ಎಕ್ಹಾರ್ಟ್ ನ having ಪರಿಕಲ್ಪನೆ : To have or to be #25

“ಮನುಷ್ಯ ತನ್ನ ಸ್ವಂತದ ಜ್ಞಾನವನ್ನು ಖಾಲೀ ಮಾಡಿಕೊಳ್ಳಬೇಕು” ಎಂದು ಎಕ್ಹಾರ್ಟ್ ಹೇಳುವಾಗ, ಅವನು ಮನುಷ್ಯ ತನಗೆ ಗೊತ್ತಿರುವುದನ್ನ ಮರೆತುಬಿಡಬೇಕು ಎಂದು ಹೇಳುತ್ತಿಲ್ಲ ಬದಲಾಗಿ, ಮನುಷ್ಯ ತನಗೆ ಗೊತ್ತಿದೆ ಎನ್ನುವುದನ್ನ ಮರೆತುಬಿಡಬೇಕು ಎಂದು ಹೇಳುತ್ತಿದ್ದಾನೆ… ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2023/05/14/fromm-21/

( ಮುಂದುವರಿದ ಭಾಗ…)

ಆದರೆ ಇನ್ನೊಂದು ಲೆವೆಲ್ ನಲ್ಲಿ ( ಎಕ್ಹಾರ್ಟ್ ಹಲವಾರು ಲೆವೆಲ್ ಗಳಲ್ಲಿ ಮಾತನಾಡುತ್ತಾನೆ) ಎಕ್ಹಾರ್ಟ್ ಇನ್ನೂ ಮುಂದುವರೆದು ಮಾತನಾಡುತ್ತಾನೆ :

ಯಾರಿಗೆ ಏನೂ ಗೊತ್ತಿಲ್ಲವೋ ಅವನು ಬಡವ. ಕೆಲವೊಮ್ಮೆ ನಾವು ಹೇಳುವ ಹಾಗೆ, ಮನುಷ್ಯ ತಾನು ಬದುಕದಂತೆ ಬದುಕಬೇಕು, ಸ್ವಂತದ ಸಲುವಾಗಿ, ಸತ್ಯದ ಸಲುವಾಗಿ, ದೇವರ ಸಲುವಾಗಿ ಕೂಡ. ಆದರೆ ಅದನ್ನ ಹಾಗೆ ಹೇಳದೇ, ಬೇರೆ ಏನೋ ಹೇಳುತ್ತ ನಾವು ಮುಂದುವರೆಯುತ್ತೇವೆ. ಈ ಬಡತನವನ್ನು ಸಾಧಿಸಿಕೊಳ್ಳಬೇಕಾದ ಮನುಷ್ಯ, ತಾನು ಬದುಕುತ್ತಿರುವುದು ಗೊತ್ತಿರದ ಮನುಷ್ಯನ ಹಾಗೆ ಬದುಕಬೇಕು, ಸ್ವಂತದ ಸಲುವಾಗಿ, ಸತ್ಯದ ಸಲುವಾಗಿ, ದೇವರ ಸಲುವಾಗಿ ಕೂಡ. ಮುಂದುವರೆದು, ಅವನು ಎಲ್ಲ ಜ್ಞಾನದಿಂದ ಹೊರತಾಗಿರಬೇಕು, ಖಾಲೀಯಾಗಿರಬೇಕು, ಅವನೊಳಗೆ ದೇವರ ಕುರಿತಾದ ಯಾವ ಜ್ಞಾನವೂ ಇರದಂತೆ; ಮನುಷ್ಯನ ಅಸ್ತಿತ್ವ ದೇವರ ಬಹಿರಂಗ ರೂಪದಂತಾದಾಗ (for when man’s existence is of Gods external spices ) ಅವನಲ್ಲಿ ಬೇರೆ ಯಾವ ಬದುಕೂ ಇಲ್ಲ : ಅವನ ಬದುಕು ಅವನು ಮಾತ್ರ. ಆದ್ದರಿಂದಲೇ ನಾವು ಹೇಳೋದು, ಮನುಷ್ಯ ತನ್ನ ಸ್ವಂತದ ಜ್ಞಾನದಿಂದ ಹೊರತಾಗಿರಬೇಕು, ಅವನು ಅಸ್ತಿತ್ವದಲ್ಲಿ ಇರದಾಗ ಇರುವಂತೆ, ಮತ್ತು ದೇವರು ಬೇಕಾದರೆ ತನಗೆ ಸಾಧ್ಯವಾದದ್ದನ್ನು ಸಾಧಿಸಿಕೊಳ್ಳಲಿ ಮತ್ತು ಮನುಷ್ಯ ಇರಲಿ ಅನಿಯಂತ್ರಿತನಾಗಿ ( Blankey, 28; Quint D.W., 52; Quint D.P.T., 32; a small portion is my translation of Quint’s German text).*

ಎಕ್ಹಾರ್ಟ್ ನ ದೃಷ್ಟಿಕೋನವನ್ನ ಅರ್ಥಮಾಡಿಕೊಳ್ಳಲು, ಈ ಶಬ್ದಗಳ ನೈಜ ಅರ್ಥವನ್ನು ತಿಳಿದುಕೊಳ್ಳುವುದು ತುಂಬ ಅವಶ್ಯಕ. “ಮನುಷ್ಯ ತನ್ನ ಸ್ವಂತದ ಜ್ಞಾನವನ್ನು ಖಾಲೀ ಮಾಡಿಕೊಳ್ಳಬೇಕು” ಎಂದು ಎಕ್ಹಾರ್ಟ್ ಹೇಳುವಾಗ, ಅವನು ಮನುಷ್ಯ ತನಗೆ ಗೊತ್ತಿರುವುದನ್ನ ಮರೆತುಬಿಡಬೇಕು ಎಂದು ಹೇಳುತ್ತಿಲ್ಲ ಬದಲಾಗಿ, ಮನುಷ್ಯ ತನಗೆ ಗೊತ್ತಿದೆ ಎನ್ನುವುದನ್ನ ಮರೆತುಬಿಡಬೇಕು ಎಂದು ಹೇಳುತ್ತಿದ್ದಾನೆ. ಹಾಗೆಂದರೆ ಜ್ಞಾನವನ್ನ ನಮಗೆ ರಕ್ಷಣೆ ಮತ್ತು sense of identity ಕೊಡುವ ಸೊತ್ತು ಎಂದು ಪರಿಗಣಿಸಬಾರದು ; ನಾವು ಜ್ಞಾನವನ್ನ “ತುಂಬಿಕೊಂಡವರಾಗಬಾರದು” ಅಥವಾ ಜ್ಞಾನಕ್ಕೆ “ಅಂಟಿಕೊಂಡವರಾಗಬಾರದು” ಅಥವಾ ಅದಕ್ಕಾಗಿ “ಚಡಪಡಿಸುವವರಾಗಬಾರದು”. ಜ್ಞಾನ, ನಮ್ಮನ್ನ ಗುಲಾಮರನ್ನಾಗಿಸುವ ಸಿದ್ಧಾಂತದ (dogma) ಕ್ವಾಲಿಟಿಯನ್ನ ಹೊಂದಬಾರದು. ಇದೆಲ್ಲ having ವಿಧಾನದ ಭಾಗವಾಗಿರುವಂಥದು. Being ವಿಧಾನದಲ್ಲಿ ಜ್ಞಾನ ಎಂದರೆ ಆಲೋಚನೆ ಆಳಕ್ಕಿಳಿಯುವ ಪ್ರಕ್ರಿಯೆ (penetrating activity of thought) ಖಚಿತತೆಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ನಿಂತ ನೀರಾಗುವ ಎಲ್ಲ ಆಹ್ವಾನಗಳನ್ನು ತಿರಸ್ಕರಿಸುತ್ತ. ಎಕ್ಹಾರ್ಟ ಮುಂದುವರೆಯುತ್ತಾನೆ………

ಮನುಷ್ಯ ಏನನ್ನೂ ಹೊಂದಬಾರದು ಎಂದರೆ, ಇದರ ಅರ್ಥ ಏನು?

