ಚಿಂತಕರ ಕಣ್ಣಲ್ಲಿ ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆ : To have or to be #40

|ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/15/fromm-36/

ಕೈಗಾರಿಕಾ ಪೂರ್ವ ಸಮಾಜದ ತತ್ವಜ್ಞಾನ ಸಂಪ್ರದಾಯದಲ್ಲಿ ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆಯನ್ನ ಅವರು, ನಾವು ಇದು ಬಳಸುತ್ತಿರುವ ಅರ್ಥದಲ್ಲಿ ಉಪಯೋಗಿಸುತ್ತಿರಲಿಲ್ಲ. ಹಾಗೆ ಬಳಸುವುದು ಅವರಿಗೆ ಸಾಧ್ಯವೂ ಇರಲಿಲ್ಲ ಏಕೆಂದರೆ, ಕ್ರಿಯೆಯ ಪರಕೀಯತೆ ಇಂದು ತಲುಪಿರುವ ಮಟ್ಟವನ್ನು ಅಂದು ಮುಟ್ಟಿರಲಿಲ್ಲ. ಈ ಕಾರಣವಾಗಿಯೇ ಆರಿಸ್ಟಾಟಲ್ ನಂಥ ತತ್ವಜ್ಞಾನಿಗಳು ಕ್ರಿಯಾತ್ಮಕತೆ ಮತ್ತು ಅವಿಶ್ರಾಂತತೆಯ ( busyness) ನಡುವೆ ಇರುವ ವ್ಯತ್ಯಾಸವನ್ನೇ ಗುರುತಿಸುವುದಿಲ್ಲ. ಅಥೇನ್ಸ್ ನಲ್ಲಿ ಪರಕೀಯಗೊಂಡಿರುವ ಕ್ರಿಯೆಯಲ್ಲಿ ಭಾಗವಹಿಸುತ್ತಿದ್ದವರು ಗುಲಾಮರು ಮಾತ್ರ; ದೈಹಿಕ ಶ್ರಮವನ್ನು ಒಳಗೊಂಡ ಕೆಲಸವನ್ನು praxis ( practice – ಆಚರಣೆ) ನ ಪರಿಕಲ್ಪನೆಯಿಂದ ಹೊರಗಿಡಲಾಗಿತ್ತು, praxis ಎನ್ನುವ ಪದ ಕೇವಲ ಒಬ್ಬ ಸ್ವತಂತ್ರ ಮನುಷ್ಯ ಮಾತ್ರ ಮಾಡಬಹುದಾದ ಯಾವುದೇ ರೀತಿಯ ಕೆಲಸವನ್ನು ಸೂಚಿಸುತ್ತದೆ ಮತ್ತು ಆರಿಸ್ಟಾಟಲ್, ಈ ಪದವನ್ನ ಒಬ್ಬ ವ್ಯಕ್ತಿಯ ಮುಕ್ತ ಕ್ರಿಯೆಯನ್ನು (free activity) ಸೂಚಿಸಲು ಬಳಸಿದ ( See Nicholas Lobkowicz, Theory & Practice). ಈ ಹಿನ್ನೆಲೆಯಲ್ಲಿ ಗಮನಿಸಿದಾಗ ವಸ್ತುನಿಷ್ಠ ಅರ್ಥಹೀನತೆ, ಪರಕೀಯತೆ, ಶುದ್ಧ ರೂಟಿನೈಸ್ಡ್ ಕೆಲಸದ ಸಮಸ್ಯೆ ಸ್ವತಂತ್ರ ಅಥೆನ್ಸ್ ನವರಲ್ಲಿ ಹುಟ್ಟುವ ಸಾಧ್ಯತೆ ಅಷ್ಟೊಂದಿರಲಿಲ್ಲ. ಅವರ ಸ್ವಾತಂತ್ರ್ಯ ನಿಖರವಾಗಿ ಅವರಿಗೆ ಸಾಧ್ಯವಾದದ್ದು, ಅವರು ಗುಲಾಮರಾಗಿರದ ಮತ್ತು ಅವರು ಕ್ರಿಯೆಗಳು ಅವರಿಗೆ ಸೃಜನಶೀಲ ಮತ್ತು ಅರ್ಥಪೂರ್ಣ ಆಗಿದ್ದರ ಕಾರಣದಿಂದ.

