ಮನಸ್ಸೆಂಬ ಆನೆಯನು ಕಟ್ಟಿ… ಈ ದಿನದ ಸುಭಾಷಿತ

ಇಂದಿನ ಸುಭಾಷಿತ, ಬೋಧಿಚರ್ಯಾವತಾರದಿಂದ…

ಬುದ್ಧಶ್ಚೇಚೇಚ್ಚಿತ್ತಮಾತಂಗಸ್ಮೃತಿರಜ್ಜ್ವಾ ಸಮಂತತಃ।
ಭಯಮಸ್ತಂಗತಂ ಸರ್ವಂ ಕೃತ್ಸ್ನಂ ಕಲ್ಯಾಣಮಾಗತಮ್॥

ಅರ್ಥ: ಮನಸ್ಸೆಂಬ ಆನೆಯನ್ನು ನಾಲ್ಕೂ ಕಡೆಗಳಿಂದ ಧ್ಯಾನವೆಂಬ ಹಗ್ಗದಿಂದ ಕಟ್ಟಿಹಾಕಿದಾಗ ಎಲ್ಲ ವಿಧದ ಭಯಗಳೂ ದೂರವಾಗುತ್ತವೆ. ಎಲ್ಲವೂ ಒಳಿತೇ ಆಗುತ್ತವೆ.

ತಾತ್ಪರ್ಯ: ಮನಸ್ಸಿನ ಕಲ್ಪನೆಗಳು, ಪೂರ್ವಾಗ್ರಹಗಳು ಮುಖ್ಯವಾಗಿ ಭಯದ ಹುಟ್ಟಿಗೆ ಕಾರಣವಾಗುತ್ತವೆ. ಮನಸ್ಸು ಯಾವಾಗಲೂ ಭೂತಕಾಲವನ್ನು ಮೆಲುಕು ಹಾಕುತ್ತಾ ಇರುತ್ತದೆ ಅಥವಾ ಭವಿಷ್ಯದಲ್ಲಿ ಏನಾಗುವುದೋ ಎಂದು ಚಿಂತಿಸುತ್ತಾ ಇರುತ್ತದೆ. ಅದರ ಈ ಆತಂಕಗಳು ಸುಲಭಕ್ಕೆ ಸುಮ್ಮನೆ ನಿಲ್ಲಿಸಲಾಗದ ಆನೆಯಂತೆ ಅತ್ತಿಂದಿತ್ತ ತೊನೆಯುತ್ತಲೇ ಇರುತ್ತವೆ. ಆದ್ದರಿಂದ ಧ್ಯಾನವೆಂಬ ಹಗ್ಗದ ಮೂಲಕ ತೊನೆದಾಡುವ ಈ ಆನೆಯನ್ನು ಕಟ್ಟಿಹಾಕಿದರೆ, ಯೋಚನೆಗಳೆಲ್ಲ ನಿಂತು ಹೋಗಿ ಮನಸ್ಸು ನಿಶ್ಚಲವಾಗುತ್ತದೆ, ಭಯವೂ ದೂರವಾಗುತ್ತದೆ.

Leave a Reply