ಮೂಲತಃ ನಾವು ನಮ್ಮೊಳಗೆ ಅನುಭವಿಸಬಹುದಾದ ಆತ್ಯಂತಿಕ ಮೌಲ್ಯದ ಸಾಂಕೇತಿಕ ರೂಪವಾದ ದೇವರು, having ವಿಧಾನದಲ್ಲಿ ವಿಗ್ರಹವಾಗಿ ಬದಲಾವಣೆ ಹೊಂದುತ್ತದೆ. Prophetic ಪರಿಕಲ್ಪನೆಯಲ್ಲಿ, ವಿಗ್ರಹವೆಂದರೆ ನಾವೇ ಸೃಷ್ಟಿ ಮಾಡುವ ಮತ್ತು ನಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳನ್ನ ಅದರ ಮೇಲೆ ಪ್ರೊಜೆಕ್ಟ್ ಮಾಡಿ ನಾವೇ ಹಗುರಾಗುವ ಸಂಗತಿ… ~ ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/16/fromm-15/
Faith
ಧಾರ್ಮಿಕ, ರಾಜಕೀಯ ಅಥವಾ ವ್ಯಕ್ತಿಗತ ಸಂದರ್ಭಗಳಲ್ಲಿ ವಿಶ್ವಾಸದ ಪರಿಕಲ್ಪನೆ, ಪೂರ್ತಿ ಎರಡು ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ, ಅದನ್ನ ನಾವು having ವಿಧಾನದಲ್ಲಿ ಬಳಸುತ್ತಿದ್ದೇವೆಯೋ ಅಥವಾ being ವಿಧಾನದಲ್ಲಿ ಉಪಯೋಗ ಮಾಡುತ್ತಿದ್ದೇವೆಯೋ ಎನ್ನುವುದರ ಮೇಲೆ ಅವಲಂಬಿತವಾಗಿ.
Having ಜೀವನ ವಿಧಾನದಲ್ಲಿ ವಿಶ್ವಾಸ ಎಂದರೆ, ಯಾವುದೇ ತರ್ಕಬದ್ಧ ಸಾಕ್ಷಿಗಳಿಲ್ಲದ ಉತ್ತರಗಳ ಸ್ವಾಧೀನತೆಯನ್ನ ಹೊಂದುವುದು. ಇಂಥ ವಿಶ್ವಾಸ ಇತರರು ಸೃಷ್ಟಿಮಾಡಿರುವ ಸೂತ್ರಗಳನ್ನು ಒಳಗೊಂಡಿರುತ್ತದೆ, ಇವನ್ನು ಒಪ್ಪಿಕೊಳ್ಳಲಾಗುತ್ತದೆ ಏಕೆಂದರೆ ಆ ಇತರರಿಗೆ ಶರಣಾಗತಿಯನ್ನು ಅರ್ಪಿಸಲಾಗಿರುತ್ತದೆ – ಬಹುತೇಕ ಅಧಿಕಾರಶಾಹಿಗೆ. ಇಂಥ ವಿಶ್ವಾಸ, ಅದು ಹೊಂದಿರುವ ವಾಸ್ತವಿಕ (ಅಥವಾ ಕೇವಲ ಕಾಲ್ಪನಿಕ) ಅಧಿಕಾರಶಾಹಿಯ ಅಧಿಕಾರದ ಕಾರಣವಾಗಿ ಖಚಿತತೆಯ ಭಾವನೆಯನ್ನು ಹೊಂದಿರುತ್ತದೆ. ಇಂಥ ವಿಶ್ವಾಸ, ಬೃಹತ್ ಗುಂಪುಗಳನ್ನು ಸೇರಲು ಇರುವ ಎಂಟ್ರಿ ಟಿಕೇಟಿನಂತೆ. ಇದು ಮನುಷ್ಯರಿಗೆ ಅತ್ಯಂತ ಕಠಿಣವಾಗಿರುವ, ಒಬ್ಬರಿಗಾಗಿ ಆಲೋಚನೆ ಮಾಡುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಶ್ರಮದಿಂದ ಬಿಡುಗಡೆ ಕೊಡಿಸುತ್ತದೆ, ಅವರನ್ನು ಸರಿ ವಿಶ್ವಾಸದ ಹ್ಯಾಪಿ ಮಾಲಿಕರನ್ನಾಗಿಸುತ್ತದೆ (beati pissidentes). Having ಜೀವನ ವಿಧಾನದಲ್ಲಿ ವಿಶ್ವಾಸ, ಖಚಿತತೆಯನ್ನ ಲಭ್ಯ ಮಾಡುತ್ತದೆ ; ಆತ್ಯಂತಿಕ, ಅಚಲ ಜ್ಞಾನಧಾರೆಯ ವಾಗ್ದಾನವನ್ನು