ಅದು ನೀನೇ ಆಗಿರಬೇಕು! : ಒಂದು ಸೂಫಿ ಪದ್ಯ

ಮೂಲ: ಆಲಾ ಅಲ್ ದೌಲಾ ಸಿಮ್ನಾನಿ । ಕನ್ನಡಕ್ಕೆ: ಸುನೈಫ್

ನಾನು ಇದ್ದೆ ಎಂಬುದು ನಿಜ
ಈಗ ನಾನೆಂಬುದಿಲ್ಲ
ಈಗಲೂ ‘ನಾನು’ ಇರುವುದು ಹೌದೆಂದಾದರೆ
ಖಂಡಿತಾ ಅದು ನೀನೇ ಆಗಿರಬೇಕು

ನಿಲುವಂಗಿಯೊಂದು ನನ್ನನಪ್ಪಿ
ಬೆಚ್ಚಗಿರಿಸುತ್ತದೆ‌ ಎಂದರೆ
ಖಂಡಿತಾ ಆ ಕೌದಿ ನೀನೇ ಆಗಿರಬೇಕು

ನಿನ್ನ ಪ್ರೇಮದ ದಾರಿಯಲ್ಲಿ
ಉಳಿಯಲಿಲ್ಲ ಏನೊಂದೂ
ದೇಹವೂ ಇಲ್ಲ, ಆತ್ಮವೂ ಇಲ್ಲ

ದೇಹವಿದೆಯೆಂದರೆ
ಆತ್ಮವಿದೆಯೆಂದರೆ
ಸಂಶಯವೇ ಇಲ್ಲ
ಖಂಡಿತಾ ಅದು ನೀನೇ ಆಗಿರಬೇಕು

Leave a Reply