ಮಾಸ್ಟರ್ ಎಕ್ಹಾರ್ಟ್ : To have or to be #24

“ಬೇಕುಗಳ” (wanting) ಕುರಿತಾದ ಎಕ್ಹಾರ್ಟ್ ನ ಕಾಳಜಿ ಮೂಲಭೂತವಾಗಿ ಬುದ್ಧಿಸ್ಟ್ ಮಾದರಿಯದು; ಅದು ದುರಾಸೆ, ವಸ್ತುಗಳ ಕುರಿತಾದ ಚಡಪಡಿಕೆ, ಮತ್ತು ಒಬ್ಬರ ಸ್ವಂತದ ಅಹಂ ಕುರಿತಾದದ್ದು. ಬುದ್ಧ ಈ ರೀತಿಯ ಬಯಕೆಗಳನ್ನ, ಮನುಷ್ಯನ ಎಲ್ಲ ಯಾತನೆಗಳ ಕಾರಣ ಎಂದು ಗುರುತಿಸುತ್ತಾನೆಯೇ ಹೊರತು, ಆನಂದದ ಕಾರಣ ಎಂದಲ್ಲ… ~ ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2023/05/07/fromm-20/

ಮಾಸ್ಟರ್ ಎಕ್ಹಾರ್ಟ್ (1260-c. 1427)

ಅಸ್ತಿತ್ವದ having ಮತ್ತು being ವಿಧಾನಗಳ ನಡುವಿನ ವ್ಯತ್ಯಾಸವನ್ನು ಮಾಸ್ಟರ್ ಎಕ್ಹಾರ್ಟ್, ಈವರೆಗೆ ಯಾವ ಚಿಂತಕರಿಗೂ ಸಾಧ್ಯವಾಗದ ಹಾಗೆ ಆಳವಾಗಿ ಸಂಶೋಧಿಸಿ, ಸ್ಪಷ್ಟವಾಗಿ ವಿವರಿಸಿದ್ದಾನೆ, ವಿಶ್ಲೇಷಣೆ ಮಾಡಿದ್ದಾನೆ. ಜರ್ಮನಿಯ ಡೊಮೇನಿಕನ್ ಆರ್ಡರ್ ನ ಬಹುಮುಖ್ಯ ವ್ಯಕ್ತಿಯಾದ ಮಾಸ್ಟರ್ ಎಕ್ಹಾರ್ಟ್ , ಧರ್ಮಶಾಸ್ತ್ರದಲ್ಲಿ ವಿಶೇಷ ಪಾಂಡಿತ್ಯವನ್ನು ಗಳಿಸಿದವ, ಜರ್ಮನ್ ಅನುಭಾವ ಪಂಥದ ಧೀಮಂತ ಕ್ರಾಂತಿಕಾರಿ ಚಿಂತಕ. ಅವನ ಜರ್ಮನ್ ಧರ್ಮೋಪದೇಶಗಳ ಮೂಲಕ ಹೊರಹೊಮ್ಮಿದ ಪ್ರಭಾವ, ಅವನ ಸಮಕಾಲೀನರು ಮತ್ತು ಅವನ ಶಿಷ್ಯರನ್ನಷ್ಟೇ ಅಲ್ಲ ಅವನ ನಂತರದ ಮತ್ತು ಇವತ್ತಿನ ಜರ್ಮನ್ ಅನುಭಾವಿಗಳನ್ನ, ಯಾರು ಬದುಕಿನ ನಾಸ್ತಿಕವಾದಿ, ತಾರ್ಕಿಕ, ಆದರೂ ಧಾರ್ಮಿಕ ತತ್ವಜ್ಞಾನದ ಬಗ್ಗೆ ಮಾರ್ಗದರ್ಶನ ಬಯಸುತ್ತಾರೋ ಅವರ ಮೇಲೆಲ್ಲ ಪರಿಣಾಮ ಬೀರಿದೆ.