ಕ್ಲೇಮ್ ಮಾಡುತ್ತದೆ, ಈ ಕ್ಲೇಮ್ ನ ನಂಬಬಹುದು ಏಕೆಂದರೆ, ಇಂಥ ವಿಶ್ವಾಸವನ್ನ ಘೋಷಿಸುವ, ರಕ್ಷಣೆ ಮಾಡುವವರು ಅಚಲರಂತೆ (unshakable) ಕಾಣಿಸಿಕೊಳ್ಳುತ್ತಾರೆ. ಹೌದು, ಯಾರು ತಾನೆ ಇಂಥ ಖಚಿತತೆಯನ್ನ ಆಯ್ಕೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ, ಇದಕ್ಕಾಗಿ ಅವರು ಕೇವಲ ತಮ್ಮ ಸ್ವಾತಂತ್ರ್ಯವನ್ನ ಮಾತ್ರ ಶರಣಾಗಿಸಬೇಕಾಗಿರುವಾಗ.
ಮೂಲತಃ ನಾವು ನಮ್ಮೊಳಗೆ ಅನುಭವಿಸಬಹುದಾದ ಆತ್ಯಂತಿಕ ಮೌಲ್ಯದ ಸಾಂಕೇತಿಕ ರೂಪವಾದ ದೇವರು, having ವಿಧಾನದಲ್ಲಿ ವಿಗ್ರಹವಾಗಿ ಬದಲಾವಣೆ ಹೊಂದುತ್ತದೆ. Prophetic ಪರಿಕಲ್ಪನೆಯಲ್ಲಿ, ವಿಗ್ರಹವೆಂದರೆ ನಾವೇ ಸೃಷ್ಟಿ ಮಾಡುವ ಮತ್ತು ನಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳನ್ನ ಅದರ ಮೇಲೆ ಪ್ರೊಜೆಕ್ಟ್ ಮಾಡಿ ನಾವೇ ಹಗುರಾಗುವ ಸಂಗತಿ. ನಂತರ ನಾವು ನಮ್ಮ ಸೃಷ್ಟಿಗೇ ಶರಣಾಗುತ್ತ, ನಮ್ಮ ಜೊತೆಯೇ ಪರಕೀಯ ರೀತಿಯಲ್ಲಿ ಸಂಬಂಧ ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ವಿಗ್ರಹ ಒಂದು ವಸ್ತುವಾಗಿರುವುದರಿಂದ, ನಾನು ಅದನ್ನ ಹೊಂದಬಹುದಾದರೂ, ನಾನು ಅದಕ್ಕೆ ಶರಣಾಗಿರುವುದರಿಂದ, ಏಕಕಾಲದಲ್ಲಿ ವಿಗ್ರಹ ಕೂಡ ನನ್ನನ್ನು ಹೊಂದಿದೆ. ಒಮ್ಮೆ ದೇವರು ಮೂರ್ತಿಯಾಗಿಬಿಟ್ಟರೆ, ದೇವರ ಮೇಲೆ ಆರೋಪಿಸಲಾಗಿರುವ ಗುಣಲಕ್ಷಣಗಳಿಗೆ, ನನ್ನ ವೈಯಕ್ತಿಕ ಅನುಭವಗಳಿಗೆ ಪರಕೀಯ ರಾಜಕೀಯ ಸಿದ್ಧಾಂತಗಳ ಜೊತೆ ಇರುವಷ್ಟೇ, ಕಡಿಮೆ ಸಂಬಂಧ. ವಿಗ್ರಹವನ್ನು ಕರುಣೆಯ ದೇವತೆ ಎಂದು ಹಾಡಿ ಹೊಗಳುತ್ತಲೇ, ಅದರ ಹೆಸರಿನಲ್ಲಿ ಯಾವುದೇ ಕ್ರೌರ್ಯವನ್ನ ಎಸಗಬಹುದು, ಥೇಟ್ ಮಾನವ ಒಗ್ಗಟ್ಟಿನ ಕುರಿತಾದ ಪರಕೀಯ ವಿಶ್ವಾಸ (alienated faith in human solidarity) ಹೇಗೆ ಅತ್ಯಂತ ಅಮಾನವೀಯ ಕ್ರಿಯೆಗಳ ಬಗ್ಗೆ ಯಾವುದೇ ಸಂಶಯವನ್ನೂ ವ್ಯಕ್ತಪಡಿಸದೆ ಸುಮ್ಮನಿರುತ್ತದೆಯೋ ಹಾಗೆ. Having ಜೀವನ ವಿಧಾನದಲ್ಲಿ ವಿಶ್ವಾಸ, ಖಚಿತತೆಯನ್ನು ಬಯಸುವವರಿಗೆ, ಹುಡುಕದೇ ಬದುಕಿನ ಕುರಿತಾದ ಪ್ರಶ್ನೆಗಳಿಗೆ ಉತ್ತರವನ್ನು ಬಯಸುವವರಿಗೆ ಊರುಗೋಲು ಇದ್ದಂತೆ.
