ಕ್ರಿಯಾಶೀಲವಾಗಿರುವುದು : To have or to be #38

ಬಹಳಷ್ಟು ಜನರಿಗೆ ತಮ್ಮ having ಧೋರಣೆಯನ್ನ ಬಿಟ್ಟು ಬಿಡುವುದು ತುಂಬ ಕಷ್ಟ; ಈ ದಿಕ್ಕಿನಲ್ಲಿ ಅವರು ಮಾಡುವ ಪ್ರಯತ್ನ ಅವರಲ್ಲಿ ತೀವ್ರವಾದ ಆತಂಕವನ್ನು ಮತ್ತು ಅಸುರಕ್ಷತಾ ಭಾವವನ್ನು ಹುಟ್ಟಿಸುತ್ತದೆ, ಮತ್ತು ಈಜು ಬಾರದವರನ್ನ ಮಹಾಸಾಗರದಲ್ಲಿ ನೂಕಿದಂತೆ ಮಾಡುತ್ತದೆ…  ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

Being active

Being ವಿಧಾನಕ್ಕೆ ಕೆಲವು ಪೂರ್ವ ಅಗತ್ಯಗಳಿವೆ ಅವು ಯಾವವೆಂದರೆ, ಸ್ವಾತಂತ್ರ್ಯ , ಮುಕ್ತತೆ, ಮತ್ತು ಕ್ರಿಟಿಕಲ್ ರೀಸನಿಂಗ್. ಅದರ ಮೂಲಭೂತ ಗುಣಲಕ್ಷಣ ಎಂದರೆ ಕ್ರಿಯಾಶೀಲವಾಗಿರುವುದು (being active), ಕ್ರಿಯಾಶೀಲವಾಗಿರುವುದು ಬಹಿರಂಗದ ಕ್ರಿಯೆಯಲ್ಲ (ಉದಾಹರಣೆಗೆ busy ಆಗಿರುವುದು), ಬದಲಾಗಿ ಕ್ರಿಯಾಶೀಲವಾಗಿರುವುದು ಎಂದರೆ ಅದು ಒಂದು ಅಂತರಂಗದ ಕ್ರಿಯೆ, ಮನುಷ್ಯರ ಶಕ್ತಿ ಸಾಮರ್ಥ್ಯಗಳ ಸೃಜನಶೀಲ ಬಳಕೆ. ಕ್ರಿಯಾಶೀಲವಾಗಿರುವುದೆಂದರೆ, ಒಬ್ಬರ ಸಹಜಶಕ್ತಿ (faculty), ಕೌಶಲ್ಯ, ಪ್ರತಿಭೆ, ಮನುಷ್ಯ ಬಳುವಳಿಯ ಸಂಪತ್ತು (wealth of human gifts), ಮುಂತಾದ ಮನುಷ್ಯರಿಗೆ ದತ್ತವಾಗಿ ಬಂದಿರುವ ಸಂಗತಿಗಳಿಗೆ ಅಭಿವ್ಯಕ್ತಿ ಕೊಡುವುದು, ಅದು ಹೆಚ್ಚು-ಕಡಿಮೆ ಮಟ್ಟದ್ದಾಗಿದ್ದರೂ ಸರಿ. ಕ್ರಿಯಾಶೀಲವಾಗಿರುವುದೆಂದರೆ, ತಮ್ಮನ್ನು ತಾವು ಹೊಸತಾಗಿಸಿಕೊಳ್ಳುವುದು, ಬೆಳವಣಿಗೆಯ ದಾರಿಯಲ್ಲಿ ಸಾಗುವುದು, ನಿರಂತರವಾಗಿ ಹರಿಯುವುದು, ಪ್ರೀತಿಸುವುದು, ತಮ್ಮ ಒಂಟಿ ಅಹಂ ನ ಸೆರೆಮನೆಯನ್ನ ಮೀರುವುದು , ಆಸಕ್ತರಾಗುವುದು, ದಾಖಲಿಸುವುದು, ಕೊಡುವುದು. ಆದರೂ ಈ ಯಾವ ಅನುಭವವನ್ನೂ ಪದಗಳಲ್ಲಿ ಪೂರ್ತಿಯಾಗಿ ಅಭಿವ್ಯಕ್ತಿಸುವುದು ಸಾಧ್ಯವಿಲ್ಲ. ಪದಗಳು ಎಂದರೆ ಅನುಭವ ತುಂಬಿ ತುಳುಕುತ್ತಿರುವ ಪಾತ್ರೆಗಳಿದ್ದಂತೆ. ಪದಗಳು ಅನುಭವದತ್ತ ಬೆಟ್ಟು ಮಾಡಿ ತೋರಿಸುತ್ತವೆಯೇ ಹೊರತು ಅವೇ ಸ್ವಯಂ ಅನುಭವಗಳಲ್ಲ. ನಾನು ಅನುಭವಿಸಿದ್ದನ್ನ ನಾನು ನಿರ್ದಿಷ್ಟ ಪದ ಮತ್ತು ವಿಚಾರಗಳಲ್ಲಿ ಎಕ್ಸಪ್ರೆಸ್ ಮಾಡಿದ ಕ್ಷಣದಲ್ಲಿಯೇ, ಅನುಭವ ಕಳೆದುಹೋಗುತ್ತದೆ : ಅದು ಒಣಗಿಹೋಗುತ್ತದೆ, ತನ್ನ ಜೀವಂತಿಕೆಯನ್ನ ಕಳೆದುಕೊಳ್ಳುತ್ತದೆ, ಕೇವಲ ಒಣ ವಿಚಾರವಾಗಿ ಮಾತ್ರ ಉಳಿದುಕೊಳ್ಳುತ್ತದೆ. ಆದ್ದರಿಂದ being ನ ಪದಗಳಲ್ಲಿ ವಿವರಿಸುವುದು ಸಾಧ್ಯವಿಲ್ಲ ಮತ್ತು ಅದನ್ನು ಹಂಚಿಕೊಳ್ಳುವುದರ ಮೂಲಕ ಮಾತ್ರ ಕಮ್ಯೂನಿಕೇಟ್ ಮಾಡಬಹುದು. Having ನ ರಚನೆಯಲ್ಲಿ ಸತ್ತ ಪದಗಳು ಅಧಿಕಾರ ಚಲಾಯಿಸುತ್ತವೆ; being ನ ರಚನೆಯಲ್ಲಿ ಜೀವಂತ ಮತ್ತು ಅಭಿವ್ಯಕ್ತಿಸಲಾಗದ ಅನುಭವಗಳು ಆಡಳಿತ ನಡೆಸುತ್ತವೆ (being ವಿಧಾನದಲ್ಲಿ ಥಿಂಕಿಂಗ್ ಕೂಡ ಜೀವಂತವಾಗಿರುತ್ತದೆ, ಸೃಜನಶೀಲವಾಗಿರುತ್ತದೆ).

