ಏಕತೆ – ಹಗೆತನ (ಮುಂದುವರೆದ ಭಾಗ): To have or to be #50

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/19/fromm-46/

Having ವಿಧಾನ ಕಾರಣವಾಗಿ ಹುಟ್ಟಿಕೊಳ್ಳುವ ಅತಿಯಾಸೆ, ವ್ಯಕ್ತಿ ವ್ಯಕ್ತಿಗಳ ನಡುವಿನ ಹಗೆತನಕ್ಕೆ ಕಾರಣವಾಗುತ್ತದೆ ಮತ್ತು ಈ ಕಲಹ ಹೇಗೆ ವ್ಯಕ್ತಿಗಳಿಗೆ ಅನ್ವಯವಾಗುತ್ತದೆಯೋ ಹಾಗೆಯೇ ದೇಶಗಳಿಗೂ ಅನ್ವಯವಾಗುತ್ತದೆ. ಎಲ್ಲಿಯವರೆಗೆ ದೇಶದ ಜನರ ಪ್ರಧಾನ ಪ್ರೇರಣೆ having ವಿಧಾನ ಮತ್ತು ಅತಿಯಾಸೆಯಾಗಿದೆಯೋ ಅವರಿಗೆ ಯುದ್ಧವನ್ನು ತಡೆಯುವುದು ಸಾಧ್ಯವಿಲ್ಲ. ಅವರು ಅವಶ್ಯಕವಾಗಿ ಇನ್ನೊಂದು ದೇಶದ ಬಳಿ ಇರುವುದನ್ನ ಬಯಸುತ್ತಾರೆ, ಯುದ್ಧ, ಆರ್ಥಿಕ ಒತ್ತಡ, ಬೆದರಿಕೆಯ ಮೂಲಕ ಇವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗುತ್ತಾರೆ. ಅವರು ಈ ವಿಧಾನಗಳನ್ನ ಮೊದಲು ದುರ್ಬಲ ದೇಶಗಳ ಮೇಲೆ ಪ್ರಯೋಗ ಮಾಡುತ್ತಾರೆ ನಂತರ, ತಾವು ಆಕ್ರಮಣ ಮಾಡಬೇಕಿರುವ ದೇಶಕ್ಕಿಂತ ಶಕ್ತಿಶಾಲಿ ದೇಶಗಳ ಜೊತೆ ಮೈತ್ರಿ ಮಾಡಿಕೊಂಡು ಯುದ್ಧ ಸಾರುತ್ತಾರೆ. ಗೆಲ್ಲುವ ಒಂದು ಸಣ್ಣ ಅವಕಾಶ ಇದ್ದರೂ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುತ್ತಾರೆ, ಈ ಆಕ್ರಮಣ ತಮ್ಮ ಆರ್ಥಿಕತೆ ಸಂಕಟದಲ್ಲಿದೆ ಎನ್ನುವ ಕಾರಣಕ್ಕಲ್ಲ ಬದಲಾಗಿ, ಹೆಚ್ಚು ಹೊಂದುವ ಅತಿಯಾಸೆ ಮತ್ತು ಆಕ್ರಮಣಶೀಲತೆ ಅವರ ಸಾಮಾಜಿಕ ಸ್ವಭಾವದ ಭಾಗವಾಗಿರುವುದರಿಂದ.