Being ಜೀವನ ವಿಧಾನದಲ್ಲಿ ವಿಶ್ವಾಸ, ಸಂಪೂರ್ಣ ವಿಭಿನ್ನ ವಿದ್ಯಮಾನ. ವಿಶ್ವಾಸವಿಲ್ಲದೆ ನಾವು ಬದುಕಬಹುದೆ? ಶಿಶುಗಳಿಗೆ ತಮ್ಮ ತಾಯಿಯ ಮೊಲೆಗಳ ಮೇಲೆ ವಿಶ್ವಾಸ ಇರಬಾರದೆ? ನಮಗೆ, ನಾವು ಪ್ರೀತಿಸುವ ಇನ್ನೊಬ್ಬರಲ್ಲಿ ಮತ್ತು ಸ್ವತಃ ನಮ್ಮ ಮೇಲೆ ವಿಶ್ವಾಸವಿರಬಾರದೆ? ನಾವು, ನಮ್ಮ ಬದುಕಿನ ನಿಯಮಗಳ ಸಿಂಧುತ್ವದ ಬಗ್ಗೆ ವಿಶ್ವಾಸ ಇಟ್ಟುಕೊಳ್ಳದೆ ಬದುಕಬಹುದೆ? ಹೌದು ವಿಶ್ವಾಸ ಇಲ್ಲದಿರುವಾಗ ನಾವು ಬರಡಾಗುತ್ತೇವೆ, ಭರವಸೆಯನ್ನು ಕಳೆದುಕೊಳ್ಳುತ್ತೇವೆ, ನಮ್ಮ ಅಸ್ತಿತ್ವದ ಪ್ರತಿ ತಿರುಳಿನ ಬಗ್ಗೆ ಭಯಗ್ರಸ್ತರಾಗುತ್ತೇವೆ.
Being ವಿಧಾನದಲ್ಲಿ ವಿಶ್ವಾಸವೆಂದರೆ, ಯಾವುದೋ ಕೆಲ ಐಡಿಯಾಗಳ ಮೇಲಿನ ನಂಬಿಕೆಯಲ್ಲ ( ಅದೂ ಕೂಡ ಆಗಿರಬಹುದು), ಬದಲಾಗಿ ವಿಶ್ವಾಸ ಎಂದರೆ ಅಂತರಂಗದ ದೃಷ್ಟಿಕೋನ (inner orientation), ಒಂದು ಧೃಡ ನಿಲುವು (attitude). Being ವಿಧಾನದಲ್ಲಿ, ಒಬ್ಬರು ವಿಶ್ವಾಸ ಹೊಂದಿದ್ದಾರೆ (has faith) ಎನ್ನುವುದಕ್ಕಿಂತ ವಿಶ್ವಾಸದಲ್ಲಿದ್ದಾರೆ (is in faith) ಎನ್ನುವುದು ಸೂಕ್ತ. (The theological distinction between faith that is belief and faith as belief reflects a similar distinction between the content of faith and the act of faith). ಒಬ್ಬರು ತಮ್ಮ ಬಗ್ಗೆ ಮತ್ತು ಇನ್ನೊಬ್ಬರ ಬಗ್ಗೆ ವಿಶ್ವಾಸದಲ್ಲಿರಬಹುದು, ಹಾಗು ಧಾರ್ಮಿಕ ವ್ಯಕ್ತಿಗಳು ದೇವರ ಬಗ್ಗೆ ವಿಶ್ವಾಸದಲ್ಲಿರಬಹುದು. ಹಳೆಯ ಒಡಂಬಡಿಕೆಯ ದೇವರು; ವಿಗ್ರಹಗಳು ಅಲ್ಲದವನು, ಒಬ್ಬರು ಹೊಂದಬಹುದಾದ ದೇವರು ಅಲ್ಲದವನು. ಪೌರಸ್ತ ರಾಜನ ಕುರಿತಾಗಿ ಕಲ್ಪಿಸಿಕೊಳ್ಳಲಾದ ಸಂಗತಿಯಾದರೂ, ಮೊದಲಿನಿಂದಲೂ ದೇವರ ಕುರಿತಾದ ಪರಿಕಲ್ಪನೆ ತನ್ನನ್ನು ತಾನು ಮೀರಿಕೊಂಡು ಬಂದಿರುವಂಥದು. ದೇವರಿಗೆ ಯಾವ ಹೆಸರಿರಬಾರದು; ದೇವರ ಕುರಿತಾದ ಯಾವ ಇಮೇಜ್ ನ್ನೂ ರೂಪಿಸಬಾರದು.
