ಹಳೆಯ ಒಡಂಬಡಿಕೆಯಲ್ಲಿ having ಮತ್ತು being… : To have or to be #21

ಪ್ರತಿಕೂಲ ವಾತಾವರಣದಿಂದ ಪಾರಾಗಲು ವಲಸೆ ಹೋಗುವ (exodus) ಪ್ರಕ್ರಿಯೆಯ ಇತಿಹಾಸ, ದುರಂತ ಅಂತ್ಯದತ್ತ ಸಾಗುತ್ತದೆ. ಹೀಬ್ರೂಗಳಿಗೆ having ನ ಹೊರತುಪಡಿಸಿ ಬದುಕುವುದು ಅಸಾಧ್ಯವಾಗುತ್ತದೆ, ಅವರು ಸ್ಥಿರ ಮನೆಯಿಲ್ಲದೆ ಹಾಗು ಆಹಾರವಿಲ್ಲದೆ ( ದೇವರು ಕಳುಹಿಸಿದ ಆಹಾರ ಹೊರತುಪಡಿಸಿ) ಬದುಕಬಲ್ಲರಾದರೂ, ಕಣ್ಣಿಗೆ ಕಾಣುವ ವರ್ತಮಾನದ ನಾಯಕನಿಲ್ಲದೆ ಬದುಕಲಾರರು… : ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

(ಮುಂದುವರೆದ ಭಾಗ…)

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2023/04/29/fromm-18/

ಶಬ್ಬತ್ ನ ಈ ಕೇಂದ್ರ ಪಾತ್ರವನ್ನ ತಿಳಿದುಕೊಳ್ಳಲಿಕ್ಕಾಗಿ ನಾವು ಶಬ್ಬತ್ ಸಂಸ್ಥೆಯ ತಿರುಳಿಗೆ ಪೆನಿಟ್ರೇಟ್ ಮಾಡಿ ಪ್ರವೇಶ ಮಾಡಬೇಕು. ಇದು ಕೇವಲ ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಕಠಿಣ ಪ್ರಯತ್ನ ಮಾಡದ ಸರಳ ವಿಶ್ರಾಂತಿಯ ವಿಷಯ ಅಲ್ಲ. ಇದು ಮನುಷ್ಯ ಮನುಷ್ಯರ ನಡುವಿನ ಹಾಗು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಪೂರ್ಣ ಸೌಹಾರ್ದತೆಯನ್ನ (harmony) ಪುನರ್ ಪ್ರತಿಷ್ಠಾಪಿಸುವ ವಿಶೇಷ ವಿಶ್ರಾಂತಿಯ ವಿಷಯ. ಯಾವುದನ್ನೂ ಸೃಷ್ಟಿಸಬಾರದು, ಏನನ್ನೂ ನಾಶ ಮಾಡಬಾರದು : ಶಬ್ಬತ್ ಎಂದರೆ ಮನುಷ್ಯ ಮತ್ತು ಜಗತ್ತಿನೊಡನೆ ನಡೆಯುತ್ತಿರುವ ಮಹಾ ಯುದ್ಧದ ಕದನ ವಿರಾಮದ ದಿನ. ಯಾವ ಸಾಮಾಜಿಕ ಬದಲಾವಣೆಯೂ ಆಗಬಾರದು, ಹುಲ್ಲು ಕತ್ತರಿಸುವುದನ್ನು ಕೂಡ ಈ ಸಂಧಾನದ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ, ಬೆಂಕಿಕಡ್ಡಿಯನ್ನ ಹೊತ್ತಿಸುವುದನ್ನ ಕೂಡ. ಈ ಕಾರಣಕ್ಕಾಗಿಯೇ ದಾರಿಯಲ್ಲಿ ಏನನ್ನಾದರೂ ಹೊತ್ತುಕೊಂಡು ಹೋಗುವುದನ್ನ ನಿಷೇಧಿಸಲಾಗಿದೆಯಾದರೆ ( ಅದು ಅತ್ಯಂತ ಕಡಿಮೆ ಭಾರದ ಕರವಸ್ತ್ರದಂಥ ವಸ್ತುವಾಗಿದ್ದರು ಕೂಡ), ಗಾರ್ಡನ್ ಲ್ಲಿ ಭಾರ ಹೊರುವುದಕ್ಕೆ ಅನುಮತಿ ನೀಡಲಾಗಿದೆ. ವಿಷಯ ಏನೆಂದರೆ, ನಿಷೇಧಗೊಂಡಿರುವುದು ಭಾರ ಹೊರುವಂಥ ಪ್ರಯತ್ನವಲ್ಲ, ಅನುಮತಿ ಇರದಿರುವುದು ಒಂದು ಖಾಸಗಿ ಜಾಗೆಯಿಂದ ಯಾವುದೇ ವಸ್ತುವನ್ನ ಇನ್ನೊಂದು ಜಾಗಕ್ಕೆ ಸಾಗಿಸುವುದಕ್ಕೆ, ಏಕೆಂದರೆ ಇಂಥ ಸಾಗಾಣಿಕೆಯನ್ನ ಮೂಲಭೂತವಾಗಿ ಆಸ್ತಿಯ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ. ಶಬ್ಬತ್ ನ ದಿನ, ಒಬ್ಬರು ತಮ್ಮ ಬಳಿ ಏನೂ ಇಲ್ಲ ಎನ್ನುವಂತೆ ಬದುಕಬೇಕು , being ನ ಹೊರತಾಗಿ ಬದುಕಿಗೆ ಯಾವ ಉದ್ದೇಶವೂ ಇಲ್ಲ ಎನ್ನುವಂತೆ. ಹಾಗೆಂದರೆ ಮನುಷ್ಯನ ಅವಶ್ಯಕ ಸಾಮರ್ಥ್ಯಗಳನ್ನು (essential powers) ಮಾತ್ರ ಅಭಿವ್ಯಕ್ತಿಸುವುದು : ಉದಾಹರಣೆಗೆ, ಪ್ರಾರ್ಥಿಸುವುದು, ಅಭ್ಯಾಸ ಮಾಡುವುದು, ತಿನ್ನುವುದು, ಕುಡಿಯುವುದು, ಹಾಡುವುದು, ಪ್ರೀತಿಸುವುದು ಇತ್ಯಾದಿಯಾಗಿ.

ಶಬ್ಬತ್ ಎಂದರೆ, ಸಂಭ್ರಮಾಚರಣೆಯ ದಿನ, ಏಕೆಂದರೆ ಅಂದು ಪ್ರತಿಯೊಬ್ಬರೂ ತಮ್ಮೊಳಗೆ ಒಂದಾಗಿರುತ್ತಾರೆ. ಈ ಕಾರಣದಿಂದಲೇ ಯಹೂದಿಗಳ ಸಾಂಪ್ರದಾಯಿಕ ಕಾನೂನು Talmud, ಶಬ್ಬತ್ ನ್ನು ಮಸೀಹಾ ಗೆ (messiah) ಸಂಬಂಧಿಸಿದ ಸಮಯದ (messianic time) ಎದುರು ನೋಡುವಿಕೆ ಎಂದು ಕರೆಯುತ್ತದೆ, ಮತ್ತು ಇಂಥ ಸಮಯ ಎಂದರೆ ಎಂದೂ ಕೊನೆಯಾಗದ ಶಬ್ಬತ್ : ಆ ದಿನದಲ್ಲಿ ಆಸ್ತಿ ಮತ್ತು ಹಣ ಹಾಗು ಶೋಕಾಚರಣೆ ಮತ್ತು ದುಗುಡಗಳನ್ನು ನಿಷಿದ್ಧ ಎಂದು ಪರಿಗಣಿಸಲಾಗುತ್ತದೆ; ಆ ದಿನ ಎಂದರೆ ಸಮಯ ಸೋತಿರುವ ಮತ್ತು ಶುದ್ಧ ಇರುವಿಕೆ (pure being) ವಿಜಯ ಸಾಧಿಸಿರುವ ದಿನ. ಶಬ್ಬತ್ ನ ಐತಿಹಾಸಿಕ ಪೂರ್ವಜ, ಬ್ಯಾಬಿಲೋನಿಯನ್ ಶಪಟ್ಟು (shapattu) ದುಗುಡ ಮತ್ತು ಭಯದ ದಿನವಾಗಿತ್ತು. ಆಧುನಿಕ ಸಂಡೆ ಮೋಜಿನ ದಿನ, ಬಳಕೆಯ ಮತ್ತು ತಮ್ಮಿಂದ ತಾವು ಪಲಾಯನ ಮಾಡುವ ದಿನ. ಹಾಗಾದರೆ ಶಬ್ಬತ್ ನ ಮತ್ತೆ , ಸೌಹಾರ್ದಯುತ ಮಾನವ ಭವಿಷ್ಯವನ್ನು ಎದುರು ನೋಡುತ್ತಿರುವ ಶಾಂತಿ ಮತ್ತು ಸೌಹಾರ್ದದ ಸಾರ್ವತ್ರಿಕ ದಿನ, ಹ್ಯೂಮನ್ ಡೇ ಎಂದು ಪುನರ್ ಸ್ಥಾಪಿಸಲು ಇದು ಸೂಕ್ತವಾದ ಸಮಯ ಅಲ್ಲವೇ ಎಂದು ಯಾರಾದರೂ ಚಿಂತಿಸಬಹುದು.

ಮುಂದೊಂದು ದಿನ ಮಸೀಹಾ ಮತ್ತೆ ಜಗತ್ತನ್ನು ಆಳುತ್ತಾ ಸಾರ್ವತ್ರಿಕ ಶಾಂತಿ, ಸೌಹಾರ್ದತೆಯನ್ನು ಸ್ಥಾಪಿಸುತ್ತಾನೆ ಎನ್ನುವ ಪರಿಕಲ್ಪನೆ (messianic time), ಜಗತ್ತಿನ ಸಂಸ್ಕೃತಿಗೆ ಯಹೂದಿಗಳ ವಿಶೇಷ ಕೊಡುಗೆ, ಮತ್ತು ಇದು ಶಬ್ಬತ್ ನೊಂದಿಗೆ ಅವಶ್ಯಕವಾಗಿ ಐಡೆಂಟಿಕಲ್ ಆಗಿದೆ. ಶಬ್ಬತ್ ನಂತೆ ಈ ದರ್ಶನ ಯಹೂದಿಗಳಿಗೆ ಬದುಕು ಉಳಿಸುವ ಭರವಸೆಯಾಗಿದೆ. ಈ ದಾರಿಯಲ್ಲಿ, ಎರಡನೇ ಶತಮಾನದ Bar Kochaba ನಿಂದ ಹಿಡಿದು ಇಲ್ಲಿಯವರೆಗೆ ಎಷ್ಟೋ ಸುಳ್ಳು ಮಸೀಹಾಗಳು ತೀವ್ರ ನಿರಾಶೆಯನ್ನು ಮೂಡಿಸಿದರೂ ಯಹೂದಿಗಳು ಮಾತ್ರ ತಮ್ಮ ಭರವಸೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಶಬ್ಬತ್ ನಂತೆ messianic time ಕೂಡ ಒಂದು ಐತಿಹಾಸಿಕ ಕಾಲಘಟ್ಟದ ದರ್ಶನ ಮತ್ತು ಈ ದರ್ಶನದ ಪ್ರಕಾರ ಸ್ವಾಧಿನತೆ ಸಾಧಿಸುವುದು ಅರ್ಥಹೀನವಾಗುತ್ತದೆ, ಭಯ ಮತ್ತು ಯುದ್ಧಗಳು ಕೊನೆಗೊಳ್ಳುತ್ತವೆ, ಮತ್ತು ನಮ್ಮ ಅವಶ್ಯಕ ಸಾಮರ್ಥ್ಯಗಳ ಅಭಿವ್ಯಕ್ತಿ ನಮ್ಮ ಬದುಕಿನ ಉದ್ದೇಶವಾಗಿ ಸ್ಥಾಪಿತವಾಗುತ್ತದೆ.*

