ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/18/fromm-31/
To have or not to have? ಎನ್ನುವ ಪ್ರಶ್ನೆಯ ಸುತ್ತ ಸಾಕಷ್ಟು ನೈತಿಕ ಮತ್ತು ರಾಜಕೀಯ ಚರ್ಚೆ ನಡೆದಿದೆ. ನೈತಿಕ-ಧಾರ್ಮಿಕ ಪಾತಳಿಯಲ್ಲಿ ಹೀಗೆಂದರೆ, ವೈರಾಗ್ಯ ಮತ್ತು ವೈರಾಗ್ಯವಲ್ಲದ ಬದುಕುಗಳ ನಡುವಿನ ಆಯ್ಕೆ, ವೈರಾಗ್ಯರಹಿತ ಬದುಕು ಸೃಜನಾತ್ಮಕ ಖುಶಿ ಮತ್ತು ಕೊನೆಯಿಲ್ಲದ ಆನಂದದ ಬಯಕೆ ಎರಡನ್ನೂ ಒಳಗೊಂಡಿದೆ. ವ್ಯಕ್ತಿಯ ಒತ್ತು ನಡುವಳಿಕೆಯ ಒಂದು ಪ್ರಕ್ರಿಯೆಯ ಮೇಲೆ ಇರದೇ, ಅದರ ಹಿಂದಿರುವ ಮನೋಭಾವದ ಮೇಲೆ ಇದ್ದಾಗ ಈ ಪರ್ಯಾಯ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಖುಶಿರಹಿತ (non enjoyment ) ಬದುಕಿನ ಜೊತೆ ಇರುವ ತನ್ನ ನಿರಂತರ ಸಂಬಂಧದ ಕಾರಣವಾಗಿ ವೈರಾಗ್ಯದ ನಡುವಳಿಕೆ, having ಮತ್ತು consuming ನ ಬಲವಾದ ಬಯಕೆಯ ಬಹುತೇಕ ಏಕಮಾತ್ರ ವಿರೋಧಿಯಾಗಿದೆ. ವೈರಾಗ್ಯದ ಬದುಕಿನಲ್ಲಿ ಈ ಬಯಕೆಗಳನ್ನ ಹತ್ತಿಕ್ಕಬಹುದು ಆದರೆ having ಮತ್ತು consuming ನ ಹತ್ತಿಕ್ಕುವ ಈ ಪ್ರಯತ್ನದಲ್ಲಿ ವ್ಯಕ್ತಿ having ಮತ್ತು consuming ನ ಒಳಗೆ ಅಷ್ಟೇ ಆಳದಲ್ಲಿ ಮುಳುಗಿಬಿಡಬಹುದು. ಮನೋವಿಶ್ಲೇಷಣಾತ್ಮಕ ಮಾಹಿತಿ ಸೂಚಿಸುವಂತೆ, ಅತಿಯಾದ ಒತ್ತಾಯದ ಮೂಲಕದ ನಿರಾಕರಣೆ ಫ್ರಿಕ್ವೆಂಟ್ ಆದ ವಿದ್ಯಮಾನ. ಇದು ನಡೆಯುವುದು, ತೀವ್ರವಾದಿ ಸಸ್ಯಾಹಾರಿಗಳು ತಮ್ಮ ವಿನಾಶಾತ್ಮಕ ಒತ್ತಡಗಳನ್ನು ಹತ್ತಿಕ್ಕುವ, ಗರ್ಭಪಾತ ವಿರೋಧಿಗಳು ತಮ್ಮ ಕೊಲ್ಲುವ ಒತ್ತಡವನ್ನು ನಿಗ್ರಹಿಸುವ , ತೀವ್ರವಾದಿ ಮೌಲ್ಯಾಧಾರಿತ ಜನ ತಮ್ಮ ಪಾಪಪೂರ್ಣ ಒತ್ತಡಗಳನ್ನು ಹತ್ತಿಕ್ಕುವಂಥ ಹಲವಾರು ಪ್ರಕರಣಗಳಲ್ಲಿ. ಇಲ್ಲಿ ಮುಖ್ಯವಾದದ್ದು ಒಂದು ನಿರ್ದಿಷ್ಟ ಧೃಡ ನಿರ್ಧಾರವಲ್ಲ ಬದಲಾಗಿ ಅದನ್ನು ಸಲಹುತ್ತಿರುವ ತೀವ್ರವಾದಿತನ (fanaticism). ಎಲ್ಲ ತೀವ್ರವಾದಿತನಗಳಂತೆ, ಇದು ಸೂಚಿಸುವುದೇನೆಂದರೆ ಬಹುತೇಕ ಬೇರೆಲ್ಲ ಒತ್ತಡಗಳನ್ನ, ವಿಶೇಷವಾಗಿ ವೈರುಧ್ಯದ ಒತ್ತಡಗಳನ್ನು ಇದು ಸಲಹುತ್ತದೆ.
ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಇದೇ ರೀತಿಯ ತಪ್ಪು ಪರ್ಯಾಯ, ವರಮಾನದ ಅನಿಯಂತ್ರಿತ ಅಸಮಾನತೆ ಮತ್ತು ಸಂಪೂರ್ಣ ಸಮಾನತೆಗಳ ನಡುವೆ ಕಾಣ ಸಿಗುತ್ತದೆ. ಪ್ರತಿಯೊಬ್ಬರ ಸ್ವಾಧೀನತೆಗಳು (possessions) ಕ್ರಿಯಾತ್ಮಕ ಹಾಗು ವೈಯಕ್ತಿಕ ಆಗಿರುವಾಗ, ಒಬ್ಬರು ಇನ್ನೊಬ್ಬರಿಗಿಂತ ಒಂದಿಷ್ಟು ಹೆಚ್ಚು ಹೊಂದಿದ್ದಾರೆ ಎನ್ನುವುದು ಸಾಮಾಜಿಕ ಸಮಸ್ಯೆಯನ್ನ ಹುಟ್ಟು ಹಾಕುವುದಿಲ್ಲ. ಏಕೆಂದರೆ ಇಲ್ಲಿ ಸ್ವಾಧೀನತೆ ಅವಶ್ಯಕ ಸಂಗತಿಯಲ್ಲ, ಅಸೂಯೆ ಹೆಚ್ಚಾಗಲು ಇಲ್ಲಿ ಕಾರಣವಿಲ್ಲ. ಇನ್ನೊಂದು ಬದಿಯಲ್ಲಿ, ಸಮಾನತೆಯ ಬಗ್ಗೆ , ಪ್ರತಿಯೊಬ್ಬರ ಪಾಲು ಸಮ ಸಮವಾಗಿರಬೇಕು ಎನ್ನುವ ಅರ್ಥದಲ್ಲಿ ಕಾಳಜಿ ಉಳ್ಳವರ having ಧೋರಣೆ ಕೂಡ ಎಲ್ಲರಷ್ಟೇ ಬಲಶಾಲಿಯಾಗಿದೆ, ಆದರೆ ಅಪವಾದವೆಂದರೆ, ಇಲ್ಲಿ ಅವರ ಈ having ಧೋರಣೆಯನ್ನ ಅವರ ನಿಖರ ಸಮಾನತೆಯ ಜೊತೆಗಿನ ಸಂಬಂಧದ ಕಾರಣವಾಗಿ ನಿರಾಕರಿಸಲಾಗುತ್ತದೆ. ಇದರ ಹಿಂದೆ ಅವರ ನಿಜವಾದ ಉದ್ದೇಶವನ್ನ ಗುರುತಿಸಬಹುದು : ಅಸೂಯೆ. ಇನ್ನೊಬ್ಬರು ತಮಗಿಂತ ಹೆಚ್ಚು ಹೊಂದಿರಬಾರದು ಎಂದು ಒತ್ತಾಯಿಸುತ್ತಿರುವವರು, ಇನ್ನೊಬ್ಬರು ತಮಗಿಂತ ಒಂದು ಚೂರು ಹೆಚ್ಚು ಹೊಂದಿದ್ದರೂ ತಮಗಾಗುತ್ತಿದ್ದ ಅಸೂಯೆಯಿಂದ ಹೀಗೆ ರಕ್ಷಣೆ ಬಯಸುತ್ತಿದ್ದಾರೆ. ಯಾವುದು ಆಗಬೇಕಾದದ್ದು ಎಂದರೆ ಐಷಾರಾಮಿ ಮತ್ತು ಬಡತನ ಎರಡೂ ಕೊನೆಯಾಗಬೇಕು; ಸಮಾನತೆ ಎಂದರೆ, ಭೌತಿಕ ಸರಕುಗಳ ಪ್ರತಿ ತುಣುಕಿನ (morsel of material goods) ಪರಿಮಾಣಾತ್ಮಕ ಸಮಾನತೆ ಅಲ್ಲ, ಬದಲಾಗಿ ವರಮಾನದಲ್ಲಿ ಯಾವ ಹಂತದವರೆಗೆ ಭೇದ ಮಾಡಬಾರದು ಎಂದರೆ, ಅದು ಬೇರೆ ಬೇರೆ ಗುಂಪುಗಳಿಗೆ ಬೇರೆ ಬೇರೆ ಬದುಕಿನ ಅನುಭವ ಸಾಧ್ಯಮಾಡಲು ಶುರು ಮಾಡುವ ಹಂತದವರೆಗೆ. Economic & Philosophical Manuscripts ನಲ್ಲಿ ಮಾರ್ಕ್ಸ್ ಇದನ್ನ “ ಕಚ್ಚಾ ಕಮ್ಯುನಿಸಂ” (crude communism) ಎಂದು ಸೂಚಿಸುವ ಮೂಲಕ ನಮ್ಮ ಗಮನ ಸೆಳೆಯುತ್ತಾನೆ, ಇದು “ ಪ್ರತಿ ವಲಯದಲ್ಲೂ ವ್ಯಕ್ತಿಯ ವ್ಯಕ್ತಿತ್ವವನ್ನ ನಿರಾಕರಿಸುತ್ತದೆ” ; ಈ ಬಗೆಯ ಕಮ್ಯುನಿಸಂ ಎಂದರೆ, “ ಕೇವಲ ಈ ರೀತಿಯ ಎಲ್ಲ ಅಸೂಯೆಗಳ ಒಟ್ಚು ಮೊತ್ತ ಮತ್ತು, ಪೂರ್ವ ನಿರ್ಧಾರಿತ ಕನಿಷ್ಟ ಮಟ್ಟಕ್ಕೆ ಇಳಿಯುವುದು.”
1 Comment