ಸೈತಾನ, ಭೌತಿಕ ವಸ್ತು / ಸಂಗತಿಗಳ ಮತ್ತು ಮನುಷ್ಯ – ಪ್ರಕೃತಿಯ ಮೇಲಿನ ಅಧಿಕಾರದ ಪ್ರತಿನಿಧಿಯಾದರೆ ಜೀಸಸ್, being ಸಂರಚನೆಯ ಪ್ರತಿನಿಧಿ ಮತ್ತು, not having ಎನ್ನುವ ಐಡಿಯಾ being ನ ಆವರಣದಂತೆ. ಗಾಸ್ಪಲ್ ನ ಕಾಲದಿಂದಲೂ ಜಗತ್ತು ಸೈತಾನನ ತತ್ವಗಳನ್ನು ಹಿಂಬಾಲಿಸಿದೆ. ಆದರೂ ಈ ತತ್ವಗಳ ದಿಗ್ವಿಜಯಕ್ಕೆ, ಜಿಸಸ್ ಮತ್ತು ಅವನ ಹಿಂದಿನ ಹಾಗು ಮುಂದಿನ ಗ್ರೇಟ್ ಮಾಸ್ಟರ್ ಗಳು ಬೋಧಿಸಿದ ಪೂರ್ಣ being ಸಂರಚನೆಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ತುಡಿತವನ್ನು ನಾಶಮಾಡುವುದು ಸಾಧ್ಯವಾಗಿಲ್ಲ… | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
….. ಮುಂದುವರೆದ ಭಾಗ
ಪ್ರಾರಂಭದ ಕಾಲದ ಕ್ರಿಶ್ಚಿಯಾನಿಟಿಯನ್ನ ಗಂಭೀರವಾಗಿ ಪರಿಗಣಿಸಲೇಬೇಕಾದ ಪ್ರಮುಖ ಕಾರಣ, ಈ ಸಣ್ಣ ಗುಂಪಿನಲ್ಲಿದ್ದ ನಂಬಲಸಾಧ್ಯವಾದ ಕ್ರಾಂತಿಕಾರಿತನ (radicalism). ಇವರು, ಇರುವ ಜಗತ್ತಿನ ಕುರಿತಾದ ತಮ್ಮ ನಿರ್ಣಯವನ್ನ ಘೋಷಿಸುವಾಗ ನೈತಿಕ ನಿಶ್ಚಯದ (moral conviction) ಹೊರತಾಗಿ ಬೇರೆ ಯಾವುದನ್ನೂ ಅವಲಂಬಿಸಲಿಲ್ಲ. ಆದರೆ ಇನ್ನೊಂದು ಬದಿಯಲ್ಲಿ ಬಹುತೇಕ ಜ್ಯೂ ಗಳು, ಯಾರು ಬಡವರಾಗಿರಲಿಲ್ಲವೋ, ಕೆಳವರ್ಗದವರಾಗಿರಲಿಲ್ಲವೋ ಅವರು, ಇನ್ನೊಂದು ದಾರಿಯನ್ನು ಹಿಡಿದರು. ಅವರು ಹೊಸ ಯುಗವೊಂದು ಶುರುವಾಗಿದೆ ಎನ್ನುವುದನ್ನ ನಂಬಲು ನಿರಾಕರಿಸಿದರು ಮತ್ತು, ಮಸೀಹಾನಿಗಾಗಿ ಕಾಯುವುದನ್ನ ಮುಂದುವರೆಸಿದರು. Eschatological (branch of theology concerned with the final events in the history of the world or of humankind) ಅಲ್ಲದೇ ಐತಿಹಾಸಿಕ ಸೆನ್ಸ್ ಲ್ಲಿ ಕೂಡ ನ್ಯಾಯ, ಶಾಂತಿ ಮತ್ತು ಪ್ರೀತಿಗಳ ಸಾಮ್ರಾಜ್ಯವನ್ನು ಸ್ಥಾಪಿಸುವ ಹಂತಕ್ಕೆ ಮಾನವ ಕುಲ ಬಂದಾಗ ಮಸೀಹಾನ ಅವತಾರ ಸಂಭವಿಸುತ್ತದೆ ಎನ್ನುವುದು ಅವರ ನಂಬಿಕೆ.
