ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ ಆಡಿಯೋ – ವಿಡಿಯೋ ಸರಣಿಯ ಕೊಂಡಿಗಳು ಇಲ್ಲಿವೆ.
ಕುಮಾರನ್ ಆಶಾನ್ ರಚಿಸಿದ ನಾರಾಯಣ ಗುರುಗಳ ಜೀವನಚರಿತ್ರೆಯ ಕೊನೆಯ ಅಧ್ಯಾಯವಿದು. ಇದನ್ನು ಒಂದು ಸಂಪೂರ್ಣ ಜೀವನ ಚರಿತ್ರೆ ಎಂದು ಭಾವಿಸದೆ, ಬಹುದೊಡ್ಡ ಬದುಕೊಂದರ ದಾಖಲೆಯ ಅಸ್ತಿಪಂಜರವೆಂಬಂತೆ ಕಾಣಬೇಕೆಂದು ಆಶಾನ್ ವಿನಂತಿಸಿದ್ದರು. ಗುರುಗಳ ನೇತೃತ್ವದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯ ಪಾಲುದಾರನಾಗಿದ್ದ ಆಶಾನ್ ಅವರಿಗೆ ಗುರುಗಳ ಬದುಕಿನ ಪ್ರಮುಖ ಘಟನೆಗಳ ದಿನಾಂಕ ಸಮೇತ ದಾಖಲಿಸುವುದು ಬಹಳ ಮುಖ್ಯವಾಗಿದ್ದಂತೆ ಕಾಣಿಸುತ್ತದೆ. ಈ ಜೀವನಚರಿತ್ರೆಯ ವಿವರಗಳು 1914ಕ್ಕೆ ಕೊನೆಗೊಳ್ಳುತ್ತವೆ.
ಅಧ್ಯಾಯ 6 – 7
ಅಧ್ಯಾಯ 10 – 11