ಪ್ರತಿಕೂಲ ವಾತಾವರಣದಿಂದ ಪಾರಾಗಲು ವಲಸೆ ಹೋಗುವ (exodus) ಪ್ರಕ್ರಿಯೆಯ ಇತಿಹಾಸ, ದುರಂತ ಅಂತ್ಯದತ್ತ ಸಾಗುತ್ತದೆ. ಹೀಬ್ರೂಗಳಿಗೆ having ನ ಹೊರತುಪಡಿಸಿ ಬದುಕುವುದು ಅಸಾಧ್ಯವಾಗುತ್ತದೆ, ಅವರು ಸ್ಥಿರ ಮನೆಯಿಲ್ಲದೆ ಹಾಗು ಆಹಾರವಿಲ್ಲದೆ ( ದೇವರು ಕಳುಹಿಸಿದ ಆಹಾರ ಹೊರತುಪಡಿಸಿ) ಬದುಕಬಲ್ಲರಾದರೂ, ಕಣ್ಣಿಗೆ ಕಾಣುವ ವರ್ತಮಾನದ ನಾಯಕನಿಲ್ಲದೆ ಬದುಕಲಾರರು.

ಆದ್ದರಿಂದ ಯಾವಾಗ ಮೋಸೆಸ್ ಬೆಟ್ಟದಲ್ಲಿ ಮಾಯವಾಗುತ್ತಾನೋ ಆಗ, ತೀವ್ರ ಹತಾಶರಾದ ಹೀಬ್ರೂಗಳು, Aron ಗೆ ತಮಗೆ ಪೂಜಿಸಲು ಸಾಧ್ಯವಾಗುವಂಥ ಕಣ್ಣಿಗೆ ಕಾಣುವ ಅಭಿವ್ಯಕ್ತಿಯೊಂದನ್ನ (visual manifestation) ತಯಾರಿಸಿಕೊಡುವಂತೆ ಬೇಡಿಕೊಳ್ಳುತ್ತಾರೆ : ಅದುವೇ ಬಂಗಾರದ ಕರು (Golden calf). ಇಲ್ಲಿ ಯಾರಾದರೂ ಹೇಳಬಹುದು, ಈಜಿಪ್ತಿನಿಂದ ಬಂಗಾರ ಮತ್ತು ಆಭರಣ ಹೊರಗೆ ತೆಗೆದುಕೊಂಡು ಹೋಗಲು ತಮಗೆ ಅನುಮತಿ ನೀಡಿದ ದೇವರ ತಪ್ಪಿಗೆ ಅವರು ದಂಡ ತೆರುತ್ತಿದ್ದಾರೆ ಎಂದು. ಬಂಗಾರದ ಜೊತೆ ಅವರು ತಮ್ಮೊಳಗೆ ಸಂಪತ್ತಿನ ಕುರಿತಾದ ತೀವ್ರ ಹಂಬಲವನ್ನೂ ಹೊತ್ತುಕೊಂಡರು ; ಮತ್ತು ಹತಾಶೆಯ ಗಳಿಗೆ ಎದುರಾದಾಗ, ಅವರ ಅಸ್ತಿತ್ವದಲ್ಲಿನ ಸ್ವಾಮ್ಯ ಸಾಧನೆಯ ಸಂರಚನೆ (possessive structure) ತನ್ನನ್ನು ತಾನು ಪುನರ್ ಪ್ರತಿಪಾದಿಸಿಕೊಂಡಿತು. Aron ಅವರ ಬಂಗಾರದಿಂದ ಅವರಿಗಾಗಿ ಕರುವೊಂದನ್ನ ತಯಾರಿಸುತ್ತಾನೆ, ಮತ್ತು ಆಗ ಜನ ಹೇಳುತ್ತಾರೆ : “ಇವು ನಮ್ಮ ದೇವರುಗಳು, ಓ ಇಸ್ರೇಲ್ , ಇವರು ನಿನ್ನ ಈಜಿಪ್ತಿನ ನೆಲದಿಂದ ಹೊರಗೆ ಕರೆದುಕೊಂಡು ಬಂದವರು”. (Exodus 32:4)

