ಹೊಟ್ಟೆಬಾಕ ಸಮಾಜ – Basis for having mode-4 :To have or to be #30

ದೊಡ್ಡ ಭರವಸೆಯೊಂದಿಗೆ ಶುರುಮಾಡಿದವರೆಲ್ಲ ನಿರಾಶೆಯಲ್ಲಿ ಕೊನೆಗೊಳ್ಳಲಿಲ್ಲವಾದರೂ, ದುರದೃಷ್ಟವಶಾತ್ ಅಂಥವರ ಸಂಖ್ಯೆಯನ್ನು ಗುರುತಿಸುವುದು ಅಸಾಧ್ಯದ ವಿಷಯ. ನನ್ನ ತಿಳುವಳಿಕೆಯ ಪ್ರಕಾರ ಯಾವ ಸಮಂಜಸವಾದ ಸ್ಟ್ಯಾಟಿಸ್ಟಿಕಲ್ ಡೇಟಾ ಅಥವಾ ಗಟ್ಟಿ ಅಂದಾಜು (sound estimate ) ಈ ವಿಷಯದ ಕುರಿತಾಗಿ ಲಭ್ಯವಿಲ್ಲ, ಅಕಸ್ಮಾತ್ ಇಂಥದೊಂದು ಮಾಹಿತಿ ಲಭ್ಯವಿದ್ದರೂ, ಈ ಮಾಹಿತಿಯನುಸಾರ ಪ್ರತಿಯೊಬ್ಬರನ್ನೂ ಹೇಗೆ ಕ್ವಾಲೀಫೈ ಮಾಡಿ ಮಾಹಿತಿಯನ್ನು ಖಚಿತಮಾಡಿಕೊಳ್ಳುವುದು ಎನ್ನುವುದನ್ನ ಗೊತ್ತುಮಾಡಿಕೊಳ್ಳುವುದು ಅಸಾಧ್ಯ… ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/03/fromm-26/

(ಮುಂದುವರೆದ ಭಾಗ)

