ಅಸ್ತಿತ್ವವಾದಿ having : To have or to be #36

ನ್ಯಾಯಪರರು (just) ಹಾಗು ಸಂತರಂಥ (saintly) ಮನುಷ್ಯತ್ವವನ್ನು ಅಪ್ಪಿಕೊಂಡವರು ಕೂಡ ಅಸ್ತಿತ್ವವಾದಿ ಮಾದರಿಯ having ನ ಬಯಸುತ್ತಾರೆ ಆದರೆ, ಸಾಮಾನ್ಯ ಜನರಿಗೆ ಅಸ್ತಿತ್ವವಾದಿ ಮತ್ತು ಸ್ವಭಾವಾಧಾರಿತ ಎರಡೂ ಮಾದರಿಯ having ಬೇಕು… | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/24/fromm-32/

ಇಲ್ಲಿ ಚರ್ಚಿಸುತ್ತಿರುವ Having ವಿಧಾನವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಇನ್ನೊಂದು ಸ್ಪಷ್ಟೀಕರಣ ಇಲ್ಲಿ ಅಗತ್ಯ ಅನಿಸುತ್ತಿದೆ, ಅದು ಅಸ್ತಿತ್ವವಾದಿ having (existential having) ನ ಕಾರ್ಯಕ್ಷಮತೆಯ ಕುರಿತಾಗಿ; ಮನುಷ್ಯ ಅಸ್ತಿತ್ವಕ್ಕೆ ಈ ಜಗತ್ತಿನಲ್ಲಿ ಬದುಕುಳಿಯಲು ಕೆಲವು ವಸ್ತುಗಳನ್ನ/ಸಂಗತಿಗಳನ್ನ ಹೊಂದುವುದು, ಸಂಭಾಳಿಸುವುದು, ಬಳಸುವುದು ಬಹಳ ಅಗತ್ಯ. ಇದು ನಮ್ಮ ದೇಹ, ಆಹಾರ, ವಸತಿ, ಬಟ್ಟೆ, ಮತ್ತು ನಮ್ಮ ಅವಶ್ಯಕತೆಗಳನ್ನ ಪೂರೈಸುವ ವಸ್ತುಗಳನ್ನ ತಯಾರಿಸುವ ಸಾಧನಗಳ ವಿಷಯದಲ್ಲಿಯೂ ಸತ್ಯ. ಈ ರೀತಿಯ having ನ ಅಸ್ತಿತ್ವವಾದಿ having ಎನ್ನಬಹುದು ಏಕೆಂದರೆ, ಇದರ ಬೇರುಗಳು ಇರುವುದು ಮಾನವರ ಅಸ್ತಿತ್ವದ ಮೂಲದಲ್ಲಿ. ಇದು ತಾರ್ಕಿಕವಾಗಿ ನಿರ್ದೇಶಿತವಾದ ಒತ್ತಡ (impulse) ಬದುಕುಳಿಯುವ ನಮ್ಮ ಪ್ರಯತ್ನದ ದಿಸೆಯಲ್ಲಿ, ಇದು ನಾವು ಈವರೆಗೆ ಚರ್ಚಿಸಿದ ಸ್ವಭಾವಾಧಾರಿತ having (characterological having ) ಯಾವುದು, ತನಗೆ ಸಹಜವಲ್ಲದ ಸಂಗತಿಯನ್ನ ಹೊಂದುವ ಮತ್ತು ಇಟ್ಟುಕೊಳ್ಳುವ ಕುರಿತಾಗಿನ ಉತ್ಕಟತೆಯೋ, ಆದರೆ ಯಾವುದು ನಮ್ಮ ಮಾನವ ಕುಲದ ಸಾಮಾಜಿಕ ಸ್ಥಿತಿಗತಿಗಳ (biologically given) ಕಾರಣವಾಗಿ ಹುಟ್ಟಿಕೊಂಡಿವೆಯೋ ಅದಕ್ಕಿಂತ ಭಿನ್ನವಾದದ್ದು.

being ಮತ್ತು ಅಸ್ತಿತ್ವವಾದಿ having ಗಳ ನಡುವೆ ಯಾವ conflict ಇಲ್ಲ ಆದರೆ being ಮತ್ತು ಸ್ವಭಾವಾಧಾರಿತ having ಗಳ ಮಧ್ಯೆ ಅವಶ್ಯಕವಾಗಿ ಸಂಘರ್ಷ ಇದೆ. “ನ್ಯಾಯ” ಪರರು (just) ಹಾಗು ಸಂತರಂಥ (saintly) ಮನುಷ್ಯತ್ವವನ್ನು ಅಪ್ಪಿಕೊಂಡವರು ಕೂಡ ಅಸ್ತಿತ್ವವಾದಿ ಮಾದರಿಯ having ನ ಬಯಸುತ್ತಾರೆ ಆದರೆ, ಸಾಮಾನ್ಯ ಜನರಿಗೆ ಅಸ್ತಿತ್ವವಾದಿ ಮತ್ತು ಸ್ವಭಾವಾಧಾರಿತ ಎರಡೂ ಮಾದರಿಯ having ಬೇಕು. (See the discussion of existential & characterological dichotomies in Man for Himself)

1 Comment

Leave a Reply