ಅಲ್ಪಸಂಖ್ಯಾತರಾಗುವುದೆಂದರೆ…

ಅಲ್ಪಸಂಖ್ಯಾತರಾಗುವುದೆಂದರೆ ಯಾವ ಸಮಾಜ ನಿಮ್ಮನ್ನು ದ್ವೇಷಿಸುತ್ತದೆಯೋ ಅದೇ ಸಮಾಜದ ಕಣ್ಣುಗಳಿಂದ ನಿಮ್ಮನ್ನು ನೀವು ನೋಡಿಕೊಳ್ಳುವ ಶಾಪವನ್ನು ಹೊರುವುದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನೀವು ಅಲ್ಪಸಂಖ್ಯಾತರಾಗಿದ್ದರೆ, ಹಿಂದುಳಿದ, ಶೋಷಿತ ಅಥವಾ ಅಂಚಿನ ಸಮುದಾಯಗಳಿಗೆ ಸೇರಿದವರಾಗಿದ್ದರೆ ಇದನ್ನು ಖಂಡಿತ ಗಮನಿಸಿರುತ್ತೀರಿ. ನಿಮ್ಮ ಧರ್ಮ, ನಿಮ್ಮ ಜಾತಿ, ನಿಮ್ಮ ಜೆಂಡರ್ ನಿಮ್ಮನ್ನು ಯಾವಾಗಲೂ ಮಾನಸಿಕವಾಗಿ ದಣಿದವರನ್ನಾಗಿಸುತ್ತಿರುತ್ತವೆ. ಆದರೆ ಯಾಕೆ ಹೀಗೆ? ಇಷ್ಟೊಂದು ಮಾನಸಿಕ ದಣಿವು ಯಾಕೆ? ಏಕೆಂದರೆ ನೀವು ಯಾವಾಗಲೂ ಇಬ್ಬರು ಬೇರೆ ಬೇರೆ ಮನುಷ್ಯರಾಗಬೇಕಾಗಿರುವ ಮಾನಸಿಕ ಹೊರೆಯನ್ನು ಹೊತ್ತುಕೊಂಡಿರುತ್ತೀರಿ.

1903 ರಲ್ಲಿ ಅಮೇರಿಕದ ಸಮಾಜ ಶಾಸ್ತ್ರಜ್ಞ W.E.B. Du Bois ಈ ಮಾನಸಿಕ ಹಿಂಸೆಗೆ Double Consciousness ಎಂದು ಹೆಸರಿಟ್ಟರು. ಅವರ ಪ್ರಕಾರ ಅಲ್ಪಸಂಖ್ಯಾತರಾಗುವುದೆಂದರೆ ಯಾವ ಸಮಾಜ ನಿಮ್ಮನ್ನು ದ್ವೇಷಿಸುತ್ತದೆಯೋ ಅದೇ ಸಮಾಜದ ಕಣ್ಣುಗಳಿಂದ ನಿಮ್ಮನ್ನು ನೀವು ನೋಡಿಕೊಳ್ಳುವ ಶಾಪವನ್ನು ಹೊರುವುದು. ನಿಮಗೆ ಯಾವತ್ತೂ ನೈಜ ಆಗಿರುವ ( authentic) ಸ್ವಾತಂತ್ರ್ಯ ಇರುವುದಿಲ್ಲ. ನೀವು ಯಾವತ್ತೂ ನಿಮ್ಮನ್ನು ಇನ್ನೊಬ್ಬರ ಕಣ್ಣಿನಿಂದ ನೋಡುತ್ತೀರಿ. Bois ಅವರು ತಮ್ಮ ಪುಸ್ತಕ The souls of black folk ನಲ್ಲಿ ಇದನ್ನು ಮೊದಲು ಅಮೇರಿಕದ ಕಪ್ಪು ಜನಾಂಗದ ಕುರಿತು ಬರೆಯುವಾಗ ಬರೆದಿದ್ದರು. ಆದರೆ ಈ ಸೈಕಾಲಜಿ, ಸಮಾಜ ಎರಡನೇ ದರ್ಜೆಯ ನಾಗರಿಕರರಂತೆ ಟ್ರೀಟ್ ಮಾಡುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯವಾಗುತ್ತದೆ.

ನೀವು ಬಹುಸಂಖ್ಯಾತ ಪ್ರಿವಿಲೇಜ್ಡ್ ಸಮುದಾಯದ ಭಾಗವಾಗಿದ್ದರೆ, ನಿಮಗೆ ಕೇವಲ ಒಂದು ಐಡೆಂಟಿಟಿ ಇರುತ್ತದೆ. ನೀವು ಕೇವಲ ನೀವು ಆಗಿದ್ದೀರಿ. ನೀವು ಒಂದು ಕೋಣೆಯನ್ನು ಪ್ರವೇಶಿಸುತ್ತೀರಾದರೆ, ನೀವು ಹೇಗೆ ಮಾತನಾಡುತ್ತೀರಿ, ಹೇಗೆ ನಿಂತಿದ್ದೀರಿ, ಹೇಗೆ ಉಸಿರಾಡುತ್ತಿದ್ದೀರಿ ಎಂದೆಲ್ಲ ಹೆಚ್ಚು ಯೋಚನೆ ಮಾಡಬೇಕಿಲ್ಲ. ಆದರೆ ಅದೇ ನೀವು ಮೈನಾರಿಟಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ನಿಮ್ಮ ಮೆದುಳು ಇಬ್ಭಾಗವಾಗಿರುತ್ತದೆ . ಒಂದು, ನಿಮ್ಮ true self ; ನೀವು ಮನೆಯಲ್ಲಿರುವಾಗ, ನಿಮ್ಮ ಕುಟುಂಬದ ಜೊತೆಗೆ ಇರುವಾಗಿನ ನಿಮ್ಮ self. ಮತ್ತು ಮತ್ತೊಂದು ನಿಮ್ಮ survival self ; ನೀವು ಹೊರಗಿನವರ ಜೊತೆ ಇರುವಾಗಿನ ನಿಮ್ಮ self. ಇದು ನಿಮ್ಮ ಹೆಚ್ಚು edited self ಆಗಿರುತ್ತದೆ. ಇದು ನೀವು dominant culture ನ ಎದುರಿಗೆ, ಅವರು ಮುಜುಗರ ಪಡಬಾರದೆಂದು, ಜಡ್ಡ್ ಮಾಡಬಾರದೆಂದು ಅಥವಾ ನಿಮ್ಮನ್ನು ಅನುಮಾನದಿಂದ ನೋಡಬಾರದೆಂದು ನೀವು ಪ್ರಸ್ತುತಪಡಿಸುವ ನಿಮ್ಮ censored version of self ಆಗಿರುತ್ತದೆ.

