ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನಿನ್ನ ಪ್ರಕಾರ ವಿಧಿ ಎಂದರೇನು?
ಒಬ್ಬ ವಿದ್ವಾಂಸ ನಸ್ರುದ್ದೀನ್ ನ ಪ್ರಶ್ನೆ ಮಾಡಿದ.
“ ಒಂದಕ್ಕೊಂದು ಲಿಂಕ್ ಆಗಿರುವ, ಒಂದನ್ನೊಂದು ಪ್ರಭಾವಿಸುವ, ಒಂದನ್ನೊಂದು ಹುಟ್ಟುಹಾಕುವ ಕೊನೆಯಿಲ್ಲದ ಘಟನೆಗಳ ಸರಣಿ “
ನಸ್ರುದ್ದೀನ್ ವಿಧಿಯ ಬಗ್ಗೆ ತನ್ನ ಪಾಂಡಿತ್ಯಪೂರ್ಣ ವ್ಯಾಖ್ಯಾನ ಮಾಡಿದ.
“ ನನಗೆ ನಿನ್ನ ಉತ್ತರ ತೃಪ್ತಿ ಕೊಡಲಿಲ್ಲ, ನನಗೆ ಕರ್ಮ ಸಿದ್ಧಾಂತದಲ್ಲಿ ನಂಬಿಕೆ”
ವಿದ್ವಾಂಸ ತನ್ನ ತಕರಾರು ಹೇಳಿದ.
ನಸ್ರುದ್ದೀನ್, ವಿದ್ವಾಂಸನಿಗೆ ದಾರಿಯಲ್ಲಿ ಹೋಗುತ್ತಿದ್ದ ಜನಗಳ ಗುಂಪೊಂದನ್ನ ತೋರಿಸಿ ಕೇಳಿದ,
“ ಅಲ್ಲಿ ನೋಡು, ಆ ಮನುಷ್ಯನನ್ನು ಗಲ್ಲಿಗೇರಿಸಲು ಕರೆದೊಯ್ಯುತ್ತಿದ್ದಾರೆ. ಅವನು ಗಲ್ಲಿಗೇರುತ್ತಿರುವ ಕಾರಣ ಯಾವುದು ? ಅವನಿಗೆ ಯಾರಾದರೂ ಚೂರಿ ಕೊಳ್ಳಲು ಹಣ ಕೊಟ್ಟಿದ್ದಾ ; ಅಥವಾ ಅವನು ಕೊಲೆ ಮಾಡುವುದನ್ನ ಯಾರಾದರೂ ನೋಡಿದ್ದಾ ; ಅಥವಾ ಅವನು ಕೊಲೆ ಮಾಡುವುದನ್ನ ತಡೆಯಲು ಯಾರೂ ಪ್ರಯತ್ನಿಸದಿರೋದಾ ? “