ಹೊಟ್ಟೆಬಾಕ ಸಮಾಜ – Basis for having mode-3 : To have or to be #29

ಐಡಿಯಾಗಳು ಮತ್ತು ನಂಬಿಕೆಗಳು ಕೂಡ ಆಸ್ತಿಯ ರೂಪ ಪಡೆಯುವ ಸಾಧ್ಯತೆ ಇದೆ, ಮತ್ತು ಹ್ಯಾಬಿಟ್ ಗಳಾಗಿಯೂ. ಉದಾಹರಣೆಗೆ ಪ್ರತಿದಿನ ಮುಂಜಾನೆ ಅದೇ ಸಮಯಕ್ಕೆ ಬಹುತೇಕ ಅದೇ ಬ್ರೆಕ್ ಫಾಸ್ಟ್ ಮಾಡುವವರ ರೂಟೀನ್ ನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವರು ತೊಂದರೆಗೆ ಒಳಗಾಗುತ್ತಾರೆ, ಏಕೆಂದರೆ ಅವರ ಹ್ಯಾಬಿಟ್ ಅವರ ಆಸ್ತಿಯಾಗಿ ಪರಿವರ್ತಿತವಾಗಿದೆ ಮತ್ತು ಈ ಹ್ಯಾಬಿಟ್ ನ ಮುರಿಯುವುದೆಂದರೆ ಅವರ ಆರೋಗ್ಯವನ್ನು ಅಸುರಕ್ಷತೆಗೆ ದೂಡಿದಂತೆ… ~ ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/05/28/fromm-25/


ಮುಂದುವರೆದ ಭಾಗ

ಸ್ವಾಮ್ಯದ ಭಾವ ಇನ್ನಿತರ ಸಂಬಂಧಗಳಲ್ಲಿಯೂ ಅಭಿವ್ಯಕ್ತಗೊಳ್ಳುತ್ತಿರುತ್ತದೆ, ಉದಾಹರಣೆಗೆ ಇದು ಎದ್ದು ಕಾಣುವುದು ಡಾಕ್ಟರ್, ಡೆಂಟಿಸ್ಟ್, ಲಾಯರ್, ಬಾಸ್, ಕೆಲಸಗಾರರು ಮುಂತಾದವರ ವಿಷಯದಲ್ಲಿ. ಈ ಸ್ವಾಮ್ಯ ಭಾವವನ್ನ ಜನ ಎಕ್ಸಪ್ರೆಸ್ ಮಾಡೋದು ತಮ್ಮ ನಿತ್ಯದ ಮಾತುಗಳಲ್ಲಿ ಉದಾಹರಣೆಗೆ, “ನನ್ನ ಡಾಕ್ಟರ್”, “ನನ್ನ ಡೆಂಟಿಸ್ಟ್”, “ನನ್ನ ಮನೆ ಕೆಲಸದವರು” ಇತ್ಯಾದಿಯಾಗಿ. ಇತರೆ ಮನುಷ್ಯರೆಡೆಗಿನ ತಮ್ಮ ಸ್ವಾಮ್ಯದ ಧೋರಣೆಯ ಹೊರತಾಗಿ ಜನ, ಅಸಂಖ್ಯಾತ ವಸ್ತುಗಳನ್ನ, ಭಾವನಗಳನ್ನ ಕೂಡ ತಮ್ಮ ಸ್ವಂತದ ಆಸ್ತಿ ಎಂದು ಪರಿಗಣಿಸುತ್ತಾರೆ. ಆರೋಗ್ಯ ಮತ್ತು ಕಾಯಿಲೆಯ ಉದಾಹರಣೆಯನ್ನ ಗಮನಿಸಿ, ತಮ್ಮ ಆರೋಗ್ಯದ ಕುರಿತಾಗಿ ಚರ್ಚೆ ಮಾಡುವ ಜನ, ತಮ್ಮ ಕಾಯಿಲೆಯನ್ನ, ತಾವು ಒಳಗಾದ ಆಪರೇಷನ್ ನ, ತಮ್ಮ ಚಿಕಿತ್ಸೆಯನ್ನ, ತಮ್ಮ ಡಯಟ್ ನ ತಮ್ಮ ಆಸ್ತಿ ಎನ್ನುವಂತೆ ತಿಳಿದು ಬಣ್ಣಿಸುತ್ತಾರೆ. ಅವರು ಆರೋಗ್ಯ ಮತ್ತು ಕಾಯಿಲೆ ಎರಡನ್ನೂ ತಮ್ಮ ಆಸ್ತಿಗಳೆಂದು ತಿಳಿದಿದ್ದಾರೆ; ಅನಾರೋಗ್ಯದ ಜೊತೆಗಿನ ಅವರ ಆಸ್ತಿ ಸಂಬಂಧವನ್ನ, ದುರ್ಬಲಗೊಳುತ್ತಿರುವ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರುವ ಅವರ ಶೇರ್ ವ್ಯಾಲ್ಯೂದ ಜೊತೆ ಸಾದೃಶ್ಯ ಎಂದು ಹೋಲಿಕೆ ಮಾಡಬಹುದು.

