ಮೈಕ್ರೋ ಚೀಟ್ಂಗ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಮೈಕ್ರೋ ಚೀಟ್ಂಗ್ ಎನ್ನುವುದು ರಿಲೇಷನ್ ಶಿಪ್ ಲ್ಲಿರುವ ಯಾವುದೇ ಒಬ್ಬ ಸಂಗಾತಿಯ ಅಂಥ ವರ್ತನೆ, ಯಾವುದರ ಕಾರಣವಾಗಿ ಒಬ್ಬರು, ತನ್ನ ಪಾರ್ಟನರ್ ನ ಬದ್ಧತೆಯ ಕುರಿತು ಸಂಶಯ ಪಡುವಂತಾಗುವುದು. ಉದಾಹರಣೆಗೆ, ಅವರು ರಹಸ್ಯವಾಗಿ ಇನ್ನೊಬ್ಬರಿಗೆ ಟೆಕ್ಸ್ಟ್ ಮಾಡಿ ಡಿಲೀಟ್ ಮಾಡುವುದು, ತಮ್ಮ ರಿಲೇಷನ್ ಶಿಪ್ ಸ್ಟೇಟಸ್ ನ ಮುಚ್ಚಿಡುವುದು, ಬೇರೊಬ್ಬರ ಜೊತೆ ಫ್ಲರ್ಟ್ ಮಾಡುವುದು ಮತ್ತು ಲೈಂಗಿಕ ಎನರ್ಜಿಯನ್ನು ಉದ್ದೀಪನಗೊಳಿಸಿಕೊಳ್ಳುವ ಸಂಗತಿಗಳಲ್ಲಿ ಭಾಗಿಯಾಗುವುದು ಇತ್ಯಾದಿಯಾಗಿ. ಥೆರಪಿಸ್ಟ್ ಗಳು ಜನರ ಇಂಥ ವರ್ತನೆಗಳ ಬಗ್ಗೆ ಜಡ್ಜ್ ಮಾಡಲು ಹೋಗುವುದಿಲ್ಲ ಏಕೆಂದರೆ ಈ ವರ್ತನೆಗಳ ಹಿಂದೆ ಹಲವಾರು ಸಂಕೀರ್ಣ ಕಾರಣಗಳಿರಬಹುದು.
ವಿಶೇಷವಾಗಿ ಮೈಕ್ರೋ ಚೀಟ್ಂಗ್ ಒಂದು ಗ್ರೇ ಏರಿಯಾ, ಏಕೆಂದರೆ ಇದು ಬಹಳ ಸೂಕ್ಷ್ಮ ಮತ್ತು ಇದು ಸಂಗಾತಿಗಳ ಒಳ ಒಪ್ಪಂದದ ಮೇಲೆ ಅವಲಂಬಿಸಿರುವಂಥದು. ಕಲ್ಪನೆ ಮಾಡಿಕೊಳ್ಳಿ, ಒಬ್ಬ ವ್ಯಕ್ತಿಯ ಜೊತೆ ನೀವು ಕಾರಿನ ಫ್ರಂಟ್ ಸೀಟ್ ಲ್ಲಿ ಕುಳಿತಿದ್ದೀರಿ, ಮತ್ತು ನಿಮ್ಮ ಸಂಗಾತಿ ಹಿಂದಿನ ಸೀಟ್ ಲ್ಲಿ ಕುಳಿತಿದ್ದಾರೆ. ನೀವು ನಿಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯ ಜೊತೆ ಮಾತನಾಡುತ್ತಿರುವುದೆಲ್ಲ ಹಿಂದೆ ಕುಳಿತಿರುವ ನಿಮ್ಮ ಸಂಗಾತಿಗೆ ಕೇಳಿಸುವಂತಿದ್ದರೆ, ನೀವು ನಿಮ್ಮ ಮೈಕ್ರೋ ಚೀಟ್ಂಗ್ ವರ್ತನೆಯನ್ನು ಈಗಲೂ ಮುಂದುವರೆಸುತ್ತೀರಾ? ಇದನ್ನು ಕೇವಲ ನೀವು ಮಾತ್ರ ಉತ್ತರಿಸಬೇಕು, ನಿಮ್ಮ ಪರವಾಗಿ ಬೇರೆ ಯಾರೋ ಮೂರನೇ ವ್ಯಕ್ತಿ ಉತ್ತರಿಸುವಂತಿಲ್ಲ.
ಮೈಕ್ರೋ ಚೀಟ್ಂಗ್ ಕುರಿತಾದ ಈ ಮಾಹಿತಿ ನಿಮಗೆ ಗೊತ್ತಾದ ಮೇಲೆ, ಓಹ್ ನಾನೂ ಹೀಗೆ ಮಾಡುತ್ತಿರುವೆನಲ್ಲ, ಎಂದು ನಿಮಗೆ ಅನಿಸಿ, ನಿಮ್ಮ ಬಗ್ಗೆ ಹೆಚ್ಚಿನ ಕುತೂಹಲ ಬೆಳೆಸಿಕೊಂಡು, ಯಾಕೆ ನಾನು ಹೀಗೆ? ಎಂದು ಪ್ರಶ್ನೆ ಕೇಳಿಕೊಳ್ಳುತ್ತ , ನಿಮ್ಮ ರಿಲೇಷನ್ ಶಿಪ್ ಲ್ಲಿ ಏನು ಮಿಸ್ ಆಗಿದೆ ಎನ್ನುವುದನ್ನ ಕಂಡುಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತ, ಅದು ಎಷ್ಟೇ ಅನ್ ಕಂಫರ್ಟೇಬಲ್ ಆದರೂ ನಿಮ್ಮ ಸಂಗಾತಿಯ ಜೊತೆ ಈ ಕುರಿತು ಪ್ರಾಮಾಣಿಕ ಮಾತುಕತೆ ನಿಮಗೆ ಸಾಧ್ಯವಾಗುವುದಾದರೆ, ಅದು ನಿಮ್ಮ ಸಂಬಂಧಕ್ಕೆ ಬಹಳ ಒಳ್ಳೆಯದನ್ನು ಮಾಡುತ್ತದೆ.