ಇಡೀ ಒಂದು ಪೀಳಿಗೆ ಸತ್ತು ಹೋಯಿತು ಮತ್ತು ಮೋಸೆಸ್ ಗೆ ಕೂಡ ಹೊಸ ನೆಲದಲ್ಲಿ ಕಾಲಿಡಲು ಅವಕಾಶ ನಿರಾಕರಿಸಲಾಯಿತು. ಆದರೆ ಹೊಸ ಪೀಳಿಗೆಯವರು ಸ್ವಲ್ಪ ಹೆಚ್ಚು ಸಾಮರ್ಥ್ಯಶಾಲಿಗಳಾಗಿದ್ದರು ನಿಯಮಗಳನ್ನು ಮೀರುವಲ್ಲಿ ಮತ್ತು ನೆಲದ ನಿಯಮಗಳಿಗೆ ಬದ್ಧರಾಗದೇ ಆ ನೆಲದ ಮೇಲೆ ಬದುಕುವಲ್ಲಿ (ಅವರ ಪೂರ್ವಜರಂತಲ್ಲದೆ). ಅವರು ಹೊಸ ನೆಲವನ್ನ ವಶಪಡಿಸಿಕೊಂಡರು, ತಮ್ಮ ವೈರಿಗಳನ್ನು ನಿರ್ನಾಮ ಮಾಡಿದರು, ತಮ್ಮ ನೆಲದಲ್ಲಿ ಸ್ಥಿರವಾದರು, ಮತ್ತು ತಮ್ಮ ವಿಗ್ರಹಗಳನ್ನು ಪೂಜೆ ಮಾಡತೊಡಗಿದರು. ಅವರು ತಮ್ಮ ಡೆಮಾಕ್ರಟಿಕ್ ಬುಡಕಟ್ಟಿನ ಬದುಕನ್ನ ಸಣ್ಣಮಟ್ಟಿಗೆಯಾದರೂ ಓರಿಯೆಂಟಲ್ ನಿರಂಕುಶಾಧಿಕಾರವಾಗಿ ಬದಲಾಯಿಸಿಕೊಂಡರಾದರೂ, ಆ ದಿನದ ಮಹಾ ಶಕ್ತಿಶಾಲಿಗಳನ್ನು (great powers) ನಕಲು ಮಾಡುವಲ್ಲಿ ಅವರು ಕಡಿಮೆ ಉತ್ಸುಕರೇನೂ ಆಗಿರಲಿಲ್ಲ. ಈ ಕ್ರಾಂತಿ ವಿಫಲವಾಯಿತಾದರೂ, ಈ ಕ್ರಾಂತಿಯ ಏಕೈಕ ಸಾಧನೆ ಎಂದು ಏನನ್ನಾದರೂ ಹೇಳುವುದಾದರೆ, ಹೀಬ್ರೂಗಳು ಈಗ ಗುಲಾಮರಾಗಿ ಉಳಿಯಲಿಲ್ಲ, ಅವರು ಮಾಸ್ಟರ್ ಗಳಾದರು. ಅವರ ನೆನಪು ಕೂಡ ಈಗ ಯಾರಿಗೂ ಇರುತ್ತಿರಲಿಲ್ಲ, ಕೇವಲ near east ಇತಿಹಾಸದ learned footnote ನ ಜಾಗೆಯನ್ನು ಹೊರತುಪಡಿಸಿ, ಒಂದು ವೇಳೆ ಈ ಹೊಸ ಮೆಸೆಜ್ ತನ್ನ ಅಭಿವ್ಯಕ್ತಿಯನ್ನ ಕ್ರಾಂತಿಕಾರಿ ವಿಚಾರವಾದಿಗಳ ಮತ್ತು ದಾರ್ಶನಿಕರ ಮೂಲಕ, ಯಾರು ತಮ್ಮ ನಾಯಕತ್ವದ ಭಾರ ಮತ್ತು ವಿಶೇಷವಾಗಿ ಸರ್ವಾಧಿಕಾರಿ ಅಧಿಕಾರ ವಿಧಾನಗಳ ಅವಶ್ಯಕ ಬಳಕೆಯಿಂದ ಕಳಂಕಿತರಾಗಿಲ್ಲವೋ (ಮೋಸೆಸ್ ನಂತೆ) ಅಂಥವರ ಮೂಲಕ ಪಡೆದಿರದಿದ್ದರೆ. (For instance the wholesale destruction of the rebels under Korach)

