‘ಅರಳಿಮರ’ ಜಾಲತಾಣ 5 ವರ್ಷ ತುಂಬಿ 6ನೇ ವರ್ಷಕ್ಕೆ ಕಾಲಿಟ್ಟಿದೆ. ನಿಮ್ಮ ಹಾರೈಕೆ ಇರಲಿ…
ಅರಳಿಮರ ಜಾಲತಾಣ ಆರಂಭವಾಗಿದ್ದು 2018, ಫೆಬ್ರವರಿ 13ರ ನಡುರಾತ್ರಿ. ಮಹಾ ಪ್ರೇಮಿ ಶಿವನ ರಾತ್ರಿ ಮತ್ತು ಪ್ರೇಮಿಗಳ ದಿನದ ಸುಂದರ ಸಂಯೋಗದ ಹೊತ್ತಿನಲ್ಲಿ, ಅಕ್ಷರಶಃ ನಡುರಾತ್ರಿ 12ಕ್ಕೆ ಮೊದಲ ಲೇಖನ ಪ್ರಕಟವಾಗುವುದರೊಂದಿಗೆ aralimara.com ಓದಿಗೆ ಲಭ್ಯವಾಯಿತು. ಅದಾಗಿ ಈಗ 5 ವರ್ಷಗಳು ಸರಿದುಹೋಗಿವೆ. ಸರಿ ಸುಮಾರು 4,000 ಲೇಖನಗಳು, ಲಕ್ಷಾಂತರ ಓದುಗರು – ಎಲ್ಲಕ್ಕಿಂತ ಹೆಚ್ಚಾಗಿ ಲೆಕ್ಕವಿಡಲಾಗದ ನಿಮ್ಮೆಲ್ಲರ ಪ್ರೀತಿ ನಮ್ಮನ್ನು ಆರನೇ ವರ್ಷಕ್ಕೆ ಮುನ್ನಡೆಸಿವೆ.

ಅಂದುಕೊಂಡಂತೆ ಅರಳಿಮರವನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಕಾಲ ಕೂಡಿ ಬಂದಾಗ ಎಲ್ಲವೂ ಆಗುವುದು ಅನ್ನುವ ನಂಬಿಕೆಯೊಡನೆ ಹೆಜ್ಜೆ ಮುಂದಿರಿಸುತ್ತಿದ್ದೇವೆ. ಜೊತೆಯಲ್ಲಿರಿ.