ಈಗ ಶೃದ್ಧೆಯಿಂದ ಈ ಬಗ್ಗೆ ಗಮನ ಹರಿಸಿ : ನಾನು ಮೇಲಿಂದ ಮೇಲೆ ಇದನ್ನ ಹೇಳಿದ್ದೇನೆ ಮತ್ತು ವಿಷಯ ತಜ್ಞರು ನನ್ನ ಈ ಮಾತನ್ನ ಅನುಮೋದಿಸಿದ್ದಾರೆ, ಆ ಮಾತು ಏನೆಂದರೆ, ದೇವರಿಗೆ ಸರಿಯಾದ ನೆಲೆ ಕಲ್ಪಿಸಿಕೊಡಲು ಮತ್ತು ಅಲ್ಲಿ ದೇವರಿಗೆ ಸರಿಯಾಗಿ ಕೆಲಸಮಾಡಲು ಅವಕಾಶ ಮಾಡಿಕೊಡಲು, ಮನುಷ್ಯ ಕೂಡ ಎಲ್ಲ (ತನ್ನ ಸ್ವಂತದ) ಸಂಗತಿಗಳಿಂದ, ಮತ್ತು (ತನ್ನ ಸ್ವಂತದ) ಕ್ರಿಯೆಗಳಿಂದ ಬಿಡುಗಡೆ ಹೊಂದಬೇಕು, ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ ಕೂಡ. ಈಗ ನಾವು ಇನ್ನೊಂದು ಮಾತನ್ನ ಹೇಳೋಣ. ಮನುಷ್ಯ ತನ್ನನ್ನು ಸಂಗತಿಗಳಿಂದ, ಸ್ವಾಧೀನತೆಯಿಂದ, ಸ್ವತಃ ತನ್ನಿಂದ ಮತ್ತು ದೇವರಿಂದ ಕೂಡ ಖಾಲಿ ಮಾಡಿಕೊಂಡಾಗಲೂ, ದೇವರಿಗೆ ಅವನಲ್ಲಿ ಕ್ರಿಯೆಗೆ ಜಾಗ ಸಿಗುವುದಾದರೆ, ಆಗ ನಾವು ಹೇಳಬಹುದು : ಎಲ್ಲಿಯವರೆಗೆ ಆ ಜಾಗ ಅಸ್ತಿತ್ವದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಆ ಮನುಷ್ಯ, ಅತ್ಯಂತ ಆಪ್ತ (intimate) ಬಡತನದಿಂದ ಹೊರತಾಗಿರುತ್ತಾನೆ. ಮನುಷ್ಯ ತನ್ನ ಕ್ರಿಯೆಗಾಗಿ ಜಾಗ ಕಾಯ್ದಿರಿಸಬೇಕೆಂದು ದೇವರು ಬಯಸುವುದಿಲ್ಲ ಏಕೆಂದರೆ, ಚೈತನ್ಯದ (spirit) ನಿಜವಾದ ಬಡತನಕ್ಕೆ ಮನುಷ್ಯ ತನ್ನನ್ನು ತಾನು ದೇವರು ಮತ್ತು ಅವನ ಕೆಲಸಗಳಿಂದ ಕೂಡ ಖಾಲಿಯಾಗಿಸಿಕೊಳ್ಳಬೇಕು, so that ದೇವರಿಗೇನಾದರೂ ಆತ್ಮದಲ್ಲಿ ಕೆಲಸ ಮಾಡುವ ಮನಸ್ಸಾದರೆ, ಆ ಕ್ರಿಯೆಗೆ ಅವನು ತಾನೇ ಸ್ವತಃ ಆ ಕೆಲಸ ಮಾಡುವ ಮತ್ತು ಮಾಡಬಯಸುವ ಜಾಗವಾಗಬೇಕು. ಹಾಗಾಗಿ ನಾವು ಹೇಳುವುದು, ಮನುಷ್ಯ ಎಷ್ಟು ಬಡವನಾಗಿರಬೇಕೆಂದರೆ, ಅವನು ತಾನು ದೇವರಿಗೆ ಕೆಲಸ ಮಾಡುವ ಜಾಗವಾಗಿರಬಾರದು ಅಷ್ಟೇ ಅಲ್ಲ ದೇವರಿಗೆ ಕೆಲಸ ಮಾಡಲು ಯಾವ ಜಾಗವನ್ನೂ ಹೊಂದಿರಬಾರದು. ದೇವರಿಗಾಗಿ ಜಾಗ ಕಾಯ್ದಿಡುವುದೆಂದರೆ ಭೇದವೊಂದನ್ನು ಸೃಷ್ಟಿಸಿದಂತೆ. ಆದ್ದರಿಂದ ನಾನು ದೇವರನ್ನು ಪ್ರಾರ್ಥಿಸುತ್ತೇನೆ ನನ್ನನ್ನು ದೇವರಿಂದ ಹೊರತಾಗಿಸುವಂತೆ. (Blankey, pp. 230-231)