ಈ ಕ್ರಾಂತಿಕಾರಿ ವಿಚಾರವಾದಿಗಳು , ಹೀಬ್ರೂ ಪ್ರವಾದಿಗಳು ಮನುಷ್ಯ ಸ್ವಾತಂತ್ರ್ಯದ ದರ್ಶನವನ್ನ, ಯಾವುದು ಸಂಗತಿಗಳ ನಿಯಂತ್ರಣಕ್ಕೆ ಸಿಲುಕದಿರುವುದನ್ನ, ವಿಗ್ರಹಗಳಿಗೆ ಶರಣಾಗದಿರುವುದನ್ನ, ಜನರು ತಮ್ಮ ಕೈಗಳಿಂದ ಸೃಷ್ಟಿಸುವುದನ್ನ ಪ್ರತಿಪಾದಿಸುತ್ತದೆಯೋ ಅದನ್ನ ಹೊಸತಾಗಿಸಿದರು. ಅವರು ಯಾವುದಕ್ಕೂ ರಾಜಿಯಾಗುತ್ತಿರಲಿಲ್ಲ, ಜನ ತಮ್ಮ ನೆಲಕ್ಕೆ ಅಶ್ಲೀಲ ಎನ್ನುವಷ್ಟು ಅಂಟಿಕೊಂಡಿದ್ದರೆ, ಮತ್ತು ತಮ್ಮ ನೆಲದಲ್ಲಿ ಮುಕ್ತ ಜನರಂತೆ ಬದುಕುವ ಸಾಮರ್ಥ್ಯವನ್ನು ಹೊಂದಿರದಿದ್ದರೆ, ಹಾಗೆಂದರೆ ತಮ್ಮನ್ನು ತಾವು ಕಳೆದುಕೊಳ್ಳದೆ ಆ ನೆಲವನ್ನು ಪ್ರೀತಿಸುವುದು ಅವರಿಗೆ ಸಾಧ್ಯವಾಗದಿದ್ದರೆ, ಅಂಥವರನ್ನು ಆ ನೆಲದಿಂದ ಮತ್ತೆ ಹೊರಗೆ ಹಾಕಬೇಕಾಗುತ್ತದೆ ಎಂದು ಅವರು ಪ್ರೆಡಿಕ್ಟ್ ಮಾಡಿದ್ದರು. ಪ್ರವಾದಿಗಳಿಗೆ ನೆಲದಿಂದ ಹೊರಹಾಕುವ ಪ್ರಕ್ರಿಯೆ ದುರಂತಮಯವಾದದ್ದು, ಆದರೆ ಇದರ ಹೊರತಾಗಿ ಅಂತಿಮ ಬಿಡುಗಡೆಗೆ ಬೇರೆ ಯಾವ ದಾರಿಯೂ ಇರಲಿಲ್ಲ ; ಹೊಸ ಮರುಭೂಮಿ ಕೇವಲ ಒಂದು ಪೀಳಿಗೆಗಲ್ಲ ಹಲವಾರು ಪೀಳಿಗೆಯ ತನಕ ಉಳಿಯಬೇಕಾಗಿದೆ. ಹೊಸ ಮರುಭೂಮಿಯನ್ನ ಪ್ರೆಡಿಕ್ಟ್ ಮಾಡುವಾಗಲೂ ಪ್ರವಾದಿಗಳು ಯಹೂದಿಗಳ ವಿಶ್ವಾಸವನ್ನು ಉಳಿಸಿಕೊಳ್ಳುವ ಮತ್ತು ಆ ಮೂಲಕ ಮಾನವ ಜನಾಂಗದ ವಿಶ್ವಾಸವನ್ನು , ಯಾವುದು Messianic ದರ್ಶನದ ಮೂಲಕ, ನೆಲದ ಹಳೆಯ ವಾಸಿಗಳನ್ನ ಹೊರಹಾಕದೆ, ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯನ್ನ ಪ್ರಾಮಿಸ್ ಮಾಡುತ್ತದೆಯೋ ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಾರೆ.

ಹೀಬ್ರೂ ಪ್ರವಾದಿಗಳ ನಿಜವಾದ ವಾರಸುದಾರರು ಮಹಾ ಜ್ಞಾನಿಗಳಾಗಿದ್ದವರು, ರಬ್ಬೀಗಳು ಮತ್ತು Rabbi Jochanan Ben Sakai ಯಂಥ diaspora ದ ಸ್ಥಾಪಕರು. ರೋಮನ್ ವಿರುದ್ಧದ ಯುದ್ಧದಲ್ಲಿ ತಮ್ಮ ರಾಜ್ಯವನ್ನು ಕಳೆದುಕೊಂಡು ಸೋಲುವುದಕ್ಕಿಂತ ಸಾಯುವುದೇ ಮೇಲು ಎಂದು ಯುದ್ಧದ ನಾಯಕರು ತೀರ್ಮಾನಿಸಿದಾಗ, ರಬ್ಬೀ ಸಕಾಯಿ “ದೇಶದ್ರೋಹ” ಎಸಗಿದರು. ಅವರು ರಹಸ್ಯವಾಗಿ ಜೆರುಸಲೇಂ ಬಿಟ್ಟು ಓಡಿ ಹೋಗಿ ರೋಮನ್ ಜನರಲ್ ಗೆ ಶರಣಾಗಿ ಜ್ಯೂಯಿಶ್ ಯುನಿವರ್ಸಿಟಿಯನ್ನು ಸ್ಥಾಪಿಸುವುದಕ್ಕೆ ಅನುಮತಿ ಕೇಳಿದರು. ಇದು ಸಂಪದ್ಭರಿತ ಯಹೂದಿ ಸಂಪ್ರದಾಯದ ಶುರುವಾತು ಮತ್ತು ಅದೇ ಸಮಯದಲ್ಲಿ ಯಹೂದಿಗಳು ಹೊಂದಿದ ಎಲ್ಲದರ ಕಳೆದುಕೊಳ್ಳುವಿಕೆ : ಅವರ ರಾಜ್ಯ, ಅವರ ದೇವಾಲಯಗಳು, ಅವರ ಪೌರೋಹಿತ ಮತ್ತು ಮಿಲಿಟರಿ ಅಧಿಕಾರಶಾಹಿ, ಅವರು ಬಲಿಕೊಡುವ ಪ್ರಾಣಿಗಳು ಮತ್ತು ಅವರ ಪದ್ಧತಿಗಳು ಇತ್ಯಾದಿಯಾಗಿ. ಅವರು (as a group) ಎಲ್ಲವನ್ನೂ ಕಳೆದುಕೊಂಡರು, being ನ ಆದರ್ಶಗಳ ಹೊರತಾಗಿ : ಆ ಆದರ್ಶಗಳು ಯಾವವೆಂದರೆ, ತಿಳಿದುಕೊಳ್ಳುವಿಕೆ, ಕಲಿಯುವಿಕೆ, ವಿಚಾರ ಮಾಡುವಿಕೆ, ಮತ್ತು ಮಸೀಹಾನಿಗಾಗಿ ಕಾಯುವಿಕೆ.

(ಮುಂದುವರೆಯುತ್ತದೆ…)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply