Having ವಿಧಾನ, ವಸ್ತುಗಳ/ಸಂಗತಿಗಳ ಕುರಿತಾದದ್ದು ಮತ್ತು ಈ ವಸ್ತುಗಳು ಫಿಕ್ಸ್ಡ್ ಆದವು ಮತ್ತು ಇವನ್ನು ವಿವರಿಸುವುದು ಸಾಧ್ಯ. ಆದರೆ being, ಅನುಭವಗಳ ಕುರಿತಾದದ್ದು ಮತ್ತು ಮೂಲಭೂತವಾಗಿ ಮನುಷ್ಯ ಅನುಭವಗಳನ್ನು ಸ್ಪಷ್ಟವಾಗಿ ವಿವರಿಸುವುದು ಅಸಾಧ್ಯ… | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/25/fromm-33/
ಅಧ್ಯಾಯ 5
ಬಹಳಷ್ಟು ಜನರಿಗೆ ಅಸ್ತಿತ್ವದ being ವಿಧಾನಕ್ಕಿಂತ having ವಿಧಾನದ ಬಗ್ಗೆ ಹೆಚ್ಚು ತಿಳುವಳಿಕೆ ಇದೆ ಏಕೆಂದರೆ, ನಮ್ಮ ಸಂಸ್ಕೃತಿಯಲ್ಲಿ having ಎನ್ನುವುದು ಮೇಲಿಂದ ಮೇಲೆ ನಮ್ಮ ಅನುಭವಕ್ಕೆ ಬರುವ ಸಂಗತಿ. ಆದರೆ ಇದಕ್ಕಿಂತ ಮಹತ್ವದ ಸಂಗತಿಯೊಂದು being ವಿಧಾನದ ವ್ಯಾಖ್ಯಾನವನ್ನ (definition) having ವಿಧಾನದ ವ್ಯಾಖ್ಯಾನಕ್ಕಿಂತ ಕಠಿಣವಾಗಿಸುತ್ತದೆ, ಮತ್ತು ಈ ಕಠಿಣತೆ ಈ ಎರಡೂ ವಿಧಾನಗಳ ನಡುವಿನ ವೈರುಧ್ಯದ ಪ್ರಕೃತಿಯ (nature) ಕುರಿತಾದದ್ದು.
Having ವಿಧಾನ, ವಸ್ತುಗಳ/ಸಂಗತಿಗಳ ಕುರಿತಾದದ್ದು ಮತ್ತು ಈ ವಸ್ತುಗಳು ಫಿಕ್ಸ್ಡ್ ಆದವು ಮತ್ತು ಇವನ್ನು ವಿವರಿಸುವುದು ಸಾಧ್ಯ. ಆದರೆ being, ಅನುಭವಗಳ ಕುರಿತಾದದ್ದು ಮತ್ತು ಮೂಲಭೂತವಾಗಿ ಮನುಷ್ಯ ಅನುಭವಗಳನ್ನು ಸ್ಪಷ್ಟವಾಗಿ ವಿವರಿಸುವುದು ಅಸಾಧ್ಯ. ಯಾವುದನ್ನ ಸಂಪೂರ್ಣವಾಗಿ ವಿವರಿಸಬಹುದೆಂದರೆ, ಅದು ನಮ್ಮ ಬಹಿರಂಗ ವ್ಯಕ್ತಿತ್ವವನ್ನ (persona), ನಾವು ಪ್ರತಿಯೊಬ್ಬರೂ ಹಾಕಿಕೊಂಡಿರುವ ಮುಖವಾಡವನ್ನ, ನಾವು ವ್ಯಕ್ತಮಾಡುವ ನಮ್ಮ ಅಹಂ ನ – ಈ ಕಾರಣವಾಗಿ ನಮ್ಮ ಬಹಿರಂಗ ವ್ಯಕ್ತಿತ್ವವೇ ಒಂದು ವಸ್ತುವಿನ ಥರ ಕೆಲಸ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ, ಮನುಷ್ಯ ಒಂದು ಡೆಡ್ ಇಮೇಜ್ ಅಲ್ಲ ಆದ್ದರಿಂದ ಅದನ್ನ ವಸ್ತುವಿನ ಥರ ವಿವರಿಸುವುದು ಸಾಧ್ಯವಿಲ್ಲ. ಅಷ್ಟೇ ಅಲ್ಲ ಮನುಷ್ಯ ಜೀವಿಯನ್ನ ವಿವರಿಸುವುದು ಸಾಧ್ಯವೇ ಇಲ್ಲ. ಹೌದು ನನ್ನ ಬಗ್ಗೆ , ನನ್ನ ಸ್ವಭಾವದ ಬಗ್ಗೆ, ಬದುಕಿನ ಕುರಿತಾದ ನನ್ನ ಧೋರಣೆಗಳ ಬಗ್ಗೆ ಬಹಳಷ್ಟು ಹೇಳಬಹುದು. ಈ ಒಳನೋಟದ ತಿಳುವಳಿಕೆ ನನ್ನ ಸ್ವಭಾವವನ್ನ ಮತ್ತು ಇನ್ನೊಬ್ಬರ ಮಾನಸಿಕ ರಚನೆಯನ್ನ ಅರ್ಥಮಾಡಿಕೊಳ್ಳುವಲ್ಲಿ ಹಾಗು ವಿವರಿಸುವಲ್ಲಿ ಸಹಾಯ ಮಾಡಬಹುದಾದರೂ, ಪೂರ್ಣವಾಗಿ ನಾನು, ನನ್ನ ಇಡೀ ವೈಯಕ್ತೀಕತೆ (individuality), ನನ್ನ ನನ್ನತನ (suchness) ಮುಂತಾದವು ನನ್ನ ಫಿಂಗರ್ ಪ್ರಿಂಟ್ ನಷ್ಟೇ ಅನನ್ಯವಾದವು ಹಾಗಾಗಿ, ಯಾವತ್ತೂ ಸಂಪೂರ್ಣವಾಗಿ ತಿಳಿದುಕೊಳ್ಳಲು ಅಸಾಧ್ಯವಾದದ್ದು, ನಮ್ಮ ಸಹಾನುಭೂತಿಗೆ ಕೂಡ (empathy) ಇದು ಅಸಾಧ್ಯ ಏಕೆಂದರೆ ಇಬ್ಬರು ಮನುಷ್ಯ ಜೀವಿಗಳು ಒಂದೇ ರೀತಿ ಇರುವುದು ಸಾಧ್ಯವೇ ಇಲ್ಲ.* ಕೇವಲ ಪರಸ್ಪರರ ಜೀವಂತಿಕೆಯ ಸಂಬಂಧಿತ ಪ್ರಕ್ರಿಯೆಯಲ್ಲಿ ನಾನು ಮತ್ತು ಇನ್ನೊಬ್ಬರು ನಮ್ಮ ಪ್ರತ್ಯೇಕತೆಯ ತಡೆಗೋಡೆಯನ್ನ ಮೀರಬಹುದು, ನಾವಿಬ್ಬರೂ ಬದುಕಿನ ಕುಣಿತದಲ್ಲಿ ಒಂದಾಗಿ ಭಾಗವಹಿಸುವ ಮಟ್ಟಿಗೆ ಮಾತ್ರ. ಆದರೂ ನಮ್ಮ ಇಬ್ಬರ ಪೂರ್ಣ ಗುರುತಿಸುವಿಕೆ ಯಾವತ್ತೂ ಸಾಧ್ಯವಾಗುವುದಿಲ್ಲ.
ಮನುಷ್ಯರ ಒಂದು ಸ್ವಭಾವವನ್ನೂ ಸಂಪೂರ್ಣವಾಗಿ ವಿವರಿಸುವುದು ಸಾಧ್ಯವಿಲ್ಲ. ಮೋನಾಲಿಸಾಳ ನಗುವಿನ ಬಗ್ಗೆ ಪೇಜುಗಟ್ಟಲೇ ವಿವರಣೆ ಬರೆಯಬಹುದಾದರೂ ಅವಳ ನಗೆಯನ್ನ ಅಕ್ಷರಗಳಲ್ಲಿ ನಿಖರವಾಗಿ ಹಿಡಿದಿಡುವುದು ಅಸಾಧ್ಯ – ಹೀಗಾಗುವುದು ಅವಳ ನಗು “ರಹಸ್ಯಮಯ” ಎನ್ನುವ ಕಾರಣಕ್ಕಲ್ಲ. ಪ್ರತಿಯೊಬ್ಬರ ನಗುವೂ ರಹಸ್ಯಮಯ (ಅದು ಮಾರುಕಟ್ಟೆಗಾಗಿನ ತೋರಿಕೆಯ ಸಿಂಥೆಟಿಕ್ ನಗು ಆಗದೇ ಇದ್ದ ಪಕ್ಷದಲ್ಲಿ). ಆಸಕ್ತಿ, ಉತ್ಸಾಹ, ಬಯೋಫೀಲಿಯಾ (ಜೀವಶಾಸ್ತ್ರಜ್ಞ E. O. ವಿಲ್ಸನ್ ಅವರ ಸಿದ್ಧಾಂತದ ಪ್ರಕಾರ, ನೈಸರ್ಗಿಕ ಪ್ರಪಂಚದೊಂದಿಗೆ ಮಾನವರ ಸಹಜ ಮತ್ತು ತಳೀಯವಾಗಿ ನಿರ್ಧರಿಸಿದ ಸಂಬಂಧ) ದಂಥ ಅಭಿವ್ಯಕ್ತಿಗಳನ್ನ ಅಥವಾ, ಇನ್ನೊಬ್ಬರ ಕಣ್ಣುಗಳಲ್ಲಿ ಕಾಣಿಸಿಕೊಳ್ಳುವ ದ್ವೇಷ ಅಥವಾ ನಾರ್ಸಿಸಿಸಂ ಅಥವಾ, ಜನರಲ್ಲಿ ಕಾಣಸಿಗುವ ಹಲವಾರು ಬಗೆಯ ಮುಖಭಾವಗಳನ್ನ, ನಡಿಗೆ, ಭಂಗಿಗಳು, ದನಿಯ ಏರಿಳಿತಗಳನ್ನ ಸಂಪೂರ್ಣವಾಗಿ ವಿವರಿಸುವುದು ಸಾಧ್ಯವಿಲ್ಲ.
*ಇದು ಮನಶಾಸ್ತ್ರದ ಅತ್ಯಂತ ಪ್ರಮುಖ ಮಿತಿ, ಇದನ್ನ ನಾನು ಋಣಾತ್ಮಕ ಸೈಕಾಲೋಜಿ ಮತ್ತು ಋಣಾತ್ಮಕ ಥಿಯಾಲೋಜಿ ಗಳನ್ನನ ಹೋಲಿಕೆ ಮಾಡುತ್ತ ಬರೆಗಿರುವ ನನ್ನ ಪ್ರಬಂಧ “On the limitations and dangers of Psychology – 1959 “ ದಲ್ಲಿ ವಿವರವಾಗಿ ಚರ್ಚಿಸಿದ್ದೇನೆ.