ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಆಲ್ಬರ್ಟ್ ಐನ್ ಸ್ಟೀನ್ ತಮ್ಮ ಬದುಕಿನ ಕೊನೆಯಲ್ಲಿ ಒಂದು ಮಾತು ಹೇಳಿದ್ದರು, “ಭೂತ, ವರ್ತಮಾನ ಮತ್ತು ಭವಿಷ್ಯ ಗಳ ನಡುವಿನ ಅಂತರ ಎನ್ನುವುದೆಲ್ಲ ಕೇವಲ ಭ್ರಮೆ”. ಅವರ ಸಾಪೇಕ್ಷ ಸಿದ್ಧಾಂತದ ಪ್ರಕಾರ ನಾವು ಅನುಭವಿಸುವಂತೆ ಸಮಯ flow ಆಗುವುದಿಲ್ಲ. ಭೌತಶಾಸ್ತ್ರದ ಪ್ರಕಾರ ಸಮಯ ಎನ್ನುವುದು ನಾಲ್ಕನೇಯ ಆಯಾಮ ( 4th dimension), ಉದ್ದ, ಅಗಲ, ಎತ್ತರ ಗಳಂತೆ. ಹಾಗಾಗಿ ನಿಮ್ಮ ಇಡೀ ಬದುಕು, ಪ್ರತೀ ಕ್ಷಣ ಒಂದು 4D ರಚನೆಯಲ್ಲಿ ಬಂಧಿಯಾಗಿದೆ.
ಕಲ್ಪನೆ ಮಾಡಿಕೊಳ್ಳಿ ನಿಮ್ಮ ಇಡೀ ಬದುಕನ್ನ ಒಂದು ಮೂವೀ ರೀಲ್ ನಂತೆ. ನೀವು ಒಂದು ಫ್ರೇಮ್ ನ ನೋಡುತ್ತಿದ್ದೀರಿ ಮತ್ತು ಅದಕ್ಕೆ ವರ್ತಮಾನ (present ) ಎಂದು ಹೆಸರು ಇಡುತ್ತಿದ್ದೀರಿ. ಹಿಂದೆ ಇರುವ ಫ್ರೇಮ, ಭೂತ ( past), ಮತ್ತು ಮುಂದೆ ಬರಲಿರುವ ಫ್ರೇಮ್, ಭವಿಷ್ಯ (future). ಆದರೆ ಇಡೀ ರೀಲ್ ಏಕ ಕಾಲದಲ್ಲಿ ಅಸ್ತಿತ್ವದಲ್ಲಿ ಇದೆಯಲ್ಲವೆ? ನೀವು ಅತೀ ಎತ್ತರದಲ್ಲಿದ್ದ, ಆತ್ಮ ವಿಶ್ವಾಸದಲ್ಲಿದ್ದ, ಶಿಸ್ತಿನಲ್ಲಿದ್ದ ಅನ್ ಸ್ಟಾಪೆಬಲ್ ಆಗಿದ್ದ ಫ್ರೇಮ್ ಇನ್ನೂ ಅಸ್ತಿತ್ವದಲ್ಲಿದೆ. ಮತ್ತು ಆಗಲು ಬಯಸುತ್ತಿರುವ ಆವೃತ್ತಿ ಕೂಡ ಅದೇ ರೀಲ್ ನಲ್ಲಿದೆ. ನೀವು ಏನನ್ನೂ ಸೃಷ್ಟಿಸುತ್ತಿಲ್ಲ, ಕೇವಲ ಒಂದು ಫ್ರೇಮ್ ನಿಂದ ಇನ್ನೊಂದು ಫ್ರೇಮ್ ಗೆ ಮೂವ್ ಆಗುತ್ತಿದ್ದೀರಿ. ನೀವು “ನಾನು ಹೀಗೆ ಇದ್ದೇನೆ” ಎಂದು ಹೇಳುವಾಗ ನಿಮ್ಮನ್ನು ನೀವು ಒಂದು ಫ್ರೇಮ್ ನಲ್ಲಿ ಫಿಟ್ ಮಾಡಿಕೊಳ್ಳುತ್ತೀರಿ.
ಆಲ್ಬರ್ಟ್ ಐನ್ ಸ್ಟೀನ್ ನ ಪ್ರಕಾರ ನೀವು ಒಡೆದು ಹೋಗಿಲ್ಲ, ನೀವು ಅಪೂರ್ಣ ಅಲ್ಲ, ನೀವು ಕೇವಲ ತಪ್ಪು ಫ್ರೇಮ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ. ಆದ್ದರಿಂದ ಬದುಕನ್ನ ಫಿಕ್ಸ್ ಮಾಡಿಕೊಳ್ಳಬೇಡಿ, ನಿಮ್ಮ ಪೋಸಿಷನ್ ನ ಶಿಫ್ಟ್ ಮಾಡಿಕೊಳ್ಳಿ. ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ, ಕ್ರಿಯೆಗಳನ್ನ ಬದಲಾಯಿಸಿಕೊಳ್ಳಿ ಆಗ ಫ್ರೇಮ್ ತಂತಾನೇ ಬದಲಾಗುತ್ತದೆ. ಏಕೆಂದರೆ ನಿಮ್ಮ ಅತ್ಯತ್ತಮ ಆವೃತ್ತಿ ಭವಿಷ್ಯದಲ್ಲಿ ಇಲ್ಲ. ಅದು ಈಗಾಗಲೇ ಅಸ್ತಿತ್ವದಲ್ಲಿದೆ. ನೀವು ಆ ಫ್ರೇಮ್ ನ ಪ್ರವೇಶಿಸಲು ಸಿದ್ಧರಾಗಬೇಕಷ್ಟೆ.

