ಈ ಜಗತ್ತಿನಲ್ಲಿ ದೈವೀ ಸಾಮ್ರಾಜ್ಯವನ್ನು ಕಂಡುಕೊಳ್ಳುವುದು ಬಹಳ ಕಷ್ಟಕರವಾದ ವಿಷಯ ಮತ್ತು ಅಷ್ಟೇ ಸುಲಭದ ಸಂಗತಿ ಕೂಡ. ಸುಲಭ ಏಕೆಂದರೆ ಅದು ನಿಮ್ಮ ಸುತ್ತಲೂ ಇದೆ, ನಿಮ್ಮೊಳಗೂ ಇದೆ, ಅದನ್ನ ಗುರುತಿಸುವುದು ಮತ್ತು ಸ್ವಾಧೀನಮಾಡಿಕೊಳ್ಳಬೇಕಾಗಿರುವುದಷ್ಟೇ ನಿಮ್ಮ ಮುಂದಿರುವ ಸವಾಲು. ಕಷ್ಟ ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳಲು ನೀವು ಪ್ರಯತ್ನಿಸಿದಂತೆಲ್ಲ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತ ಹೋಗುತ್ತೀರಿ… । ಚಿದಂಬರ ನರೇಂದ್ರ.
“ಖುಶಿಯಾಗಿರುವುದು” ಎಂದರೇನು ಎನ್ನುವುದನ್ನ ಅರ್ಥಮಾಡಿಕೊಳ್ಳಬಯಸುವಿರಾದರೆ, ಮಕ್ಕಳನ್ನು ಗಮನಿಸಿ, ಹಕ್ಕಿಯನ್ನು ನೋಡಿ, ಹೂವುಗಳನ್ನು ನೋಡಿ. ಇವು ದೈವಿ ಸಾಮ್ರಾಜ್ಯದ ಪರಿ ಪೂರ್ಣ ಚಿತ್ರಗಳು.
ಏಕೆಂದರೆ ಅವು ಬದುಕುತ್ತಿರುವುದು ಕ್ಷಣದಿಂದ ಕ್ಷಣದವರೆಗಿನ ಅವಧಿಯಲ್ಲಿ, ಸನಾತನ ಸಧ್ಯದಲ್ಲಿ, ಯಾವ ಇತಿಹಾಸದ ನೆನಪೂ ಇಲ್ಲದೇ ಯಾವ ಭವಿಷ್ಯದ ಕಲ್ಪನೆಯೂ ಇಲ್ಲದಂತೆ. ಆದ್ದರಿಂದಲೇ ಮನುಷ್ಯನನ್ನು ಕಾಡುವ ಅಪರಾಧಿ ಭಾವ ಮತ್ತು ಆತಂಕಗಳಿಂದ ಇವು ಹೊರತು, ಹಾಗಾಗಿಯೇ ಇಲ್ಲಿ ಅಷ್ಟೊಂದು ಖುಶಿ. ಇವುಗಳಿಗೆ ವ್ಯಕ್ತಿಗಳಲ್ಲಿ, ಸಂಗತಿಗಳಲ್ಲಿ ಆಸ್ಥೆ ಇಲ್ಲ, ಇವುಗಳ ಆಸಕ್ತಿ ಬದುಕಿನಲ್ಲಿ ಮಾತ್ರ.
ಎಲ್ಲಿಯವರೆಗೆ ನಿಮ್ಮ ಖುಶಿಯ ಕಾರಣ ಮತ್ತು ಮುಂದುವರಿಕೆ ಬೇರೊಂದು ಸಂಗತಿಯಾಗಿದೆಯೋ ಅಥವಾ ಅದರ ಕಾರಣ ನಿಮ್ಮ ಹೊರತಾದ ಇನ್ನೊಬ್ಬ ವ್ಯಕ್ತಿಯಾಗಿದ್ದಾರೋ ಅಲ್ಲಿಯವರೆಗೆ ನೀವು ಮೃತ ಸಾಮ್ರಾಜ್ಯದಲ್ಲಿ ಬದುಕುತ್ತಿದ್ದೀರಿ.
ಯಾವಾಗ ನೀವು ವಿನಾಕಾರಣ ಖುಶಿಯನ್ನ ಅನುಭವಿಸುತ್ತೀರೋ, ಯಾವಾಗ ನೀವು ಎಲ್ಲದರಲ್ಲಿ ಖುಶಿ ಕಾಣುತ್ತೀರೋ, ಯಾವ ಇಲ್ಲದರಲ್ಲಿಯೂ (nothing) ಖುಶಿಯನ್ನು ಅನುಭವಿಸುತ್ತೀರೋ ಆಗ ನೀವು ಅಪರಿಮಿತ ಆನಂದದ ನೆಲದಲ್ಲಿ ಹೆಜ್ದೆಯೂರಿದ್ದೀರಿ.
ಈ ಜಗತ್ತಿನಲ್ಲಿ ದೈವೀ ಸಾಮ್ರಾಜ್ಯವನ್ನು ಕಂಡುಕೊಳ್ಳುವುದು ಬಹಳ ಕಷ್ಟಕರವಾದ ವಿಷಯ ಮತ್ತು ಅಷ್ಟೇ ಸುಲಭದ ಸಂಗತಿ ಕೂಡ. ಸುಲಭ ಏಕೆಂದರೆ ಅದು ನಿಮ್ಮ ಸುತ್ತಲೂ ಇದೆ, ನಿಮ್ಮೊಳಗೂ ಇದೆ, ಅದನ್ನ ಗುರುತಿಸುವುದು ಮತ್ತು ಸ್ವಾಧೀನಮಾಡಿಕೊಳ್ಳಬೇಕಾಗಿರುವುದಷ್ಟೇ ನಿಮ್ಮ ಮುಂದಿರುವ ಸವಾಲು. ಕಷ್ಟ ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳಲು ನೀವು ಪ್ರಯತ್ನಿಸಿದಂತೆಲ್ಲ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತ ಹೋಗುತ್ತೀರಿ, you may start possessing nothing else.
ಹಾಗೆಂದರೆ ಆ ವ್ಯಕ್ತಿಯ ಅಥವಾ ಸಂಗತಿಯ ಕುರಿತಾದ ಎಲ್ಲ ಒಳ ತಿಳುವಳಿಕೆಯಿಂದ ಹೊರತಾಗುವುದು, ನಿಮ್ಮನ್ನು ಥ್ರಿಲ್ ಗೆ ಗುರಿಮಾಡುವ, ಎಕ್ಸೈಟ್ ಮಾಡುವ, ನಿನಗೆ ಸುರಕ್ಷತಾ ಭಾವ ಕೊಡುವ, ನಿಮ್ಮ ಎಲ್ಲ ಯೋಗಕ್ಷೇಮಕ್ಕೆ (well being) ಕಾರಣವಾಗುವ ಅವರ ಎಲ್ಲ ಅಧಿಕಾರ, ಸಾಮರ್ಥ್ಯಗಳಿಂದ ಹೊರಗೆ ಬರುವುದು.
ಈ ಸಲುವಾಗಿ ನೀವು ಮೊದಲು ಧೃಡವಾದ ಸ್ಪಷ್ಟತೆಯಲ್ಲಿ ಈ ಸರಳ ಮತ್ತು ಅಲುಗಾಡಿಸುವ ಸತ್ಯವನ್ನು ಗಮನಿಸಬೇಕು : ನಿಮ್ಮ ಸಂಸ್ಕೃತಿ ಮತ್ತು ನಿಮ್ಮ ಧರ್ಮ ನಿಮಗೆ ಕಲಿಸಿರುವ ಸಂಗತಿಗೆ ವ್ಯತಿರಿಕ್ತವಾಗಿ, nothing, but absolutely nothing can make you happy. ಈ ವಿಷಯವನ್ನು ಗೊತ್ತು ಮಾಡಿಕೊಂಡ ಕ್ಷಣದಲ್ಲಿಯೇ ನೀವು ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ, ಒಬ್ಬ ಗೆಳೆಯನಿಂದ ಇನ್ನೊಬ್ಬ ಗೆಳೆಯನಿಗೆ, ಒಂದು ಅಧ್ಯಾತ್ಮಿಕ ತಂತ್ರದಿಂದ ಇನ್ನೊಂದು ಅಧ್ಯಾತ್ಮಿಕ ತಂತ್ರಕ್ಕೆ, ಒಬ್ಬ ಗುರುವಿನಿಂದ ಇನ್ನೊಬ್ಬ ಗುರುವಿಗೆ ಹಾರುವುದನ್ನ ನಿಲ್ಲಿಸುವಿರಿ. ಈ ಯಾವ ಸಂಗತಿಗಳೂ ನಿಮಗೆ ಒಂದು ಸೆಂಕೆಂಡಿನ ಖುಶಿಯನ್ನ ಸಾಧ್ಯಮಾಡಲಾರವು. ಅವು ನಿಮಗೆ ಕ್ಷಣಿಕ ಥ್ರಿಲ್, ಕ್ಷಣಿಕ ಸುಖ ಸಾಧ್ಯ ಮಾಡುತ್ತವೆಯಾದರೂ, ಕಳೆದುಕೊಂಡರೆ ಅಪಾರ ನೋವಿಗೆ ಮತ್ತು ಇಟ್ಟುಕೊಂಡರೆ ತೀವ್ರ boredom ಗೆ ನಿಮ್ಮನ್ನು ನೂಕುತ್ತ ಬದುಕನ್ನ ಅಸಹನೀಯ ಮಾಡಿಬಿಡುತ್ತವೆ ~ Anthony de Mello – 20th century catholic mystic.