ನುಡಿಗಟ್ಟಿನ ಬದಲಾವಣೆಗಳು : To have or To be #9

ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

ಹಿಂದಿನ ಭಾಗವನ್ನು ಇಲ್ಲಿ ಓದಿ…. https://aralimara.com/2023/03/12/fromm-5/

ಕಳೆದ ಕೆಲ ಶತಮಾನಗಳ ಪಾಶ್ಚಿಮಾತ್ಯ ಭಾಷೆಗಳ ಬಳಕೆಯಲ್ಲಿ ಕ್ರಿಯಾಪದಗಳ ಬಳಕೆ ಕಡಿಮೆಯಾಗಿರುವುದು ಮತ್ತು ಹೆಚ್ಚು ಹೆಚ್ಚು ನಾಮಪದಗಳ ಬಳಕೆಯಾಗುತ್ತಿರುವುದು, having ಮತ್ತು being ಜೀವನ ವಿಧಾನಗಳ ಮೇಲೆ ನೀಡಲಾಗಿರುವ ಒತ್ತಿನಲ್ಲಿ ಆಗಿರುವ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಸೂಚಿಸುತ್ತದೆ.

ನಾಮಪದ, ಒಂದು ವಸ್ತುವನ್ನ, ಒಂದು ವ್ಯಕ್ತಿಯನ್ನ, ಅಥವಾ ಒಂದು ಸಂಗತಿಯನ್ನ ಅತ್ಯಂತ ಸರಿಯಾಗಿ ವಿವರಿಸುತ್ತದೆ. ನಾನು ಕೆಲ ಸಂಗತಿಗಳನ್ನ ಹೊಂದಿದ್ದೇನೆ ಎಂದು ಹೇಳಬಹುದು : ಉದಾಹರಣೆಗೆ, ನಾನು ಟೇಬಲ್ ಹೊಂದಿದ್ದೇನೆ, ಮನೆ, ಪುಸ್ತಕ, ಕಾರ್ ಹೊಂದಿದ್ದೇನೆ ಇತ್ಯಾದಿಯಾಗಿ. ಹಾಗೆಯೇ ಕ್ರಿಯಾಪದ, ಒಂದು ಪ್ರಕ್ರಿಯೆಯನ್ನ, ಒಂದು ಚಟುವಟಿಕೆಯನ್ನ ಸರಿಯಾಗಿ, ಸ್ಪಷ್ಟವಾಗಿ ಸೂಚಿಸುತ್ತದೆ : ಉದಾಹರಣೆಗೆ, ನಾನು ಪ್ರೀತಿಸುತ್ತೇನೆ, ನಾನು ಬಯಸುತ್ತಿದ್ದೇನೆ, ನಾನು ದ್ವೇಷಿಸುತ್ತೇನೆ ಇತ್ಯಾದಿ. ಆದರೆ ಬಹಳಷ್ಟು ಬಾರಿ having ವಿಷಯದಲ್ಲಿ ಒಂದು ಪ್ರಕ್ರಿಯೆಯನ್ನ ವಿವರಿಸುವಾಗ ಕ್ರಿಯಾಪದದ ಬದಲಾಗಿ ನಾಮಪದವನ್ನ ಬಳಸಲಾಗುತ್ತದೆ. having ವಿಷಯದ ಸಂದರ್ಭದಲ್ಲಿ ಒಂದು ಪ್ರಕ್ರಿಯೆಯನ್ನ ನಾಮಪದದ ಮೂಲಕ ಅಭಿವ್ಯಕ್ತಿಸುವುದು ಭಾಷೆಯ ತಪ್ಪು ಬಳಕೆ, ಏಕೆಂದರೆ ಕ್ರಿಯೆಗಳನ್ನ, ಚಟುವಟಿಕೆಗಳನ್ನು ಅನುಭವಿಸಬಹುದೇ ಹೊರತು ಅಧೀನ (possess) ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಕೆಲವು ಹಳೆಯ ಅವಲೋಕನಗಳು : Du Marais – Marx

ಈ ಮಹಾ ಗೊಂದಲದ ಕರಾಳ ಪರಿಣಾಮಗಳನ್ನ ಹದಿನೆಂಟನೇ ಶತಮಾನದಲ್ಲಿ ಮೊದಲೇ ಗುರುತಿಸಲಾಗಿತ್ತು. Du Marais ತನ್ನ ಪುಸ್ತಕ ( ಅವನು ತೀರಿಕೊಂಡ ಮೇಲೆ ಪ್ರಕಟವಾದ) Les variables Principles de la Grammaire (1769) ದಲ್ಲಿ ಈ ಸಮಸ್ಯೆಯ ನಿಖರ ಅಭಿವ್ಯಕ್ತಿಯೊಂದನ್ನ ಸೂಚಿಸಿದ. ಅವನ ಪ್ರಕಾರ :

