ಟಾಪ್ 5 ಆಧುನಿಕ ಮಾನಸಿಕ ಖೆಡ್ಡಾಗಳು ( Mental traps)

ಸಂಗ್ರಹ- ಅನುವಾದ : ಚಿದಂಬರ ನರೇಂದ್ರ

ಇವತ್ತಿನ ದಿನಮಾನದಲ್ಲಿ ಜನ, ಒತ್ತಡ, ಆತಂಕ ಮತ್ತು ಗೊಂದಲದಿಂದ ಕಡಿಮೆ ಮತ್ತು ಈ ಮೆಂಟಲ್ ಟ್ರ್ಯಾಪ್ ಗಳಿಂದ ಹೆಚ್ಚಿನ ಸಂಕಟ ಅನುಭವಿಸುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಸಂಗತಿಯೆಂದರೆ ಈ ಟ್ರ್ಯಾಪ್ ಗಳು ನಿಮಗೆ ಎಷ್ಟು ನಾರ್ಮಲ್ ಅನಿಸುತ್ತವೆಯೆಂದರೆ, ನಿಮಗೆ ಗೊತ್ತೇ ಆಗುವುದಿಲ್ಲ ನಿಮ್ಮ ಮೆದುಳು ನಿಮ್ಮ ವಿರುದ್ಧ ಕೆಲಸ ಮಾಡುತ್ತಿದೆಯೆಂದು. ಮತ್ತು ಈ 5 ನೇ ಟ್ರ್ಯಾಪ್ ನಿಮ್ಮ ಬದುಕಿನ ಅತ್ಯಂತ ದುಬಾರಿ ಟ್ರ್ಯಾಪ್ ಎಂದು ಸಾಬೀತಾಗಲಿದೆ. ಏಕೆಂದರೆ ಈ ಟ್ರ್ಯಾಪ್ ನಲ್ಲಿ ಮನುಷ್ಯ ತನ್ನ ಎಲ್ಲವನ್ನೂ ಕಳೆದುಕೊಳ್ಳಲಿದ್ದಾನೆ. ಆದಾಗ್ಯೂ ಅವನಿಗೆ ತಾನು ಸರಿ ದಾರಿಯಲ್ಲಿದ್ದೇನೆ ಎಂದು ಅನಿಸುತ್ತಿರುತ್ತದೆ.