ಯಂಗ್ “Q” ಸೋರ್ಸ್ ಗಳು ತಮ್ಮ ಮೂಲವನ್ನ ಆರಂಭದ ಕ್ರಿಶ್ಚಿಯಾನಿಟಿಯ ನಂತರದ ಬೆಳವಣಿಗೆಯ ಹಂತದಲ್ಲಿ ಹೊಂದಿವೆ. ಇಲ್ಲಿಯೂ ನಾವು ಅದೇ ತತ್ವವನ್ನು ಕಾಣುತ್ತೇವೆ, ಮತ್ತು ಜೇಸಸ್ ನ ಸೈತಾನ ಪ್ರಲೋಭನೆಯ ಕಥೆ ಇದನ್ನ ಅತ್ಯಂತ ಸಂಕ್ಷಿಪ್ತ ರೀತಿಯಲ್ಲಿ ಹೇಳುತ್ತದೆ. ಈ ಕಥೆಯಲ್ಲಿ, ವಸ್ತುಗಳನ್ನ ಹೊಂದುವ ವಿಷಯಾಸಕ್ತಿಯನ್ನ, ಅಧಿಕಾರಕ್ಕಾಗಿಯ ತುಡಿತವನ್ನ ಮತ್ತು having ಸಂರಚನೆಯ ಇನ್ನಿತರ ಅಭಿವ್ಯಕ್ತಿಗಳನ್ನ ಖಂಡಿಸಲಾಗಿದೆ. ಮೊದಲ ಪ್ರಲೋಭನೆಯಾದ, ಕಲ್ಲುಗಳನ್ನ ಬ್ರೆಡ್ ಆಗಿ ಪರಿವರ್ತಿಸುವ, ವಸ್ತುಗಳ ಕುರಿತಾದ ಸಾಂಕೇತಿಕ ತುಡಿತದ ಕುರಿತಾಗಿ ಜೀಸಸ್ ಹೇಳುತ್ತಾನೆ : ಮನುಷ್ಯ, ದೇವರ ಮೂಲಕ ಹೊರಬಂದ ಪ್ರತೀ ಪದವನ್ನು ಆಧರಿಸಿ ಬದುಕಬೇಕೆ ವಿನಃ ಕೇವಲ ಬ್ರೆಡ್ ನಿಂದ ಬದುಕಬಾರದು (Matthew 4:4; Luke 4:4). ನಂತರ ಸೈತಾನ ಜೀಸಸ್ ನನ್ನು , ಪ್ರಕೃತಿಯ ಮೇಲೆ ಸಂಪೂರ್ಣ ಅಧಿಕಾರ (ಗುರುತ್ವಾಕರ್ಷಣೆಯ ನಿಯಮವನ್ನು ಬದಲು ಮಾಡುವ) ಕೊಡುವ ಪ್ರಾಮಿಸ್ ನಿಂದ ಉತ್ತೇಜಿಸುತ್ತಾನೆ, ಹಾಗು ಅಂತಿಮವಾಗಿ ಅನಿಯಂತ್ರಿತ ಅಧಿಕಾರ, ಭೂಮಿಯ ಮೇಲಿನ ಎಲ್ಲ ರಾಜ್ಯಗಳ ಮೇಲಿನ ಸ್ವಾಮಿತ್ವ ವನ್ನು ಜೀಸಸ್ ಗೆ ಪ್ರಾಮಿಸ್ ಮಾಡಲಾಗುತ್ತದೆ. ಆದರೆ ಜೀಸಸ್ ಈ ಎಲ್ಲವನ್ನೂ ತಿರಸ್ಕರಿಸುತ್ತಾನೆ (Matthew 4:5-10; Luke 4:5-12). [ ಈ ಪ್ರಲೋಭನೆ ಮರುಭೂಮಿಯಲ್ಲಿ ನಡೆಯುವ ಬಗ್ಗೆ Rainer Funk ನನ್ನ ಗಮನ ಸೆಳೆದರು, ಮತ್ತೊಮ್ಮೆ exodus ಕುರಿತಾದ ಟಾಪಿಕ್ ಎತ್ತುತ್ತ).