ಬಹುಶಃ being ವಿಧಾನವನ್ನ Max Hunziger ಸೂಚಿಸಿದ ಸಾಂಕೇತಿಕತೆಯ ಮೂಲಕ ಅತ್ಯುತ್ತಮವಾಗಿ ವಿವರಿಸಬಹುದು. ನೀಲಿ ಗ್ಲಾಸ್ ನೀಲಿಯಾಗಿ ಕಾಣಿಸುವುದು, ಬೆಳಕು ಅದರ ಮೂಲಕ ಹಾಯ್ದು ಹೋದಾಗ, ಅದು ಬೇರೆ ಎಲ್ಲ ಬಣ್ಣಗಳನ್ನ ಹೀರಿಕೊಳ್ಳುವ ಹಾಗು ಅವುಗಳನ್ನು ಗ್ಲಾಸ್ ಮೂಲಕ ದಾಟಿಹೋಗಲು ಬಿಡುವುದಿರುವ ಕಾರಣವಾಗಿ. ನಾವು ಗ್ಲಾಸ್ ನ ನೀಲಿ ಎಂದು ಏಕೆ ಗುರುತಿಸುತ್ತೇವೆಯೆಂದರೆ ಅದು ನೀಲಿ ಅಲೆಗಳನ್ನ ಹಿಡಿದಿಟ್ಟುಕೊಳ್ಳುವುದಿಲ್ಲ. ಅದಕ್ಕೆ ನೀಲಿ ಎಂದು ಹೆಸರಿಟ್ಟಿರುವುದು, ಅದು ಯಾವುದನ್ನ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವ ಕಾರಣಕ್ಕಲ್ಲ, ಅದು ಯಾವುದನ್ನ ತನ್ನ ಮೂಲಕ ಹಾಯ್ದು ಹೋಗಲು ಅವಕಾಶ ಮಾಡಿಕೊಡುತ್ತದೆ ಎನ್ನುವ ಕಾರಣಕ್ಕೆ.