ಐಡಿಯಾಗಳು ಮತ್ತು ನಂಬಿಕೆಗಳು ಕೂಡ ಆಸ್ತಿಯ ರೂಪ ಪಡೆಯುವ ಸಾಧ್ಯತೆ ಇದೆ, ಮತ್ತು ಹ್ಯಾಬಿಟ್ ಗಳಾಗಿಯೂ. ಉದಾಹರಣೆಗೆ ಪ್ರತಿದಿನ ಮುಂಜಾನೆ ಅದೇ ಸಮಯಕ್ಕೆ ಬಹುತೇಕ ಅದೇ ಬ್ರೆಕ್ ಫಾಸ್ಟ್ ಮಾಡುವವರ ರೂಟೀನ್ ನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವರು ತೊಂದರೆಗೆ ಒಳಗಾಗುತ್ತಾರೆ, ಏಕೆಂದರೆ ಅವರ ಹ್ಯಾಬಿಟ್ ಅವರ ಆಸ್ತಿಯಾಗಿ ಪರಿವರ್ತಿತವಾಗಿದೆ ಮತ್ತು ಈ ಹ್ಯಾಬಿಟ್ ನ ಮುರಿಯುವುದೆಂದರೆ ಅವರ ಆರೋಗ್ಯವನ್ನು ಅಸುರಕ್ಷತೆಗೆ ದೂಡಿದಂತೆ.

ಅಸ್ತಿತ್ವದ having ವಿಧಾನದ ಕುರಿತಾದ ಸಾರ್ವತ್ರಿಕ ಚಿತ್ರ ಬಹಳಷ್ಟು ಓದುಗರಿಗೆ ತೀರಾ ಋಣಾತ್ಮಕ ಮತ್ತು ಏಕಪಕ್ಷೀಯ ಅನಿಸಬಹುದು, ಹೌದು ಇದು ನಿಜ ಕೂಡ. ನಾನು ಮೊದಲು ಸಾಮಾಜಿಕವಾಗಿ ಅಸ್ತಿತ್ವದಲ್ಲಿರುವ ಮುಖ್ಯ ಧೋರಣೆಗಳತ್ತ ಎಲ್ಲರ ಗಮನ ಸೆಳೆದು ಈ ಕುರಿತಾಗಿ ಒಂದು ಸ್ಪಷ್ಟ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇನ್ನೊಂದು ಮುಖ್ಯ ಅಂಶ ಈ ಚಿತ್ರವನ್ನು ಬ್ಯಾಲೆನ್ಸ್ ಮಾಡುವಷ್ಟು ಸಶಕ್ತವಾಗಿದೆ, ಅದು ಬಹುಸಂಖ್ಯಾತರಿಗಿಂತ ಭಿನ್ನವಾದ ಆದರೆ ಈಗಿನ ಯುವ ಸಮೂಹದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಧೋರಣೆ . ಈ ಯುವ ಜನರಲ್ಲಿ ನಾವು, ಬಳಕೆಯ ಕುರಿತಾದ ಒಂದು ಸಿದ್ಧ ಮಾದರಿಯನ್ನ ಗಮನಿಸುತ್ತಿದ್ದೇವೆ, ಇದು having ಮತ್ತು ಸ್ವಾಧೀನ ಮಾಡಿಕೊಳ್ಳುವಿಕೆಯ ಕುರಿತಾದ ಹಿಡನ್ ರೂಪವಲ್ಲ ಬದಲಾಗಿ, ಯಾವ ಶಾಶ್ವತ ಫಲಿತಾಂಶದ ಪರಿವೆ ಇಲ್ಲದೇ ತಮಗೆ ಬೇಕಾದುದನ್ನ ಮಾಡುವ ನೈಜ ಆನಂದದ ಬಗ್ಗೆಯ ಅಭಿವ್ಯಕ್ತಿ.

ಈ ಯುವ ಜನಾಂಗ ಸಾಕಷ್ಟು ಕಷ್ಟಪಡುತ್ತ ಬಹುದೂರದ ತನಕ ಪ್ರಯಾಣ ಮಾಡುತ್ತದೆ, ತಮ್ಮ ಇಷ್ಟದ ಸಂಗೀತ ಕೇಳಲು, ತಮ್ಮ ಇಷ್ಟದ ಜಾಗಗಳನ್ನು ನೋಡಲು, ತಾವು ಭೇಟಿ ಮಾಡಬಯಸುವ ಜನರನ್ನು ಭೇಟಿ ಮಾಡಲು. ಅವರ ಉದ್ದೇಶಗಳು ಅವರು ಅಂದುಕೊಂಡಿರುವಷ್ಟು ಮಹತ್ವವಾದವುಗಳೇ? ಎನ್ನುವುದು ಇಲ್ಲಿನ ಪ್ರಶ್ನೆ ಅಲ್ಲ ; ಅವರು ಈ ಪ್ರಯಾಣದ ಬಗ್ಗೆ ಅಷ್ಟು ಸೀರಿಯಸ್ ಆಗಿರದಿದ್ದರೂ, ಅಷ್ಟು ಸಿದ್ಧತೆಯನ್ನ ಮಾಡಿಕೊಂಡಿರದಿದ್ದರೂ, ಮತ್ತು ಈ ಕುರಿತಾಗಿ ಅಷ್ಟು ಏಕಾಗ್ರತೆಯನ್ನ ಹೊಂದಿರದಿದ್ದರೂ , ಅವರು ಧೈರ್ಯಮಾಡಿ ಮುಂದುವರೆಯುತ್ತಾರೆ ಮತ್ತು ಅವರಿಗೆ ಇದರಿಂದ ತಿರುಗಿ ಪಡೆಯುವುದರ ಬಗ್ಗೆ ಮತ್ತು ಯಾವುದನ್ನ ತಾವು ಇಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಯಾವ ಆಸ್ಥೆ ಇಲ್ಲದಿರುವಾಗಲೂ.