ಜೀಸಸ್ ಮತ್ತು ಸೈತಾನ ಇಲ್ಲಿ ಎರಡು ವಿರುದ್ಧ ತತ್ವಗಳ ಪ್ರತಿನಿಧಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಸೈತಾನ, ಭೌತಿಕ ವಸ್ತು / ಸಂಗತಿಗಳ ಮತ್ತು ಮನುಷ್ಯ – ಪ್ರಕೃತಿಯ ಮೇಲಿನ ಅಧಿಕಾರದ ಪ್ರತಿನಿಧಿಯಾದರೆ ಜೀಸಸ್, being ಸಂರಚನೆಯ ಪ್ರತಿನಿಧಿ ಮತ್ತು, not having ಎನ್ನುವ ಐಡಿಯಾ being ನ ಆವರಣದಂತೆ. ಗಾಸ್ಪಲ್ ನ ಕಾಲದಿಂದಲೂ ಜಗತ್ತು ಸೈತಾನನ ತತ್ವಗಳನ್ನು ಹಿಂಬಾಲಿಸಿದೆ. ಆದರೂ ಈ ತತ್ವಗಳ ದಿಗ್ವಿಜಯಕ್ಕೆ, ಜಿಸಸ್ ಮತ್ತು ಅವನ ಹಿಂದಿನ ಹಾಗು ಮುಂದಿನ ಗ್ರೇಟ್ ಮಾಸ್ಟರ್ ಗಳು ಬೋಧಿಸಿದ ಪೂರ್ಣ being ಸಂರಚನೆಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ತುಡಿತವನ್ನು ನಾಶಮಾಡುವುದು ಸಾಧ್ಯವಾಗಿಲ್ಲ.
Being ದೃಷ್ಟಿಕೋನಕ್ಕಾಗಿ Having ದೃಷ್ಟಿಕೋನವನ್ನು ತಿರಸ್ಕರಿಸುವ ನೈತಿಕ ಕಟ್ಟರತೆ, ಜ್ಯೂಯಿಶ್ ಧಾರ್ಮಿಕ ಆದೇಶಗಳಲ್ಲೂ ಕಂಡುಬರುತ್ತದೆ, ಉದಾಹರಣೆಗೆ Essenes (mystical Jewish sect) ಮತ್ತು ಯಾವುದರಲ್ಲಿ Dead Sea scroll (The Dead Sea Scrolls are ancient Jewish and Hebrew religious manuscripts discovered between 1946 and 1956 at the Qumran Caves) ಹುಟ್ಟಿಕೊಂಡಿತೋ ಆ ಆದೇಶ. ಕ್ರಿಶ್ಚಿಯಾನಿಟಿಯ ಇತಿಹಾಸದುದ್ದಕ್ಕೂ ಇದು ಬಡತನ ಮತ್ತು ಆಸ್ತಿರಹಿತತೆಯ (povert & propertylessness) ಪ್ರಮಾಣಗಳ ಆಧಾರಿತ ಧಾರ್ಮಿಕ ಆದೇಶಗಳಲ್ಲಿ ಮುಂದುವರೆಯುತ್ತದೆ.
