ಬದುಕಿನ ಹಾದಿ ಯಾವುದಾಗಿರಬೇಕು ಅನ್ನುವ ಚಿಂತನೆಯನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ, ಅರಳಿಮರದ ಓದುಗರೂ, ಬರಹಗಾತಿಯೂ ಆದ ರೇಖಾ ಗೌಡ.
ದುರ್ಜನರ ಪ್ರಭಾವಕ್ಕೆ ಒಳಗಾಗುವುದರಿಂದ ಅದು ಸರ್ವನಾಶದಿಂದ ಸಾವಿನವರೆಗೂ ಕೊಂಡೊಯ್ಯಬಹುದು. ನಿಜ ಜನರ ಮಾರ್ಗದರ್ಶನದಲ್ಲಿ ಸರಿ ದಿಕ್ಕಿನಲ್ಲಿ ಸಾಗುವುದರಿಂದ ಬೇರಿನೊಂದಿಗೆ ರೆಕ್ಕೆಯೂ ಮೂಡುವುದು!
ದುಷ್ಟರ ಸೆಳೆತಕ್ಕೆ ಸಿಕ್ಕಾಗ ಸಾಕಷ್ಟು ಸುಳಿವು, ನೇರ ಸಾಕ್ಷಿಯೂ ಸಿಕ್ಕಾಗ ಅನುಕೂಲ ಸಿಂಧು ಆಟವಾಡಿದರೆ ಇತ್ತ ಸಜ್ಜನರ ನಂಬಿಕೆಯನ್ನೂ ಕಳೆದುಕೊಳ್ಳುತ್ತಾರೆ,
ಅತ್ತ ದುರ್ಜನರಿಂದಲೂ ಸಹಜವಾಗಿ ಕೈ ಬಿಡಲ್ಪಡುತ್ತಾರೆ!
ನಂತರ,
ಇತ್ತಲೂ ನೆಲೆಯಿಲ್ಲದೆ, ಅತ್ತಲೂ ನೆಲೆಯಿಲ್ಲದೆ ತೊಳಲಾಟದಲ್ಲೇ ಬದುಕು ಸಾಗಿಸಬೇಕಾಗುತ್ತದೆ.
ಸತ್ಯ, ಪ್ರೇಮದ ಹಾದಿ ಹಿಡಿದವರ, ಜನ ದೂರ ತಳ್ಳುವುದುಂಟು, ಆ ಹಾದಿಯ ಒಂಟಿ ಪಯಣಿಗನ ಕೈ ಹಿಡಿದು ನಡೆಸುವುದು, ದಡ ಸೇರಿಸುವುದು, ಮೇಲೇರಿಸುವುದು, ಮುಂದಕ್ಕೆ ಸಾಗಿಸುವುದು ಸತ್ಯ, ಪ್ರೇಮಗಳೇ! ಆದರೆ ಅಲ್ಲಿಯವರೆಗೂ ನಂಬಿಕೆ, ತಾಳ್ಮೆ ತಾಳಬೇಕು, ಧೈರ್ಯ ತೋರಬೇಕಾಗಿ ಬರಬಹುದು ಹೆಜ್ಜೆ ಹೆಜ್ಜೆಗೂ!
ಈ ಹಾದಿ ಹಿಡಿದವನ –
ಮಾತಿನ ಸತ್ವದ ಬಗ್ಗೆ ಶತ್ರುವೂ ಸಂಶಯಿಸುವುದಿಲ್ಲ,
ನಡವಳಿಕೆಯ ಸತ್ಯದಲ್ಲಿ ಕೇಡಿಗನೂ ನಂಬಿಕೆ ಉಳ್ಳವನಾಗಿರುತ್ತಾನೆ,
ಇದಲ್ಲವೇ ನಿಜ ಗೆಲುವು?
ಶಿಷ್ಟರ ಈ ಗುಣಗಳೇ ಮತ್ತೊಮ್ಮೆ ಜನರ ಆಕರ್ಷಿಸುವುದು, ಹತ್ತಿರ ತರಬಲ್ಲದು
ಮತ್ತು
ದುಷ್ಟರ ಪ್ರಭಾವಕ್ಕೊಳಗಾದವರಿಗೆ ಶಿಷ್ಟರಷ್ಟೇ ಆಶಾಕಿರಣವು!