ಕೊಡುವ, ಹಂಚಿಕೊಳ್ಳುವ ಮತ್ತು ತ್ಯಾಗ ಮಾಡುವ ಇಚ್ಛಾಶಕ್ತಿ :To have or to be #45

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/30/fromm-41/

ಸಮಕಾಲೀನ ಸಮಾಜದ ಬಹುದೊಡ್ಡ ಊಹೆ ಏನೆಂದರೆ, ಅಸ್ತಿತ್ವದ having ವಿಧಾನ ಮನುಷ್ಯ ಸ್ವಭಾವದಲ್ಲಿ ಬೇರೂರಿದೆ ಎನ್ನುವುದು ಮತ್ತು ಹಾಗಾಗಿ ಇದನ್ನ ಬದಲಾಯಿಸುವುದು ಸಾಧ್ಯವೇ ಇಲ್ಲ ಎನ್ನುವುದು. ಜನ ಮೂಲತಃ ಸೋಮಾರಿಗಳು, ನಿಷ್ಕ್ರಿಯ ಸ್ವಭಾವದವರು ಮತ್ತು ಅವರಿಗೆ ಭೌತಿಕ ಪ್ರಲೋಭನೆಗಳನ್ನು ಒಡ್ಡುವ ತನಕ, ಅಥವಾ ಹಸಿವೆ ಅವರನ್ನು ಕಾಡುವತನಕ, ಅಥವಾ ಶಿಕ್ಷೆಯ ಭೀತಿ ಅವರನ್ನು ಹಿಂಬಾಲಿಸುವತನಕ ಅವರು ಯಾವ ಕೆಲಸ ಮಾಡ ಬಯಸುವುದಿಲ್ಲ ಅಥವಾ ಅವರು ಬೇರೆ ಏನನ್ನೂ ಮಾಡುವುದಿಲ್ಲ ಎನ್ನುವ ಸಿದ್ಧಾಂತಗಳು ಅಭಿವ್ಯಕ್ತಿಸುವ ಐಡಿಯಾಗಳು ಸೂಚಿಸುವುದು ಕೂಡ ಇದನ್ನೇ. ಇಂಥ ಸಿದ್ಧಾಂತಗಳನ್ನು (dogma) ಬಹುತೇಕ ಯಾರೂ ಸಂಶಯಿಸಲು ಹೋಗುವುದಿಲ್ಲ ಮತ್ತು ಇದು ನಮ್ಮ ಶಿಕ್ಷಣ ಮತ್ತು ಕಾರ್ಯ ವಿಧಾನಗಳನ್ನು ನಿರ್ಧರಿಸುತ್ತದೆ. ಆದರೆ ಇದು, ನಮ್ಮ ಸಾಮಾಜಿಕ ವ್ಯವಸ್ಥೆಗಳು ಮನುಷ್ಯ ಸ್ವಭಾವದ ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ಧರಿತವಾಗಿರುತ್ತವೆ ಎನ್ನುವ ಮೌಲ್ಯವನ್ನು ಪ್ರೂವ್ ಮಾಡಲು ಬಯಸುವ ಅಭಿವ್ಯಕ್ತಿಗಿಂತ ಕೊಂಚ ಹೆಚ್ಚಿನದು. ಇಂದಿನ ಮತ್ತು ಹಿಂದಿನ ಎಷ್ಟೋ ಬೇರೆ ಬೇರೆ ಸಮಾಜಗಳ ಸದಸ್ಯರುಗಳಿಗೆ, ಮನುಷ್ಯರ ಜನ್ಮಜಾತ ಸ್ವಾರ್ಥ ಮತ್ತು ಸೋಮಾರಿತನದ ಕುರಿತಾದ ಪರಿಕಲ್ಪನೆ, ಇಂದು ನಮಗೆ ಎಷ್ಟು ಸವಕಲು ಅನಿಸುತ್ತದೆಯೋ ಅದು ಅವರಿಗೆ ಅಷ್ಟೇ ಅದ್ಭುತ ಅನಿಸುತ್ತದೆ.

ವಾಸ್ತವ ಏನೆಂದರೆ ಅಸ್ತಿತ್ವದ having ಮತ್ತು being ಎರಡೂ ಜೀವನ ವಿಧಾನಗಳು ಮನುಷ್ಯ ಸ್ವಭಾವದ ಸಂಭವನೀಯತೆಗಳು. ನಮ್ಮ ಬದುಕುಳಿಯುವ ಜೈವಿಕ ಒತ್ತಡವನ್ನ (biological urge for survival) having ವಿಧಾನ ಪೋಷಿಸುತ್ತದೆ ಎಂದು ಅನಿಸುತ್ತದೆಯಾದರೂ, ಸ್ವಾರ್ಥ ಮತ್ತು ಸೋಮಾರಿತನ ಮಾತ್ರ ಮನುಷ್ಯರಲ್ಲಿನ ಅಂತರ್ಗತ ಬಯಕೆಗಳಲ್ಲ.

