ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/15/fromm-14/
Having knowledge & Knowing
Having ಮತ್ತು Being ಜೀವನ ವಿಧಾನಗಳ ನಡುವಿನ ವ್ಯತ್ಯಾಸವನ್ನು “ತಿಳಿದುಕೊಳ್ಳುವಿಕೆ” ಯ (knowing) ಪರಿಧಿಯಲ್ಲಿ ಎರಡು ಸಮೀಕರಣಗಳ (formulations) ಮೂಲಕ ವಿವರಿಸಬಹುದು : I have the knowledge ಮತ್ತು I know. Having ವಿಧಾನದಲ್ಲಿ ಜ್ಞಾನ ಎಂದರೆ, ಇರುವ ಮಾಹಿತಿಯ ಕ್ರೂಢಿಕರಣ ಮತ್ತು ಅದನ್ನು ಸ್ವಾಧೀನಪಡಿಸಿಕೊಳ್ಳುವುದು ; ತಿಳಿದುಕೊಳ್ಳುವಿಕೆ (knowing) ಕ್ರಿಯಾತ್ಮಕವಾದದ್ದು ಮತ್ತು ಅದು ಕೇವಲ ಸೃಜನಶೀಲ ಆಲೋಚನಾ ಪ್ರಕ್ರಿಯೆಯಲ್ಲಿ ಮಾತ್ರ ವಾಹಕದಂತೆ (means) ಭಾಗವಹಿಸುವಂಥದು.
ಅಸ್ತಿತ್ವದ Being ಜೀವನ ವಿಧಾನದಲ್ಲಿ, “ತಿಳಿದುಕೊಳ್ಳುವಿಕೆ” ಯ ಗುಣಮಟ್ಟವನ್ನು ನಾವು, ಬುದ್ಧ, ಹಿಬ್ರೂ ಪ್ರವಾದಿಗಳು, ಜೀಸಸ್, Master Eckhart, ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಮಾರ್ಕ್ಸ್ ಮುಂತಾದವರ ಒಳನೋಟಗಳ ಮೂಲಕ ಹೆಚ್ಚಿಸಬಹುದು. ಅವರ ಪ್ರಕಾರ ತಿಳಿದುಕೊಳ್ಳುವಿಕೆ ಶುರುವಾಗುವುದೇ, ನಮ್ಮ ಕಾಮನ್ ಸೆನ್ಸ್ ಗ್ರಹಿಕೆಗಳಲ್ಲಿರುವ ಕಪಟತನಗಳ ಬಗೆಗಿನ ಅರಿವನ್ನು ಗೊತ್ತು ಮಾಡಿಕೊಳ್ಳುವುದರ ಮೂಲಕ, ಹಾಗೆಂದರೆ ಭೌತಿಕ ವಾಸ್ತವದ ಕುರಿತಾದ ನಮ್ಮ ಗ್ರಹಿಕೆಯ ಚಿತ್ರ, ನಿಜ ವಾಸ್ತವದ ( really real) ಚಿತ್ರದ ಜೊತೆ ಸರಿ ಹೊಂದದೇ ಇರುವುದು ಮತ್ತು ಮುಖ್ಯವಾಗಿ, ಬಹುತೇಕ ಜನರು ಅರ್ಧ ಎಚ್ಚರದಲ್ಲಿರುವುದು, ಅರ್ಧ ಕನಸಿನಲ್ಲಿರುವುದು ಮತ್ತು ತಾವು ಸತ್ಯ ಹಾಗು ಸ್ವಯಂ ಪ್ರಮಾಣ ಎಂದು ನಂಬಿದ ಅನೇಕ ಸಂಗತಿಗಳು, ತಾವು ಬದುಕುತ್ತಿರುವ ಸಾಮಾಜಿಕ ಜಗತ್ತಿನ ಸೂಚನಾತ್ಮಕ ಪ್ರಭಾವಗಳು (suggestive influence) ಸೃಷ್ಟಿ ಮಾಡಿದ ಭ್ರಮೆಗಳು ಎನ್ನುವುದರ ಬಗ್ಗೆ ಅರಿವು ಹೊಂದಿಲ್ಲದೇ ಇರುವುದು. ಆದ್ದರಿಂದ ಇಲ್ಲಿ knowing ಶುರುವಾಗೋದು, ಈ ಎಲ್ಲ ಭ್ರಮೆಗಳನ್ನು ಚೂರು ಚೂರು ಮಾಡುವ ಮೂಲಕ. knowing ಎಂದರೇನೇ ಮೇಲ್ಮೈಯನ್ನು ಛೇದಿಸಿ, ಬೇರುಗಳನ್ನು, ಮತ್ತು ಹಾಗಾಗಿ ಕಾರಣಗಳನ್ನೂ ತಲುಪುವುದು; knowing ಎಂದರೆ ವಾಸ್ತವವನ್ನು ಅದರ ಪೂರ್ಣ ಬೆತ್ತಲೆಯಲ್ಲಿ “ನೋಡುವುದು”. Knowing ಎಂದರೆ ಸತ್ಯದ ಸ್ವಾಧೀನದಲ್ಲಿ ಇರುವುದಲ್ಲ; knowing ಎಂದರೆ ಮೇಲ್ಮೈಯನ್ನ ಛೇದಿಸುತ್ತ, ಆದಷ್ಟು ಎಂದಿಗಿಂತ ಸತ್ಯದ ಹತ್ತಿರ ಸಮೀಪಿಸುವುದು ಕ್ರಿಯಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ.
