ಎಕ್ಹಾರ್ಟ್ ನ Being ಪರಿಕಲ್ಪನೆ : To have or to be #26

~ ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ…https://aralimara.com/2023/05/20/fromm-22/

ಎಕ್ಹಾರ್ಟ being ಎನ್ನುವ ಪದವನ್ನ ಪರಸ್ಪರ ಸಂಬಂಧಿಸಿದ ಆದರೆ ಎರಡು ವಿಭಿನ್ನ ಅರ್ಥಗಳಲ್ಲಿ ಬಳಕೆ ಮಾಡುತ್ತಾನೆ. ಸಂಕ್ಷಿಪ್ತ, ಸೈಕಲಾಜಿಕಲ್ ಅರ್ಥದಲ್ಲಿ, being ಎನ್ನುವುದು ನೈಜತೆಯನ್ನ (real) ಸೂಚಿಸುತ್ತದೆ ಮತ್ತು ಮನುಷ್ಯರನ್ನು ಪ್ರೇರೇಪಿಸುವ ಅಪ್ರಜ್ಞಾಪೂರ್ವಕ ಪ್ರೇರಣೆಗಳನ್ನ, ಮನುಷ್ಯರ ಪ್ರಜ್ಞಾಪೂರ್ವಕ ಕೆಲಸಗಳು ಮತ್ತು ಅಲೋಚನೆ ಅನಿಸಿಕೆಗಳಿಗೆ ವಿರುದ್ಧ ಎಂಬಂತೆ ಹಾಗು ಯೋಚಿಸುವ ಮತ್ತು ಯೋಚನೆಯನ್ನು ಇಪ್ಲಿಮೆಂಟ್ ಮಾಡುವ ಜನರಿಂದ ಪ್ರತ್ಯೇಕವಾಗಿಸಿ. ಕ್ವಿಂಟ್, ಎಕ್ಹಾರ್ಟನನ್ನು ಆತ್ಮದ ಅಸಾಮಾನ್ಯ ವಿಶ್ಲೇಷಕ (genialer Seelenanalytiker) ಎಂದು ಗುರುತಿಸುವುದು ನ್ಯಾಯೋಚಿತವಾಗಿಯೇ ಇದೆ : “ ಮನುಷ್ಯ ಸ್ವಭಾವಗಳ ಅತ್ಯಂತ ರಹಸ್ಯಾತ್ಮಕ ಬಂಧಗಳನ್ನ ಅನಾವರಣ ಮಾಡುವಲ್ಲಿ , ಮನುಷ್ಯನೊಳಗೆ ಅಡಗಿಕೊಂಡಿರುವ ಸ್ವಾರ್ಥ, ಉದ್ದೇಶ, ಅಭಿಪ್ರಾಯ, ಉಪಕಾರ ಸ್ಮರಣೆ ಮತ್ತು ಬಳುವಳಿಗಾಗಿನ ತೀವ್ರವಾದ ಚಡಪಡಿಕೆಯನ್ನು ಖಂಡಿಸುವಲ್ಲಿ ಏಕ್ಹಾರ್ಟ್ ನಿಗೆ ದಣಿವಾಗುವುದಿಲ್ಲ (Quint D.P.T., Introduction, p. 29; my translation). ಮನುಷ್ಯನ ಒಳಗೆ ಅಡಗಿಕೊಂಡಿರುವ ಪ್ರೇರಣೆಗಳ ಕುರಿತಾದ ಒಳನೋಟಗಳಿಗಾಗಿ ಎಕ್ಹಾರ್ಟ್, ಫ್ರಾಯ್ಡ್ ನಂತರದ (post – Freudian) ಓದುಗರಿಗೆ ಆಕರ್ಷಣೀಯವಾಗಿದ್ದಾನೆ. ಫ್ರಾಯ್ಡ್ ನಂತರದ ಓದುಗರು, ಫ್ರಾಯ್ಡ್ ಪೂರ್ವದ ಓದುಗರ ಮುಗ್ಧತೆ, ಅನನುಭವವನ್ನು ದಾಟಿ ಬಂದಿದ್ದಾರಾದರೂ, ಸಧ್ಯದ ಬಿಹೇವಿಯರಿಸ್ಟಿಕ್ ಧೋರಣೆಯವರಾಗಿದ್ದಾರೆ, ಮತ್ತು ಈ ಧೋರಣೆಯ ಪ್ರಕಾರ ನಡುವಳಿಕೆ ಮತ್ತು ಅಭಿಪ್ರಾಯ, ಈ ಶತಮಾನದ ಶುರುವಾತಿನಲ್ಲಿ ಅಣುವನ್ನು ಎಷ್ಟು ಕಿರಿದಾಗಿ ಒಡೆಯಬಹುದಾಗಿತ್ತೋ ಅಷ್ಟು ಕಿರಿದಾಗಿ ಒಡೆಯಬಲ್ಲ ಎರಡು ಅಂತಿಮ ದತ್ತಾಂಶಗಳು (data). ಈ ಧೋರಣೆಯನ್ನ ಎಕ್ಹಾರ್ಟ್ ತನ್ನ ಹಲವಾರು ಹೇಳಿಕೆಗಳಲ್ಲಿ ಅಭಿವ್ಯಕ್ತಿಸಿದ್ದಾನೆ ಮತ್ತು ಈ ಅಭಿವ್ಯಕ್ತಿಯ ಮುಖ್ಯ ಗುಣಲಕ್ಷಣವೆಂದರೆ : “ಜನ ತಾವು ಏನು ಎನ್ನುವುದಕ್ಕಿಂತ, ತಾವು ಏನು ಮಾಡುಬೇಕು ಎನ್ನುವುದಕ್ಕೆ ಹೆಚ್ಚು ಮಹತ್ವ ಕೊಡಬಾರದು….. ಹಾಗಾಗಿ ನಮ್ಮ ಒತ್ತು “being good” ಮೇಲೆ ಹೆಚ್ಚು ಇರಬೇಕೇ ಹೊರತು “ಎಷ್ಟು ಮತ್ತು ಎಂಥ ಕೆಲಸ” ಎನ್ನುವುದರ ಮೇಲಲ್ಲ. ನಿಮ್ಮ ಕೆಲಸದ ಆಧಾರ ಏನು ಎನ್ನುವುದರ ಮೇಲೆ ಹೆಚ್ಚು ಒತ್ತು ಹಾಕಬೇಕಾದದ್ದು ಅವಶ್ಯಕ. “ನಮ್ಮ ಇರುವಿಕೆ ನಮ್ಮ ಚಲನೆಯನ್ನ ಪ್ರೇರೇಪಿಸುವ, ನಮ್ಮ ನಡುವಳಿಕೆಯನ್ನ ಪ್ರಚೋದಿಸುವ ಒಂದು ವಾಸ್ತವ ; ಇದಕ್ಕೆ ವಿರುದ್ಧವಾಗಿ ನಮ್ಮ ಉದ್ದೇಶಪೂರ್ವಕ ಕ್ರಿಯೆಗಳಲ್ಲಿ ಅಥವಾ ನಮ್ಮ ಡೈನಾಮಿಕ್ ತಿರುಳಿನಿಂದ ಹೊರತಾದ ಅಭಿಪ್ರಾಯಗಳಲ್ಲಿ ಯಾವುದೇ ವಾಸ್ತವೀಕತೆಯಿಲ್ಲ.