ಆರಂಭಿಕ ಕ್ರಿಶ್ಚಿಯಾನಿಟಿಯ ಕ್ರಾಂತಿಕಾರಿ ಪರಿಕಲ್ಪನೆಗಳ ಅಭಿವ್ಯಕ್ತಿಯನ್ನ, ಚರ್ಚ್ ನ ಫಾದರ್ ಗಳ ಬರಹಗಳಲ್ಲಿ ಹಲವಾರು ಮಟ್ಟಗಳಲ್ಲಿ (various degree) ಕಾಣಬಹುದು. ಚರ್ಚ್ ನ ಫಾದರ್ ಗಳು, ಖಾಸಗಿ ಆಸ್ತಿ Vs ಕಾಮನ್ ಆಸ್ತಿ ವಿಷಯದ ಗ್ರೀಕ್ ಫಿಲಾಸೊಫಿ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಈ ಕಲಿಕೆಯನ್ನ ಮತ್ತು ಈ ವಿಷಯಾಧಾರಿತ ಧಾರ್ಮಿಕ ಹಾಗು ಸಮಾಜಶಾಸ್ತ್ರೀಯ ಸಾಹಿತ್ಯವನ್ನ ಅವಕಾಶದ ಕೊರತೆಯಿಂದಾಗಿ ಇಲ್ಲಿ ವಿವರವಾಗಿ ಚರ್ಚಿಸುವುದು ನನಗೆ ಸಾಧ್ಯವಾಗುತ್ತಿಲ್ಲ.* ಕ್ರಾಂತಿಕಾರಿತ್ವದ ಮಟ್ಟದಲ್ಲಿ ವ್ಯತ್ಯಾಸಗಳಿವೆಯಾದರೂ ಮತ್ತು, ಕಡಿಮೆ radical ಆದ ದೃಷ್ಟಿಕೋನ ಇರುವಾಗಲೆಲ್ಲ ಚರ್ಚ ಶಕ್ತಿಶಾಲಿ ಸಂಸ್ಥೆಯಾಗಿರುವ ಟ್ರೆಂಡ್ ಇರುವಾಗಲೂ, ಹಿಂದಿನ ಚರ್ಚ್ ಚಿಂತಕರು ಐಷಾರಾಮಿಯನ್ನ ಹಾಗು ದುರಾಸೆಯನ್ನ ತೀವ್ರವಾಗಿ ಖಂಡಿಸುತ್ತಿದ್ದರು ಮತ್ತು ಸಂಪತ್ತನ್ನು ತಿರಸ್ಕಾರ ಭಾವದಿಂದ ನೋಡುತ್ತಿದ್ದರು ಎನ್ನುವುದನ್ನ ಅಲ್ಲಗಳೆಯಲಾಗುವುದಿಲ್ಲ.
ಎರಡನೇ ಶತಮಾನದ ಮಧ್ಯಭಾಗದಲ್ಲಿ ಜಸ್ಟಿನ್ ದಾಖಲಿಸಿದ ಪ್ರಕಾರ : “ ಒಮ್ಮೆ ಎಲ್ಲಕ್ಕಿಂತ ಹೆಚ್ಚು ಸಂಪತ್ತು (ಸಾಗಿಸಬಹುದಾದ ಸರಕು) ಮತ್ತು ಸ್ವತ್ತನ್ನ (ಭೂಮಿ) ಪ್ರೀತಿಸಿದವರಾದ ನಾವು, ಈಗ ನಮ್ಮ ಬಳಿ ಇರುವುದನ್ನೆಲ್ಲ ಕಾಮನ್ ಆಸ್ತಿಯನ್ನಾಗಿಸಿ, ಅವಶ್ಯಕತೆ ಇದ್ದವರ ಜೊತೆ ಹಂಚಿಕೊಳ್ಳುತ್ತೇವೆ.” ಎರಡನೇ ಶತಮಾನದ “Letter of Diognetus” ದಲ್ಲಿ ಮನೆ ಇಲ್ಲದವರ ಕುರಿತಾದ ಹಳೆಯ ಒಡಂಬಡಿಕೆಯ ವಿಚಾರವನ್ನು ನೆನಪಿಸುವ ಕುತೂಹಲಕಾರಿ ಪ್ಯಾರಾಗ್ರಾಫ್ ಇದೆ : “ಯಾವುದೇ ಏಲಿಯನ್ ದೇಶ ಅವರ (ಕ್ರಿಶ್ಚಿಯನ್ನರ) ಪಿತೃದೇಶ ಮತ್ತು ಪ್ರತೀ ಪಿತೃದೇಶ ಅವರಿಗೆ ಏಲಿಯನ್.” Tertullian ( 3 ನೇ ಶತಮಾನ) ನ ಪ್ರಕಾರ, ಎಲ್ಲ ವ್ಯಾಪಾರ ವ್ಯವಹಾರ, ಲೋಭದ ಕಾರಣವಾಗಿಯೇ ಮತ್ತು ಅವನು ಲೋಭದಿಂದ ಹೊರತಾದ ಜನರ ನಡುವೆ
ಅದರ ಅವಶ್ಯಕತೆಯನ್ನು ನಿರಾಕರಿಸುತ್ತಾನೆ. ವ್ಯಾಪಾರ ಯಾವಾಗಲೂ ತನ್ನ ಜೊತೆ ವಿಗ್ರಹಾರಾಧನೆಯ ಅಪಾಯವನ್ನು ಹೊತ್ತುಕೊಂಡಿರುತ್ತದೆ ಎಂದು ಘೋಷಿಸುತ್ತಾನೆ. ದುರಾಸೆಯನ್ನ ಎಲ್ಲ ಕೇಡಿನ ಮೂಲ ಎಂದು ಅವನು ಹೇಳುತ್ತಾನೆ.