ಹೊಂದುವುದರಿಂದ ಹೊರತಾಗುವ (not having) ಕುರಿತಾದ ತನ್ನ ಪರಿಕಲ್ಪನೆಯನ್ನ ಇದಕ್ಕಿಂತ ಕ್ರಾಂತಿಕಾರಿಯಾಗಿ (radically) ಅಭಿವ್ಯಕ್ತಿಸುವುದು ಎಕ್ಹಾರ್ಟ್ ಗೆ ಸಾಧ್ಯವಾಗುತ್ತಿರಲಿಲ್ಲ. ಮೊದಲು ನಾವು ನಮ್ಮ ಕುರಿತಾದ ಸಂಗತಿಗಳಿಂದ ಮತ್ತು ನಮ್ಮ ಸ್ವಂತದ ಕ್ರಿಯೆಗಳಿಂದ ಹೊರತಾಗಿರಬೇಕು. ಹೀಗೆ ಹೇಳುವುದೆಂದರೆ ನಾವು ಏನನ್ನೂ ಹೊಂದಬಾರದು, ಏನೂ ಮಾಡಬಾರದು ಎಂದಲ್ಲ; ಇದರ ಅರ್ಥ ನಾವು ಹೊಂದಿರುವುದಕ್ಕೆ, ನಾವು ಮಾಲಿಕರಾಗಿರುವುದಕ್ಕೆ ಅಂಟಿಕೊಳ್ಳಬಾರದು, ಬಂಧಿತರಾಗಬಾರದು, ದೇವರಿಗೂ ಕೂಡ.

