Having ವಿಧಾನಕ್ಕೆ ಅನುಕೂಲಕರವಾಗಿರುವ ಅಂಶಗಳು : To have or to be #33

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/11/fromm-29/

Having ವಿಧಾನಕ್ಕೆ ಅನುಕೂಲಕರವಾಗಿರುವ ಇತರೆ ಅಂಶಗಳು

Having ವಿಧಾನವನ್ನು ಗಟ್ಟಿಗೊಳಿಸುವ ಇನ್ನೊಂದು ಮುಖ್ಯ ಅಂಶ ಎಂದರೆ ಭಾಷೆ. ವ್ಯಕ್ತಿಯ ಹೆಸರು, ನಾವೆಲ್ಲರೂ ಹೆಸರನ್ನು ಹೊಂದಿದ್ದೇವೆ ( ಈ ಕಾಲದ ಅಪವ್ಯಕ್ತೀಕರಣ-depersonalisation ಹೀಗೇ ಮುಂದುವರೆದರೆ ಬಹುಶಃ ಸಂಖ್ಯೆಗಳು ಕೂಡ), ಈ ಹೆಸರು ಕೂಡ ಆ ವ್ಯಕ್ತಿ ಅಂತಿಮ, ಶಾಶ್ವತ ಎನ್ನುವ ಭ್ರಮೆಯನ್ನ ಹುಟ್ಟಿಸುತ್ತದೆ. ವ್ಯಕ್ತಿ ಮತ್ತು ಹೆಸರು ಸಮಾನರಾಗುತ್ತಾರೆ; ಹೆಸರು, ಆ ವ್ಯಕ್ತಿ ಶಾಶ್ವತ , ಅವಿನಾಶಿ ಸಂಗತಿ ಎಂದೂ, ಪ್ರಕ್ರಿಯೆ ಅಲ್ಲವೆಂದೂ ತೋರಿಸುವ ಪ್ರಯತ್ನ ಮಾಡುತ್ತದೆ.

ಕಾಮನ್ ನಾಮಪದಗಳ ಕೆಲಸವೂ ಇದೇ : ಉದಾಹರಣೆಗೆ, ಪ್ರೀತಿ, ಅಭಿಮಾನ, ದ್ವೇಷ, ಆನಂದ ಮುಂತಾದವು, ಒಂದು ಫಿಕ್ಸ್ಡ್ ಅದಂಥ ಸಂಗತಿಯ ರೂಪವನ್ನು ಪ್ರಚುರಪಡಿಸುತ್ತವೆ ಆದರೆ ಇಂಥ ನಾಮಪದಗಳು ನೈಜತೆಯಿಂದ ಹೊರತಾದವು, ಮತ್ತು ನಾವು ಮನುಷ್ಯ ಜೀವಿಯೊಳಗೆ ನಡೆಯುತ್ತಿರುವ ಪ್ರಕ್ರಿಯೆಗಳೊಂದಿಗೆ ವ್ಯವಹರಿಸುತ್ತಿದ್ದೇವೆ ಎನ್ನುವ ಒಳನೋಟವನ್ನು ಮಸುಕಾಗಿಸುವಂಥವು.

ಆದರೆ ವಸ್ತುಗಳ ಹೆಸರಾಗಿರುವ ನಾಮಪದಗಳು ಉದಾಹರಣೆಗೆ, “ಟೇಬಲ್” ಅಥವಾ “ಲ್ಯಾಂಪ್” ಕೂಡ ನಮ್ಮನ್ನು ದಾರಿತಪ್ಪಿಸುವಂಥವು. ಪದಗಳು ನಾವು ಸ್ಥಿರ (fixed) ಸಂಗತಿಗಳ (substance) ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದನ್ನ ಸೂಚಿಸುತ್ತವೆಯಾದರೂ, ಈ ಸಂಗತಿಗಳು ನಮ್ಮ ದೈಹಿಕ ವ್ಯವಸ್ಥೆಯಲ್ಲಿ ಕೆಲವೊಂದು ಸಂವೇದನೆಗಳನ್ನು ಹುಟ್ಟಿಸುವಂಥಹ ಚೈತನ್ಯದ ಪ್ರಕ್ರಿಯೆಯ ರೀತಿಯಂಥವುಗಳು. ಆದರೆ ಈ ಸಂವೇದನೆಗಳು ಟೇಬಲ್, ಲ್ಯಾಂಪ್ ರೀತಿಯ ಕೆಲವು ನಿರ್ದಿಷ್ಟ ವಸ್ತುಗಳ ಕುರಿತಾದ ಗ್ರಹಿಕೆಗಳಲ್ಲ; ಈ ಗ್ರಹಿಕೆಗಳು ನಮ್ಮ ಕಲಿಕೆಯ ಸಾಂಸ್ಕೃತಿಕ ಪ್ರಕ್ರಿಯೆಯ ಪರಿಣಾಮಗಳು, ಈ ಪ್ರಕ್ರಿಯೆ ಕೆಲವು ಸಂವೇದನೆಗಳು ಕೆಲವು ನಿರ್ದಿಷ್ಟ ಗ್ರಹಿಕೆಗಳ ರೂಪವನ್ನ ಆವಾಹಿಸಿಕೊಳ್ಳುವಂತೆ ಮಾಡುತ್ತವೆ.