Basilius ನ ಪ್ರಕಾರ, ಬೇರೆ ಚರ್ಚ್ ಫಾದರ್ ಗಳಿಗೆ, ಎಲ್ಲ ಭೌತಿಕ ಸರಕುಗಳ ಉದ್ದೇಶ ಜನರನ್ನು ಸಲಹುವುದು; ಅವನ ವಿಶಿಷ್ಟವಾದ ಪ್ರಶ್ನೆಯೆಂದರೆ : “ ಇನ್ನೊಬ್ಬರಿಂದ ಬಟ್ಟೆ ಕಸಿದುಕೊಳ್ಳುವವನು ಕಳ್ಳ; ಆದರೆ ಬಡವರಿಗೆ ತಾನು ಬಟ್ಟೆ ಕೊಡಬಹುದಾಗಿದ್ದರೂ ಕೊಡದವ, ಇನ್ನೊಂದು ಹೆಸರಿಗೆ ಅರ್ಹನೆ?” (quoted by Utz). Basilius ಸರಕುಗಳ ಮೂಲ ಸಮುದಾಯಕ್ಕೆ ಒತ್ತುಕೊಟ್ಟ ಮತ್ತು ಅವನನ್ನು ಕೆಲವು ಲೇಖಕರು ಕಮ್ಯೂನಿಸ್ಟ್ ಧೋರಣೆಯನ್ನು ಪ್ರತಿನಿಧಿಸುತ್ತಾನೆ ಎಂದುಕೊಂಡರು. Chrysostomus ನ ಎಚ್ಚರಿಕೆಯೊಂದಿಗೆ (4 ನೇ ಶತಮಾನ) ಈ ಸಂಕ್ಷಿಪ್ತ ವಿವರಣೆಯನ್ನ ನಾನು ಮುಗಿಸುತ್ತಿದ್ದೇನೆ , ಅದೇನೆಂದರೆ ಹೆಚ್ಚುವರಿ ಸರಕುಗಳನ್ನ ಉತ್ಪಾದಿಸಬಾರದು ಮತ್ತು ಬಳಸಬಾರದು. ಅವನ ಪ್ರಕಾರ : “ನನ್ನದಾಗಿರುವುದನ್ನ ನಾನು ಬಳಕೆ ಮಾಡುತ್ತೇನೆ ಎಂದು ಹೇಳಬೇಡ : ನೀನು ಬಳಕೆ ಮಾಡುವುದು ನಿನಗೆ ಪರಕೀಯನಾಗಿರುವುದನ್ನ; ಉದಾರತೆ (indulgent), ಮತ್ತು ಸ್ವಾರ್ಥಪೂರಿತ ಬಳಕೆ ನಿಮ್ಮದಾಗಿರುವುದನ್ನ ಪರಕೀಯವಾಗಿಸುತ್ತದೆ; ಆದ್ದರಿಂದಲೇ ನಾನು ಅದನ್ನ ಪರಕೀಯ ಸರಕು ಎಂದು ಹೇಳಿದ್ದು, ಏಕೆಂದರೆ ನೀವು ಅದನ್ನು ಬಳಸುವುದು ಕಠಿಣ ಹೃದಯದೊಂದಿಗೆ ಮತ್ತು ಅದನ್ನ ನೀವು ಸರಿ ಎಂದು ಕ್ಲೇಮ್ ಮಾಡುತ್ತಿದ್ದೀರಿ, ನೀವೊಬ್ಬರು ಮಾತ್ರ ನಿಮ್ಮದಾಗಿರುವುದನ್ನ ಬಳಸುತ್ತ ಬದುಕುತ್ತಿರುವಿರಿ ಎನ್ನುವುದನ್ನ.
