ಝೆನ್ ಗುರು ಸುಜುಕಿ ರೋಶಿಯ ಸಂಯಮ

ಝೆನ್ ಗುರು ಸುಜುಕಿ ರೋಶಿ ನೋಡಲು ಆಕರ್ಷಕನಾಗಿದ್ದ. ಬಹಳ ಬುದ್ಧಿವಂತನೂ, ಮಹಾ ಧ್ಯಾನಿಯೂ ಆಗಿದ್ದ.

ಅವನ ಕೀರ್ತಿಯನ್ನು ಕೇಳಿ, ಅವನನ್ನು ಕಾಣಲು ದಕ್ಷಿಣದಿಂದ ಯುವತಿಯೊಬ್ಬಳು ಬಂದಳು. ಝೆನ್ ಕಲಿಕೆಯ ಉದ್ದೇಶದಿಂದ ಅವನಲ್ಲಿ ಶಿಷ್ಯವೃತ್ತಿ ಸ್ವೀಕರಿಸಿದಳು. ಶ್ರದ್ಧೆಯಿಂದ ಅಭ್ಯಾಸ ನಡೆಸುತ್ತಲೇ ಆಕೆಗೆ ರೋಶಿಯಲ್ಲಿ ಪ್ರೇಮ ಉಂಟಾಯಿತು.

ಸೂಕ್ತ ಸಮಯ ನೋಡಿ ರೋಶಿಯ ಬಳಿ ಬಂದ ತರುಣಿ, ಆತನಲ್ಲಿ ತನಗಿರುವ ಪ್ರೇಮವನ್ನು ಹೇಳಿಕೊಂಡಳು. “ಈಗ ನಾನೇನು ಮಾಡಲಿ? ನನಗೆ ನಿಮ್ಮ ಶಿಷ್ಯಳಾಗಿಯೂ ಮುಂದುವರೆಯಬೇಕಿದೆ” ಎಂದು ಕೋರಿದಳು.

“ಚಿಂತಿಸಬೇಡ”, ಸುಜುಕಿ ಹೇಳಿದ.
“ನಿನ್ನ ಗುರುವಿನೆಡೆಗೆ ಯಾವ ಭಾವನೆಯನ್ನಾದರೂ ನೀನು ಇಟ್ಟುಕೊಳ್ಳಲು ಅವಕಾಶವಿದೆ. ಯೋಚನೆ ಬಿಡು. ಇಬ್ಬರಿಗೂ ಬೇಕಾದ ಸಂಯಮ ನನ್ನಲ್ಲಿದೆ.”

Leave a Reply