ನಾವು ಮನುಷ್ಯರು ನಮ್ಮೊಳಗೆ ಆಳದಲ್ಲಿ being ನ ಬೇರುಗಳನ್ನು ಹೊಂದಿದ್ದೇವೆ : ನಮ್ಮ ನಮ್ಮ ವಿಶೇಷತೆಗಳನ್ನು ಅಭಿವ್ಯಕ್ತಿಸಲು, ಕ್ರಿಯಾಶೀಲರಾಗಿರಲು, ಇನ್ನೊಬ್ಬರೊಡನೆ ಸಂಬಂಧ ಬೆಳೆಸಲು, ಸ್ವಾರ್ಥದ ಕೈದು ಖಾನೆಯಿಂದ ಪಾರಾಗಲು. ಈ ಹೇಳಿಕೆಯ ಸತ್ಯವನ್ನು ಸಾಬೀತು ಮಾಡಲು ಎಷ್ಟು ಸಾಕ್ಷ್ಯಗಳಿವೆಯೆಂದರೆ, ಬಹುತೇಕ ಒಂದು ಇಡೀ ಪುಸ್ತಕವನ್ನು ಇವುಗಳಿಂದ ತುಂಬಿಸಬಹುದು. D.O Hebb ಜನರಲ್ ಆಗಿ ಈ ಸಮಸ್ಯೆಯನ್ನು ಸಂಕ್ಷೇಪಿಸಿ ಸಮೀಕರಿಸಿರುವ ಪ್ರಕಾರ, ಇರುವ ಒಂದೇ ಸ್ವಭಾವಿಯ ಸಮಸ್ಯೆ (behavioural problem) ಎಂದರೆ ಕ್ರಿಯಾಶೀಲತೆಯನ್ನು (activity) ಬಿಟ್ಟು ನಾವು ಕೇವಲ ಕ್ರಿಯಾಹೀನತೆಯನ್ನ (inactivity) ಪರಿಗಣಿಸುವುದು. ಕೆಳಗಿನ ಕೆಲವು ಅಂಶಗಳು ಈ ಥೀಸಿಸ್ ನ ಸಾಕ್ಷೀಕರಿಸುವಲ್ಲಿ ಸಹಾಯ ಮಾಡುತ್ತವೆ.

1. ಪ್ರಾಣಿ ಸ್ವಭಾವದ ಕುರಿತಾದ ದತ್ತಾಂಶಗಳು (data). ಪ್ರಯೋಗಗಳು ಮತ್ತು ಕೆಲವು ನೇರ ಆಬ್ಸರ್ವೇಷನ್ ಗಳ ಪ್ರಕಾರ ಬಹಳಷ್ಟು ಜಾತಿಯ ಪ್ರಾಣಿಗಳು ಕಠಿಣ ಕಾರ್ಯಗಳನ್ನು ಬಹಳ ಸಂತೋಷದಿಂದಲೇ ಕೈಗೊಳ್ಳುತ್ತವೆ ಯಾವ ಭೌತಿಕ ಬಳುವಳಿಯ ಬಯಕೆ ಇಲ್ಲದೆಯೇ.

2. ನರರೋಗ ವಿಜ್ಞಾನದ ( Neurophysiological) ಪ್ರಯೋಗಗಳ ಪ್ರಕಾರ ಕ್ರೀಯಾಶೀಲತೆ ನರಜೀವಕೋಶಗಳಲ್ಲಿಯೇ (nerve cells) ಅಂತರ್ಗತವಾಗಿದೆ.

