ತಿಳಿವು ಪಡೆದ ಮೇಲೆ ಪರಿಕರದ ಹಂಗೇಕೆ? : ಬೆಳಗಿನ ಹೊಳಹು

ಪರಿಕರಗಳೇ ಜ್ಞಾನವಲ್ಲ. ಅವನ್ನು ಬಳಸಿ, ಜ್ಞಾನವನ್ನು ಹೊಂದಿದ ಮೇಲೂ ಪರಿಕರಗಳಿಗೆ ಜೋತುಬೀಳಬಾರದು. ಅದನ್ನು ಬಿಟ್ಟು ಮುನ್ನಡೆಯಬೇಕು.  ಗ್ರಂಥಾನಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ಸರ್ವಮಶೇಷತಃ || ಸುಭಾಷಿತ || “ಗ್ರಂಥಗಳನ್ನು ಓದಿ ಜ್ಞಾನಿಯಾಗುವ ಅಭ್ಯಾಸಿಯು, ಅಧ್ಯಯನದ ನಂತರ ಅವುಗಳ ಹಂಗಿನಿಂದ ಹೊರಗೆ ಬರಬೇಕು. ಧಾನ್ಯವನ್ನು ಪಡೆಯಲಿಚ್ಛಿಸುವವನು ಉಳಿದೆಲ್ಲವನ್ನೂ ತೂರಿ, ಕಾಳುಗಳನ್ನು ಮಾತ್ರ ಇಟ್ಟುಕೊಳ್ಳುವಂತೆ, ಜ್ಞಾನವನ್ನು ಮಾತ್ರ ತನ್ನಲ್ಲಿ ಇರಿಸಿಕೊಳ್ಳಬೇಕು” ಎನ್ನುತ್ತದೆ ಒಂದು ಸುಭಾಷಿತ.  ನಾವು ಸಾಮಾನ್ಯವಾಗಿ ಪರಿಕರಗಳ ಮೇಲೆ ಮೋಹ ಬೆಳೆಸಿಕೊಂಡುಬಿಡುತ್ತೇವೆ. ಬೋಧೆಗಿಂತ ಬೋಧಕರ ಮೇಲೆ, ಅರಿವಿಗಿಂತ […]

ಏಸುಕ್ರಿಸ್ತ : ಬೆಟ್ಟದ ಮೇಲಿನ ಬೋಧನೆಗಳು

ಏಸು ಕ್ರಿಸ್ತ ಗೆಲಿಲಿಯೋ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದಾಗ ಸಾವಿರಾರು ಜನ ನೆರೆದು, ತಮಗೆ ಉಪದೇಶ ನೀಡಬೇಕೆಂದು ಕೇಳಿಕೊಂಡರು. ಆಗ ಏಸುಕ್ರಿಸ್ತನು ಊರಿನ ಅಂಚಿನಲ್ಲಿದ್ದ ಬೆಟ್ಟವೊಂದರ ಮೇಲೆ ಕುಳಿತು ಮಾತನಾಡತೊಡಗಿದನು. ಈ ಸಂದರ್ಭದಲ್ಲಿ ನೀಡಿದ ಉಪದೇಶಗಳು ‘ಬೆಟ್ಟದ ಮೇಲಿನ ಬೋಧನೆಗಳು’ ಎಂದು ಖ್ಯಾತವಾಗಿವೆ. ಈ ಪ್ರಸಂಗ ಬೈಬಲ್ಲಿನ ‘ಹೊಸ ಒಡಂಬಡಿಕೆ’ಯಲ್ಲಿ ಕಾಣಸಿಗುತ್ತದೆ. ಏಸು ಕ್ರಿಸ್ತನು ಅಪಾರ ಜನಸಮೂಹವನ್ನು ಉದ್ದೇಶಿಸಿ ಮಾತಾಡತೊಡಗಿದನು : “ಅಹಂಕಾರವಿಲ್ಲದವರೇ ಧನ್ಯರು. ಪರಲೋಕ ರಾಜ್ಯ (ಭಗವಂತನ ಸಾಮ್ರಾಜ್ಯ) ಅವರದಾಗುತ್ತದೆ. ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆಯುಳ್ಳವರೇ ಧನ್ಯರು. ದೇವರು ಅವರಿಗೆ […]