ಮುಂದೆ, ಜ್ಯೂಯಿಶ್ ಮತ್ತು ಕ್ರಿಶ್ಚಿಯನ್ ಧರ್ಮಗಳ ಬೆಳವಣಿಗೆಯಲ್ಲಿ ದೇವರ ವಿಗ್ರಹೀಕರಣದ ಪ್ರಕ್ರಿಯೆಯನ್ನ ಸಂಪೂರ್ಣವಾಗಿ ಬಿಟ್ಟುಬಿಡುವ ಅಥವಾ, ವಿಗ್ರಹೀಕರಣ ಪ್ರಕ್ರಿಯೆಯ ಅಪಾಯವನ್ನು ಎದುರಿಸಲು ದೇವರ ಗುಣಲಕ್ಷಣಗಳನ್ನು ಕೂಡ ಎಲ್ಲಿಯೂ ಪ್ರತಿಪಾದಿಸದಂತೆ ಪ್ರಯತ್ನ ಮಾಡಲಾಯಿತು. ಅಥವಾ ಅತ್ಯಂತ ಕ್ರಾಂತಿಕಾರಿಯಾಗಿ ಕ್ರಿಶ್ಚಿಯನ್ ಅನುಭಾವದಲ್ಲಿ – (Pseudo) Dionysius Areopagita ಇಂದ ಹಿಡಿದು The cloud of Unknowing ನ ಅನಾಮಿಕ ಲೇಖಕ ಹಾಗು Master Eckhart ರ ವರೆಗೆ, ದೇವರ ಪರಿಕಲ್ಪನೆ “ಅಧಿ ದೇವತೆಯ (Godhead) “ (the No-thing) ಪರಿಕಲ್ಪನೆ ಆಗಿ ಮುಂದುವರೆಯುತ್ತ, ಭಾರತೀಯ ವೇದಗಳ ಹಾಗು ನವ ಪ್ಲೇಟೋವಾದದ (Neoplatonic) ಆಲೋಚನೆಗಳ ಜೊತೆ ತನ್ನ ಸಹಮತವನ್ನು ಸಾಧಿಸಿತು. ದೇವರ ಕುರಿತಾದ ಈ ವಿಶ್ವಾಸ, ಒಬ್ಬರಲ್ಲಿನ ದೈವಿಕ ಗುಣಲಕ್ಷಣಗಳ ಕುರಿತಾದ ಆಂತರ್ಯದ ಅನುಭವಕ್ಕೆ ಪ್ರಮಾಣವಾಯಿತು ; ಇದು ನಿರಂತರವಾಗಿ ಮತ್ತೆ ಮತ್ತೆ ಹೊಸದಾಗಿ ಹುಟ್ಟುವ (self creation) ಕ್ರಿಯಾತ್ಮಕ ಪ್ರಕ್ರಿಯೆ – ಅಥವಾ Master Eckhart ಹೇಳುವಂತೆ, ನಮ್ಮೊಳಗೆ ಜೀಸಸ್ ಸದಾ ಹುಟ್ಟುತ್ತಲೇ ಇರುವ ಪ್ರಕ್ರಿಯೆ.