ಹೌದು ದೇಶಗಳಲ್ಲಿ ಶಾಂತಿ ಕಾಲವೂ ಇರುತ್ತದೆ. ಆದರೆ ಶಾಶ್ವತ ಶಾಂತಿ ಮತ್ತು ಕ್ಷಣಿಕ ವಿದ್ಯಮಾನದಂತಿರುವ ಶಾಂತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಶಾಂತಿ ಕ್ಷಣಿಕ ವಿದ್ಯಮಾನವಾದಾಗ ಅದು, ಸಾಮರ್ಥ್ಯವನ್ನು ಮತ್ತೆ ಒಟ್ಟುಗೂಡಿಸುವುದಕ್ಕೆ, ಕೈಗಾರಿಕೆಗಳನ್ನ, ಸೈನ್ಯವನ್ನ ಮತ್ತೆ ಕಟ್ಟಿಕೊಳ್ಳುವುದಕ್ಕೆ ಬಳಸುವ ಸಮಯವಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಶಾಶ್ವತ ಶಾಂತಿ ಮತ್ತು ಶಾಂತಿ ಕಾಲ ಯಾವುದು ಮೂಲಭೂತವಾಗಿ ಕೇವಲ ಕದನ ವಿರಾಮವಾಗಿದೆಯೋ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಹತ್ತೊಂಭತ್ತು ಮತ್ತು ಇಪ್ಪತ್ತನೇ ಶತಮಾನಗಳಲ್ಲಿ ಕದನ ವಿರಾಮದ ಅವಧಿಗಳಿದ್ದಾಗ್ಯೂ ಅವು, ಇತಿಹಾಸದ ಸ್ಟೇಜ್ ಮೇಲೆ ಪ್ರಮುಖ ಭಾಗೀದಾರರ ನಡುವೆ ಮುಂದೆ ನಡೆಯಬಹುದಾದ ದೀರ್ಘಕಾಲದ ಯುದ್ಧಗಳಿಗೆ ಪೀಠಿಕೆಯಂತಿದ್ದವು. ಎರಡು ದೇಶಗಳ ನಡುವೆ ಶಾಶ್ವತ ಶಾಂತಿಯಂಥ ಸೌಹಾರ್ದಮಯ ಸ್ಥಿತಿ ಸಾಧ್ಯವಾಗುವುದು ಎರಡೂ ದೇಶಗಳಲ್ಲಿ having structure ನ being structure ರೀಪ್ಲೇಸ್ ಮಾಡಿದಾಗ ಮಾತ್ರ. ಸ್ವಾಧೀನತೆಯ ಮತ್ತು ಲಾಭದ ತುಡಿತವನ್ನು ಪ್ರೋತ್ಸಾಹಿಸುತ್ತಲೇ ಶಾಂತಿ ಸ್ಥಾಪಿಸ ಬಯಸುವ ಐಡಿಯಾ ಒಂದು ಭ್ರಮೆ ಮತ್ತು ಅಪಾಯಕಾರಿಯಾದದ್ದು, ಏಕೆಂದರೆ ಇದು ಜನರನ್ನು ತಾವು ಒಂದು ಸ್ಪಷ್ಟ ಪರ್ಯಾಯದ ಎದುರು : ತಮ್ಮ ಸ್ವಭಾವದಲ್ಲಿನ ಕ್ರಾಂತಿಕಾರಿ ಬದಲಾವಣೆ ಅಥವಾ ಯುದ್ಧದ ಶಾಶ್ವತತೆ – ಗೆ ಮುಖಾಮುಖಿಯಾಗಿದ್ದೇವೆ ಎನ್ನುವುದನ್ನ ಗುರುತಿಸದಂತೆ ಮಾಡುತ್ತದೆ. ಸ್ವಭಾವದಲ್ಲಿನ ಕ್ರಾಂತಿಕಾರಿ ಬದಲಾವಣೆ ಎನ್ನುವುದು ಹಳೆಯ ಪರ್ಯಾಯವಾದರೂ, ನಾಯಕರುಗಳು ಯುದ್ಧವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಜನ ಅವರನ್ನು ಕಣ್ಣು ಮುಚ್ಚಿ ಹಿಂಬಾಲಿಸಿದ್ದಾರೆ. ಇವತ್ತು ಮತ್ತು ನಾಳೆ, ಹೊಸ ಹತ್ಯಾರಗಳು ಸಾಧ್ಯಮಾಡಿರುವ ಅಪಾರ ವಿನಾಶವನ್ನು ಗಮನಿಸಿದರೆ, ಯುದ್ಧ ಈಗ ಪರ್ಯಾಯವೇ ಅಲ್ಲ, ಅದೇನಿದ್ದರೂ ಪರಸ್ಪರರ ಆತ್ನಹತ್ಯೆ.

