ಮಹಾಕಾಳಿ ಹೇಳುತ್ತಾಳೆ – ಆರಂಭಕ್ಕಿಂತ ಅಂತ್ಯ ಬಹಳ ಮುಖ್ಯ!

ಆಸ್ತಿಕರ ನಂಬಿಕೆಯಂತೆ, ಜಗನ್ಮಾತೆಯಾಗಿ ಸೃಷ್ಟಿಗೆ ಕಾರಣವಾಗಿರುವ ಮಹಾಕಾಳಿ, ಎಲ್ಲವನ್ನೂ ಲಯಗೊಳಿಸುವ ಪ್ರಳಯಾಂತಕಿಯಾಗಿಯೂ ತನ್ನ ಕರ್ತವ್ಯ ನಿರ್ವಹಿಸುತ್ತಾಳೆ ~ ಚೇತನಾ ತೀರ್ಥಹಳ್ಳಿ

ಮಹಾಕಾಳಿ, ಸೃಷ್ಟಿ ಮತ್ತು ಲಯದ ನಿರ್ವಾಹಕಿ. ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಹುಟ್ಟು ಮತ್ತು ಸಾವುಗಳನ್ನು ಸರಿದೂಗಿಸುವ ಅತ್ಯಂತ ಸವಾಲಿನ ಕಾರ್ಯವನ್ನು ಇವಳು ನಡೆಸುತ್ತಾಳೆ. ಜಗನ್ಮಾತೆಯಾಗಿ ಸೃಷ್ಟಿಗೆ ಕಾರಣವಾಗಿರುವ ಮಹಾಕಾಳಿ, ಎಲ್ಲವನ್ನೂ ಲಯಗೊಳಿಸುವ ಪ್ರಳಯಾಂತಕಿಯಾಗಿಯೂ ತನ್ನ ಕರ್ತವ್ಯ ನಿರ್ವಹಿಸುತ್ತಾಳೆ.

“ಆರಂಭಕ್ಕಿಂತ ಅಂತ್ಯ ಬಹಳ ಮುಖ್ಯ. ಸರಿಯಾದ ಅಂತ್ಯ, ಸರಿಯಾದ ಆರಂಭಕ್ಕೆ ನಾಂದಿ ಹಾಡುವುದು. ಇಲ್ಲವಾದಲ್ಲಿ ಹೊಸ ಹುಟ್ಟುಗಳು ಮತ್ತೊಂದು ವಿನಾಶಕ್ಕೆ ಮುನ್ನುಡಿ ಬರೆಯುವವು.” ಇದು ಮಹಾಕಾಳಿಯ ಬೋಧನೆ.

ಸೃಷ್ಟಿ – ನಾಶದ ಚಕ್ರದಲ್ಲಿ ಯಾವುದೇ ವಿದ್ಯಮಾನ ಹೇಗೆ ಕೊನೆಗೊಳ್ಳುತ್ತದೆ ಅನ್ನುವುದರ ಮೇಲೆ ಹೊಸಹುಟ್ಟಿನ ನಿಯತಿ ನಿರ್ಧಾರವಾಗುತ್ತದೆ. ಯಾವುದನ್ನಾದರೂ ಕೊನೆಗೊಳಿಸುವಾಗ ಯಾವುದೇ ಬಗೆಯ ಹೊರೆಯನ್ನು ಹೊತ್ತುಕೊಂಡಿರಬಾರದು. ಯಾವುದೇ ಥರದ ಋಣ, ಕರ್ಮ, ದುಃಖ, ಪಶ್ಚಾತ್ತಾಪ ಅಥವಾ ಮೋಹಕ್ಕೆ ಅಂಟಿಕೊಂಡಿರಬಾರದು. ಇಲ್ಲವಾದರೆ ಹೊಸ ಹುಟ್ಟಿನ ಚಕ್ರಕ್ಕೆ ದಾಟಿಕೊಳ್ಳುವಾಗ ಅವನ್ನು ಹೊತ್ತುಕೊಂಡೇ ಸಾಗಬೇಕಾಗುತ್ತದೆ, ಮತ್ತು ಅವೆಲ್ಲವೂ ಹೊಸ ಆರಂಭದ ಮೇಲೆ ತಮ್ಮ ಪರಿಣಾಮ ಬೀರುತ್ತವೆ, ಮುಕ್ತಿಯಿಲ್ಲದ ಮತ್ತೊಂದು ನಾಶ ಅಥವಾ ವಿನಾಶಕ್ಕೆ ಮುನ್ನುಡಿ ಬರೆಯುತ್ತವೆ.

ಯಾವುದನ್ನಾದರೂ ಘನತೆಯಿಂದ ಕೊನೆಗೊಳಿಸುವುದು ಆಧ್ಯಾತ್ಮಿಕತೆಯ ಅತ್ಯುನ್ನತ ಅರಿವು. ಹಳತರ ಅಹಂಕಾರ ಸಂಪೂರ್ಣ ಅಳಿದಾಗ ಮಾತ್ರ ಹೊಸ ಬದುಕು ಅರ್ಥಪೂರ್ಣವಾಗುವುದು, ದಿವ್ಯವಾಗುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.