ಖಾಸಗಿ ಆಸ್ತಿ ಮತ್ತು ಯಾವುದೇ ಸ್ವತ್ತಿನ ಅಹಂಕಾರಿಕ ಬಳಕೆ ಅನೈತಿಕ ಎಂದು ಹೇಳುವ ಚರ್ಚ್ ಫಾದರ್ ಗಳ ದೃಷ್ಟಿಕೋನವನ್ನ ಉದಾಹರಿಸುತ್ತ ಪೇಜುಗಟ್ಟಲೇ ವಿವರಿಸುವುದು ಸಾಧ್ಯ. ಕೆಲವು ಸ್ಟೇಟಮೆಂಟ್ ಗಳನ್ನ ಬಿಟ್ಟು ನೋಡಿದರೂ ಹಳೆಯ ಒಡಂಬಡಿಕೆಯಲ್ಲಿಯಂತೆ ಇಲ್ಲಿಯೂ, ಆರಂಭಿಕ ಕ್ರಿಶ್ಚಿಯಾನಿಟಿಯ ಉದ್ದಕ್ಕೂ ಹಾಗು ನಂತರದ ಶತಮಾನಗಳಲ್ಲಿ ಕೂಡ ನಾವು ನಿರಂತರವಾಗಿ having ದೃಷಿಕೋನ ನಿರಾಕರಣೆಯನ್ನ ಗಮನಿಸಬಹುದು. ಮುಕ್ತ ಕಮ್ಯುನಿಸ್ಟ್ ಗುಂಪುಗಳೊಂದಿಗೆ ಯುದ್ಧನಿರತವಾಗಿರುವ Aquinas ಕೂಡ ತೀರ್ಮಾನಕ್ಕೆ ಬರುವುದೇನೆಂದರೆ, ಖಾಸಗಿ ಆಸ್ತಿಯ ಸಂಸ್ಥೆಗಳು ಎಲ್ಲರ ಕಲ್ಯಾಣಕ್ಕೆ ಸಹಾಯ ಮಾಡುತ್ತಿವೆ ಎನ್ನುವುದಾದರೆ ಮಾತ್ರ ಅವನ್ನ ಒಪ್ಪಿಕೊಳ್ಳಬಹುದು.
ಯಾವುದೇ ಬಗೆಯ ಸ್ವಾಧಿನತೆಯ ಬಯಕೆಯನ್ನು ತ್ಯಜಿಸುವ ಕೇಂದ್ರ ಪ್ರಾಮುಖ್ಯತೆಗೆ ಶಾಸ್ತ್ರೀಯ ಬುದ್ಧಿಸಂ, ಹೊಸ ಮತ್ತು ಹಳೆಯ ಒಡಂಬಡಿಕೆಗಳಿಗಿಂತ ಹೆಚ್ಚು ಒತ್ತು ನೀಡುತ್ತದೆ, ಸ್ವಂತದ ಅಹಂ ಮತ್ತು ಒಬ್ಬರ ಪರಿಪೂರ್ಣತೆಗಾಗಿನ ತುಡಿತವನ್ನೂ ಒಳಗೊಂಡಂತೆ.*
(ಮುಂದುವರೆಯುತ್ತದೆ…)
1 Comment