ಸ್ವಾಧೀನಪಡಿಸಿಕೊಳ್ಳುವಿಕೆ (possession) ಮತ್ತು ಸ್ವಾತಂತ್ರ್ಯಗಳ ನಡುವಿನ ಸಂಬಂಧವನ್ನು ಚರ್ಚೆ ಮಾಡುವಾಗ ಎಕ್ಹಾರ್ಟ್, having ನ ಸಮಸ್ಯೆಗಳನ್ನು ಇನ್ನೊಂದು ಲೆವೆಲ್ ನಲ್ಲಿ ಅಪ್ರೋಚ್ ಮಾಡುತ್ತಾನೆ. ಸ್ವಾಧೀನಪಡಿಸಿಕೊಳ್ಳುವಿಕೆಗೆ ಮತ್ತು ನಮ್ಮ ನಮ್ಮ ಅಹಂಗಳಿಗೆ ನಾವು ಎಷ್ಟು ಬಂಧಿತರಾಗಿದ್ದೇವೆಯೋ ಅಷ್ಟರಮಟ್ಟಿಗೆ ಮಾತ್ರ ಮನುಷ್ಯನ ಸ್ವಾತಂತ್ರ್ಯ ಸೀಮಿತವಾಗಿದೆ. ನಮ್ಮ ಅಹಂಗಳಿಗೆ ಬಂಧಿತವಾಗುವ ಮೂಲಕ (Quint translates the original middle German Eigenschaft as Ich-bindung or Ischsucht, “egoboundness” or “egomania”), ನಮ್ಮ ದಾರಿಗೆ ನಾವೇ ಅಡ್ಡಿಯಾಗುತ್ತೇವೆ, ಮತ್ತು ಫಲವನ್ನು ಧರಿಸುವ, ಹಾಗು ನಮ್ಮನ್ನು ನಾವು ಪೂರ್ಣವಾಗಿ ಸಾಕ್ಷಾತ್ಕಾರಗೊಳಿಸಿಕೊಳ್ಳುವುದರಿಂದ ತಡೆಯಲ್ಪಡುತ್ತೇವೆ (Quint D.P.T., Introduction p.29). ಸ್ವಾತಂತ್ರ್ಯ ಎಂದರೆ ತಮ್ಮ ಅಹಂ ನ ಬಿಟ್ಟು ಬಿಡುವ ( ಜವಾಬ್ದಾರಿಯುತ ಕುಟುಂಬದ ಸದಸ್ಯ ಅಥವಾ ನಾಗರಿಕರ ಅರ್ಥದಲ್ಲಿ ಪ್ರೀತಿ ಎಂದರೆ ಎಲ್ಲ ಬಗೆಯ ಅಹಂಬಂಧಗಳಿಂದ ಬಿಡುಗಡೆ) ನೈಜ ಉತ್ಪಾದಕತೆಯ ಸ್ಥಿತಿ ಎನ್ನುವ D.Mieth ನ ಅಭಿಪ್ರಾಯ ಸಂಪೂರ್ಣ ಸರಿ. ಸ್ವಾತಂತ್ರ್ಯ, ಯಾವ ಅಂಕುಶವೂ ಇಲ್ಲದ ಇರುವಿಕೆ ಎನ್ನುವ ಅರ್ಥದಲ್ಲಿ, ಒಂದು ಸಂಗತಿಗೆ ಅಂಟಿಕೊಳ್ಳುವ ಚಡಪಡಿಕೆಯಿಂದ ಹಾಗು ಒಬ್ಬರ ಅಹಂನಿಂದ ಹೊರತಾಗುವ ಎನ್ನುವ ಅರ್ಥದಲ್ಲಿ, ಪ್ರೀತಿ ಮತ್ತು ಉತ್ಪಾದನಾಶೀಲ ವ್ಯಕ್ತಿತ್ವವನ್ನು ಸಾಧಿಸಿಕೊಳ್ಳುವುದಕ್ಕೆ ಅವಶ್ಯಕವಾದಂಥ ಸ್ಥಿತಿ. ಎಕ್ಹಾರ್ಟ್ ನ ಪ್ರಕಾರ ಮನುಷ್ಯ ಬದುಕಿನ ಉದ್ದೇಶ ಅಹಂಬಂಧ, ಅಹಂಕೇಂದ್ರಿತತೆಯ ಸಂಕೋಲೆಗಳಿಂದ ಬಿಡಿಸಿಕೊಳ್ಳುವುದು. ಹಾಗೆಂದರೆ, ಪರಿಪೂರ್ಣ ಇರುವಿಕೆಯನ್ನು ಮುಟ್ಟಲು, having ಜೀವನ ವಿಧಾನದಿಂದ ಬಿಡಿಸಿಕೊಳ್ಳುವುದು. ಎಕ್ಹಾರ್ಟ್ ಹೇಳುವಂಥ Having ದೃಷ್ಟಿಕೋನದ ಸ್ವಭಾವ ಕುರಿತಾದ ನನ್ನ ಆಲೋಚನೆಗಳಿಗೆ ( Mieth ಅಭಿವ್ಯಕ್ತಿಸಿದ ಹಾಗೆ – 1971) ಸರಿಹೊಂದುವ ಬೇರಾವ ಲೇಖಕನನ್ನೂ ನಾನು ಗಮನಿಸಿಲ್ಲ. ನನಗೆ ಗೊತ್ತಿರುವ ಹಾಗೆ, ಅವನು ಜನರ ಆಸ್ತಿ ಸಂರಚನೆಯ (the property structure of people) ಬಗ್ಗೆ ಮಾತಾಡುವುದು, ನಾನು having ವಿಧಾನದ ಬಗ್ಗೆ, ಅಸ್ತಿತ್ವದ having ಸಂರಚನೆಯ ಬಗ್ಗೆ ಮಾತನಾಡುವ ರೀತಿಯಲ್ಲಿಯೇ. ಅವನು ಒಬ್ಬರ ಅಂತರಂಗಿಕ ಆಸ್ತಿ ಸಂರಚನೆಯ (inner property structure) ಪ್ರಗತಿಯ ಬಗ್ಗೆ ಮಾತನಾಡುವಾಗ, ಸಾರ್ವಜನಿಕ ಬಳಕೆಗೆ ಮಾಲಿಕರಿಂದ ಆಸ್ತಿ ವಶಪಡಿಸಿಕೊಳ್ಳುವ (expropriation) ಮಾರ್ಕ್ಸ್ ನ ಪರಿಕಲ್ಪನೆಯನ್ನು ರೆಫರ್ ಮಾಡುತ್ತಾನೆ, ಇದು ಅತ್ಯಂತ ಕ್ರಾಂತಿಕಾರಿ ವಿಧಾನ ಎನ್ನುತ್ತ.