ಸ್ವಸ್ಥ ಪರಿಸರಕ್ಕಾಗಿ ಬೆಳಗಿನ ಪ್ರಾರ್ಥನೆಗಳು

ಓಂ ದ್ಯೌಃ ಶಾಂತಿರಂತರಿಕ್ಷಂ ಶಾತಿಃ ಪೃಥಿವೀ ಶಾಂತಿ – ರಾಪಃ ಶಾಂತಿರೋಷಧಯಃ ಶಾಂತಿಃ | ವನಸ್ಪತಯಃ ಶಾಂತಿರ್ವಿಶ್ವೇ ದೇವಾಃ ಶಾಂತಿರ್ಬ್ರಹ್ಮ ಶಾಂತಿಃ ಶಾಂತಿಃ ಶಾಂತಿಃ ಶಾಂತಿರೇವ ಶಾಂತಿಃ || ಸೂರ್ಯ – ಚಂದ್ರ – ತಾರಾವಳಿಗಳು ಶಾಂತಿಯಿಂದ ಕೂಡಿರಲಿ (ಅವುಗಳ ವಿಕೋಪಕ್ಕೆ ನಾವು ಒಳಗಾಗದೆ ಇರಲಿ), ಅಂತರಿಕ್ಷದಲ್ಲಿ ಶಾಂತಿ ಇರಲಿ (ವಾತಾವರಣವು ಶುದ್ಧವೂ ಆರೋಗ್ಯಕರವೂ ಆಗಿರಲಿ), ಭೂಮಿಯಲ್ಲಿ ಶಾಂತಿ ಇರಲಿ (ಭೂಕಂಪಾದಿಗಳು ಇಲ್ಲದಿರಲಿ), ನೀರಿನಲ್ಲಿ ಶಾಂತಿಯಿರಲಿ (ಅದು ಶುದ್ಧವಾಗಿರಲಿ, ಅತಿವೃಷ್ಟಿ – ಅನಾವೃಷ್ಟಿಗಳು ಇಲ್ಲದಿರಲಿ), ಗಿಡಮರಗಳು ಶಾಂತಿಯಿಂದಿರಲಿ […]

ಶಿವಮಹಿಮ್ನಃ ಸ್ತೋತ್ರದಿಂದ : ಬೆಳಗಿನ ಹೊಳಹು

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ ಪ್ರಭಿನ್ನೇ ಪ್ರಸ್ಥಾನೇ ಪರಮಿದ ಮದಃ ಪಥ್ಯಮಿತಿ ಚ | ರುಚೀನಾಂ ವೈಚಿತ್ರ್ಯಾದ್ ಋಜುಕುಟಿಲನಾನಾಪಥಜುಷಾಂ ನೃಣಾಮೇಕೋ ಗಮ್ಯಸ್ತ್ವಮಸಿ ಪಯಸಾಮರ್ಣವ ಇವ || ~ ಶಿವಮಹಿಮ್ನಃ ಸ್ತೋತ್ರಮ್ – 7 ಅರ್ಥ : ನಿನ್ನನ್ನು ಸೇರುವ ದಾರಿಯು ವೈದಿಕ, ಸಾಂಖ್ಯ ಯೋಗ, ಪಾಶುಪತ, ವೈಷ್ಣವ ಎಂದು ಬೇರೆ ಬೇರೆಯಾಗಿವೆ. ರುಚಿಗಳ ವೈವಿಧ್ಯದಿಂದ ಇದು ಶ್ರೇಷ್ಠ, ಇದು ಹಿತ ಎಂದು ನೇರ, ಸುತ್ತುಬಳಸು – ಇತ್ಯಾದಿ ಭಿನ್ನ ಮಾರ್ಗಗಳಲ್ಲಿ ಜನರು ಹೋಗುತ್ತಾರೆ. ಅವರೆಲ್ಲರಿಗೂ ನದಿಗಳಿಗೆ […]