ಯಾವುದು ಅಂತರಾಷ್ಟ್ರೀಯ ಯುದ್ಧಗಳ ಬಗ್ಗೆ ನಿಜವೋ ಅದು ವರ್ಗ ಸಂಘರ್ಷದ ಬಗ್ಗೆಯೂ ನಿಜ. ವರ್ಗಗಳ ನಡುವಿನ ಸಂಘರ್ಷ, ಶೋಷಕರು ಮತ್ತು ಶೋಷಿತರ ನಡುವಿನ ಯುದ್ಧ, ಅತಿಯಾಸೆಯ ತತ್ವದ ಮೇಲೆ ಆಧರಿತ ಸಮಾಜಗಳಲ್ಲಿ ಮೊದಲಿನಿಂದಲೂ ಕಂಡುಬರುವಂಥದು. ಎಲ್ಲಿ ಶೋಷಣೆಯ ಅವಶ್ಯಕತೆ ಅಥವಾ ಶೋಷಣೆಯ ಸಾಧ್ಯತೆ ಅಥವಾ ಅತಿಯಾಸೆಯಿಂದ ತುಂಬಿದ ಸಾಮಾಜಿಕ ಸ್ವಭಾವ ಇಲ್ಲವೋ ಅಲ್ಲಿ ವರ್ಗ ಸಂಘರ್ಷಕ್ಕೆ ಅವಕಾಶವೇ ಇಲ್ಲ. ಆದರೆ ಯಾವುದೇ ಸಮಾಜದಲ್ಲಿ ಅದು ಶ್ರೀಮಂತ ಸಮಾಜವಾಗಿದ್ದರೂ ಅಲ್ಲಿ having ಅಂಶ ಪ್ರಧಾನವಾಗಿದ್ದರೆ ಅಲ್ಲಿ ವರ್ಗಗಳು ಇರುವುದು ಸ್ವಾಭಾವಿಕ. ಹಿಂದೆ ಗಮನಿಸಿದಂತೆ, ಅನಿಯಮಿತ ಬಯಕೆಗಳ ಪರಿಸ್ಥಿತಿಯಲ್ಲಿ , ಉತ್ಪಾದನೆ ಎಷ್ಟೇ ಮಹಾನ್ ಆಗಿದ್ದರೂ ಅದು ಜನರ, ತಮ್ಮ ನೆರೆಯವರಿಗಿಂತ ಹೆಚ್ಚು ಹೊಂದುವ ಬಯಕೆಯನ್ನು ಪೂರ್ತಿಯಾಗಿ ಪೂರೈಸುವುದು ಸಾಧ್ಯವಾಗಲಾರದು. ಅವಶ್ಯಕವಾಗಿ ಯಾರು ಸಾಮರ್ಥ್ಯಶಾಲಿಗಳೋ, ಹೆಚ್ಚು ಬುದ್ಧಿವಂತರೋ, ಅಥವಾ ಯಾರಿಗೆ ಪರಿಸ್ಥಿತಿ ಅನುಕೂಲಕರವಾಗಿದೆಯೋ ಅವರು ತಮಗಾಗಿ ಅನುಕೂಲಕರ ಸ್ಥಾನವನ್ನು ನಿರ್ಮಿಸಿಕೊಳ್ಳುತ್ತಾರೆ ಮತ್ತು ತಮಗಿಂತ ಕಡಿಮೆ ಸಾಮರ್ಥ್ಯಶಾಲಿಗಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ, ಒತ್ತಡ ಮತ್ತು ಹಿಂಸೆಯಿಂದ ಅಥವಾ ಮಾತಿನಿಂದ ಮರಳುಮಾಡಿ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಶೋಷಿತ ವರ್ಗದ ಜನ ತಮ್ಮನ್ನು ಆಳುವವರ ವಿರುದ್ಧ ಬಂಡೆದ್ದು ಅವರನ್ನು ಸ್ಥಾನಪಲ್ಲಟ ಮಾಡುತ್ತಾರೆ ಮತ್ತು ಇದು ಹೀಗೇ ಮುಂದುವರೆಯುತ್ತದೆ; ವರ್ಗಸಂಘರ್ಷ ಕಡಿಮೆ ಹಿಂಸಾತ್ಮಕ ಆಗುವ ಸಾಧ್ಯತೆ ಇದ್ದರೂ, ಮನುಷ್ಯರ ಹೃದಯವನ್ನು ಅತಿಯಾಸೆ ಪ್ರಧಾನವಾಗಿ ಆಕ್ರಮಿಸಿಕೊಂಡಿರುವ ತನಕ, ಅದನ್ನ ಪೂರ್ತಿಯಾಗಿ ಕಿತ್ತೊಗೆಯುವುದು ಸಾಧ್ಯವಿಲ್ಲ. ಅತಿಯಾಸೆಯ ಪ್ರಜ್ಞೆಯನ್ನು ತುಂಬಿಕೊಂಡಿರುವ ಈ ಸಮಾಜವಾದಿ ಜಗತ್ತಿನಲ್ಲಿ ಸೋ ಕಾಲ್ಡ್ ವರ್ಗರಹಿತ ಸಮಾಜದ ಕಲ್ಪನೆ, ದುರಾಸೆಯ ದೇಶಗಳಲ್ಲಿ ಶಾಶ್ವತ ಶಾಂತಿಯ ಕಲ್ಪನೆಯಷ್ಟೇ ಭ್ರಮಾತ್ಮಕವಾದದ್ದು.

Being ವಿಧಾನದಲ್ಲಿ, ಖಾಸಗೀ ಆದ having ಗೇ (ಖಾಸಗೀ ಆಸ್ತಿ) ಬಹಳ ಕಡಿಮೆ ಮಹತ್ವ ಏಕೆಂದರೆ, ನಾನು ಒಂದು ಸಂಗತಿಯಿಂದ ಖುಶಿ ಅನುಭವಿಸಲು, ಅದನ್ನು ಬಳಸಲು ಅದರ ಮಾಲಿಕತ್ವವನ್ನು ಹೊಂದಬೇಕಿಲ್ಲ. Being ವಿಧಾನದಲ್ಲಿ ಒಂದಕ್ಕಿಂತ ಹೆಚ್ಚು ಜನ, ವಾಸ್ತವದಲ್ಲಿ ಲಕ್ಷಾಂತರ ಜನ ಒಂದು ಸಂಗತಿಯಿಂದ ತಾವು ಅನುಭವಿಸಿದ ಸಂತೋಷವನ್ನ ಹಂಚಿಕೊಳ್ಳಬಹುದು, ಏಕೆಂದರೆ ಅದರಿಂದ ಸುಖ ಅನುಭವಿಸಲು ಅದನ್ನ ಹೊಂದುವ ಅವಶ್ಯಕತೆ, ಬಯಕೆ ಯಾರಿಗೂ ಇಲ್ಲ. ಇದು ಪರಸ್ಪರರಲ್ಲಿ ಕಲಹವನ್ನಷ್ಟೇ ಅವೊಯಿಡ್ ಮಾಡುವುದಿಲ್ಲ, ಇದು ಮಾನವ ಸಂತೋಷದ ಆಳ ಬಂಧವೊಂದನ್ನು ನಿರ್ಮಿಸುತ್ತದೆ : Shared enjoyment. ಒಬ್ಬ ವ್ಯಕ್ತಿಯ ಕುರಿತಾದ ಪ್ರೀತಿ, ಮೆಚ್ಚುಗೆ, ಒಂದು ಐಡಿಯಾ, ಒಂದು ಸಂಗೀತದ ತುಣುಕು, ಒಂದು ಪೇಂಟಿಂಗ್, ಒಂದು ಸಿಂಬಲ್ , ಒಂದು ಆಚರಣೆ , ಒಂದು ದುಗುಡವನ್ನ ಹಂಚಿಕೊಂಡಾಗ ಆಗುವ ಆನಂದಕ್ಕಿಂತ ಹೆಚ್ಚು ಗಾಢವಾಗಿ ಜನರನ್ನು ಒಂದು ಮಾಡುವುದು ( ಅವರ ವ್ಯಕ್ತಿತ್ವವನ್ನು ಯಾವುದೇ ರೀತಿಯಿಂದ ನಿರ್ಬಂಧಿಸದಂತೆ) ಸಾಧ್ಯವಿಲ್ಲ. ಹಂಚಿಕೊಳ್ಳುವ ಅನುಭವ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವನ್ನು ಜೀವಂತಿಕೆಯಿಂದ ಕಾಯ್ದಿಡುತ್ತದೆ, ಎಲ್ಲ ಧಾರ್ಮಿಕ, ರಾಜಕೀಯ ಮತ್ತು ಫಿಲಾಸೊಫಿಕಲ್ ಚಳುವಳಿಗಳ ಆಧಾರ ಇದು. ಎಲ್ಲಿಯವರೆಗೆ ಪ್ರೀತಿ, ಮೆಚ್ಚುಗೆ ನಿಜವೋ, ಪ್ರಾಮಾಣಿಕವೋ ಅಲ್ಲಿಯವರೆಗೆ ಮಾತ್ರ ಇದು ಸತ್ಯ. ಯಾವಾಗ ಧಾರ್ಮಿಕ ಮತ್ತು ರಾಜಕೀಯ ಚಳುವಳಿಗಳು ಮರಗಟ್ಟುತ್ತವೆಯೋ (ossify), ಯಾವಾಗ ಅಧಿಕಾರಶಾಹಿ ಮಾತಿನಿಂದ ಮರಳು ಮಾಡುತ್ತ ಅಥವಾ ಬೆದರಿಕೆ ಹಾಕುತ್ತ ಜನರನ್ನು ಮ್ಯಾನೇಜ್ ಮಾಡುತ್ತದೆಯೋ ಆಗ ಹಂಚಿಕೊಳ್ಳುವುದು ನಿಂತು ಹೋಗುತ್ತದೆ.

Shared enjoyment ಕುರಿತಾದ, ಪ್ರಕೃತಿ ನಿರ್ಮಿಸಿರುವ ಮೂಲ ಮಾದರಿ (prototype) ಅಥವಾ ಬಹುಶಃ ಸಂಕೇತವನ್ನ ಲೈಂಗಿಕ ಕ್ರಿಯೆಯಲ್ಲಿ ಕಾಣಬಹುದೆಂದು ಅನಿಸಿದರೂ, ಪ್ರಾಯೋಗಿಕವಾಗಿ ಲೈಂಗಿಕ ಕ್ರಿಯೆ ಒಂದು ಹಂಚಿಕೊಂಡ ಆನಂದ ಅಲ್ಲ ; ಈ ಕ್ರಿಯೆಯಲ್ಲಿ ಪಾರ್ಟನರ್ ಗಳು ಎಷ್ಟು ಸ್ವಮೋಹಿಗಳು (narcissistic), ಎಷ್ಟು ಸ್ವ ಮಗ್ನ (self involved ) ಮತ್ತು ಎಷ್ಟು ತೀವ್ರ ಬಯಕೆಯವರು (possessive) ಆಗಿರುತ್ತಾರೆಂದರೆ, ಈ ಆನಂದವನ್ನ ಏಕಕಾಲದಲ್ಲಿ ಅನುಭವಿಸಿದ ಆನಂದ ಎನ್ನಬಹುದೇ ಹೊರತು ಹಂಚಿಕೊಂಡ ಸುಖ ಎನ್ನಲಾಗದು.

