ಯುವತಿಯನ್ನು ಕೆಳಗಿಳಿಸದ ಎಕಿಡೊ : ಝೆನ್ ಕಥೆ

monk

ಬೌದ್ಧ ಬಿಕ್ಖುಗಳಾದ ತಾನ್ ಜೆನ್ ಮತ್ತು ಎಕಿಡೋ ಒಟ್ಟಿಗೆ ಝೆನ್ ಕಲಿಯುತ್ತಿದ್ದರು.

ಒಮ್ಮೆ ಅವರು ಎಲ್ಲಿಗೋ ಹೋಗುವುದಿತ್ತು. ಹಿಂದಿನ ರಾತ್ರಿ ಸಿಕ್ಕಾಪಟ್ಟೆ ಮಳೆ ಬಂದು ಚಿಕ್ಕ ಹಳ್ಳಗಳೆಲ್ಲ ತುಂಬಿ ರಸ್ತೆ ಮೇಲೆ ಹರಿದಿದ್ದವು. ಸಾಮಾನ್ಯದವರು ರಸ್ತೆ ದಾಟುವುದು ಕಷ್ಟ ಅನ್ನುವ ಪರಿಸ್ಥಿತಿ.

ಹೀಗಿರುವಾಗ ತಾನ್ ಜೆನ್ ಮತ್ತು ಎಕಿಡೊ ಸಾಹಸಪಟ್ಟು ನಡೆದುಹೋಗುತ್ತಿದ್ದರು. ಅದೇ ವೇಳೆಗೆ ಹಳ್ಳ ಹರಿಯುತ್ತಿದ್ದ ರಸ್ತೆಯನ್ನು ದಾಟಲಾಗದೆ ಯುವತಿಯೊಬ್ಬಳು ಪರದಾಡುತ್ತಿದ್ದಳು. ಅವಳ ಕಷ್ಟವನ್ನು ನೋಡಲಾಗದೆ ತಾನ್ ಜೆನ್, “ಇರು ಹುಡುಗಿ, ನಾನು ಸಹಾಯ ಮಾಡ್ತೀನಿ” ಅಂದು ಅವಳನ್ನು ಎತ್ತಿಕೊಂಡು ರಸ್ತೆ ದಾಟಿಸಿದ.

ತಾನ್ ಜೆನ್ ಮತ್ತು ಎಕಿಡೊ ಪ್ರಯಾಣ ಮುಂದುವರೆಯಿತು. ಅಷ್ಟೊತ್ತೂ ಮಾತಾಡುತ್ತಿದ್ದ ಎಕಿಡೊ ಮೌನದ ಮೊರೆಹೋಗಿಬಿಟ್ಟ. ಅಚ್ಚರಿ ಎನ್ನಿಸಿ ತಾನ್ ಜೆನ್ ಕಾರಣ ಕೇಳಿದ.

“ಅಲ್ಲಾ… ಒಬ್ಬ ಬಿಕ್ಖುವಾಗಿ ನೀನು ಆ ಯುವತಿಯನ್ನು ಎತ್ತಿಕೊಂಡಿದ್ದು ತಪ್ಪಲ್ಲವಾ?” ಕೇಳಿದ ಎಕಿಡೊ.
“ನಾನು ಆ ಯುವತಿಯನ್ನು ಆಗಲೇ ಇಳಿಸಿಯೂಬಿಟ್ಟೆನಲ್ಲ! ಅವಳನ್ನು ಕೆಳಗಿಳಿಸದೆ ತಲೆ ಮೇಲೆ ಹೊತ್ತುಕೊಂಡಿರೋದು ನೀನು” ಅಂದ ತಾನ್ ಜೆನ್.

Leave a Reply