ಬೌದ್ಧಿಕ ವರ್ಚಸ್ಸಿಗಾಗಿ ಪ್ರಾರ್ಥನೆ : ಯಜುರ್ವೇದದಿಂದ…

ಯಾಂ ಮೇಧಾಂ ದೇವಗಣಾಃ ಪಿತರಶ್ಚೋಪಾಸತೇ ತಯಾ ಮಾಮದ್ಯ ಮೇಧಯಾಗ್ನೇ ಮೇಧಾವಿನಂ ಕುರು ಸ್ವಾಹಾ || ಯಜುರ್ವೇದ 32.14 || ಯಾವ ಮೇಧಾಶಕ್ತಿಯನ್ನು ದೇವತೆಗಳೂ ಪಿತೃಗಳೂ ಅನುಭವಿಸುತ್ತಿರುವರೋ, ಇಂದು ಆ ಮೇಧಾಗ್ನಿಯಿಂದ ನನ್ನನ್ನು ಮೇಧಾವಿಯನ್ನಾಗಿ (ಪ್ರಕಾಶಮಾನವಾದ ಬುದ್ಧಿಯುಳ್ಳವನಾಗಿ) ಮಾಡು. ವರ್ಚೋದಾ ಅಗ್ನೇsಪಿ ವರ್ಚೋ ಮೇ ದೇಹಿ || ಯಜುರ್ವೇದ 3.12 || ಬೌದ್ಧಿಕ ವರ್ಚಸ್ಸನ್ನು ದಯಪಾಲಿಸುವ ದೇವನೇ, ನನಗೆ ಬೌದ್ಧಿಕ ವರ್ಚಸ್ಸನ್ನು ಕರುಣಿಸು. ಇಮಾಂ ಧಿಯಂ ಶಿಕ್ಷಮಾನಸ್ಯ ದೇವ

ಋಗ್ವೇದದಿಂದ : ಬೆಳಗಿನ ಪ್ರಾರ್ಥನೆ

ಭದ್ರಂ ನೋ ಅಪಿ ವಾತಯ ಮನೋ ದಕ್ಷಮುತ ಕ್ರತುಮ್ | ಅಧಾ ತೇ ಸಖ್ಯೇ ಅಂಧಸೋ ವಿವೋ ಮದೇ ರಣಾನ್ಗಾವೋ ನ ಯವಸೇ ವಿವಕ್ಷಸೇ || | ಋಗ್ವೇದ 10.25.1 | ಹೇ ದೇವ! ನಮಗೆ ಶುಭಕರವಾದ ಮತ್ತು ಸಂತೋಷದಾಯಕವಾದ ಮನಸ್ಸನ್ನು ದಯಪಾಲಿಸು. ಕರ್ಮಕೌಶಲವನ್ನೂ ಜ್ಞಾನವನ್ನೂ ನೀಡಿ ಸತ್ಕರ್ಮಗಳನ್ನು ಮಾಡುವಂತೆ ಪ್ರೇರಣೆ ನೀಡು.  ಸದಾ ಗೆಳೆಯನಂತೆ ಜೊತೆಗಿರುವ ನಿನ್ನನ್ನು ಸ್ತುತಿಸುವವರು, ಹಸುಗಳು ಹುಲ್ಲುಗಾವಲಿನಲ್ಲಿ ನಿರಾತಂಕ ಸಂತಸವನ್ನು ಅನುಭವಿಸುವಂತೆ ಆನಂದ ಹೊಂದುವರು. ನಿನ್ನ ಸಾಹಚರ್ಯ ಎಲ್ಲಕ್ಕಿಂತ ಶ್ರೇಷ್ಠವಾದುದು. ಅದು […]

ಕುವೆಂಪು ಅನುವಾದದಲ್ಲಿ ವಿವೇಕಾನಂದರ ಗೀತೆ : ಬಲ್ಲವರದಾರು?

ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ! ಏನದೆಂಬುದನರಿವರಾರೊಬ್ಬರೂ ಇಲ್ಲ! ಕರಿದಿಲ್ಲ; ಬಿಳಿದಿಲ್ಲ; ದಿನವಿಲ್ಲ; ನಿಶೆಯಿಲ್ಲ ಅರಿವಿಲ್ಲ; ಮನವಿಲ್ಲ; ಅಳಿವಿಲ್ಲ; ಉಳಿವಿಲ್ಲ; ಶೂನ್ಯಮಲ್ಲವು! ಸರ್ವವೂ ‘ನೇತಿ.. ನೇತಿ’! ಕಾಲದೇಶಗಳಿಲ್ಲ! ಸಾವು ಬಾಳುಗಳಿಲ್ಲ! ನಾನಿಲ್ಲ; ನೀನಿಲ್ಲ; ಸರ್ವವೂ ಮೌನ! ತಿಮಿರ ಬೆಳಕಿನೊಳಡಗಿ, ಬೆಳಕು ತಿಮಿರದೊಳವಿತು, ಭಾವ ಶೂನ್ಯವ ಸೇರಿದುದು ಐಕ್ಯಮಾಗಿ! ರವಿಯಿಲ್ಲ; ಶಶಿಯಿಲ್ಲ; ನಭವಿಲ್ಲ; ಧರೆಯಿಲ್ಲ; ತುದಿಯಿಲ್ಲ; ಮೊದಲಿಲ್ಲ; ಒಂದಿಲ್ಲ; ಎರಡಿಲ್ಲ; ಏನು ಏನಾಗಿರ್ದುದೋ ಬಲ್ಲವರಾರು? ಭಾವದೊಳಭಾವವೋ? ಶೂನ್ಯದೊಳಶೂನ್ಯವೋ? ಅರಿವಿನಾಚೆಯ ತೀರ ಬರಿ ಮೌನ, ಮೌನ! ಜ್ಞಾನತಾನಲ್ಲಿಲ್ಲ; ಜ್ಞೇಯಮದುಮಿಲ್ಲ; ಜ್ಞಾನಜ್ಞೇಯಗಳೆಲ್ಲ ಜ್ಞಾತನೊಳು ಸೇರೆ […]

ದುರ್ಬಲರಿಗೆ ಗೆಳೆಯರು ಯಾರಿದ್ದಾರು!? : ಬೆಳಗಿನ ಹೊಳಹು

ವನಾನಿ ದಹತೋ ವಹ್ನೇ ಸಖಾ ಭವತಿ ಮಾರುತಃ ಸ ಏವ ದೀಪ ನಾಶಾಯ ಕೃಶೇ ಕಸ್ಯಸ್ತಿ ಸಹೃದಮ್!? || ಸುಭಾಷಿತ ಮಂಜರಿ || ಅರ್ಥ : ಕಾಡ್ಗಿಚ್ಚಿನ ಬೆಂಕಿಗೆ ಮತ್ತಷ್ಟು ಬಲ ತುಂಬುವ ಗಾಳಿಯೇ ಹಣತೆಯ ಕಿರು ದೀಪವನ್ನು ಆರಿಸಿಬಿಡುತ್ತದೆ. ದುರ್ಬಲರಿಗೆ ಗೆಳೆಯರಾದರೂ ಯಾರಿದ್ದಾರು!? ತಾತ್ಪರ್ಯ : ಕಾಡ್ಗಿಚ್ಚು ಗಾಳಿ ಬೀಸಿದಂತೆಲ್ಲ ಧಗಧಗಿಸಿ ಉರಿಯುತ್ತದೆ. ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಗಾಳಿ ಅದನ್ನು ಇತರೆಡೆಗೂ ಹರಡಲು ಸಹಕರಿಸುತ್ತದೆ. ಆದರೆ, ಚಿಕ್ಕದೊಂದು ಹಣತೆಯಲ್ಲಿ ದೀಪ ಹಚ್ಚಿಟ್ಟಾಗ ಬೀಸುವ ಗಾಳಿಯು ಅದು […]