ಇಂಥ ಕ್ರಿಯಾತ್ಮಕ ಛೇದನದ (creative penetration) ಕ್ವಾಲಿಟಿಯನ್ನ ಹೀಬ್ರೂ ಭಾಷೆಯಲ್ಲಿ jadoa ಎನ್ನುತ್ತಾರೆ, jadoa ಎಂದರೆ, ತಿಳಿದುಕೊಳ್ಳುವುದು (to know) ಮತ್ತು ಪ್ರೀತಿಸುವುದು, ಗಂಡಿನ ಲೈಂಗಿಕ ಪೆನಿಟ್ರೇಶನ್ ಸಂದರ್ಭದಲ್ಲಿ ವ್ಯಕ್ತವಾಗುವಂತೆ. ಅರಿವು ಮತ್ತು ಎಚ್ಚರದ ಮನುಷ್ಯ ಬುದ್ಧ ಜನರಿಗೆ, ಸಂಗತಿಗಳಿಗಾಗಿ, ವಿಷಯಗಳಿಗಾಗಿ ತುಡಿಯುವುದು ಆನಂದಕ್ಕೆ ದಾರಿಮಾಡಿಕೊಡುತ್ತದೆ ಎನ್ನುವ ಭ್ರಮೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಎಚ್ಚರವನ್ನು ಸಾಧಿಸಿಕೊಳ್ಳುವಂತೆ ಕರೆ ನೀಡಿದ. ಹೀಬ್ರೂ ಪ್ರವಾದಿಗಳು ಜನರಿಗೆ, ಎಚ್ಚರಗೊಳ್ಳುವಂತೆ, ತಾವು ಪೂಜಿಸುತ್ತಿರುವ ವಿಗ್ರಹಗಳು ತಾವೇ ಸೃಷ್ಟಿಸಿದ್ದು ಮತ್ತು ಇದು ಭ್ರಮೆ ಎನ್ನುವುದನ್ನ ತಿಳಿದುಕೊಳ್ಳುವಂತೆ ಮನವಿ ಮಾಡುತ್ತಾರೆ. ಸತ್ಯ ನಿಮ್ಮನ್ನು ಮಕ್ತರನ್ನಾಗಿಸುತ್ತದೆ ಎಂದು ಜೀಸಸ್ ಹೇಳುತ್ತಾನೆ. Master Eckhart ಬಹಳಷ್ಟು ಬಾರಿ knowing ಕುರಿತಾದ ತನ್ನ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದಾನೆ; ಉದಾಹರಣೆಗೆ, ದೇವರ ಬಗ್ಗೆ ಮಾತನಾಡುವಾಗ ಅವನು ಹೇಳುತ್ತಾನೆ : “ಜ್ಞಾನ ಎಂದರೆ ಯಾವುದೋ ಒಂದು ನಿರ್ದಿಷ್ಟ ವಿಚಾರವಲ್ಲ ಬದಲಾಗಿ, ಅದು ಸುಲಿಯುತ್ತದೆ (ಎಲ್ಲ ಹೊದಿಕೆಗಳಿಂದ) ಮತ್ತು ಅದಕ್ಕೆ ಯಾವ ಆಸಕ್ತಿಯೂ ಇಲ್ಲ ಹಾಗು ಅದು ಬೆತ್ತಲೆಯಾಗಿ ದೇವರತ್ತ ಓಡುತ್ತದೆ, ಅವನನ್ನು ಮುಟ್ಟುವ ತನಕ ಮತ್ತು ತಿಳಿದುಕೊಳ್ಳುವ ತನಕ” (Blakney, p.243). ( “ಬೆತ್ತಲುತನ” ಮತ್ತು “ಬೆತ್ತಲು” ಎರಡು ಕೂಡ Master Eckhart ಮತ್ತು The cloud of unknowing ರಚಿಸಿದ ಅವನ ಸಮಕಾಲೀನ ಅನಾಮಿಕ ಲೇಖಕನ ನೆಚ್ಚಿನ ಅಭಿವ್ಯಕ್ತಿಗಳು). ಕಾರ್ಲ್ ಮಾರ್ಕ್ಸ್ ನ ಪ್ರಕಾರ, ಭ್ರಮೆಗಳು ಅನವಶ್ಯಕ ಎನ್ನುವಂಥ ಸ್ಥಿತಿಯನ್ನ ಸೃಷ್ಟಿ ಮಾಡಲು ಮನುಷ್ಯ, ಮೊದಲು ಎಲ್ಲ ಭ್ರಮೆಗಳನ್ನು ನಾಶ ಮಾಡಬೇಕು. ಸಿಗ್ಮಂಡ್ ಫ್ರಾಯ್ಡ್ ನ self knowledge ನ ಪರಿಕಲ್ಪನೆಯ ಆಧಾರ, ಅಪ್ರಜ್ಞಾತ್ಮಕ ವಾಸ್ತವದ (unconscious reality) ಬಗ್ಗೆ ಅರಿವು ಮೂಡಿಸಿಕೊಳ್ಳಲು, ಮೊದಲು ಎಲ್ಲ ಭ್ರಮೆಗಳನ್ನು ನಾಶ ಮಾಡಬೇಕು (rationalisation) ಎನ್ನುವುದು. ( enlightenment thinkers ಗಳಲ್ಲಿ ಕೊನೆಯವನಾದ ಫ್ರಾಯ್ಡ್ ನನ್ನು ಹದಿನೆಂಟನೇ ಶತಮಾನದ enlightenment philosophy ಯ ಸಂದರ್ಭದಲ್ಲಿ ರೆವಲ್ಯೂಷನರಿ ಥಿಂಕರ್ ಎನ್ನಬಹುದೇ ವಿನಹ ಇಪ್ಪತ್ತನೇಯ ಶತಮಾನದ ಸಂದರ್ಭದಲ್ಲಿ ಅಲ್ಲ).
ಈ ಎಲ್ಲ ವಿಚಾರವಾದಿಗಳ ಮುಖ್ಯ ಕಾಳಜಿ ಮನುಷ್ಯನ ಬಿಡುಗಡೆ (human salvation); ಈ ಎಲ್ಲರೂ ಸಾಮಾಜಿಕವಾಗಿ ಅಂಗೀಕೃತವಾದ ವಿಚಾರಸರಣಿಯ ಬಗ್ಗೆ ವಿಮರ್ಶಾತ್ಮಕವಾಗಿ ಚಿಂತಿಸಿದವರು. ಅವರಿಗೆ, knowing ನ ಉದ್ದೇಶ, ಒಬ್ಬರು ಅನುಭವಿಸಬಹುದಾದ, ಸಾಧಿಸಬಹುದಾದ “ಪರಿಪೂರ್ಣ ಸತ್ಯ”ದ ಬಗೆಗಿನ ಖಚಿತತೆ ಅಲ್ಲ. ಬದಲಾಗಿ ಅವರಿಗೆ knowing ಎಂದರೆ, ಮನುಷ್ಯ ವಿವೇಕದ ಸ್ವಯಂ ಧೃಡೀಕರಣದ ಪ್ರಕ್ರಿಯೆ. ಯಾರಿಗೆ ಅರಿವು ಇದೆಯೋ ( one who knows) ಅವರಿಗೆ ಅಜ್ಞಾನವೂ ಜ್ಞಾನದಂತೆಯೇ ಏಕೆಂದರೆ, ಈ ಎರಡು ಕೂಡ knowing ಪ್ರಕ್ರಿಯೆಯ ಭಾಗಗಳು, ಆದರೆ ಈ ಬಗೆಯ ಅಜ್ಞಾನ, ವಿಚಾರರಹಿತತೆ (unthinking) ಯಿಂದ ಹುಟ್ಟಿದ ಅಜ್ಞಾನಕ್ಕಿಂತ ವಿಭಿನ್ನವಾದದ್ದು. Being ಜೀವನ ವಿಧಾನದಲ್ಲಿ optimum knowledge ಎಂದರೆ, ಇನ್ನೂ ಆಳವಾಗಿ ತಿಳಿದುಕೊಳ್ಳಲು ಬೇಕಾಗುವಷ್ಟು ಆದರೆ Having ವಿಧಾನದಲ್ಲಿ, ಹೆಚ್ಚು ಹೆಚ್ಚು ಮಾಹಿತಿ ಸಂಗ್ರಹಿಸಲು ಬೇಕಾಗುವಷ್ಟು.