ರಾಜಕೀಯವಾಗಿ ಮತ್ತು ಫಿಲಾಸೊಫಿಕಲೀ ಸ್ವಲ್ಪ ಭೋಳೆ ಅನಿಸಿದರೂ ಅವರು ತಮ್ಮ ಹಳೆಯ ಪೀಳಿಗೆಯ ಜನರಿಗಿಂತ ಹೆಚ್ಚು ಪ್ರಾಮಾಣಿಕರಾಗಿದ್ದಾರೆ. ಮಾರುಕಟ್ಟೆ ಯಲ್ಲಿ ಯಾವಾಗಲೂ ಅಪೇಕ್ಷಣೀಯ ಅನಿಸಿಕೊಳ್ಳಲು ಅವರು ತಮ್ಮ ತಮ್ಮ ಅಹಂ ನ ಸದಾ ಪಾಲಿಶ್ ಮಾಡಿಕೊಳ್ಳುವವರಲ್ಲ. ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ತಮ್ಮ ಇಮೇಜ್ ರಕ್ಷಿಸಿಕೊಳ್ಳಲು ಸದಾ ಸುಳ್ಳು ಹೇಳುವವರಲ್ಲ. ಬಹಳಷ್ಟು ಜನ ಮಾಡುವಂತೆ ಸತ್ಯವನ್ನು ಮತ್ತೆ ಮತ್ತೆ ಒತ್ತಿಹೇಳಲು ತಮ್ಮ ಶಕ್ತಿ ಸಾಮರ್ಥ್ಯವನ್ನ ಖರ್ಚು ಮಾಡುವವರಲ್ಲ. ತಮ್ಮ ಹಿರಿಯರು ಸತ್ಯ ನೋಡುವವರನ್ನ ಅಥವಾ ಹೇಳುವ ಜನರನ್ನ ರಹಸ್ಯವಾಗಿ ಮೆಚ್ಚುಗೆಯಿಂದ ನೋಡುತ್ತಾರಾದ್ದರಿಂದ ಅವರು ಆಗಾಗ ತಮ್ಮ ಹಿರಿಯರನ್ನು ತಮ್ಮ ಪ್ರಾಮಾಣಿಕತೆಯಿಂದ ಮೆಚ್ಚಿಸುವ ಪ್ರಯತ್ನ ಮಾಡುತ್ತಾರೆ. ಅವರ ಒಳಗೆ ರಾಜಕೀಯ ಮತ್ತು ಧಾರ್ಮಿಕ ದೃಷ್ಟಿಕೋನದ ಎಲ್ಲ ಛಾಯೆಯ ಗುಂಪುಗಳಿವೆ, ಆದರೆ ತಾವು ಯಾವ ನಿರ್ದಿಷ್ಟ ಐಡಿಯಾಲೊಜಿ ಅಥವಾ ಸಿದ್ಧಾಂತಗಳಿಗೆ ಸೇರಿದವರಲ್ಲ ಕೇವಲ “ಹುಡುಕುತ್ತಿದ್ದೇವೆ” ಎಂದು ಹೇಳಿಕೊಳ್ಳುವ ಬಹಳಷ್ಟು ಜನ ಕೂಡ ಅಲ್ಲಿದ್ದಾರೆ. ಅವರು ತಮ್ಮನ್ನು ತಾವು ಕಂಡುಕೊಂಡಿಲ್ಲವಾದರೂ ಅಥವಾ ತಮಗೆ ಬದುಕಲು ದಾರಿ ತೋರಿಸುವ ಗುರಿಯೊಂದನ್ನ, ಇನ್ನೂ ಕಂಡುಕೊಂಡಿಲ್ಲವಾದರೂ, ತಮ್ಮತನಕ್ಕಾಗಿ ಹುಡುಕಾಡುತ್ತಿದ್ದಾರೆ ಕೇವಲ having ಮತ್ತು ಬಳಕೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳದೇ.

(ಮುಂದುವರೆಯುತ್ತದೆ…)

1 Comment

Leave a Reply