ಪಾಂಡಿತ್ಯವೆಂದರೆ ಇದೇ… । ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಸಮಯೋಚಿತ ಪದ್ಯಮಾಲಿಕೆಯಿಂದ…

ಇದಮೇವ ಹಿ ಪಾಂಡಿತ್ಯಂ ಚಾತುರ್ಯಮಿದಮೇವ ಹಿ ।
ಇದಮೇವ  ಸುಬುದ್ಧಿತ್ತ್ವಮಾಯಾದಲ್ಪತರೋ ವ್ಯಯಃ ॥ ಸಮಯೋಚಿತಪದ್ಯಮಾಲಿಕಾ ॥
ಅರ್ಥ: ಪಾಂಡಿತ್ಯವೆಂದರೆ ಇದೇ, ಜಾಣ್ಮೆಯೆಂದರೆ ಇದೇ, ಬುದ್ಧಿವಂತಿಕೆ ಅಂದರೆ ಇದೇ – ಆದಾಯಕ್ಕಿಂತ ಕಡಿಮೆ ಖರ್ಚು ಮಾಡುವುದು. 

ತಾತ್ಪರ್ಯ: ಪಾಂಡಿತ್ಯವೆಂದರೆ ಬರೀ ಶಬ್ದಜಾಲವನ್ನು ಬಾಯಿಪಾಠ ಮಾಡುವುದಲ್ಲ, ಕಲಿತಿದ್ದನ್ನು ಎಲ್ಲಿ ಬಳಸಬೇಕೋ ಅಷ್ಟು, ಹಿತಮಿತವಾಗಿ ಬಳಸುವುದು. ಇದನ್ನೇ ಮಾರ್ಮಿಕವಾಗಿ ಹಣದ ಉದಾಹರಣೆ ಕೊಟ್ಟು ಈ ಸುಭಾಷಿತದಲ್ಲಿ ಮನದಟ್ಟು ಮಾಡಿಸಲಾಗಿದೆ. ಜೊತೆಗೇ, ಹಣದ ವಿಷಯದಲ್ಲೂ ಇದು ನೂರಕ್ಕೆ ನೂರು ಸರಿಯಾದ ಸಲಹೆಯೇ. ದುಡಿಮೆ ಎಷ್ಟೋ ಅದಕ್ಕಿಂತ ಕಡಿಮೆ ಖರ್ಚು ಮಾಡುವುದು ಜಾಣತನ. ಇದನ್ನೇ ನಮ್ಮ ಜನಪದೀಯರು “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ಚಿಕ್ಕದಾಗಿ ಚೊಕ್ಕವಾಗಿ ಹೇಳಿರುವುದಲ್ಲವೆ?

Leave a Reply