ಇನ್ನೊಂದು ರೀತಿಯಲ್ಲಿ ಪ್ರಕೃತಿ, having ಮತ್ತು being ಗಳ ನಡುವಿನ ವ್ಯತ್ಯಾಸಕ್ಕೆ ಕಡಿಮೆ ಅಸ್ಪಷ್ಟತೆಯಿಂದ ಕೂಡಿದ (less ambiguous) ಸಂಕೇತವನ್ನು ಆಫರ್ ಮಾಡುತ್ತದೆ. ಗಂಡಸಿನ ಶಿಶ್ನದ ನಿಮಿರುವಿಕೆ ಕ್ರಿಯಾತ್ಮಕ (functional) ರೀತಿಯದು. ಗಂಡಸಿನ ಶಿಶ್ನದ ನಿಮಿರುವಿಕೆ ಅವನ ಆಸ್ತಿ ಅಥವಾ ಅವನ ಶಾಶ್ವತ ಕ್ವಾಲಿಟಿಯ ರೀತಿ ಅಲ್ಲ, ಅದು ಅವನ ಹತೋಟಿಯಲ್ಲಿಲ್ಲ (although how many men wish to have one is anybody’s guess), ಎಲ್ಲಿಯವರೆಗೆ ಗಂಡು ಲೈಂಗಿಕ ಎಕ್ಸೈಟ್ ಮೆಂಟ್ ನ ಸ್ಥಿತಿಯಲ್ಲಿರುತ್ತಾನೋ, ಎಲ್ಲಿಯವರೆಗೆ ಅವನ ಎಕ್ಸೈಟ್ ಮೆಂಟ್ ಗೆ ಕಾರಣರಾದವರನ್ನ ಅವನು ತೀವ್ರವಾಗಿ ಬಯಸುತ್ತಿರುತ್ತಾನೋ ಅಲ್ಲಿಯವರೆಗೆ ಮಾತ್ರ ಅವನ ಶಿಶ್ನ ನಿಮಿರಿದ (erected) ಸ್ಥಿತಿಯಲ್ಲಿರುತ್ತದೆ. ಯಾವುದೋ ಒಂದು ಕಾರಣಕ್ಕೆ ಅವನ ಎಕ್ಸೈಟ್ ಮೆಂಟ್ ಲ್ಲಿ ವ್ಯತ್ಯಯವಾದರೆ, ಅವನ ಶಿಶ್ನದ ನಿಮಿರುವಿಕೆ ನಿಂತುಹೋಗುತ್ತದೆ. ಪ್ರ್ಯಾಕ್ಟೀಕಲೀ ಬೇರೆ ಎಲ್ಲ ರೀತಿಯ ನಡುವಳಿಕೆಗಳಂತೆ ಶಿಶ್ನದ ನಿಮಿರುವಿಕೆಯನ್ನ ಫೇಕ್ ಮಾಡುವುದು ಸಾಧ್ಯವಿಲ್ಲ. ಅಪಾರ ಪ್ರತಿಭೆಯ ಆದರೆ ಹೆಚ್ಚು ಪ್ರಚಾರದಲ್ಲಿರದ ಮನೋವಿಶ್ಲೇಷಕ George Groddek ಕಮೆಂಟ್ ಮಾಡುವ ಹಾಗೆ, ಗಂಡು, ಗಂಡಸಾಗಿರುವುದು ಕೇವಲ ಕೆಲವು ನಿಮಿಷ ಮಾತ್ರ (a man after all, is a man for only a few minutes); ಹೆಚ್ಚಿನ ವೇಳೆ ಅವನು ಒಬ್ಬ ಪುಟ್ಟ ಹುಡುಗ. ಗಂಡು ತನ್ನ ಇಡೀ ಅಸ್ತಿತ್ವದಲ್ಲಿ ಪುಟ್ಟ ಹುಡುಗನ ಹಾಗಿರುತ್ತಾನೆ ಎಂದು Groddek ಹೇಳುತ್ತಿಲ್ಲ, ಶಿಶ್ನದ ನಿಮಿರುವಿಕೆ ತನ್ನ ಗಂಡಸುತನದ ಕಾರಣ ಎಂದು ಗಂಡು ಬಲವಾಗಿ ತಿಳಿದುಕೊಂಡಿರುವುದರಿಂದ Groddek ಈ ರೀತಿ ಹೇಳುತ್ತಿದ್ದಾನೆ (See the paper I wrote in 1943 on “Sex & Character “).

1 Comment

Leave a Reply