ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/17/fromm-30/
The having mode and the Anal Character
ಅಸ್ತಿತ್ವದ having ವಿಧಾನದ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗುವ ಇನ್ನೊಂದು ದಾರಿ ಎಂದರೆ ಫ್ರಾಯ್ಡ್ ನ ಅತ್ಯಂತ ಮಹತ್ವದ ಸಂಶೋಧನೆಯೊಂದನ್ನ ನೆನಪು ಮಾಡಿಕೊಳ್ಳುವುದು. ಈ ಸಂಶೋಧನೆಯ ಪ್ರಕಾರ, ತಮ್ಮ ಶಿಶು ಸಹಜ ನಿಷ್ಕ್ರೀಯ ಗ್ರಹಿಕೆಯ (passive receptive) ಹಂತ ಮತ್ತು ಮುಂದಿನ ಆಕ್ರಮಣಕಾರಿ ಶೋಷಕಾತ್ಮಕ ಗ್ರಹಿಕೆಯ (aggressive exploitative receptive) ಹಂತ ದಾಟಿ ಪ್ರಬುದ್ಧತೆಯ ಹಂತವನ್ನು ತಲುಪುವ ಮೊದಲು ಎಲ್ಲ ಮಕ್ಕಳು ಫ್ರಾಯ್ಡ್ “anal erotic” ಎಂದು ಹೆಸರಿಸುವ ಹಂತವನ್ನು ಹಾಯ್ದು ಹೋಗುತ್ತಾರೆ. ಫ್ರಾಯ್ಡ್ ನ ಸಂಶೋಧನೆಯ ಪ್ರಕಾರ ವ್ಯಕ್ತಿಯ ಬೆಳವಣಿಗೆಯಲ್ಲಿ ಈ ಹಂತ ಮುಂದೆಯೂ ಪ್ರಬಲವಾಗಿಯೇ ಉಳಿದುಕೊಳ್ಳುತ್ತದೆ ಮತ್ತು ಹಾಗೆ ಉಳಿದುಕೊಂಡಾಗ, ಆ ವ್ಯಕ್ತಿಯಲ್ಲಿ anal character ನ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. Anal character ಎಂದರೆ, ವ್ಯಕ್ತಿಯಲ್ಲಿರುವ ಅಂಥ ಗುಣ ಲಕ್ಷಣ, ಯಾವುದರ ಪ್ರಮುಖ ಬದುಕಿನ ಸಾಮರ್ಥ್ಯ (life energy), ಹಣ ಮತ್ತು ಇತರ ಭೌತಿಕ ವಸ್ತುಗಳನ್ನ ಮತ್ತು ಹಾಗೆಯೇ ಭಾವನೆಗಳನ್ನ, gesture ಗಳನ್ನ, ಪದಗಳನ್ನ, ಶಕ್ತಿಯನ್ನ ಹೊಂದುವುದರತ್ತ, ಉಳಿಸಿಕೊಳ್ಳುವುದರತ್ತ, ಸಂಗ್ರಹಣೆಯತ್ತ ನಿರ್ದೇಶಿತವಾಗಿರುತ್ತದೆಯೋ ಅದು.
ಮೂಲಭೂತವಾಗಿ anal character ಜಿಪುಣ ವ್ಯಕ್ತಿಯ ಗುಣ ಸ್ವಭಾವ ಹಾಗು ಇದು ಇಂತಹದೆ ಇತರೆ ಗುಣಲಕ್ಷಣಗಳಾದ ಶಿಸ್ತು, ಸಮಯಪ್ರಜ್ಞೆ, ಹಟಮಾರಿತನಗಳನ್ನ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಒಳಗೊಂಡಿರುತ್ತದೆ. ಫ್ರಾಯ್ಡ್ ನ ಪರಿಕಲ್ಪನೆಯ ಪ್ರಮುಖ ಅಂಶವೆಂದರೆ money & faces – Gold & Dirt ಗಳ ನಡುವಿನ ಸಾಂಕೇತಿಕ ಕನೆಕ್ಷನ್, ಮತ್ತು ಈ ಕುರಿತು ಅವನು ಹಲವಾರು ಉದಾಹರಣೆಗಳನ್ನು ಕೊಡುತ್ತಾನೆ. ಇನ್ನೂ ಪ್ರಬದ್ಧತೆಯ ಹಂತದಿಂದ ದೂರ ಇರುವ Anal character ಕುರಿತಾದ ಅವನ ಪರಿಕಲ್ಪನೆ, ಹತ್ತೊಂಭತ್ತನೇ ಶತಮಾನದ ಬೂರ್ಜ್ವಾ ಸಮಾಜದ ಕುರಿತಾದ ತೀವ್ರ ಟೀಕೆಯಾಗಿದೆ, ಅಂಥ ಬೂರ್ಜ್ವಾ ಸಮಾಜದಲ್ಲಿ Anal character ನ ಗುಣಲಕ್ಷಣಗಳು ನೈತಿಕ ನಡುವಳಿಕೆಯ ಮಾರ್ಗದರ್ಶಿ ಸೂತ್ರಗಳಾಗಿದ್ದವು ಮತ್ತು ಇವನ್ನ ಮನುಷ್ಯ ಸ್ವಬಾವದ (human nature) ಅಭಿವ್ಯಕ್ತಿ ಎಂಬಂತೆ ಪರಿಗಣಿಸಲಾಗುತ್ತಿತ್ತು. ಫ್ರಾಯ್ಡ್ ನ ಸಮೀಕರಣ, money = faces, ಎನ್ನುವ ಬೂರ್ಜ್ವಾ ಸಮಾಜದ ನಡುವಳಿಕೆ ಮತ್ತು ಸ್ವಾಧೀನತೆಯ ಹುಕಿಯ (possessiveness) ಕುರಿತಾದ ಟೀಕೆ, ಪರಿಕಲ್ಪನೆಯ ಭಾಗವಾಗಿದ್ದರೂ ಅದು ಅವನ ಉದ್ದೇಶವೇನಾಗಿರಲಿಲ್ಲ ಮತ್ತು ಇದನ್ನ ಮಾರ್ಕ್ಸ್ ನ Economic & Philosophical Manuscripts ನಲ್ಲಿಯ ಹಣದ ಕುರಿತಾದ ಚರ್ಚೆಗೆ ಹೋಲಿಸಬಹುದು.
ಈ ಸಂದರ್ಭದಲ್ಲಿ ಇದು ಕಡಿಮೆ ಪ್ರಾಮುಖ್ಯತೆಯ ವಿಷಯವಾಗಿದ್ದರೂ ಫ್ರಾಯ್ಡ್ , ಕಾಮಾಸಕ್ತಿಯ (libido) ಬೆಳವಣಿಗೆಯ ಈ ವಿಶೇಷ ಹಂತವನ್ನ ಪ್ರೈಮರಿ ಎಂದೂ ಹಾಗು, ಗುಣಸ್ವಭಾವದ ರೂಪಿಸುವಿಕೆಯ ಹಂತವನ್ನು ಸೆಕೆಂಡರಿ ಎಂದೂ ನಂಬಿದ್ದ ( ಆದರೆ ನನ್ನ ಅಭಿಪ್ರಾಯದಲ್ಲಿ, ಒಬ್ಬರ ಆರಂಭಿಕ ಹಂತದ ಬದುಕಿನಲ್ಲಿಯ interpersonal constellation ಹಾಗು ಅದಕ್ಕೆ ಕಾರಣವಾದ ಸಾಮಾಜಿಕ ಒತ್ತಡಗಳ ಮೊತ್ತ – product ಇದು). ಯಾವುದು ಮುಖ್ಯ ಎಂದರೆ, ವ್ಯಕ್ತಿಯ ಸ್ವಾಧೀನತೆಯನ್ನು ಕುರಿತಾದ ಧೋರಣೆ ರೂಪಗೊಳ್ಳುವುದು, ಅವರು ಪೂರ್ಣ ಪ್ರಬುದ್ಧತೆಯನ್ನು ಸಾಧಿಸುವ ಮೊದಲಿನ ಹಂತದಲ್ಲಿ, ಮತ್ತು ಅದು ಕೊನೆವರೆಗೂ ಶಾಶ್ವತವಾಗಿ ಉಳಿದುಕೊಂಡುಬಿಟ್ಟರೆ ಅದು ರೋಗಕಾರಕ ಎನ್ನುವ ಫ್ರಾಯ್ಡ್ ನ ದೃಷ್ಟಿಕೋನ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಫ್ರಾಯ್ಡ್ ನಿಗೆ, ಸ್ವಾಧೀನತೆ ಮತ್ತು having ಕುರಿತಾಗಿ ತೀವ್ರವಾಗಿ ಕಾಳಜಿ ಮಾಡುವ ವ್ಯಕ್ತಿ ಮಾನಸಿಕ ರೋಗಿಯಂತೆ. ಹಾಗಾಗಿ ಬಹಳಷ್ಟು anal character ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಸಮಾಜ, ಅದು ರೋಗಗ್ರಸ್ತ ಸಮಾಜ.
( ಮುಂದುವರೆಯುತ್ತದೆ…)
1 Comment