ಟೇಬಲ್, ಲ್ಯಾಂಪ್ ನಂಥ ಸಂಗತಿಗಳು ತಮ್ಮ ಪಾಡಿಗೆ ತಾವು ಇರುವಂಥವು ಎಂದು ನಾವು ಮುಗ್ಧವಾಗಿ ನಂಬುತ್ತೇವೆ, ಮತ್ತು ಸಮಾಜ ನಮಗೆ ಸಂವೇದನೆಗಳನ್ನು ಗ್ರಹಿಕೆಗಳನ್ನಾಗಿ ಮಾರ್ಪಡಿಸಿಕೊಳ್ಳುವುದನ್ನ ಕಲಿಸುತ್ತದೆ ಮತ್ತು ಈ ಕಾರಣವಾಗಿ ಆಯಾ ಸಂಸ್ಕೃತಿಯಲ್ಲಿ ಬದುಕಲು , ನಮ್ಮ ಸುತ್ತಲಿನ ಜಗತ್ತನ್ನು ಮ್ಯಾನಿಪ್ಯುಲೇಟ್ ಮಾಡುವ ಅವಕಾಶವನ್ನು ಸಾಧ್ಯಮಾಡುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಒಮ್ಮೆ ಇಂಥ ಗ್ರಹಿಕೆಗೆ ನಾವು ಹೆಸರು ಕೊಟ್ಟೆವಾದರೆ, ಆ ಹೆಸರು ಆ ಗ್ರಹಿಕೆಯ ಅಂತಿಮ, ಬದಲಾಯಿಸಲಾಗದ ವಾಸ್ತವವನ್ನ ಖಾತ್ರಿಪಡಿಸುವಂತಾಗುತ್ತದೆ.

Have ನ ನ ಅವಶ್ಯಕತೆಗೆ ಇನ್ನೊಂದು ಆಧಾರವೂ ಇದೆ, ಇದು ಜೈವಿಕವಾಗಿ ನಮ್ಮಲ್ಲಿ ಬಂದಿರುವಂಥ ಬದುಕುವ ಇಚ್ಛೆಯ ಕುರಿತಾದದ್ದು. ನಾವು ಖುಶಿಯಾಗಿರಬಹುದು ಅಥವಾ ಇಲ್ಲದಿರಬಹುದು, ನಮ್ಮ ದೇಹ ಶಾಶ್ವತತೆಗಾಗಿ ತುಡಿಯುಂತೆ ನಮ್ಮನ್ನು ಪ್ರಚೋದಿಸುತ್ತಿರುತ್ತದೆ. ಅನುಭವದ ಮೂಲಕ ನಾವು ಸಾಯುವುದು ಗ್ಯಾರಂಟಿ ಎನ್ನುವುದು ನಮಗೆ ಗೊತ್ತಿದ್ದರೂ, ಪ್ರಾಯೋಗಿಕ ಸಾಕ್ಷ್ಯಗಳ ಹೊರತಾಗಿಯೂ, ನಾವು ಶಾಶ್ವತ ಎಂದು ನಂಬುವಂತೆ ಸೂಚಿಸುವ ಪರಿಹಾರಗಳಿಗಾಗಿ ನಾವು ಹುಡುಕುತ್ತಿರುತ್ತೇವೆ. ನಮ್ಮ ಈ ಬಯಕೆ ಹಲವು ರೂಪಗಳನ್ನು ಹೊಂದಿದೆ: ಪಿರಾಮಿಡ್ ಗಳಲ್ಲಿ ಇಡಲಾಗಿರುವ ತಮ್ಮ ದೇಹಗಳು ಶಾಶ್ವತ ಎನ್ನುವ Pharaoh ಗಳ ನಂಬಿಕೆ; ಪ್ರಾಚೀನ ಬೇಟೆಗಾರ ಸಮಾಜದಲ್ಲಿನ ಸಾವಿನ ನಂತರದ ಬದುಕಿನ ಕಲ್ಪನೆ; ಕ್ರಿಶ್ಚಿಯನ್ ಮತ್ತು ಇಸ್ಲಾಂನಲ್ಲಿಯ ಸ್ವರ್ಗದ ಕುರಿತಾದ ನಂಬಿಕೆ.

ಹದಿನೆಂಟನೇ ಶತಮಾನದ ನಂತರದ ಸಮಕಾಲೀನ ಸಮಾಜದಲ್ಲಿ, “ಇತಿಹಾಸ” ಮತ್ತು “ಭವಿಷ್ಯ” ಕ್ರಿಶ್ಚಿಯನ್ ಸ್ವರ್ಗದ ಪರಿಕಲ್ಪನೆಗೆ ಪರ್ಯಾಯವಾಗಿವೆ : ಪ್ರಸಿದ್ಧಿ, ಖ್ಯಾತಿ, ಕುಖ್ಯಾತಿ ಕೂಡ – ಇತಿಹಾಸದ ಅಡಿಟಿಪ್ಪಣಿಗಳಲ್ಲಿ (footnote) ಜಾಗ ಖಾತ್ರಿ ಮಾಡುವ ಯಾವುದೇ ಸಂಗತಿ – ಶಾಶ್ವತತೆಯನ್ನ ಕೊಂಚವಾದರೂ ನಂಬುವಂತೆ ಮಾಡುತ್ತವೆ. ಪ್ರಸಿಧ್ದಿಗಾಗಿನ ಹಂಬಲ ಕೇವಲ ಲೌಕಿಕ ಅಹಂ (secular vanity) ಅಲ್ಲ – ಯಾರಿಗೆ ಸಾಂಪ್ರದಾಯಿಕ ಭವಿಷ್ಯದಲ್ಲಿ (traditional hereafter) ನಂಬಿಕೆ ಇಲ್ಲವೋ ಅಂಥವರಲ್ಲಿ (ರಾಜಕೀಯ ನಾಯಕರುಗಳಲ್ಲಿ ಇದು ಎದ್ದು ಕಾಣುವಂಥದು) ಅದಕ್ಕೆ ಧಾರ್ಮಿಕ ಗುಣಲಕ್ಷಣಗಳಿವೆ. ಪ್ರಚಾರ ಶಾಶ್ವತತೆಯ ಹಾದಿಯನ್ನ ಸುಗಮಗೊಳಿಸುತ್ತದೆ ಮತ್ತು ಸಾರ್ವಜನಿಕ ಸಂಪರ್ಕದ ಏಜಂಟ್ ಗಳು ಹೊಸ ಪುರೋಹಿತರಾಗಿ ಕಾಣಿಸಿಕೊಳ್ಳುತ್ತಾರೆ.

ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಆಸ್ತಿಯ ಸ್ವಾಧೀನತೆ ಮನುಷ್ಯರ ಶಾಶ್ವತತೆಯ ತುಡಿತವನ್ನು ಬಹುಮಟ್ಟಿಗೆ ತುಂಬಿಕೊಡುತ್ತದೆ ಮತ್ತು ಈ ಕಾರಣವಾಗಿಯೇ having ಧೋರಣೆ ಅಷ್ಟು ಬಲಶಾಲಿಯಾಗಿರುವುದು. ನನ್ನ ಸೆಲ್ಫ್ , ನಾನು ಹೊಂದಿರುವ ಸಂಗತಿಗಳ ಕಾರಣವಾಗಿದ್ದರೆ, ಆ ಸಂಗತಿಗಳು ಅವಿನಾಶಿಯಾಗಿರುವ ತನಕ ನಾನೂ ಶಾಶ್ವತ. ಪ್ರಾಚೀನ ಈಜಿಪ್ತ್ ನಿಂದ ಇವತ್ತಿನ ತನಕ – ದೇಹದ ಭೌತಿಕ ಶಾಶ್ವತತೆಯಿಂದ (ದೇಹದ ಮಮೀಕರಣ – mummification) ಮಾನಸಿಕ ಶಾಶ್ವತತೆಯ ವರೆಗೆ (ಅಂತಿಮ ಇಚ್ಛೆ – last will ಮೂಲಕ) – ಜನರು ಬದುಕಿಯೇ ಇದ್ದಾರೆ ಅವರ ಭೌತಿಕ/ ಮಾನಸಿಕ ಆಯಸ್ಸಿನ ಆಚೆ.

ಅಂತಿಮ ಇಚ್ಛೆಯ (last will) ಕುರಿತಾದ ಕಾನೂನಿನ ಅಧಿಕಾರದ ಮೂಲಕ, ನಮ್ಮ ಆಸ್ತಿಯ ವಿಲೇವಾರಿಯನ್ನ ನಮ್ಮ ಮುಂದಿನ ಪಿಳಿಗೆಯ ಜನ ನಿರ್ಧರಿಸುವುದು ಉತ್ತರಾಧಿಕಾರದ ಕಾನೂನಿನ (law of inheritance) ಮೂಲಕ. ನಾನು ಎಷ್ಟರ ಮಟ್ಟಿಗೆ ಬಂಡವಾಳದ ಮಾಲಿಕನಾಗಿದ್ದೇನೆಯೋ ಅಷ್ಟರಮಟ್ಟಿಗೆ ನಾನು ಶಾಶ್ವತ.

( ಮುಂದುವರೆಯುತ್ತದೆ…)

1 Comment

Leave a Reply