ನಮ್ಮ ಶಿಕ್ಷಣ ಪದ್ಧತಿ ಸಾಮಾನ್ಯವಾಗಿ knowledge ನ ಆಸ್ತಿಯಂತೆ ಹೊಂದಲು ಜನರನ್ನು ತರಬೇತುಗೊಳಿಸುತ್ತದೆ, ಈ ವ್ಯವಸ್ಥೆ ಬಹುತೇಕ ಜನರು ತಮ್ಮ ನಂತರದ ಬದುಕಿನಲ್ಲಿ ಹೊಂದಬಹುದಾದ ಆಸ್ತಿಯ ಪ್ರಮಾಣ ಮತ್ತು ಗಳಿಸಬಹುದಾದ ಸಾಮಾಜಿಕ ಪ್ರತಿಷ್ಠೆಗೆ ಅನುಗುಣವಾಗಿರುತ್ತದೆ. ಅವರು ಪಡೆಯುವ knowledge ನ ಕನಿಷ್ಠ ಪ್ರಮಾಣ , ಅವರಿಗೆ ತಮ್ಮ ಕೆಲಸ ಕಾರ್ಯಗಳನ್ನು ಸಾಂಗವಾಗಿ ನಿರ್ವಹಿಸಲು ಸಾಕಾಗುವಷ್ಟಿರುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಪ್ರತಿಯೊಬ್ಬರಿಗೂ luxury-knowledge package ನ್ನು ತಮ್ಮ ಮೌಲ್ಯ ಭಾವವನ್ನ (feeling of worth) ಹೆಚ್ಚು ಮಾಡಿಕೊಳ್ಳಲು ನೀಡಲಾಗುತ್ತದೆ. ಪ್ರತಿ ಪ್ಯಾಕೇಜ್ ನ ಪ್ರಮಾಣ ವ್ಯಕ್ತಿಯ ಸಂಭವನೀಯ ಸಾಮಾಜಿಕ ಪ್ರತಿಷ್ಠೆಗೆ ಹೊಂದುವಂತಿರುತ್ತದೆ. ತಮ್ಮ ಉದ್ದೇಶ, ಹ್ಯೂಮನ್ ಮೈಂಡ್ ಗೆ ಸಾಧ್ಯವಾಗಬಹುದಾದ ಅತ್ಯುಚ್ಚ ಸಾಧನೆಗಳ ಸಮೀಪಕ್ಕೆ ಮಕ್ಕಳನ್ನು ಕರೆತರುವುದು ಎಂದು ಸ್ಕೂಲ್ ಗಳು ಹೇಳಿಕೊಳ್ಳುತ್ತವೆಯಾದರೂ, ಸ್ಕೂಲ್ ಗಳು ಈ ಒಟ್ಟು knowledge package ಗಳನ್ನ ತಯಾರಿಸುವ ಕಾರ್ಖಾನೆಗಳಂತೆ ಕೆಲಸ ಮಾಡುತ್ತವೆ. ಬಹಳಷ್ಟು ಪದವಿಪೂರ್ವ ಕಾಲೇಜುಗಳು ಈ ಭ್ರಮೆಗಳನ್ನು ಪೋಷಿಸುವಲ್ಲಿ ವಿಶೇಷ ಚಾಣಾಕ್ಷತೆಯನ್ನು ಹೊಂದಿವೆ. ಭಾರತೀಯ ಚಿಂತನೆ ಮತ್ತು ಕಲೆಯಿಂದ ಹಿಡಿದು ಅಸ್ತಿತ್ವವಾದ ಮತ್ತು ಅತಿವಾಸ್ತವಿಕವಾದದ (surrealism) ವರೆಗೆ ಥರಾವರಿ ನಾಲೇಜ್ ನ ವಿದ್ಯಾರ್ಥಿಗಳಿಗೆ ಆಫರ್ ಮಾಡಲಾಗುತ್ತದೆ. ಮತ್ತು ಈ knowledge Buffett ಯಲ್ಲಿ ವಿದ್ಯಾರ್ಥಿಗಳು ಅಲ್ಲಿಷ್ಟು ಇಲ್ಲಿಷ್ಟು ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗು, ಸ್ವಾಭಾವಿಕತೆ (spontaneity) ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಯಾವುದೇ ಒಂದು ವಿಷಯದ ಕುರಿತು ಏಕಾಗ್ರತೆಯನ್ನು ಹೊಂದುವಂತೆ ಅವರನ್ನು ಒತ್ತಾಯಿಸಲು ನಿರಾಕರಿಸಲಾಗುತ್ತದೆ. ಕೊನೆಪಕ್ಷ ಒಂದು ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸುವಂತೆಯೂ ಅವರನ್ನ ಪ್ರೋತ್ಸಾಹಿಸಲಾಗುವುದಿಲ್ಲ. ( Ivan Illich’s radical critique of the school system brings many of its failings into focus.)
(ಮುಂದುವರೆಯುತ್ತದೆ…)
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )
1 Comment