Having ಅಸ್ತಿತ್ವದ ವಿಧಾನದಲ್ಲಿ having ಗೆ ಸಂಬಂಧಿಸಿದ ಹಲವಾರು ಸಂಗತಿಗಳು (objects) ಅಷ್ಟು ಮುಖ್ಯವಲ್ಲ, ಯಾವುದು ಮುಖ್ಯವೆಂದರೆ, ನಮ್ಮ ಇಡಿಯಾದ ಮನುಷ್ಯ ಧೋರಣೆ (whole human attitude). ಇಲ್ಲಿ ಎಲ್ಲವೂ ಮತ್ತು ಯಾವುದು ಕೂಡ ನಮ್ಮ ಚಡಪಡಿಕೆಯ ಸಂಗತಿಯಾಗಬಹುದು : ನಾವು ದಿನನಿತ್ಯ ಬಳಸುವ ಸಂಗತಿಗಳು, ಆಸ್ತಿ, ಆಚರಣೆ, ಒಳ್ಳೆಯ ಕೆಲಸಗಳು, ಜ್ಞಾನ, ವಿಚಾರಗಳು ಮತ್ತು ಯಾವುದೂ ಕೂಡ. ಅವು ಸ್ವತಃ ಕೆಟ್ಟವಾಗಿರದೇ ಇದ್ದರೂ, ಯಾವಾಗ ನಾವು ಅವಕ್ಕೆ ಅಂಟಿಕೊಳ್ಳುತ್ತೇವೆಯೋ, ಯಾವಾಗ ಅವು ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸರಪಳಿಗಳಾಗುತ್ತವೆಯೋ , ಯಾವಾಗ ನಮ್ಮ ಸ್ವ ಸಾಕ್ಷಾತ್ಕಾರಕ್ಕೆ ಅಡ್ಡಿಯಾಗುತ್ತವೆಯೋ ಆಗ ಕೆಟ್ಟವಾಗತೊಡಗುತ್ತವೆ.

1 Comment

Leave a Reply