ಎಷ್ಟರ ಮಟ್ಟಿಗೆ ನಾವು having (non being) ವಿಧಾನವನ್ನು ಕಡಿಮೆಮಾಡಿಕೊಳ್ಳಬಹುದು ಎಂದರೆ – ನಾವು ಎಷ್ಟು, ಹೊಂದಿರುವುದಕ್ಕೆ ಅಂಟಿಕೊಂಡು ಅದರ ಮೂಲಕ ರಕ್ಷಣೆ ಮತ್ತು ಗುರುತಿಸಿಕೊಳ್ಳುವಿಕೆಯನ್ನ , ಅದರ ಮೇಲೆ ನಿರ್ಭರವಾಗುತ್ತ, ನಮ್ಮ ಅಹಂಗಳನ್ನ ಮತ್ತು ಸ್ವಾಧೀನತೆಗಳನ್ನು ಆಧಾರವಾಗಿಸಿಕೊಳ್ಳುವುದನ್ನ ನಿಲ್ಲಿಸುತ್ತೇವೆಯೋ ಅಷ್ಟರಮಟ್ಟಿಗೆ. ಇಷ್ಟಾದರೆ ನಮಗೆ being ವಿಧಾನ ಸಾಧ್ಯವಾಗಬಹುದೆ? “To be” ಗೆ ನಮ್ಮ ಅಹಂಕೇಂದ್ರೀಯತೆಯನ್ನ, ಸ್ವಾರ್ಥವನ್ನ ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ ಅಥವಾ ಅನುಭಾವಿಗಳ ಮಾತುಗಳಲ್ಲಿ ಹೇಳಬೇಕೆಂದರೆ, ನಮ್ಮನ್ನು ನಾವು ಖಾಲೀಯಾಗಿಸಿಕೊಳ್ಳಬೇಕು, ಬಡವರಾಗಿಸಿಕೊಳ್ಳಬೇಕು.

ಆದರೆ ಬಹಳಷ್ಟು ಜನರಿಗೆ ತಮ್ಮ having ಧೋರಣೆಯನ್ನ ಬಿಟ್ಟು ಬಿಡುವುದು ತುಂಬ ಕಷ್ಟ; ಈ ದಿಕ್ಕಿನಲ್ಲಿ ಅವರು ಮಾಡುವ ಪ್ರಯತ್ನ ಅವರಲ್ಲಿ ತೀವ್ರವಾದ ಆತಂಕವನ್ನು ಮತ್ತು ಅಸುರಕ್ಷತಾ ಭಾವವನ್ನು ಹುಟ್ಟಿಸುತ್ತದೆ, ಮತ್ತು ಈಜು ಬಾರದವರನ್ನ ಮಹಾಸಾಗರದಲ್ಲಿ ನೂಕಿದಂತೆ ಮಾಡುತ್ತದೆ. ಆಸ್ತಿಯ ಊರುಗೋಲನ್ನ ಬಿಟ್ಟಾಗ, ತಾವು ತಮ್ಮ ಸಹಜ ಶಕ್ತಿ ಸಾಮರ್ಥ್ಯಗಳನ್ನು ಬಳಸಲು ಶುರುಮಾಡುತ್ತೇವೆ ಮತ್ತು ತಮ್ಮ ಕಾಲುಗಳನ್ನ ಬಳಸಿ ನಡೆಯಲಾರಂಭಿಸುತ್ತೇವೆ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ತಾವು ಹೊಂದಿರುವುದನ್ನ ಬಳಸದೇ ಹೋದರೆ ತಮಗೆ ನಡೆಯುವುದು ಸಾಧ್ಯವಾಗುವುದಿಲ್ಲ, ತಾವು ಕುಸಿದು ಬೀಳುತ್ತೇವೆ ಎನ್ನುವ ಭ್ರಮೆ ಅವರನ್ನು ತಡೆದು ನಿಲ್ಲಿಸುತ್ತಿದೆ. ಅವರು, ಒಂದು ಬಾರಿ ಎಡವಿ ಬಿದ್ದ ಮೇಲೆ ಇನ್ನು ಮುಂದೆ ತನಗೆ ನಡಿಗೆ ಸಾಧ್ಯವಿಲ್ಲ ಎಂದು ಭಯಪಡುತ್ತಿರುವ ಮಗುವಿನಂತೆ. ಆದರೆ ಪ್ರಕೃತಿ ಮತ್ತು ಮನುಷ್ಯ ಸಹಾಯ (human help) , ಮನುಷ್ಯರನ್ನು ಅಸಹಾಯಕರಾಗಲು ಬಿಡುವುದಿಲ್ಲ. ಯಾರು having ನ ಊರುಗೋಲಿನ ಸಹಾಯವಿಲ್ಲದೇ ಹೋದರೆ ತಾವು ಕುಸಿದು ಬೀಳುತ್ತೇವೆ ಎಂದು ನಂಬುತ್ತಾರೋ ಅವರಿಗೆ ಮನುಷ್ಯ ಸಹಾಯದ ಅವಶ್ಯಕತೆಯಿದೆ.

1 Comment

Leave a Reply