್ತದೆ? ಈ ಚಲನೆಗೆ ಕಾರಣಬೇಕಲ್ಲ? ಕಾರಣವಿಲ್ಲದೆ ಇಲ್ಲಿ ಒಂದು ಹುಲ್ಲುಕಡ್ಡಿಯೂ ಚಲಿಸುದಿಲ್ಲ. ಈ ಚಲನೆ ಖಾಲಿ ಸ್ಥಳದಲ್ಲಿ  ಚಲಿಸುತ್ತದೆ ಅಂದರೆˌ ಖಾಲಿತನವೆಂಬುವದು ಶಾಶ್ವತ ಸ್ಥಿತಿ.  ಚಲನೆಯಾಗಲು ಶಾಶ್ವತವಾಗಿರುವದು ಬೇಕೇಕು. ಇಲ್ಲವಾದಲ್ಲಿ ಚಲನೆ ಸಾಧ್ಯವಿಲ್ಲ.

ಉದಾ: ರೈಲು ಚಲಿಸಲು ಹಳಿಗಳು ಬೇಕು. ಹಳಿಗಳು ಶಾಶ್ವತವಾಗಿರಬೇಕು. ಹಳಿ ಮತ್ತು ರೈಲು ಚಲಿಸಲು ಆಗುವುದಿಲ್ಲ. ಹಾಗೇˌ ಸಿನೆಮಾ ವೆಂಬುವದು ದೃಶ್ಯಗಳ ಚಲನೆ. ಆ ಸಿನೆಮಾ ನೋಡಲು ಶಾಶ್ವತ ಪರದೆಯೊಂದು ಬೇಕು. ಪರದೆ ಚಲಿಸುವುದಿಲ್ಲ. ಅದು ಶಾಶ್ವತವಾಗಿದ್ದರೆ ಮಾತ್ರ ದೃಶ್ಯಗಳ ಚಲನೆ ಸಾಧ್ಯ. ಹಾಗೆಯೆˌ ದೇಹˌ ಮನಸ್ಸು ಇವುಗಳ ಚಲನೆ ಶಾಶ್ವತವಾದದರ ಮೇಲೆ ನಡೆಯಲೆಬೇಕು. ಆ ಶಾಶ್ವತವಾದ್ದದೆ ಕಾರಣ ಶರೀರ. ಆ ಕಾರಣ ಶರೀರವನ್ನೆ, ಶಾಶ್ವತ ಸ್ಥಿತಿಯನ್ನೆ ಚೇತನಾˌ ಆತ್ಮ spirtual body ಎಂದು ಕರೆಯಬಹುದು. ಇದು ಯಾವಾಗಲೂ ಶಾಶ್ವತವಾಗಿದ್ದು ˌ ಪ್ರತಿಯೊಂದು ಚಲನೆಗೂ ಕಾರಣ ಮತ್ತು ಸಾಕ್ಪಿಯಾಗಿರುತ್ತದೆ…

( ಮುಂದುವರಿಯುವದು..)

ಹಿಂದಿನ ಭಾಗ ಇಲ್ಲಿ ನೋಡಿ : 

Leave a Reply