ತುಳಸೀದಾಸರ ಸೂಕ್ತಿಗಳು : ಬೆಳಗಿನ ಹೊಳಹು

ದಿನವನ್ನು ಶುಭಕರವಾಗಿಸುವ ತುಳಸೀದಾಸರ ಕೆಲವು ಸೂಕ್ತಿಗಳು ಇಲ್ಲಿವೆ: ವಿವೇಕವನ್ನುಕೊಡಲಾಗದು, ಪಡೆಯಲಾಗದು. ಅದು ಅತ್ಯಂತ ಕಷ್ಟ. ಹೇಗೋ ಅದೃಷ್ಟದಿಂದ ಅದನ್ನು ಪಡೆದರೂ, ಅದನ್ನು ಹಿಡಿದಿಟ್ಟುಕೊಳ್ಳಲು ಹಲವು ಅಡ್ಡಿ ಆತಂಕಗಳು ಬರುತ್ತವೆ. ಆದ್ದರಿಂದ ವಿವೇಕವನ್ನು ನಾವೇ ನಮ್ಮೊಳಗೆ ಮೂಡಿಸಿಕೊಳ್ಳಬೇಕು. * ಆಸೆ ಎಂಬ ದೇವತೆ ನಿಜಕ್ಕೂ ವಿಚಿತ್ರ. ಅವಳನ್ನು ಪೂಜಿಸಿದಷ್ಟೂ ದುಃಖ ನೀಡುತ್ತಾಳೆ; ಕಡೆಗಣಿಸಿದಷ್ಟೂ ಆನಂದ ನೀಡುತ್ತಾಳೆ! ** ಸಹಾನುಭೂತಿಯ ಮಾತುಗಳು ದ್ವೇಷಕ್ಕೆ ಮದ್ದು. ಇತರರಿಗೆ ಒಳಿತನ್ನುಂಟು ಮಾಡುವುದೇ ಸೌಹಾರ್ದಕ್ಕೆ ಮೂಲ. ನಿಂದೆಯಿಂದ, ಕೆಟ್ಟ ಮಾತುಗಳಿಂದ ಗೆಲುವು ಲಭಿಸಿದರೆ, ವಾಸ್ತವದಲ್ಲಿ […]

ಅವಿದ್ಯಾಮಾಯೆಯ ಔಚಿತ್ಯವೇನು? : ಪರಮಹಂಸರ ವಿವರಣೆ

“ಬದುಕಿಗೆ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಅವಶ್ಯಕ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ ಭಕ್ತನ ಪ್ರಶ್ನೆ : ಅವಿದ್ಯೆಯಿಂದ ಅಜ್ಞಾನ ಉಂಟಾಗುವುದಾದರೆ, ಭಗವಂತ ಅದನ್ನೇಕೆ ಸೃಷ್ಟಿಸಿದ? ಪರಮಹಂಸರು : ಕತ್ತಲೆ ಇಲ್ಲದೆ ಹೋದರೆ ಬೆಳಕಿನ ಮಹತ್ವ ಅರಿವಾಗುವುದಿಲ್ಲ. ದುಃಖ ಇಲ್ಲದಿದ್ದರೆ ಸುಖವೆಂದರೆ ಏನೆಂದು ಗೊತ್ತಾಗುವುದಿಲ್ಲ. ಸಿಪ್ಪೆ ಇರುವುದರಿಂದ ತಾನೆ ಮಾವಿನಕಾಯಿ ಚೆನ್ನಾಗಿ ಬೆಳೆಯುವುದು, ಹಣ್ಣಾಗುವುದು? ಮಾವಿನ ಕಾಯಿ ಸಂಪೂರ್ಣ ಹಣ್ಣಾಗಿ ತಿನ್ನಲು ಸಿದ್ಧವಾದ ಮೇಲೆ ಸಿಪ್ಪೆಯನ್ನು ಬಿಸಾಡುತ್ತೇವೆ ಅಲ್ಲವೆ? ಮಾಯೆಯೂ ಈ ಸಿಪ್ಪೆಯ ಹಾಗೆಯೇ. ಅದು ಇರುವುದರಿಂದಲೇ ಕಾಲಕ್ರಮದಲ್ಲಿ ಬ್ರಹ್ಮಜ್ಞಾನವನ್ನು […]