3. ಶೈಶವದ ನಡುವಳಿಕೆ (Infantile behaviour). ಇತ್ತೀಚಿನ ಅಧ್ಯಯನದ ಪ್ರಕಾರ ಸಂಕೀರ್ಣ ಪ್ರಚೋದನೆಗಳಿಗೆ ಕ್ರಿಯಾತ್ಮಕವಾಗಿ ಪ್ರತಿಕ್ರಯಿಸುವ ಪುಟ್ಟ ಶಿಶುಗಳ ಸಾಮರ್ಥ್ಯ ಮತ್ತು ಅವಶ್ಯಕತೆಯ ಕುರಿತು ಕಂಡುಕೊಂಡಿರುವ ಅಂಶಗಳು ಫ್ರಾಯ್ಡ್ ನ ಊಹೆಗಳಿಗೆ (assumptions) ವ್ಯತಿರಿಕ್ತವಾಗಿವೆ. ಫ್ರಾಯ್ಡ್ ನ ಪ್ರಕಾರ ಶಿಶು ಮಗು ಹೊರಗಿನ ಪ್ರಚೋದನೆಯನ್ನು ಬೆದರಿಕೆ ಎಂದು ಅನುಭವಿಸಿ, ಅದನ್ನು ಬಗೆಹರಿಸಿಕೊಳ್ಳಲು ಎಲ್ಲ ಆಕ್ರಮಣಶೀಲತೆಯನ್ನ ಒಟ್ಟುಗೂಡಿಸಿಕೊಳ್ಳುತ್ತದೆ.

5. ಕಲಿಕಾ ವರ್ತನೆ ( Learning behaviour). E Mayo ನ ಕ್ಲಾಸಿಕ್ ಪ್ರಯೋಗ ತೋರಿಸಿಕೊಟ್ಟಿದ್ದೇನೆಂದರೆ, ಬೋರಿಂಗ್ ಆಗಿರುವ ಒಂದು ಕೆಲಸ ಕೂಡ ಆಸಕ್ತಿದಾಯಕವಾಗಿ ಬದಲಾಗುತ್ತದೆ ಒಂದು ವೇಳೆ, ಕೆಲಸಗಾರರಿಗೆ ತಾವು ಒಬ್ಬ ಜೀವಂತಿಕೆಯ, ಗಿಫ್ಟೆಡ್ ಮನುಷ್ಯ ನಡೆಸುತ್ತಿರುವ ಪ್ರಯೋಗದ ಭಾಗವಾಗಿದ್ದೇವೆ ಎನ್ನುವುದು ಗೊತ್ತಿದ್ದರೆ ಮತ್ತು ಈ ಪ್ರಯೋಗ ನಡೆಸುತ್ತಿರುವವನಿಗೆ ತಮ್ಮ ಆಸಕ್ತಿ ಮತ್ತು ಭಾಗವಹಿಸುವಿಕೆಯನ್ನ ಹೆಚ್ಚಿಸುವ, ಉತ್ತಮಗೊಳಿಸುವ ಸಾಮರ್ಥ್ಯ ಇದೆ ಎನ್ನುವುದರ ಬಗ್ಗೆ ತಿಳುವಳಿಕೆ ಇದ್ದರೆ. ಇದನ್ನ ಯುರೋಪ್ ಮತ್ತು ಅಮೇರಿಕದ ಹಲವಾರು ಕಾರ್ಖಾನೆಗಳಲ್ಲಿ ಸಿದ್ಧಮಾಡಿ ತೋರಿಸಲಾಗಿದೆ. ಮ್ಯಾನೇಜರ್ ಗಳ ಪ್ರಕಾರದ ಏಕತಾನತೆಯ (stereotype) ಕೆಲಸಗಾರ ಎಂದರೆ; ಕೆಲಸದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಲು ಆಸಕ್ತಿ ಇಲ್ಲದವರು, ಅವರಿಗೆ ಬೇಕಾದದ್ದು ಹೆಚ್ಚಿನ ಸಂಬಳ ಮಾತ್ರ, ಹಾಗಾಗಿ ಹೆಚ್ಚಿನ ಉತ್ಪಾದಕತೆಗಾಗಿ ಇವರಿಗೆ ಪ್ರಾಫಿಟ್ ಶೇರಿಂಗ್, ಕೆಲಸಗಾರರ ಭಾಗವಹಿಸುವಿಕೆಗಿಂತ ಹೆಚ್ಚು ಪ್ರೋತ್ಸಾಹಕರ. ತಾವು ಆಫರ್ ಮಾಡುವ ಕೆಲಸದ ವಿಧಾನಗಳ ವಿಷಯದಲ್ಲಿ ಮ್ಯಾನೇಜರ್ ಗಳ ಅಭಿಮತ ಸರಿ ಇದ್ದರೂ, ಅನುಭವದ ಪ್ರಕಾರ ಬಹಳಷ್ಟು ಮ್ಯಾನೇಜರ್ ಗಳು ಒಪ್ಪಿಕೊಂಡಿರುವ ಸಂಗತಿಯೆಂದರೆ, ಬಹುತೇಕ ಕೆಲಸಗಾರರು ತಮ್ಮ ತಮ್ಮ ಕೆಲಸಗಳಲ್ಲಿ ಕ್ರಿಯಾಶೀಲವಾಗಿದ್ದರೆ, ಜವಾಬ್ದಾರಿಯುತರಾಗಿದ್ದರೆ, ಮತ್ತು ತಿಳುವಳಿಕೆಯುಳ್ಳವರಾಗಿದ್ದರೆ, ಕೆಲಸದ ಬಗ್ಗೆ ಹಿಂದೆ ಅನಾಸಕ್ತಿ ಬೆಳೆಸಿಕೊಂಡಿದ್ದ ಕೆಲಸಗಾರರು ಕೂಡ ಅತ್ಯಂತ ಹೆಚ್ಚಿನ ಮಟ್ಟದ ಸೃಜನಶೀಲತೆಯನ್ನ, ಕ್ರಿಯಾತ್ಮಕತೆಯನ್ನ ಕಲ್ಪನಾಶೀಲತೆ ಮತ್ತು ತೃಪ್ತಿಯನ್ನ ಪ್ರದರ್ಶನ ಮಾಡುತ್ತಾರೆ.

