ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮಚಂದ್ರನ ವಂಶವೃಕ್ಷ

ಶ್ರೀರಾಮ ಸೂರ್ಯವಂಶದ ಅರಸು. ರಾಮ ಇಕ್ಷ್ವಾಕು ವಂಶದವನೆಂದೂ, ರಘುಕುಲ ತಿಲಕನೆಂದೂ ಹೇಳುತ್ತಾರೆ.  ಸೂರ್ಯವಂಶದ ಇಕ್ಷ್ವಾಕು ಮತ್ತು ರಘು ಎಂಬ ಅರಸರು ರಾಮನ ಪೂರ್ವಜರಾಗಿದ್ದುದೇ ಇದಕ್ಕೆ ಕಾರಣ. ವಾಲ್ಮೀಕಿ ರಾಮಾಯಣದಲ್ಲಿ ನಿರೂಪಿತವಾಗಿರುವಂತೆ ರಾಮನ ಪೂರ್ವಜರ ವಂಶವೃಕ್ಷವನ್ನೊಮ್ಮೆ ನೋಡೋಣ…

ಮೂಲ : ಬ್ರಹ್ಮ

ಬ್ರಹ್ಮನ ಮಗ ಮರೀಚಿ

ಮರೀಚಿಯ ಮಗ ಕಶ್ಯಪ

ಕಶ್ಯಪರ ಮಗ ಸೂರ್ಯ

ಸೂರ್ಯನ ಮಗ ಮನು

ಮನುವಿನ ಮಗ ಇಕ್ಷ್ವಾಕು

ಇಕ್ಷ್ವಾಕುವಿನ ಮಗ ಕುಕ್ಷಿ

ಕುಕ್ಷಿಯ ಮಗ ವಿಕುಕ್ಷಿ

ವಿಕುಕ್ಷಿಯ ಮಗ ಬಾಣ

ಬಾಣನ ಮಗ ಅನರಣ್ಯ

ಅನರಣ್ಯನ ಮಗ ಪೃಥು

ಪೃಥುವಿನ ಮಗ ತ್ರಿಶಂಕು

ತ್ರಿಶಂಕುವಿನ ಮಗ ದುಂಧುಮಾರ (ಯುವನಾಶ್ವ)

ದುಂಧುಮಾರುವಿನ ಮಗ ಮಾಂಧಾತ

ಮಾಂಧಾತುವಿನ ಮಗ ಸುಸಂಧಿ

ಸುಸಂಧಿಯ ಮಗ ಧೃವಸಂಧಿ

ಧೃವಸಂಧಿಯ ಮಗ ಭರತ

ಭರತನ ಮಗ ಅಶೀತಿ

అಶೀತಿಯ ಮಗ ಸಗರ

ಸಗರನ ಮಗ ಅಸಮಂಜಸ

ಅಸಮಂಜಸನ ಮಗ ಅಂಶುಮಂತ

ಅಂಶುಮಂತನ ಮಗ ದಿಲೀಪ

ದಿಲೀಪನ ಮಗ ಭಗೀರಥ

ಭಗೀರಥನ ಮಗ ಕಕುತ್ಸು

ಕಕುತ್ಸುವಿನ ಮಗ ರಘು

ರಘುವಿನ ಮಗ ಪ್ರವರ್ಧ

ಪ್ರವರ್ಧನ ಮಗ ಶಂಖನು

ಶಂಖನುವಿನ ಮಗ ಸುದರ್ಶನ

ಸುದರ್ಶನನ ಮಗ ಅಗ್ನಿವರ್ಣ

ಅಗ್ನಿವರ್ಣನ ಮಗ ಶೀಘ್ರವೇದ

ಶೀಘ್ರವೇದನ ಮಗ ಮರು

ಮರುವಿನ ಮಗ ಪ್ರಶಿಷ್ಯಕ

ಪ್ರಶಿಷ್ಯಕನ ಮಗ ಅಂಬರೀಶ

ಅಂಬರೀಶನ ಮಗ ನಹುಶ

ನಹುಶನ ಮಗ ಯಯಾತಿ

ಯಯಾತಿಯ ಮಗ ನಾಭಾಗ

ನಾಭಾಗನ ಮಗ ಅಜ

ಅಜನ ಮಗ ದಶರಥ

ದಶರಥನ ಮಗ ರಾಮ

Leave a Reply