  1. The Spotlight Effect : ಇದನ್ನ ನೀವು ಗಮನಿಸಿರಬಹುದು. ಎಲ್ಲರೂ ನಿಮ್ಮನ್ನು ಜಡ್ಜ್ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿರುತ್ತದೆ. ಜನ ನಿಮ್ಮನ್ನು ಗಮನಿಸುತ್ತಿದ್ದಾರೆ, ವಿಶ್ಲೇಷಿಸುತ್ತಿದ್ದಾರೆ. ನೀವು ಏನು ಉಡುಗೆ ತೊಡುತ್ತಿದ್ದೀರಿ, ಹೇಗೆ ಮಾತನಾಡುತ್ತಿದ್ದೀರಿ, ಯಾವ ತಪ್ಪು ಮಾಡುತ್ತಿದ್ದೀರಿ ಇತ್ಯಾದಿಯಾಗಿ. ಆದರೆ ಸೈಕಾಲೊಜಿಯ ಸಂಶೋಧನೆಗಳ ಪ್ರಕಾರ, ನೀವು ನಿಮ್ಮ ಬಗ್ಗೆ ಯೋಚಿಸುವಷ್ಟು ಬೇರೆ ಜನ ನಿಮ್ಮ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಅವರು ತಮ್ಮ ಬದುಕಿನಲ್ಲಿ ವ್ಯಸ್ತರಾಗಿದ್ದಾರೆ. ತಮ್ಮ ಬದುಕಿನ ಕಷ್ಟಗಳನ್ನು ನಿವಾರಿಸಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರೆ.
  2. The Social Comparison Trap : ಸೋಶಿಯಲ್ ಮೀಡಿಯಾ ಈ ಟ್ರ್ಯಾಪ್ ನ ಇನ್ನೂ ಅಪಾಯಕಾರಿಯಾಗಿಸಿದೆ. ಒಬ್ಬರ ರೂಪ ಸುಂದರವಾಗಿದೆಯಾದರೆ, ಒಬ್ಬರ ಗಳಿಕೆ ಉತ್ತಮವಾಗಿದೆ ಮತ್ತು ಇನ್ನೊಬ್ಬರ ಬದುಕು ಉತ್ತಮವಾಗಿದೆ. ನಿಧಾನವಾಗಿ ನೀವು ನಿಮ್ಮ ವಾಸ್ತವವನ್ನಲ್ಲ ಇನ್ನೊಬ್ಬರ highlights ನ ಎಣಿಸಲು ಶುರು ಮಾಡುತ್ತೀರಿ. ಆಗ ನಿಮ್ಮ ಆತ್ಮವಿಶ್ವಾಸ ಕುಸಿಯಲು ಶುರುವಾಗುತ್ತದೆ.
  3. The Hedonic Treadmill : ನಿಮ್ಮ ಮೆದುಳು ಹೇಳುತ್ತದೆ ಇದೊಂದು ಸಿಕ್ಕರೆ ಸಾಕು ನಾನು ಸಂತೋಷದಿಂದ ಇರಬಹುದು. ಹೊಸ ಫೋನ್, ಹೊಸ ಕಾರ್, ಹೊಸ ಪ್ರಮೋಷನ್ ಇತ್ಯಾದಿ. ಆದರೆ ಕೆಲ ದಿನಗಳ ನಂತ ಎಲ್ಲವೂ ನಾರ್ಮಲ್ ಅನಿಸತೊಡಗುತ್ತದೆ. ಆಗ ನಿಮ್ಮ ಮೆದುಳು ಹೊಸ ಟಾರ್ಗೆಟ್ ನ ಹುಡುಕಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಆ ರೇಸ್ ನಲ್ಲಿಯೇ ಜನ ತಮ್ಮ ಪೂರ್ತಿ ಬದುಕನ್ನು ಕಳೆದುಬಿಡುತ್ತಾರೆ. ಇದನ್ನೇ hedonic adaptation ಎನ್ನುತ್ತಾರೆ.
  4. Cognitive Distortion’s : ಇದು ವಾಸ್ತವವನ್ನು ಬದಲಾಯಿಸುವುದಿಲ್ಲ ಬದಲಾಗಿ ಇದು ನಿಮ್ಮ ವಾಸ್ತವದ ವ್ಯಾಖ್ಯಾನವನ್ನು ಬದಲಾಯಿಸುತ್ತದೆ. ಒಂದೇ ಒಂದು ವೈಫಲ್ಯ ಸಾಕು ನೀವು ನಿಮ್ಮನ್ನು looser ಎಂದು ತಿಳಿದುಕೊಳ್ಳಲು ಶುರು ಮಾಡುತ್ತೀರಿ. ಒಂದು ರಿಜೆಕ್ಷನ್ ಸಾಕು, ಯಾರೂ ನಿಮ್ಮನ್ನು ಒಪ್ಪುವುದಿಲ್ಲ ಎಂದುಕೊಳ್ಳಲು ಶುರು ಮಾಡುತ್ತೀರಿ. ಆಗ ನೀವು ನಿಮ್ಮ ವಾಸ್ತವವನ್ನು ಗಮನಿಸುವುದಿಲ್ಲ ಕೇವಲ ನಿಮ್ಮ ಭಯಗಳನ್ನು ಗಮನಿಸುತ್ತ ಹೋಗುತ್ತೀರಿ.
  5. Confirmation Bias : ಇದು ಮಾರಣಾಂತಿಕ ಟ್ರ್ಯಾಪ್. ಏಕೆಂದರೆ ಇದು, ನೀವು ತಪ್ಪಾಗಿರುವಾಗಲೂ ನಿಮಗೆ ಸುರಕ್ಷತೆಯ ಭಾವವನ್ನು ಕೊಡುತ್ತಿರುತ್ತದೆ. ಯಾವುದನ್ನು ನೀವು ನಂಬಲು ಸಿದ್ಧರಿರುವಿರೋ, ಮೆದುಳು ಅದರ ಪರವಾಗಿಯೇ ಸಾಕ್ಷ್ಯಗಳನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಡುತ್ತದೆ. ಮತ್ತು ನಿಮ್ಮ ನಂಬಿಕೆಯ ವಿರುದ್ಧವಾಗಿರುವ ಸತ್ಯವನ್ನು ನಿರ್ಲಕ್ಷ ಮಾಡಿಬಿಡುತ್ತದೆ. ಬಹಳಷ್ಟು ಜನರಲ್ಲಿ ಜ್ಞಾನದ ಕೊರತೆಯಿರುವುದಿಲ್ಲ ಆದರೆ ಅವರಿಗೆ ತಮ್ಮ ಸುಳ್ಳು ನಂಬಿಕೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇರುವುದಿಲ್ಲ.
Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.