Being ಪದದ ಎರಡನೇ ಅರ್ಥ ಹೆಚ್ಚು ವ್ಯಾಪಕ ಮತ್ತು ಹೆಚ್ಚು ಮೂಲಭೂತವಾದದ್ದು : ಬೀಯಿಂಗ್ ಎಂದರೆ ಲೈಫ್, ಕ್ರಿಯೆ, ಹುಟ್ಟು, ನವೀಕರಣ, ಉಕ್ಕಿ ಹರಿಯುವುದು, ಉತ್ಪಾದಕತೆ. ಈ ಅರ್ಥದಲ್ಲಿ being ಎನ್ನುವುದು having ಗೆ, ಅಹಂಬಂಧಕ್ಕೆ (egoboundness), ಅಹಂಭಾವಕ್ಕೆ (egotism) ವಿರುದ್ಧವಾದದ್ದು. Being ಎನ್ನುವುದು ಎಕ್ಹಾರ್ಟ ನಿಗೆ, ಕ್ಲಾಸಿಕಲ್ ಅರ್ಥದಲ್ಲಿ ಒಬ್ಬರ ಮನುಷ್ಯ ಸಾಮರ್ಥ್ಯದ ಸೃಜನಶೀಲ ಅಭಿವ್ಯಕ್ತಿಯಲ್ಲಿ ಕ್ರಿಯಾಶೀಲವಾಗಿರುವುದೇ ಹೊರತು ಅದರ ಆಧುನಿಕ ಅರ್ಥದಲ್ಲಿ ಅವಿಶ್ರಾಂತ (busy) ಆಗಿರುವುದಲ್ಲ. ಅವನಿಗೆ ಕ್ರಿಯೆಯ (activity) ಅರ್ಥ “ತನ್ನನ್ನು ತಾನು ದಾಟುವುದು” (to go out of oneself) (Quint D.P.T., 6; my translation), ಇದನ್ನು ಅವನು ಅನೇಕ ಶಬ್ದಚಿತ್ರಗಳಲ್ಲಿ ಅಭಿವ್ಯಕ್ತಿಸುತ್ತಾನೆ : ಅವನು being ನ “ಕುದಿಯುವ” ಪ್ರಕ್ರಿಯೆ ಎನ್ನುತ್ತಾನೆ, “ಜನ್ಮ ನೀಡುವ” ಪ್ರಕ್ರಿಯೆ ಎನ್ನುತಾನೆ, “ ತಾನೇ ತಾನಾಗಿ ಹರಿಯುವ ಮತ್ತು ತನ್ನನ್ನೂ ದಾಟಿ ಹರಿಯುವ” ಪ್ರಕ್ರಿಯೆ ಎಂದು ಬಣ್ಣಿಸುತ್ತಾನೆ” (E. Benz et al., quoted in Quint D.P.T., p. 35; my translation). ಕೆಲವೊಮ್ಮೆ ಕ್ರಿಯಾತ್ಮಕ ಪಾತ್ರವನ್ನ (active character) ಸೂಚಿಸಲು ಅವನು ರನ್ನಿಂಗ್ ಸಿಂಬಲ್ ಬಳಸುತ್ತಾನೆ : “ ಶಾಂತಿಗಾಗಿ ಓಟ! ಓಡುತ್ತಿರುವ ಸ್ಥಿತಿಯಲ್ಲಿರುವ ಮನುಷ್ಯ , ಸಮಾಧಾನದಲ್ಲಿ ನಿರಂತರವಾಗಿ ಓಡುತ್ತಿರುವ ಮನುಷ್ಯ, ಗಂಧರ್ವ ಮಾನವ (heavenly man). ಅವನು ನಿರಂತರವಾಗಿ ಓಡುತ್ತ, ಚಲಿಸುತ್ತ ಓಡುವಿಕೆಯಲ್ಲಿ ಸಮಾಧಾನವನ್ನು ಕಾಣುತ್ತಾನೆ” (Quint D.P.T., 8; my translation). ಪ್ರಕ್ರಿಯೆಯ ಇನ್ನೊಂದು ವ್ಯಾಖ್ಯಾನ : ಕ್ರಿಯಾತ್ಮಕ, ಜೀವಂತ ಮನುಷ್ಯ ಹೇಗೆಂದರೆ “ ತುಂಬಿದಷ್ಟು ಬೆಳೆಯುತ್ತಲೇ ಹೋಗುವ ಎಂದೂ ತುಂಬಿ ತುಳುಕದ ಪಾತ್ರೆಯಂತೆ” (Blankey, p 233; not authenticated by Quint).

ನೈಜ ಪ್ರಕ್ರಿಯೆ ಗೆ ಇರುವ ಷರತ್ತು ಏನೆಂದರೆ having ನ ವಿಧಾನವನ್ನು ಒಡೆಯುವುದು. ಎಕ್ಹಾರ್ಟ್ ನ ನೈತಿಕ ವ್ಯವಸ್ಥೆಯಲ್ಲಿ ಪರಮ ಮೌಲ್ಯ ಎಂದರೆ, ಸೃಜನಶೀಲ ಅಂತರಂಗದ ಪ್ರಕ್ರಿಯೆ ಸ್ಥಿತಿ, ಇದನ್ನು ತಲುಪಲು ಇರುವ ಭೂಮಿಕೆ ಎಂದರೆ ಎಲ್ಲ ಬಗೆಯ ಅಹಂನ, ಚಡಪಡಿಕೆಯನ್ನ ದಾಟಿ ಮುನ್ನಡೆಯುವುದು.

1 Comment

Leave a Reply