ಭಾರತದ ಪರಿಸ್ಥಿತಿಯನ್ನು ಗಮನಿಸಿ. ಒಬ್ಬ ಸಾಮಾನ್ಯ ದಲಿತ, ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿ IIT ಯಂಥ ಸಂಸ್ಥೆ ಅಥವಾ ಇನ್ನಾವುದೇ ಯಾವುದೇ elite corporate ಆಫೀಸ್ ನ ಪ್ರವೇಶಿಸಿದಾಗ ಅವನಿಗೆ ಕೂಡಲೇ ತನ್ನ surname ಮುಚ್ಟಿಟ್ಟುಕೊಳ್ಳುವ ಒತ್ತಡದ ಅನುಭವವಾಗುತ್ತದೆ. ಅವನು ತನ್ನ ಮಾತಿನ ರೀತಿಯನ್ನು ಬದಲಿಸಿಕೊಳ್ಳುತ್ತಾನೆ. ಮತ್ತು ಮೆರಿಟ್, ಕೋಟಾ, ರಿಸರ್ವೇಶನ್ ನಂಥ ಡಿಬೇಟ್ ಗಳು ನಡೆಯುವಾಗ ಅವನು ಸುಮ್ಮನಾಗಿಬಿಡುವ ಒತ್ತಡವನ್ನು ಫೀಲ್ ಮಾಡುತ್ತಾನೆ. ಅವನು ಯಾವಾಗಲೂ ತನ್ನ ಅಸ್ತಿತ್ವವನ್ನು ಬಹುಸಂಖ್ಯಾತ ಅಥವಾ ಮೇಲ್ಜಾತಿಯವರ ದೃಷ್ಟಿಕೋನದದಿಂದ ನೋಡುತ್ತಾನೆ ಮತ್ತು ಯಾರೂ ತನ್ನನ್ನು ಜಡ್ಜ್ ಮಾಡಬಾರದೆಂದು ಹೆದರುತ್ತಾನೆ.

ನೀವು ಧಾರ್ಮಿಕ ಅಲ್ಪಸಂಖ್ಯಾತರನ್ನು ಗಮನಿಸಿ, ಒಬ್ಬ ಮುಸ್ಲೀಂ ಒಂದು ಸಾರ್ವಜನಿಕ ಜಾಗ ಅಥವಾ ಒಂದು ಕಾರ್ಪೋರೇಟ್ ಆಫೀಸ್ ನಲ್ಲಿರುವಾಗ ಅವನ ಮೇಲೆ ದೇಶಭಕ್ತಿಯನ್ನು ಪ್ರದರ್ಶನ ಮಾಡಬೇಕಾದಂಥ ಭಾರಿ ದೊಡ್ಡ ಒತ್ತಡ ಇರುತ್ತದೆ. ಅವನಿಗೆ ಅವನದೇ ಆದ ಧರ್ಮವನ್ನು ರೇಗಿಸುವ ಜೋಕ್ ಗಳನ್ನು ಕೇಳಿ ನಗಬೇಕಾಗುತ್ತದೆ. ಅವನಿಗೆ ತಾನು normal & safe ಎಂದು ತೋರಿಸಿಕೊಳ್ಳಲು ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ. ನೀವು ಮೈನಾರಿಟಿಯವರಾಗಿದ್ದು double consciousness ನ ಒತ್ತಡ ಹೊರುತ್ತಿದ್ದರೆ ತಿಳಿದುಕೊಳ್ಳಿ, ಈ ಸಮಾಜದ ಕನ್ನಡಿ ಪಕ್ಷಪಾತದಿಂದ ಕೂಡಿದೆ ಮತ್ತು ಅದು ಯಾವಾಗಲೂ ನಿಮ್ಮನ್ನು ತಪ್ಪಾಗಿಯೇ ಪ್ರತಿಬಿಂಬಿಸುತ್ತಿರುತ್ತದೆ. ನೀವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ನಿಜವಾದ ಸ್ವಾತಂತ್ರ್ಯ ಎನ್ನುವುದು ಕೊನೆಗೆ, ಅವರ ಕಣ್ಣುಗಳನ್ನು ಮುಚ್ಚಿ, ಜಗತ್ತನ್ನು ಸ್ವತಃ ನಿಮ್ಮ ಕಣ್ಣುಗಳಿಂದ ನೋಡುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.