ಸ್ವತಃ ನನ್ನ ಕುರಿತಾದ, ಇನ್ನೊಬ್ಬರ ಕುರಿತಾದ, ಮಾನವ ಜನಾಂಗದ ಬಗ್ಗೆಯ ಮತ್ತು ಸಂಪೂರ್ಣ ಮನುಷ್ಯರಾಗುವ ನಮ್ಮ ಸಾಮರ್ಥ್ಯದಲ್ಲಿನ ನನ್ನ ವಿಶ್ವಾಸ ಕೂಡ ಖಚಿತತೆಯನ್ನ ನಿರೀಕ್ಷಿಸುತ್ತದೆ, ಆದರೆ ಈ ಖಚಿತತೆ, ಒಂದು ನಿರ್ದಿಷ್ಟ ನಂಬಿಕೆಯನ್ನು ನಮ್ಮ ಮೇಲೆ ಹೇರುವ ಅಧಿಕಾರ ಕೇಂದ್ರಕ್ಕೆ ನಾನು ಶರಣಾಗುವ ಪ್ರಕ್ರಿಯೆಯ ಮೇಲೆ ಅವಲಂಬಿತವಾಗದೇ, ನನ್ನ ಸ್ವಂತದ ಅನುಭವದ ಮೇಲೆ ಅವಲಂಬಿತವಾಗಿದೆ. ಈ ಸತ್ಯದ ಖಚಿತತೆಯನ್ನ ತರ್ಕ ಮತ್ತು ಸಾಕ್ಷಿಗಳ ಆಧಾರದ ಮೇಲೆ ಪ್ರೂವ್ ಮಾಡುವುದು ಸಾಧ್ಯವಿಲ್ಲವಾದರೂ, ಈ ಸತ್ಯದ ಬಗ್ಗೆ ನನಗೆ ಖಚಿತತೆ ಇದೆ ನನ್ನ ಅನುಭವ ಹಾಗು ವ್ಯಕ್ತಿನಿಷ್ಠ ಸಾಕ್ಷಿಯ (subjective evidence) ಆಧಾರದ ಮೇಲೆ. [ ವಿಶ್ವಾಸ (faith) ಎನ್ನುವ ಪದಕ್ಕೆ ಹೀಬ್ರೂ ಭಾಷೆಯ ಸಮಾನ ಪದ emunah, “ಖಚಿತತೆ – certainty “ ; amen ಎಂದರೆ “ ಖಂಡಿತವಾಗಿ – certainly “ ]
ನಾನು ಒಬ್ಬ ವ್ಯಕ್ತಿಯ ಪರಿಪೂರ್ಣ ಪ್ರಾಮಾಣಿಕ (integrity) ವ್ಯಕ್ತಿತ್ವದ ಬಗ್ಗೆ ಖಚಿತತೆಯನ್ನ ಹೊಂದಿರುವೆನಾದರೆ, ಆ ವ್ಯಕ್ತಿಯ ಬದುಕಿನ ಕೊನೆಯ ದಿನದ ವರೆಗೆ ನನಗೆ ಆ ವ್ಯಕ್ತಿಯ integrity ಯನ್ನು ಪ್ರಮಾಣೀಕರಿಸಲಾಗುವುದಿಲ್ಲ; ಒಂದು ಪಕ್ಷ ಬದುಕಿನ ಕೊನೆಯ ದಿನದವರೆಗೆ ಆ ವ್ಯಕ್ತಿಯ integrity ಅಭಾದಿತವಾಗಿದ್ದರೂ, ಅಕಸ್ಮಾತ್ ಆ ವ್ಯಕ್ತಿ ಇನ್ನೂ ಹೆಚ್ಚಿನ ಕಾಲ ಬದುಕಿದ್ದರೆ ತನ್ನ integrity ಯನ್ನ ಕಾಯ್ದುಕೊಳ್ಳುತ್ತಿದ್ದ ಎನ್ನುವುದನ್ನ ಪ್ರಮಾಣೀಕರಿಸುವುದು ಕಷ್ಟ. ನನ್ನ ಖಚಿತತೆ ಅವಲಂಬಿತವಾಗಿರುವುದು ನಾನು ಆ ವ್ಯಕ್ತಿಯ ಬಗ್ಗೆ ಹೊಂದಿರುವ ಆಳವಾದ ತಿಳುವಳಿಕೆ ಮತ್ತು , ಪ್ರೀತಿ ಹಾಗು ಪ್ರಾಮಾಣಿಕತೆಯ (integrity) ಜೊತಗಿನ ನನ್ನ ಅನುಭವದ ಆಧಾರದ ಮೇಲೆ. ಈ ರೀತಿಯ ತಿಳುವಳಿಕೆ ಅವಲಂಬಿತವಾಗಿರುವುದು, ನನಗೆ ಎಷ್ಚರಮಟ್ಟಿಗೆ ನನ್ನ ಅಹಂ ಕಳಚಿ, ಇನ್ನೊಬ್ಬ ವ್ಯಕ್ತಿಯನ್ನ ಅವನ ಅಥವಾ ಅವಳ ನಿಜದಲ್ಲಿ (suchness) ನೋಡುವುದು ಸಾಧ್ಯವಾಗುತ್ತದೆ ಮತ್ತು, ಅವರ ಮೇಲೆ ಇರುವ ಒತ್ತಡಗಳ ರಚನೆಯನ್ನ, ಅವರ ವೈಯಕ್ತೀಕತೆಯನ್ನ (individuality) ಹಾಗು ಅದೇ ಕಾಲಕ್ಕೆ ಅವರ ಸಾರ್ವತ್ರಿಕ ಮಾನವತೆಯನ್ನ (universal humanity) ಗಮನಿಸುವುದು ಸಾಧ್ಯವಾಗುತ್ತದೆ ಎನ್ನುವುದರ ಮೇಲೆ. ಆಗ ನನಗೆ ಗೊತ್ತಾಗುತ್ತದೆ ಇನ್ನೊಬ್ಬರಿಂದ ಯಾವುದು ಸಾಧ್ಯವಾಗುತ್ತದೆ, ಯಾವುದು ಸಾಧ್ಯವಾಗುವುದಿಲ್ಲ, ಮತ್ತು ಯಾವುದನ್ನ ಮಾಡಲು ಅವರು ನಿರಾಕರಿಸುತ್ತಾರೆ ಎನ್ನುವುದು. ಹೀಗೆ ಹೇಳುವ ಮೂಲಕ ನಾನು, ಭವಿಷ್ಯದ ಅವರ ಎಲ್ಲ ನಡುವಳಿಕೆಗಳನ್ನ ಊಹೆ ಮಾಡುವುದು ಸಾಧ್ಯ ಎಂದು ಹೇಳುತ್ತಿಲ್ಲ ಬದಲಾಗಿ, ಅವರ ಸ್ವಭಾವದಲ್ಲಿ ಬೇರೂರಿರುವ ಮೂಲಭೂತ ಗುಣ ಲಕ್ಷಣಗಳಾದ ಪ್ರಾಮಾಣಿಕತೆ (integrity), ಜವಾಬ್ದಾರಿ ಮುಂತಾದ ಸಾಮಾನ್ಯ ನಡುವಳಿಕೆಗಳನ್ನ ಮಾತ್ರ ಊಹಿಸಬಹುದು ಎಂದು ಹೇಳುತ್ತಿದ್ದೇನೆ. ( see chapter on “ Faith as a Character Trait “ in Man for Himself )
ಈ ವಿಶ್ವಾಸ, ವಾಸ್ತವದ ಮೇಲೆ ಅವಲಂಬಿತವಾಗಿರುವುದು ; ಆದ್ದರಿಂದ ತರ್ಕವನ್ನು ಆಧರಿಸಿರುವಂಥದು. ಆದರೆ ಎಲ್ಲ ವಾಸ್ತವಗಳನ್ನ (facts) ಗುರುತಿಸುವುದು ಮತ್ತು ಪ್ರೂವ್ ಮಾಡುವುದು ಸಾಂಪ್ರದಾಯಿಕ ಸಕಾರಾತ್ಮಕ ಮನಶಾಸ್ತ್ರದ (conventional positivistic psychology) ಪದ್ಧತಿಗಳಿಂದ ಸಾಧ್ಯವಿಲ್ಲ ; ನಾನು, ಈ ಜೀವಂತ ಮನುಷ್ಯ ಮಾತ್ರ , ಈ ವಾಸ್ತವಗಳನ್ನ ದಾಖಲಿಸುವ ಸಾಧನ.
( ಮುಂದುವರೆಯುತ್ತದೆ…)
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )
2 Comments