ಮನಸ್ಸು ಬಿರುಗಾಳಿಯಾಗಲು ಬಿಡಬೇಡಿ : ಭಗವದ್ಗೀತೆಯ ಬೋಧನೆ

ಇಂದ್ರಿಯಾಣಾಂ ಹಿ ಚರತಾಂ ಯನ್ಮನೋSನುವಿಧೀಯತೇ । ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ ॥ಗೀತೆ:02:67॥

ಅರ್ಥ: ಐಹಿಕ ಸುಖಗಳತ್ತ ಹರಿಯುವ ಮನಸ್ಸು ಇಂದ್ರಿಯಗಳ ಬೆನ್ನು ಹತ್ತುತ್ತದೆ. ಮತ್ತು ನಿಯಂತ್ರಣ ತಪ್ಪಿ ಕಡಲಲ್ಲಿ ಬಿರುಗಾಳಿ ಹಡಗನ್ನು ಹೇಗೆ ದಾರಿ ತಪ್ಪಿಸುತ್ತದೋ ಹಾಗೆ ಅದು ವ್ಯಕ್ತಿಯ ಅರಿವನ್ನೇ ದಿಕ್ಕೆಡಿಸಿಬಿಡುತ್ತದೆ. (ಆದ್ದರಿಂದಲೇ ಮನಸ್ಸನ್ನು ಬಿರುಗಾಳಿಯಾಗಲು ಬಿಡಬೇಡ)

ನಾವು ಹಾಯಿ ದೋಣಿಯಲ್ಲಿ ಪ್ರಯಾಣಿಸುವ ಯಾತ್ರಿಕರಂತೆ. ನಮ್ಮ ಮನಸ್ಸು ಆ ದೋಣಿಗೆ ಕಟ್ಟಿದ ಬಟ್ಟೆ. ಒಂದು ವೇಳೆ ನಮಗೆ ಈ ಬಟ್ಟೆಯನ್ನು ತಿರುಗಿಸಿ ನಮಗೆ ಬೇಕಾದಂತೆ ದೋಣಿಯನ್ನು ನಿಯಂತ್ರಿಸುವ ಕಲೆ ಗೊತ್ತಿಲ್ಲದಿದ್ದರೆ, ಗಾಳಿ ಬೀಸಿದತ್ತ ನಾವು ಹೋಗುತ್ತೇವೆ ಹೊರತು ನಮಗೆ ತಲುಪಬೇಕಾದಲ್ಲಿಗೆ ಅಲ್ಲ. ಅದೇ ರೀತಿ, ಒಂದು ವೇಳೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವ ಅರಿವು ಪಡೆಯದಿದ್ದರೆ ಬದುಕು ಬಿರುಗಾಳಿಗೆ ಸಿಕ್ಕ ನಾವೆಯಂತಾಗುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ.

Leave a Reply