“ ಈ ಉದಾಹರಣೆ, I have a watch ನಲ್ಲಿ, I have ನ್ನ ಅದರ ಸರಿಯಾದ ಅರ್ಥದಲ್ಲಿ ಅರ್ಥೈಸಿಕೊಳ್ಳಬೇಕು ; ಆದರೆ I have an idea ಎನ್ನುವ ವಾಕ್ಯದಲ್ಲಿ I have ನ ಕೇವಲ ಅನುಕರಣೆ ಮಾಡಿ ಬಳಸಲಾಗಿದೆ,. ಇದು ಕೇವಲ ಒಂದು ಎರವಲು ಪಡೆದ ಅಭಿವ್ಯಕ್ತಿ. I have an idea ಎಂದರೆ, I think, I conceive of in such and such way ಅಂತ, I have a longing ಎಂದರೆ, I desire ಅಂತ, I have the will ಎಂದರೆ, I want ಅಂತ, ಹೀಗೆ ಇತ್ಯಾದಿಯಾಗಿ”. ( Du Marais ನ ರೆಫರ್ ಮಾಡಿದ್ದಕ್ಕಾಗಿ ನಾನು ಡಾ. ನೋಮ್ ಚಾಮ್ಸ್ಕೀ ಗೆ ಕೃತಜ್ಞನಾಗಿದ್ದೇನೆ)

ಕ್ರಿಯಾಪದಕ್ಕೆ ಬದಲಾಗಿ ನಾಮಪದ ಬಳಸುವ ವಿದ್ಯಮಾನವನ್ನು Du Marais ಗಮನಿಸಿದ ಒಂದು ಶತಮಾನದ ನಂತರ ಮಾರ್ಕ್ಸ್ ಮತ್ತು ಎಂಗಲ್ಸ್ ತಮ್ಮ The Holy Family ಯಲ್ಲಿ ಇದೇ ಸಮಸ್ಯೆಯನ್ನು ಹೆಚ್ಚು ತಾರ್ಕಿಕ ರೀತಿಯಲ್ಲಿ ಕೈಗೆತ್ತಿಕೊಂಡು ನಿಭಾಯಿಸುತ್ತಾರೆ. Edgar Bauer ನ “ critical critique “ ಗೆ ಅವರು ಬರೆದಿರುವ ವಿಮರ್ಶೆಯಲ್ಲಿ ಪ್ರೀತಿಯ ಕುರಿತಾದ ಒಂದು ಪುಟ್ಟ ಪ್ರಬಂಧ ಇದೆ. ಈ ಪ್ರಬಂಧಲ್ಲಿ Bauer ನ ಈ ಒಂದು ಹೇಳಿಕೆಯತ್ತ ಅವರು ನಮ್ಮ ಗಮನ ಸೆಳೆಯುತ್ತಾರೆ,

“ ಪ್ರೇಮ ಎಲ್ಲ ದೈವಗಳಂತೆ, ಮನುಷ್ಯರನ್ನ ಇಡಿಯಾಗಿ ಸ್ವಾಧೀನಪಡಿಸಿಕೊಳ್ಳ ಬಯಸುವ, ಮತ್ತು ತನ್ನೆದುರು ಅವರು, ತಮ್ಮ ಆತ್ಮ ಹಾಗು ದೇಹಗಳೆರಡನ್ನೂ ಪೂರ್ತಿಯಾಗಿ ಬಲಿಕೊಡುವ ತನಕ ತೃಪ್ತಳಾಗದ ಕ್ರೂರ ದೇವತೆ. ಅವಳನ್ನು ಆರಾಧಿಸುವುದೆಂದರೆ ಯಾತನೆಯನ್ನು ಅನುಭವಿಸುವುದು, ಮತ್ತು ಈ ಆರಾಧನೆಯ ತುಟ್ಟ ತುದಿಯೆಂದರೆ ಅವಳಿಗಾಗಿ ತಮ್ಮನ್ನು ತಾವು ಬಲಿ ಕೊಡುವುದು, ಆತ್ನಹತ್ಯೆ ಮಾಡಿಕೊಳ್ಳುವುದು”.