ಮಾಸ್ಟರ್ ಎಕ್ಹಾರ್ಟ್ ನ ಕೊಟೇಷನ್ ಗಳಿಗಾಗಿ ನನ್ನ ಆಕರ, ಜೋಸೆಫ್ L. ಕ್ವಿಂಟ್ ರಚಿಸಿದ ಎಕ್ಹಾರ್ಟ್ ನ ಕುರಿತಾದ ಮಹತ್ವದ ಪುಸ್ತಕ “Meister Eckhart, Die Deutschen Werke ( ಇಲ್ಲಿ ಇದನ್ನ Quint D.W ಎಂದು ಇಲ್ಲಿ ರೆಫರ್ ಮಾಡಲಾಗಿದೆ), ಹಾಗು ಅವನ Meister Eckhart , Deutschen Predigten und Traktate ( ಇಲ್ಲಿ ಅದನ್ನ “Quint D.P.T” ಎಂದು ರೆಫರ್ ಮಾಡಲಾಗಿದೆ), ಮತ್ತು ರೇಮಂಡ್ B. ಬ್ಲ್ಯಾಂಕೀಯ ಅನುವಾದಿತ ಪುಸ್ತಕ “Meister Eckhart” (ಇಲ್ಲಿ ಅದನ್ನ “Blankey” ಅಂತ ರೆಫರ್ ಮಾಡಲಾಗಿದೆ). Quint ನ ಆವೃತ್ತಿ, ನೈಜ ಹಾಗು ಇಲ್ಲಿಯವರೆಗೆ ಸಾಕ್ಷೀಕರಿಸಲ್ಪಟ್ಟ ಪ್ಯಾರಾಗ್ರಾಫ್ ಗಳನ್ನ ಮಾತ್ರ ಒಳಗೊಂಡಿದೆಯಾದರೆ, Blankey ಯ ಬರಹ (ಜರ್ಮನ್ ನಿಂದ ಅನುವಾದಿತ, Pfeiffer, edition) Quint ನಿಂದ ಆಥೆಂಟಿಕ್ ಎಂದು ಇನ್ನೂ ಪರಿಗಣಿಸಲ್ಪಡದ ಬರಹಗಳನ್ನೂ ಒಳಗೊಂಡಿದೆ. Quint ತಾನೇ ಸೂಚಿಸಿರುವಂತೆ ಅವನ ಧೃಡೀಕರಣ ಕೇವಲ ತಾತ್ಕಾಲಿಕ ಹಾಗು ಮಾಸ್ಟರ್ ಎಕ್ಹಾರ್ಟ್ ನ ಹೆಸರಲ್ಲಿ ಬಂದಿರುವ ಇನ್ನೂ ಹಲವಾರು ಕೃತಿಗಳು ನೈಜವಾಗಿರಬಹುದು. ಮೂಲ ಆಕರದ ನೋಟ್ಸ್ ಗಳೊಂದಿಗೆ ಕಾಣಿಸಿಕೊಳ್ಳುವ ಇಟಾಲೀಕರಣಗೊಂಡ ನಂಬರ್ ಗಳು, ಎಕ್ಹಾರ್ಟ್ ನ ಧರ್ಮೋಪದೇಶಗಳು ಮೂರು ಮೂಲ ಆಕರಗಳಲ್ಲಿ ಗುರುತಿಸಲ್ಪಡುವ ರೀತಿಯಲ್ಲಿಯೇ ರೆಫರ್ ಆಗಿವೆ.

ಎಕ್ಹಾರ್ಟ್ ನ having ಪರಿಕಲ್ಪನೆ :