ಆದರೆ, Having ಕುರಿತಾದ ಸಾರ್ವತ್ರಿಕ ಚಿತ್ರದಲ್ಲಿನ ಧನಾತ್ಮಕ ಅಂಶವನ್ನು ಧೃಡೀಕರಿಸುವ ಅವಶ್ಯಕತೆಯಿದೆ. ಇದೇ ಹಲವು ಯುವಜನರು (ಅರವತ್ತರ ದಶಕದಿಂದ ಇವರ ಸಂಖ್ಯೆ ಹೆಚ್ಚಾಗುತ್ತಿದೆ) ಸ್ವಾತಂತ್ರ್ಯದಿಂದ ಸ್ವಾತಂತ್ರ್ಯದತ್ತ ಯಾವ ಅಭಿವೃದ್ಧಿಯ ದಾರಿಯಲ್ಲೂ ಮುನ್ನಡೆದಿಲ್ಲ; ಅವರು ಯಾವ ಗುರಿಯತ್ತ ಮುನ್ನಡೆಯಬೇಕು ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೆಯೇ ಸುಮ್ಮನೇ ಬಂಡೆದ್ದರು, ನಿರ್ಬಂಧತೆ ಮತ್ತು ಅವಲಂಬನೆಯಿಂದ ಸ್ವಾತಂತ್ರ್ಯದ ಅವಶ್ಯಕತೆಯನ್ನು ಮಾತ್ರ ಉಳಿಸಿಕೊಂಡು. ತಮ್ಮ ಬೂರ್ಜ್ವಾ ತಂದೆತಾಯಿಗಳಂತೆ ಅವರ ಧ್ಯೇಯ ವಾಕ್ಯ ಕೂಡ “ಹೊಸದೆಲ್ಲ ಸುಂದರ!” ಮತ್ತು ಅವರು ಎಲ್ಲ ಸಂಪ್ರದಾಯಗಳ ಕುರಿತಾಗಿಯೂ phobic ಅನಾಸಕ್ತಿಯನ್ನು ಬೆಳೆಸಿಕೊಂಡರು, ಗ್ರೇಟೆಸ್ಟ್ ಮೈಂಡ್ ಗಳು ಸೃಷ್ಟಿಮಾಡಿದಂಥ ಚಿಂತನೆಗಳನ್ನೂ ಒಳಗೊಂಡಂತೆ. ಮತ್ತು ಅವರು ತಮ್ಮ ಮುಗ್ಧ ನಾರ್ಸಿಸಿಸಂ ಕಾರಣವಾಗಿ ಕಂಡುಹಿಡಲೇ ಬೇಕಾದ ಎಲ್ಲವನ್ನೂ ತಾವೇ ಕಂಡುಹಿಡಿಯುತ್ತೇವೆ ಎಂದು ನಂಬಿದ್ದರು. ಮೂಲಭೂತವಾಗಿ ಅವರ ಆದರ್ಶ ಮತ್ತೆ ಮಗುವಾಗುವುದು ಮತ್ತು Marcuse ನಂಥ ಲೇಖಕರು ಸಮಾಜವಾದ ಮತ್ತು ಕ್ರಾಂತಿಯ ಅಲ್ಟಿಮೇಟ್ ಗುರಿ ಎನ್ನಲಾಗುವ “ಪ್ರಬುದ್ಧತೆಯತ್ತ ಬೆಳವಣಿಗೆ” ಗೆ (development to maturity) ಬದಲಾಗಿ ಮರಳಿ ಬಾಲ್ಯಕ್ಕೆ (return to childhood) ಎನ್ನುವ ಅನುಕೂಲಕರ ಐಡಿಯಾಲೊಜಿಯನ್ನ ನಿರ್ಮಿಸಿದರು. ಈ ಸುಖದ ಭ್ರಮೆಯನ್ನ (euphoria) ಅನುಭವಿಸುವಷ್ಟು ಹರೆಯ ಅವರದಾಗಿರುವ ತನಕ ಮಾತ್ರ ಅವರು ಸಂತೋಷದಿಂದಿದ್ದರು ; ಆದರೆ ಬಹಳಷ್ಟು ಜನರು ಈ ಅವಧಿಯನ್ನ ಕೂಡ ತೀವ್ರ ನಿರಾಶೆಯಿಂದಲೇ ದಾಟಿ ಬಂದರು, ಯಾವ ಅಚ್ಚುಕಟ್ಟಾದ ಧೃಡ ನಿರ್ಧಾರವನ್ನೂ ರೂಪಿಸಿಕೊಳ್ಳದೆಯೇ, ತಮ್ಮೊಳಗೆ ಯಾವ ಕೇಂದ್ರವನ್ನೂ ಹೊಂದದೆಯೇ. ಅವರು ಬಹುತೇಕ ಕೊನೆಗೆ ನಿರಾಶ, ನಿರಾಸಕ್ತ ಜನರಂತೆ ರೂಪಗೊಂಡರು ಅಥವಾ ವಿನಾಶದ ಅಸಂತೋಷಿ ಮೂಲಭೂತವಾದಿಗಳಂತೆ.