ಈ ಹೇಳಿಕೆಗೆ ಮಾರ್ಕ್ಸ್ ಮತ್ತು ಎಂಗಲ್ಸ್ ಹೀಗೆ ಉತ್ತರಿಸುತ್ತಾರೆ, “ Bauer, ಪ್ರೀತಿಯನ್ನ ರೂಪಾಂತರಗೊಳಿಸಿ, “ದೇವತೆ”ಯನ್ನಾಗಿಸುತ್ತಾನೆ, ಮತ್ತು loving man ಅಥವಾ love of man ನ ಕ್ರೂರ ದೇವತೆ” ಯಾಗಿ ರೂಪಾಂತರಗೊಳಿಸಿ man of love ಆಗಿಸುತ್ತಾನೆ. ಹೀಗೆ ಮಾಡುವ ಮೂಲಕ ಅವನು ಪ್ರೀತಿಯನ್ನ ಮನುಷ್ಯರಿಂದ ಪ್ರತ್ಯೇಕಿಸಿ ಪ್ರತ್ಯೇಕ ಅಸ್ತಿತ್ವವನ್ನಾಗಿಸುತ್ತಾನೆ. ಇಲ್ಲಿ ಕ್ರಿಯಾಪದದ ಬದಲಾಗಿ ನಾಮಪದ ಬಳಸಿದ ನಿರ್ಣಾಯಕ ಅಂಶದ (decisive factor) ಬಗ್ಗೆ ಮಾರ್ಕ್ಸ್ ಮತ್ತು ಎಂಗೆಲ್ಸ್ ನಮ್ಮ ಗಮನ ಸೆಳೆಯುತ್ತಾರೆ. ಇಲ್ಲಿ ನಾಮಪದ “ಪ್ರೀತಿ” (love) ಯಾವುದು ಪ್ರೀತಿಸುವ ಕ್ರಿಯೆಯ (activity of loving) ಅಮೂರ್ತ ರೂಪವಾಗಿದೆಯೋ ಅದನ್ನ, ವ್ಯಕ್ತಿಯಿಂದ ಪ್ರತ್ಯೇಕಿಸಲಾಗಿದೆ. Loving Man ಬದಲಾಗಿ Man of Love ಆಗಿರುವುದನ್ನ ಗಮನಿಸಬೇಕು. ಪ್ರೀತಿ ಈಗ ದೇವತೆಯಾಗಿದೆ, ಈ ಪ್ರತಿಮೆಯ ಮೇಲೆ ಮನುಷ್ಯರು ತಮ್ಮ ಪ್ರೀತಿಸುವಿಕೆಯನ್ನ ಪ್ರೊಜೆಕ್ಟ್ ಮಾಡುತ್ತಾರೆ ; ಮತ್ತು ಈ ಪರಕೀಯಗಳಿಸುವ ಪ್ರಕ್ರಿಯೆಯಲ್ಲಿ ಅವರ ಪ್ರೀತಿಯ ಅನುಭವ ತನ್ನ ಕೊನೆಯನ್ನು ಕಂಡುಕೊಳ್ಳುತ್ತದೆ, ಆದರೆ ಅವರು ಪ್ರೀತಿಯ ದೇವತೆಗೆ ತಮ್ಮನ್ನು ತಾವು ಶರಣಾಗಿಸಿಕೊಳ್ಳುವ ಮೂಲಕ ತಮ್ಮ ಪ್ರೀತಿಸುವ ಸಾಮರ್ಥ್ಯದ ಜೊತೆ ಸಾಮಿಪ್ಯವನ್ನು ಕಾಯ್ದುಕೊಂಡಿದ್ದಾರೆ. ಭಾವನೆಗಳನ್ನು ಅನುಭವಿಸುವ ಅವರ ಕ್ರಿಯಾಶೀಲತೆ ಕೊನೆಗೊಂಡಿದೆ, ಬದಲಾಗಿ ಅವರು, ಪರಾಧೀನ ಮೂರ್ತಿ ಪೂಜಕರಾಗಿ ಬದಲಾಗಿದ್ದಾರೆ, ಮತ್ತು ಮೂರ್ತಿಯ ಸಾಮಿಪ್ಯದಿಂದ ದೂರವಾದಾಗ ಕಳೆದುಹೋಗಿಬಿಡುತ್ತಾರೆ.

( ಮುಂದುವರೆಯುತ್ತದೆ)

Leave a Reply