Mathew 5:13 ಟೆಕ್ಸ್ಟ್ ಮೇಲೆ ಆಧಾರಿತವಾದ “ಬಡತನ” ದ ಮೇಲಿನ ಅವನ ಧರ್ಮೋಪದೇಶ, ಅಸ್ತಿತ್ವದ having ವಿಧಾನದ ಮೇಲಿನ ಎಕ್ಹಾರ್ಟ್ ನ ದೃಷ್ಟಿಕೋನದ classic source ಎಂದು ಪರಿಗಣಿಸಲ್ಪಟ್ಟಿದೆ : “ ಅವರದು ಸ್ವರ್ಗದ ರಾಜ್ಯವಾಗಿರುವುದರಿಂದ, ಬಡವರು ಅವರು ಆಲೋಚಿಸುವ ರೀತಿಯ ಕಾರಣವಾಗಿ ಧನ್ಯರು” ( Blessed are the people in spirit, for theirs is a kingdom of heaven). ಈ ಧರ್ಮೋಪದೇಶದಲ್ಲಿ ಎಕ್ಹಾರ್ಟ್, ಅಧ್ಯಾತ್ಮಿಕ ಬಡತನ ಎಂದರೇನು? ಎನ್ನುವ ಪ್ರಶ್ನೆಯ ಕುರಿತು ಚರ್ಚೆ ಮಾಡುತ್ತಾನೆ. ಅವನು ಶುರು ಮಾಡೋದು ; ತಾನು ಹೊರಗಿನ ಬಡತನದ ಬಗ್ಗೆ ಮಾತನಾಡುತ್ತಿಲ್ಲ, ಭೌತಿಕ ವಸ್ತುಗಳ ಬಡತನದ ಬಗ್ಗೆ ಮಾತನಾಡುತ್ತಿಲ್ಲ, ಆ ಬಗೆಯ ಬಡತನ ಒಳ್ಳೆಯದು ಮತ್ತು ಶ್ಲಾಘನೀಯವಾಗಿದ್ದರೂ ಎನ್ನುತ್ತ. ಅವನು ಅಂತರಂಗದ ಬಡತನದ ಬಗ್ಗೆ, ಗಾಸ್ಪಲ್ ನ ಪದ್ಯಗಳಲ್ಲಿ ರೆಫರ್ ಮಾಡಲಾಗಿರುವ ಬಡತನದ ಬಗ್ಗೆ ಮಾತನಾಡಬಯಸುತ್ತಾನೆ. ಅವನು ಇದನ್ನ ಡಿಫೈನ್ ಮಾಡೋದು ಹೀಗೆ : “ ಯಾರಿಗೆ ಏನೂ ಬೇಕಿಲ್ಲವೋ, ಏನೂ ಗೊತ್ತಿಲ್ಲವೋ ಮತ್ತು ಯಾರ ಬಳಿ ಏನೂ ಇಲ್ಲವೋ ಅವನು ಬಡ ಮನುಷ್ಯ” (Blankey,28; Quint D.W, 52; Quint D.P.T., 32).

ಏನೂ ಬೇಕಿಲ್ಲದ ಆ ಮನುಷ್ಯ ಯಾರು? ಸನ್ಯಾಸದ ಬದುಕನ್ನ ಸ್ವೀಕರಿಸಿದ ಗಂಡು ಅಥವಾ ಹೆಣ್ಣು ಎನ್ನುವುದು ನಮ್ಮ ಸಾಮಾನ್ಯ ಉತ್ತರ. ಆದರೆ ಎಕ್ಹಾರ್ಟ್ ಈ ಅರ್ಥದಲ್ಲಿ ಹೇಳುತ್ತಿಲ್ಲ ಮತ್ತು ಏನೂ ಬೇಡ ಎನ್ನುವುದು ಪಶ್ಚಾತಾಪ ಮತ್ತು ಬಹಿರಂಗದ ಧಾರ್ಮಿಕ ಆಚರಣೆಯ ಕಾರಣವಾಗಿ ಎಂದು ತಿಳಿದುಕೊಳ್ಳುವವರನ್ನು ಅವನು ನಿಂದಿಸುತ್ತಾನೆ. ಮತ್ತು ಇಂಥವರನ್ನು ತಮ್ಮ ಸ್ವಂತದ ಅಹಂ ಗೆ ಅಂಟಿಕೊಳ್ಳುವವರು ಎಂದು ತೆಗಳುತ್ತಾನೆ. “ ಈ ಜನ ಹೊರಗಿನಿಂದ ಸಂತರ ವೇಷದಲ್ಲಿ ಕಾಣಿಸಿಕೊಳ್ಳುತ್ತಾರಾದರೂ, ಒಳಗಿನಿಂದ ಅವರು ಕತ್ತೆಗಳು, ಏಕೆಂದರೆ ಅವರಿಗೆ ದಿವ್ಯ ಸತ್ಯದ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದು ಸಾಧ್ಯವಿಲ್ಲ.” (My translation of Wuint’s text)

