ಜೋಕ್ ಯಾವತ್ತೂ ಲಾಜಿಕಲ್ ಅಲ್ಲ… । ಓಶೋ

ಜೋಕ್ ಯಾವತ್ತೂ ಲಾಜಿಕಲ್ ಅಲ್ಲ. ಜೋಕ್ ಲಾಜಿಕಲ್ ಆಗಿಬಿಟ್ಟರೆ ಅದು ತನ್ನ ಸೆನ್ಸ್ ಆಫ್ ಲಾಫ್ಟರ್, ಕ್ವಾಲಿಟಿ ಆಫ್ ಲಾಫ್ಟರ್ ನ ಕಳೆದುಕೊಂಡುಬಿಡುತ್ತದೆ. ಜೋಕ್ ಲಾಜಿಕಲ್ ಆಗಿದ್ದರೆ ನೀವು ಅದರ ಕೊನೆಯನ್ನ ಪ್ರೆಡಿಕ್ಟ್ ಮಾಡಬಹುದು. ನಿರೀಕ್ಷಿತವಾದ ಯಾವುದೂ ನಿಮ್ಮ ಎಕ್ಸೈಟ್ ಮೆಂಟ್ ಗೆ ಕಿಕ್ ಕೊಡುವುದಿಲ್ಲ, ನಗೆ ಉಕ್ಕಿಸುವುದಿಲ್ಲ… ~ ಓಶೋಕನ್ನಡಕ್ಕೆ: ಚಿದಂಬರ ನರೇಂದ್ರ

ಸರಿಯಾದ ಮತ್ತು ಸರಿಯಾಗಿ ಹೇಳಿದ ಜೋಕ್ ಗಳು, ರಾಜಕಾರಣ, ಫಿಲಾಸಫಿ ಮತ್ತು ಸಾಹಿತ್ಯದ ಮಹಾ ಮಹಾ ಪ್ರಶ್ನೆಗಳಿಗೆ ಹಲವಾರು ನೀರಸ ವಾದಗಳಿಗಿಂತ ಹೆಚ್ಚು ಸಹಾಯ ಮಾಡಬಲ್ಲವು – Isaac Asimov

ಒಂದು ಜೋಕ್ ಕೇಳಿದಾಗ ನೀವು ಬಿದ್ದು ಬಿದ್ದು ನಗುತ್ತೀರಿ, ಏಕೆಂದರೆ ಜೋಕ್ ನಿಮ್ಮಲ್ಲೊಂದು ಎಕ್ಸೈಟ್ ಮೆಂಟ್ ಸೃಷ್ಟಿ ಮಾಡುತ್ತದೆ. ಜೋಕ್ ನ ಮೆಕ್ಯಾನಿಸಂ ಹೇಗಿರುತ್ತದೆ ಎಂದರೆ, ಒಂದು ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದ ಕಥೆ, ಥಟ್ಟನೇ ಒಂದು ತಿರುವು ತೆಗೆದುಕೊಳ್ಳುತ್ತದೆ, ಈ ತಿರುವು ಎಷ್ಟು ಅನಿರಿಕ್ಷಿತವಾಗಿರುತ್ತದೆ, ಎಷ್ಟು ತೀವ್ರವಾಗಿರುತ್ತದೆ ಎಂದರೆ ಇದನ್ನ ಕಲ್ಪನೆ ಮಾಡಿಕೊಳ್ಳುವುದು ನಿಮಗೆ ಸಾಧ್ಯವಾಗುವುದಿಲ್ಲ. ಕಥೆ ಮುಂದುವರೆಯುತ್ತದೆ, ನಿಮ್ಮ ಎಕ್ಸೈಟ್ ಮೆಂಟ್ ಜಾಸ್ತಿ ಆಗುತ್ತ ಹೋಗುತ್ತದೆ, ನೀವು ಪಂಚ್ ಲೈನ್ ಗಾಗಿ ಕಾಯುತ್ತಿದ್ದೀರಿ. ಆಗ ಥಟ್ಟನೇ ನೀವು ಯಾವುದನ್ನ ನಿರಿಕ್ಷಿಸುತ್ತಿದ್ದೀರೋ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ, ಸಂಪೂರ್ಣ ಭಿನ್ನವಾಗಿ, ಅತ್ಯಂತ ಅಸಂಗತ, ಅತ್ಯಂತ ರಿಡಿಕ್ಯುಲಸ್ ಆದ ಸಂಗತಿಯೊಂದು ಘಟಿಸಿಬಿಡುತ್ತದೆ. ಇದನ್ನು ನೀವು ಕನಸು ಮನಸಿನಲ್ಲೂ ನಿರಿಕ್ಷೆ ಮಾಡಿರಲಿಲ್ಲ. ಇದು ನಿಮ್ಮ ಎಕ್ಸೈಟ್ ಮೆಂಟ್ ನ ಒಂದು high ಗೆ ಟಚ್ ಮಾಡಿಸುತ್ತದೆ.

ಜೋಕ್ ಯಾವತ್ತೂ ಲಾಜಿಕಲ್ ಅಲ್ಲ. ಜೋಕ್ ಲಾಜಿಕಲ್ ಆಗಿಬಿಟ್ಟರೆ ಅದು ತನ್ನ ಸೆನ್ಸ್ ಆಫ್ ಲಾಫ್ಟರ್, ಕ್ವಾಲಿಟಿ ಆಫ್ ಲಾಫ್ಟರ್ ನ ಕಳೆದುಕೊಂಡುಬಿಡುತ್ತದೆ. ಜೋಕ್ ಲಾಜಿಕಲ್ ಆಗಿದ್ದರೆ ನೀವು ಅದರ ಕೊನೆಯನ್ನ ಪ್ರೆಡಿಕ್ಟ್ ಮಾಡಬಹುದು. ನಿರೀಕ್ಷಿತವಾದ ಯಾವುದೂ ನಿಮ್ಮ ಎಕ್ಸೈಟ್ ಮೆಂಟ್ ಗೆ ಕಿಕ್ ಕೊಡುವುದಿಲ್ಲ, ನಗೆ ಉಕ್ಕಿಸುವುದಿಲ್ಲ. ಜೋಕು ಥಟ್ಟನೇ ತೆಗೆದುಕೊಳ್ಳುವ ತಿರುವು ಎಷ್ಟು ಅನಿರಿಕ್ಷಿತವಾಗಿರುತ್ತದೆ ಎಂದರೆ ಅಲ್ಲಿ ನಿಮಗೆ ಕಲ್ಪಿಸಿಕೊಳ್ಳುವುದಕ್ಕೆ ಸಮಯವೇ ಇಲ್ಲ. ಕೊನೆಯ ಪಂಚ್ ನಲ್ಲಿ ಜೋಕ್ ತೆಗೆದುಕೊಳ್ಳುವ ಲೀಪ್ ಎಷ್ಟು ಅಗಾಧವಾಗಿರುತ್ತದೆ ಎಂದರೆ, ಈ ಮಹಾ ನೆಗೆತ ನಿಮ್ಮ ಎಕ್ಸೈಟ್ ಮೆಂಟ್ ನ ಸುಂದರವಾಗಿ ಕುಸಿಯುವಂತೆ ಮಾಡಿ ನಿಮ್ಮೊಳಗೆ ನಗೆ ಉಕ್ಕಿಸುತ್ತದೆ. ಇದು ಸೂಕ್ಷ್ಮ, ಮನೋವೈಜ್ಞಾನಿಕ ವಿಧಾನ ನಿಮ್ಮನ್ನು ಉದ್ದೀಪಿಸಲು, ನಿಮಗೆ ಕಚಗುಳಿ ಇಡಲು.

ಒಂದು ಆಫೀಸ್ ಲ್ಲಿ ಮ್ಯಾನೇಜರ್ ಮತ್ತೆ ಮತ್ತೇ ಅದೇ ಹಳೆಯ ಜೋಕ್ ಹೇಳುತ್ತಿದ್ದ. ಅವನು ಹೇಳಿದ ಜೋಕಿಗೆ ಎಲ್ಲರೂ ಬಿದ್ದು ನಗ್ತಾ ಇದ್ರು, ಆದರೆ ಒಬ್ಬ ಉದ್ಯೋಗಿ ನಸ್ರುದ್ದೀನ್ ನನ್ನು ಮಾತ್ರ ಬಿಟ್ಟು. ಮ್ಯಾನೇಜರ್ ಗೆ ಆಶ್ಚರ್ಯ ಆಗಿ ಅವನು ನಸ್ರುದ್ದೀನ್ ನ ಪ್ರಶ್ನೆ ಮಾಡಿದ.