6. ಸಾಮಾಜಿಕ ಮತ್ತು ರಾಜಕೀಯ ವಲಯದ ಬದುಕಿನಲ್ಲಿ ಈ ವಿಷಯದ ಕುರಿತಾದ ಮಾಹಿತಿ ಸಂಗ್ರಹಣೆ ಅಪಾರವಾಗಿದೆ. ಜನ ತ್ಯಾಗ ಮಾಡಲು ನಿರಾಕರಿಸುತ್ತಾರೆ ಎನ್ನುವ ನಂಬಿಕೆ ಅತ್ಯಂತ ಕುಖ್ಯಾತ ತಪ್ಪು ಮಾಹಿತಿ. ಎರಡನೇ ಮಹಾಯುದ್ಧದ ಶುರುವಾತಿನಲ್ಲಿ ಚರ್ಚಿಲ್ ಬ್ರಿಟಿಷ್ ರ ಎದುರು ರಕ್ತ, ಬೆವರು, ಮತ್ತು ಕಣ್ಣೀರಿನ ಬೇಡಿಕೆ ಇಟ್ಟಾಗ, ಅವನು ಅವರನ್ನು ಕುಗ್ಗಿಸಲಿಲ್ಲ (deter) ಬದಲಾಗಿ ಅವನು ಅವರ ಆಳದಲ್ಲಿ ಅಂತರ್ಗತವಾಗಿದ್ದ ತ್ಯಾಗ ಮನೋಭಾವವನ್ನು ಪ್ರಚೋದಿಸಿದ, ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಕೇಳಿಕೊಂಡ. ಯುದ್ಧ ನಿರತ ಆಕ್ರಮಣಕಾರರಿಂದ ಜನನಿಬಿಡ ಜಾಗೆಗಳ ಮೇಲಿನ ವಿವೇಚನಾರಹಿತ ಬಾಂಬಿಂಗ್ ಗೆ ಬ್ರಿಟಿಷ್ ರ, ಜರ್ಮನ್ ರ, ಮತ್ತು ರಷ್ಯನ್ ರ ಪ್ರತಿಕ್ರಿಯೆ ಕೂಡ ಭಿನ್ನವಾಗಿರಲಿಲ್ಲ, ಯಾರೂ ನೋವು ಸಂಕಟಗಳಿಂದ ಧೈರ್ಯಗುಂದಲಿಲ್ಲ ಬದಲಾಗಿ, ಇಂಥ ಘಟನೆಗಳು ಅವರ ಪ್ರತಿರೋಧವನ್ನು ಹೆಚ್ಚು ಗಟ್ಟಿ ಮಾಡಿದವು ಮತ್ತು ಈ ಭಯೋತ್ಪಾದಕ ಬಾಂಬಿಂಗ್, ವೈರಿ ಪಾಳ್ಯದ ಸ್ಥೈರ್ಯ ಮತ್ತು ಮನೋಬಲವನ್ನ ನಾಶಮಾಡುತ್ತದೆ ಮತ್ತು ಯುದ್ಧ ಮುಗಿದು ಹೋಗುತ್ತದೆ ಎಂದು ನಂಬಿದವರದು ತಪ್ಪು ತಿಳುವಳಿಕೆ ಎಂದು ಪ್ರೂವ್ ಮಾಡಿ ತೋರಿಸಿದವು.

1 Comment

Leave a Reply