ನೋಮೈಂಡ್ ಎಂದರೆ… : ಓಶೋ ವ್ಯಾಖ್ಯಾನ

ನೋ ಮೈಂಡ್ ಸಾಧ್ಯವಾಗುವುದು, ಮೈಂಡ್ ನ ಕೊಂದು ಅಥವಾ ನಾಶ ಮಾಡಿ ಅಲ್ಲ : ನೋ ಮೈಂಡ್ ಸಾಧ್ಯವಾಗುವುದು ನೀವು ಮೈಂಡ್ ನ ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗ… ~ ಓಶೋ ರಜನೀಶ್ । ಕನ್ನಡಕ್ಕೆ : ಚಿದಂಬರ ನರೇಂದ್ರ

ಮೂವತ್ತು ತಂತಿ ಕಡ್ಡಿಗಳು
ಗಾಲಿಯ ಮಧ್ಯದಲ್ಲಿ ಒಂದಾದವು.
ಎಲ್ಲಿ ಗಾಲಿ ಉರುಳುವದಿಲ್ಲವೋ
ಅದೇ ಉರುಳಿಸುತ್ತಿತ್ತು ಗಾಲಿಯನ್ನು.

ಮಣ್ಣಿನ ಮುದ್ದೆಯ ಟೊಳ್ಳು ಮಾಡಿ
ಗಡಿಗೆ ಎಂದರು.
ಎಲ್ಲಿ ಗಡಿಗೆಯಿಲ್ಲವೊ
ಅಲ್ಲಿಯೇ ನೀರು ತುಂಬುವರು.

ಕಿಟಕಿ, ಬಾಗಿಲುಗಳ ಕೊರೆದು
ಕೋಣೆ ಎಂದರು.
ಎಲ್ಲಿ ಕೋಣೆ ಇಲ್ಲವೊ
ಅಲ್ಲಿಯೇ ಮಂದಿ ಮಲಗಿದರು.

ನೋಡಿ
ಇರುವುದು ಇರದ ಜಾಗದಲ್ಲೆ
ಅಡಗಿ ಕೂತಿದೆ
ನಮ್ಮ ಲಾಭ.

~ ಲಾವೋತ್ಸೇ


ಥಿಂಕ್ ಮಾಡುವುದನ್ನ ನಿಲ್ಲಿಸುವುದು ಹೇಗೆ ? ಎಂದು ನೀವು ಕೇಳುತ್ತೀರಿ. ಇದಕ್ಕೆ ನನ್ನ ಉತ್ತರ, “ಸುಮ್ಮನೇ ಈ ಆಲೋಚನೆಗಳನ್ನ ವಾಚ್ ಮಾಡಿ, ಎಚ್ಚರವಾಗಿರಿ”.

ಮತ್ತು ಈ ನಿಲ್ಲಿಸುವ ಐಡಿಯಾ ಎಲ್ಲ ಬಿಟ್ಟುಬಿಡಿ, ಇಲ್ಲವಾದರೆ ಇದು ನಿಮ್ಮ ಮೈಂಡ್ ನ ಸಹಜ ಬದಲಾವಣೆಯನ್ನ ನಿಲ್ಲಿಸಿಬಿಡುತ್ತದೆ. ಆದ್ದರಿಂದ ಈ ನಿಲ್ಲಿಸುವ ಐಡಿಯಾ ನೇ ಬಿಟ್ಟುಬಿಡಿ.

ನಿಲ್ಲಿಸಲಿಕ್ಕೆ ನೀವು ಯಾರು? ಬಹಳ ಆದರೆ ಸುಮ್ಮನೇ ಇವನ್ನ ಎಂಜಾಯ್ ಮಾಡಿ.

ಯಾವುದೂ ತಪ್ಪಲ್ಲ. ಈ ಸೋ ಕಾಲ್ಡ್ ಅನೈತಿಕ ಅಥವಾ ಅನನ್ಯ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿದ್ದರೆ, ಅವುಗಳಿಗೆ ಸುಮ್ಮನೇ ನಿಮ್ಮ ಮನಸ್ಸಿನೊಳಗಿಂದ ಹಾಯ್ದುಹೋಗಲು ಅವಕಾಶ ಮಾಡಿಕೊಡಿ. ಚಿಂತೆ ಬೇಡ, ಯಾವುದೂ ತಪ್ಪಲ್ಲ.

ಯಾವ ವಿಚಾರಕ್ಕೂ ಅಂಟಿಕೊಳ್ಳಬೇಡಿ. ಏನೂ ತೊಂದರೆಯಾಗುವುದಿಲ್ಲ. ಇವೆಲ್ಲ ಒಂದು ಬಗೆಯ ಫಿಕ್ಷನ್, ನಿಮ್ಮ ಅಂತರಂಗದ ಸಿನೇಮಾದ ಸೀನ್ ಗಳು. ಅವುಗಳಿಗೆ ನಿಮ್ಮ ಮೂಲಕ ಹಾಯ್ದು ಹೋಗಲು ಅವಕಾಶಮಾಡಿಕೊಡಿ, ಹೀಗೆ ಹಾಯ್ದು ಹೋಗುತ್ತ ಹಾಯ್ದು ಹೋಗುತ್ತ ಅವು, ಅವು ನಿಮ್ಮ ನೋ ಮೈಂಡ್ ಸ್ಥಿತಿಯತ್ತ ಕರೆದೊಯ್ಯುತ್ತವೆ.

ಸುಮ್ಮನೇ ಈ ಥಾಟ್ ಗಳನ್ನು ನೋಡುತ್ತ ಇರುವ ಪ್ರಯಾಣ, ನೋ ಮೈಂಡ್ ಸ್ಥಿತಿಯಲ್ಲಿ ಕೊನೆಯಾಗುತ್ತದೆ.

ನೋಮೈಂಡ್ ಎಂದರೆ ಮೈಂಡ್ ಗೆ ವಿರುದ್ಧವಲ್ಲ; ನೋ ಮೈಂಡ್ ಎಂದರೆ ಮೈಂಡ್ ನ ಮೀರಿದ್ದು.

ನೋ ಮೈಂಡ್ ಸಾಧ್ಯವಾಗುವುದು, ಮೈಂಡ್ ನ ಕೊಂದು ಅಥವಾ ನಾಶ ಮಾಡಿ ಅಲ್ಲ : ನೋ ಮೈಂಡ್ ಸಾಧ್ಯವಾಗುವುದು ನೀವು ಮೈಂಡ್ ನ ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗ, ಎಷ್ಟೆಂದರೆ ನಿಮಗೆ ಈಗ ಥಿಂಕಿಂಗ್ ನ ಅವಶ್ಯಕತೆಯಿಲ್ಲ, ನಿಮ್ಮ ತಿಳುವಳಿಕೆ ಅದನ್ನ ರಿಪ್ಲೇಸ್ ಮಾಡಿಯಾಗಿದೆ.

ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.

“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಕೆಟ್ಟ ವಿಚಾರಗಳು ಮನಸ್ಸಿಗೆ ಬರುತ್ತವೆ, ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “

“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.

ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,

“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “

ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”


Leave a Reply