“ಬೇಕುಗಳ” (wanting) ಕುರಿತಾದ ಎಕ್ಹಾರ್ಟ್ ನ ಕಾಳಜಿ ಮೂಲಭೂತವಾಗಿ ಬುದ್ಧಿಸ್ಟ್ ಮಾದರಿಯದು; ಅದು ದುರಾಸೆ, ವಸ್ತುಗಳ ಕುರಿತಾದ ಚಡಪಡಿಕೆ, ಮತ್ತು ಒಬ್ಬರ ಸ್ವಂತದ ಅಹಂ ಕುರಿತಾದದ್ದು. ಬುದ್ಧ ಈ ರೀತಿಯ ಬಯಕೆಗಳನ್ನ, ಮನುಷ್ಯನ ಎಲ್ಲ ಯಾತನೆಗಳ ಕಾರಣ ಎಂದು ಗುರುತಿಸುತ್ತಾನೆಯೇ ಹೊರತು, ಆನಂದದ ಕಾರಣ ಎಂದಲ್ಲ. ಇಚ್ಛಾಶಕ್ತಿಯ ಅನುಪಸ್ಥಿತಿಯ ಅವಶ್ಯಕತೆಯ (having no will) ಬಗ್ಗೆ ಮಾತನಾಡುವಾಗ ಎಕ್ಹಾರ್ಟ್, ಒಬ್ಬರು ದುರ್ಬಲರಾಗಿರಬೇಕು ಎಂದು ಬಯಸುವುದಿಲ್ಲ. ಎಕ್ಹಾರ್ಟ್ ಮಾತನಾಡುವ “ಇಚ್ಛೆ” (will) ಚಡಪಡಿಕೆಗೆ (craving) ಸಮನಾದದ್ದು, ನಿಜವಾದ ಅರ್ಥದಲ್ಲಿ ಒಬ್ಬರ ಧೀ ಶಕ್ತಿಯನ್ನ ಪ್ರಚೋದಿಸುವ ಇಚ್ಛೆಯ ಅರ್ಥದಲ್ಲಿ ಅಲ್ಲ. ದೇವರ ಕುರಿತಾದ ಇಚ್ಛೆಯನ್ನು ಹೊಂದುವುದು ಕೂಡ ಸಲ್ಲದು ಎಂದು ಪ್ರತಿಪಾದಿಸುವ ಮಟ್ಟಿಗೆ ಎಕ್ಹಾರ್ಟ ಮುಂದುವರೆಯುತ್ತಾನೆ, ಏಕೆಂದರೆ ಇದು ಕೂಡ ಒಂದು ಬಗೆಯ ಚಡಪಡಿಕೆಯೇ. ಏನೂ ಬೇಕಿಲ್ಲದ ಆ ಮನುಷ್ಯ ಯಾರೆಂದರೆ, ಯಾವುದರ ಕುರಿತಾಗಿಯೂ ಆಸೆ-ದುರಾಸೆ (greed) ಇಲ್ಲದ ಮನುಷ್ಯ : ಇದು ಎಕ್ಹಾರ್ಟ್ ನ ಅನಾಸಕ್ತಿಯ (nonattachment) ಕುರಿತಾದ ಪರಿಕಲ್ಪನೆಯ ತಿರುಳು.