ದೊಡ್ಡ ಭರವಸೆಯೊಂದಿಗೆ ಶುರುಮಾಡಿದವರೆಲ್ಲ ನಿರಾಶೆಯಲ್ಲಿ ಕೊನೆಗೊಳ್ಳಲಿಲ್ಲವಾದರೂ, ದುರದೃಷ್ಟವಶಾತ್ ಅಂಥವರ ಸಂಖ್ಯೆಯನ್ನು ಗುರುತಿಸುವುದು ಅಸಾಧ್ಯದ ವಿಷಯ. ನನ್ನ ತಿಳುವಳಿಕೆಯ ಪ್ರಕಾರ ಯಾವ ಸಮಂಜಸವಾದ ಸ್ಟ್ಯಾಟಿಸ್ಟಿಕಲ್ ಡೇಟಾ ಅಥವಾ ಗಟ್ಟಿ ಅಂದಾಜು (sound estimate ) ಈ ವಿಷಯದ ಕುರಿತಾಗಿ ಲಭ್ಯವಿಲ್ಲ, ಅಕಸ್ಮಾತ್ ಇಂಥದೊಂದು ಮಾಹಿತಿ ಲಭ್ಯವಿದ್ದರೂ, ಈ ಮಾಹಿತಿಯನುಸಾರ ಪ್ರತಿಯೊಬ್ಬರನ್ನೂ ಹೇಗೆ ಕ್ವಾಲೀಫೈ ಮಾಡಿ ಮಾಹಿತಿಯನ್ನು ಖಚಿತಮಾಡಿಕೊಳ್ಳುವುದು ಎನ್ನುವುದನ್ನ ಗೊತ್ತುಮಾಡಿಕೊಳ್ಳುವುದು ಅಸಾಧ್ಯ. ಇವತ್ತು ಅಮೇರಿಕಾ ಮತ್ತು ಯುರೋಪ್ ನಲ್ಲಿಯ ಲಕ್ಷಗಟ್ಟಲೆ ಜನ ತಮಗೆ ಮಾರ್ಗದರ್ಶನ ಮಾಡುವ ಸಂಪ್ರದಾಯಗಳ (tradition) ಮತ್ತು ಗುರುಗಳ ಹುಡುಕಾಟದಲ್ಲಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಸಿದ್ಧಾಂತಗಳು ಮತ್ತು ಗುರು ಸಂಬಂಧಗಳು ಮೋಸ ಅಥವಾ ಸಾರ್ವಜನಿಕ ಸಂಪರ್ಕದ ಅನಗತ್ಯ ಗೊಂದಲದ ಕಾರಣವಾಗಿ ಕಲುಷಿತಗೊಂಡಿವೆ, ಅಥವಾ ಆಯಾ ಗುರುಗಳ ಆರ್ಥಿಕ ಮತ್ತು ಅಭಿಮಾನದ ಆಸಕ್ತಿ ಕಾರಣವಾಗಿ ಕಲಸುವೇಲೋಗರಗೊಂಡಿವೆ. ಇದೆಲ್ಲ ಬೋಗಸ್ ಆಗಿರುವಾಗ ಕೂಡ ಕೆಲವು ಜನ ಇಂಥ ವಿಧಾನಗಳಿಂದ ಅಸಲಿ ಲಾಭ ಪಡೆಯುತ್ತಾರಾದರೂ; ಇತರರು ಅಂತರಂಗದ ಬದಲಾವಣೆಯ ಯಾವ ಸಿರೀಯಸ್ ಉದ್ದೇಶವಿಲ್ಲದೆಯೂ ಈ ವಿಧಾನಗಳನ್ನು ಬಳಕೆ ಮಾಡುತ್ತಾರೆ. ಆದರೆ ಹೊಸ ನಂಬಿಕಸ್ಥರ (new believers) ಸವಿಸ್ತಾರ ಪರಿಮಾಣಾತ್ಮಕ (quantitative ) ಹಾಗು ಗುಣಾತ್ಮಕ (qualitative) ವಿಶ್ಲೇಷಣೆ ಮಾತ್ರ ಎಷ್ಟು ಜನ ಆಯಾ ಗುಂಪುಗಳಿಗೆ ಸೇರುತ್ತಾರೆ ಎನ್ನುವುದನ್ನ ಅನಾವರಣ ಮಾಡಬಹುದು.