“ ಯಾಕೆ ನಸ್ರುದ್ದೀನ್, ನೀನು ನಗ್ತಾ ಇಲ್ಲ ? ನಿನಗೆ ನಾನು ಹೇಳಿದ ಜೋಕ್ ಅರ್ಥ ಆಗ್ಲಿಲ್ವಾ ? “

“ ನನಗೆ ಬೇರೆ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. “

ನಸ್ರುದ್ದೀನ್ ಸಮಾಧಾನದಿಂದ ನಗುವ ಅವಶ್ಯಕತೆ ತನಗೆ ಇರದ ಕಾರಣ ವಿವರಿಸಿದ.

ಆಧುನಿಕ ತತ್ವಜ್ಞಾನಿ ಝಿಝೆಕ್ ಹೇಳಿದ ಜೋಕು…….

ಒಂದು ಯಹೂದಿ ಪೂಜಾ ಮಂದಿರದಲ್ಲಿ ಒಂದಿಷ್ಟು ಯಹೂದಿಗಳು ಭಗವಂತನ ಎದುರು ತಾವು ಎಷ್ಟು ಅಮುಖ್ಯರು ಎಂದು ನಿವೇದಿಸಿಕೊಳ್ಳಲು ಸೇರಿದ್ದರು.

ಮೊದಲು ಮುಂದೆ ಬಂದ ಒಬ್ಬ ರಬ್ಬೀ (ಯಹೂದಿ ಪುರೋಹಿತ) ಭಗವಂತನ ಎದುರು ಕೈಮುಗಿದುಕೊಂಡು “ ನಿನ್ನ ಅಪಾರ ಅಸ್ತಿತ್ವದ ಎದುರು ನಾನು ತೃಣಮಾತ್ರ, ನಿನ್ನ ಸೃಷ್ಟಿಯಲ್ಲಿ ನಾನೊಂದು ಪುಟ್ಟ ಬಿಂದು ಮಾತ್ರ “ ಎಂದು ನಿವೇದಿಸಿಕೊಂಡ.

ಆಮೇಲೆ ಎದ್ದು ನಿಂತ ಶ್ರೀಮಂತ ವ್ಯಾಪಾರಿ “ ಭಗವಂತ ನನ್ನ ಸಂಪತ್ತಿಗೆ ನಿನ್ನ ಎದುರು ಯಾವ ಕಿಮ್ಮತ್ತೂ ಇಲ್ಲ, ನಿನ್ನ ಸೃಷ್ಟಿಯಲ್ಲಿ ನಾನು ಅಮುಖ್ಯ “ ಎಂದು ಬಾಗಿ ನಮಸ್ಕರಿಸಿದ.

ಕೊನೆಯದಾಗಿ ಮುಂದೆ ಬಂದ ಒಬ್ಬ ಬಡ ಯಹೂದಿ ರೈತ “ ದೇವರೆ ! ನಿನ್ನ ಎದುರು ನಾನು ಒಂದು ಸಣ್ಣ ಕಣ ಮಾತ್ರ, ನಿನ್ನ ಇಡೀ ಸೃಷ್ಟಿಯಲ್ಲಿ ನನಗೆ ಯಾವ ಪ್ರಾಮುಖ್ಯತೆ ಇಲ್ಲ, ನಾನು ಅಮುಖ್ಯ” ಎಂದು ದೀನನಾಗಿ ಹೇಳಿ ಹಿಂದೆ ಸರಿದ.

ರೈತ ತನ್ನ ಮಾತು ಮುಗಿಸುತ್ತಿದ್ದಂತೆಯೇ ರಬ್ಬಿಯ ಅಂಗಿ ಜಗ್ಗಿದ ಶ್ರೀಮಂತ ವ್ಯಾಪಾರಿ , ಅವನ ಕಿವಿಯಲ್ಲಿ ಕಿರುಚಿದ,

“ ಯಾರು ಈ ಅನಾಗರೀಕ ಕೊಳಕ? ಎಂಥ ಸೊಕ್ಕು ಇವನಿಗೆ? ತಾನೂ ಅಮುಖ್ಯ ಎಂದು ಹೇಳುತ್ತಿರುವನಲ್ಲ “

Leave a Reply