ಯಾರದು ಏನೂ ಗೊತ್ತಿಲ್ಲದ ಮನುಷ್ಯ? ಮಾಸ್ಟರ್ ಎಕ್ಹಾರ್ಟ್, ಅಜ್ಞಾನಿ, ಮೂರ್ಖ, ಅವಿದ್ಯಾವಂತ, ಅಸಂಸ್ಕೃತ ಮನುಷ್ಯನ ಬಗ್ಗೆ ಮಾತನಾಡುತ್ತಿದ್ದಾನೆಯೆ? ಅದು ಹೇಗೆ ಸಾಧ್ಯ? ಅವನ ಸ್ವಂತದ ಪ್ರಯತ್ನವೇ, ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವುದು ಆಗಿರುವಾಗ, ಅವನು ಸ್ವತಃ ಪಾಂಡಿತ್ಯದ, ಜ್ಞಾನದ ಮನುಷ್ಯನಾಗಿರುವಾಗ ಮತ್ತು ಯಾವುದನ್ನ ಗೌಣವಾಗಿಸಲು, ಮರೆಮಾಚಲು ಅವನು ಯಾವ ಪ್ರಯತ್ನವನ್ನೂ ಮಾಡದಿರುವಾಗ?

“ಏನೂ ಗೊತ್ತಿಲ್ಲದಿರುವುದರ” ಕುರಿತಾದ ಎಕ್ಹಾರ್ಟನ ಪರಿಕಲ್ಪನೆ, ಜ್ಞಾನವನ್ನು ಹೊಂದುವುದರ (having knowledge) ಮತ್ತು ತಿಳಿದುಕೊಳ್ಳುವ ಪ್ರಕ್ರಿಯೆಯ (act of knowing) ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದ್ದಾಗಿದೆ. ಹಾಗೆಂದರೆ ಬೇರಿನಾಳಕ್ಕಿಳಿಯುವುದು ಮತ್ತು, ಹಾಗಾಗಿ ಸಂಗತಿಯ ಕಾರಣಗಳ ಮೂಲಕ್ಕಿಳಿದು ಅರ್ಥಮಾಡಿಕೊಳ್ಳುವುದು. ಎಕ್ಹಾರ್ಟ್ ಸ್ಪಷ್ಟವಾಗಿ ಒಂದು ನಿರ್ದಿಷ್ಟ ವಿಚಾರ ಮತ್ತು ವಿಚಾರ ಮಾಡುವ ಪ್ರಕ್ರಿಯೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾನೆ. ದೇವರನ್ನು ಪ್ರೀತಿಸುವುದಕ್ಕಿಂತ, ದೇವರನ್ನು ತಿಳಿದುಕೊಳ್ಳುವುದು ಒಳ್ಳೆಯದು ಎನ್ನುವ ವಿಷಯಕ್ಕೆ ಒತ್ತು ಕೊಡುತ್ತಾನೆ, ಅವನ ಪ್ರಕಾರ : “ ದೇವರ ಕುರಿತಾದ ಪ್ರೀತಿ, ಬಯಕೆ ಮತ್ತು ಉದ್ದೇಶಕ್ಕೆ ಸಂಬಂಧಿಸಿದ್ದಾದರೆ, ದೇವರ ಕುರಿತಾದ ತಿಳುವಳಿಕೆ, ಯಾವದೋ ಒಂದು ನಿರ್ದಿಷ್ಟ ವಿಚಾರವಲ್ಲ, ಆದರೆ ಅದು ಎಲ್ಲವನ್ನೂ (ಹೊದಿಕೆಗಳನ್ನು) ಸುಲಿಯುತ್ತದೆ ಮತ್ತು ಅನಾಸಕ್ತವಾಗಿದೆ ಹಾಗು, ದೇವರತ್ತ ಬೆತ್ತಲೆಯಾಗಿ ಓಡುತ್ತದೆ, ಅವನನ್ನು ಮುಟ್ಟುವ ತನಕ ಮತ್ತು ಅವನನ್ನು ತಿಳಿದುಕೊಳ್ಳುವ ತನಕ” (Blankey, Fragment 27; not authenticated by Quint)


1 Comment

Leave a Reply