ನನ್ನ ವೈಯಕ್ತಿಕ ಅಂದಾಜು ಏನೆಂದರೆ, ಬಹುತೇಕ ಯುವ ಜನಾಂಗ (ಮತ್ತು ಕೆಲವು ವಯಸ್ಸಾದವರನ್ನೂ ಸೇರಿಸಿ) ಯಾರು ಸೀರಿಯಸ್ ಆಗಿ having ವಿಧಾನದಿಂದ being ವಿಧಾನಕ್ಕೆ ಬದಲಾಗುವ ಕಾಳಜಿಯನ್ನ ಹೊಂದಿದ್ದಾರೆಯೋ ಅವರ ಸಂಖ್ಯೆ ಅಲ್ಲಿ ಇಲ್ಲಿ ಚದುರಿಹೋಗಿರುವ ಕೆಲ ವೈಯಕ್ತಿಕ ಜನರ ಸಂಖ್ಯೆಗಿಂತ ಹೆಚ್ಚು. ಹೆಚ್ಚಿನ ಸಂಖ್ಯೆಯ ಜನರು ಮತ್ತು ಗುಂಪುಗಳು being ವಿಧಾನದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎನ್ನುವುದು ನನ್ನ ನಂಬಿಕೆ, ಮತ್ತು ಅವರು ಬಹುಸಂಖ್ಯಾತರ having ವಿಧಾನವನ್ನು ಮೀರುತ್ತಿರುವ ಜನರ ಹೊಸ ಟ್ರೆಂಡ್ ನ ಪ್ರತಿನಿಧಿಸುತ್ತಿದ್ದಾರೆ ಹಾಗು ಅವರ ಈ ಮೀರುವಿಕೆ ಐತಿಹಾಸಿಕವಾಗಿ ಬಹಳ ಮಹತ್ವದ್ದು. ಇಂಥ ಅಲ್ಪಸಂಖ್ಯಾತರು ಐತಿಹಾಸಿಕ ಬದಲಾವಣೆಯ ದಾರಿಯನ್ನು ನಿರ್ಧರಿಸುತ್ತಿರುವುದು ಇತಿಹಾಸದಲ್ಲಿ ಇದು ಮೊದಲಬಾರಿಯೇನಲ್ಲ. ಇಂಥ ಅಲ್ಪಸಂಖ್ಯಾತರ ಅಸ್ತಿತ್ವ, having ನಿಂದ being ಗೆ ಬದಲಾಗುತ್ತಿರುವ ಧೋರಣೆಗೆ ಭರವಸೆಯನ್ನು ತುಂಬುತ್ತದೆ. ಈ ಭರವಸೆ ಹೆಚ್ಚು ನೈಜ ಏಕೆಂದರೆ, ಹೊಸ ಧೋರಣೆಗಳ ಹುಟ್ಟಿಗೆ ಕಾರಣವಾದ ಕೆಲ ಅಂಶಗಳು ಎಂದೂ ರಿವರ್ಸ್ ಮಾಡಲಾಗದಂಥ ಐತಿಹಾಸಿಕ ಬದಲಾವಣೆಗಳು : ಉದಾಹರಣೆಗೆ, ಹೆಣ್ಣಿನ ಮೇಲಿನ ಗಂಡಾಳ್ವಿಕೆಯ ಶ್ರೇಷ್ಠತೆಯ ಮತ್ತು ಮಕ್ಕಳ ಮೇಲಿನ ತಂದೆ ತಾಯಿಯರ ಪ್ರಾಬಲ್ಯದಂಥ ವ್ಯವಸ್ಥೆಯ ಮುರಿದು ಬೀಳುವಿಕೆ. ಇಪ್ಪತ್ತನೇ ಶತಮಾನದ ರಾಜಕೀಯ ಕ್ರಾಂತಿ, ರಷ್ಯದ ಕ್ರಾಂತಿ ವಿಫಲವಾಗಿದೆ ( ಚೈನಾ ಕ್ರಾಂತಿಯ ಅಂತಿಮ ಫಲಿತಾಂಶವನ್ನು ಈಗ ಜಡ್ಜ್ ಮಾಡುವುದು ತುಂಬ ಅವಸರದ ವಿಷಯ), ನಮ್ಮ ಈ ಶತಮಾನದ ಯಶಸ್ವಿ ಕ್ರಾಂತಿಗಳೆಂದರೆ (ಅವು ಇನ್ನೂ ತಮ್ಮ ಪ್ರಥಮ ಹಂತದಲ್ಲಿರುವಾಗಲೂ) ಹೆಂಗಸರ, ಮಕ್ಕಳ ಮತ್ತು ಲೈಂಗಿಕ ಕ್ರಾಂತಿಗಳು. ಈ ಕ್ರಾಂತಿಗಳ ತತ್ವಗಳನ್ನ ಈಗಾಗಲೇ ಅತೀ ಹೆಚ್ಚಿನ ಸಂಖ್ಯೆಯ ಜನರ ಪ್ರಜ್ಞೆ ಒಪ್ಪಿಕೊಂಡಿದೆ ಮತ್ತು ಪ್ರತಿದಿನ ಹಳೆಯ ಐಡಿಯಾಲೊಜಿಗಳು ಹೆಚ್ಚು ಹೆಚ್ಚು ಹಾಸ್ಯಾಸ್ಪದವಾಗುತ್ತ ಹೋಗುತ್ತಿವೆ.

(ಮುಂದುವರೆಯುತ್ತದೆ…)


1 Comment

Leave a Reply