ಯಾಕೆ ಆರಿಸ್ಟಾಟಲ್ ನಮ್ಮ ಇಂದಿನ ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆಯ ಪರಿಕಲ್ಪನೆಯ ಜೊತೆ ಇಲ್ಲ ಎನ್ನುವುದು ತುಂಬ ಸ್ಪಷ್ಟ ಆಗಬೇಕಾದರೆ ನಾವು ಆರಿಸ್ಟಾಟಲ್ ಗೆ ಯಾಕೆ ಅತ್ಯಂತ ಎತ್ತರದ ಮಟ್ಟದ ಆಚರಣೆ (praxis) – ರಾಜಕಾರಣಕ್ಕಿಂತಲೂ ಹೆಚ್ಚಿನದು, ಜೀವನದ ಕುರಿತಾದ ಗಾಢ ಚಿಂತನೆ (contemplation of life), ಸತ್ಯದ ಹುಡುಕಾಟಕ್ಕೆ ಬದುಕನ್ನ ಮೀಸಲಾಗಿರುವುದು ಆಗಿತ್ತು ಎನ್ನುವುದನ್ನ ಅರಿತುಕೊಳ್ಳಬೇಕು. ಈ ಗಾಢ ಚಿಂತನೆ ಎನ್ನುವುದು ಒಂದು ನಿಷ್ಕ್ರೀಯತೆ ಎನ್ನುವುದನ್ನ ಅವನಿಗೆ ಯೋಚಿಸುವುದೂ ಸಾಧ್ಯವಿರಲಿಲ್ಲ. ಬದುಕಿನ ಕುರಿತಾದ ಗಾಢ ಚಿಂತನೆಯನ್ನ ಆರಿಸ್ಟಾಟಲ್ ನಮ್ಮೊಳಗಿನ ಅತ್ಯಂತ ಉತ್ತಮ ಭಾಗ ಎಂದು ತಿಳಿದುಕೊಂಡಿದ್ದ. ಗುಲಾಮರು ಕೂಡ ಸ್ವತಂತ್ರ ಜನರಂತೆ ಇಂದ್ರೀಯ ಸುಖಗಳನ್ನ ಅನುಭವಿಸಬಲ್ಲರು. ಆದರೆ ಆರೋಗ್ಯಪೂರ್ಣ ಬದುಕು (well being) ಎನ್ನುವುದು ಇಂಥ ಇಂದ್ರೀಯ ಸುಖಗಳಲ್ಲಿ ಇಲ್ಲ, ಅದು ಇರುವುದು ಮೌಲ್ಯಾಧಾರಿತ ಕ್ರಿಯೆಗಳಲ್ಲಿ (Nichomachean Ethics, 1176a, 2ff).

ಆರಿಸ್ಟಾಟಲ್ ನಂತೆ, Thomas Aquinas ನ ಆಲೋಚನೆ ಕೂಡ ಕ್ರಿಯಾತ್ಮಕತೆಯ ಆಧುನಿಕ ಪರಿಕಲ್ಪನೆಗೆ ವಿರುದ್ಧವಾದದ್ದು. ಥಾಮಸ್ ಗೆ ಕೂಡ, ಅಂತರಂಗದ ಸಮಾಧಾನ, ಅಧ್ಯಾತ್ಮಿಕ ತಿಳುವಳಿಕೆ ಗೆ ಮೀಸಲಾದ ಬದುಕು, ಮತ್ತು ಬದುಕಿನ ಕುರಿತಾದ ಗಾಢ ಚಿಂತನೆ ಅತ್ಯಂತ ಉನ್ನತ ಮಟ್ಟದ ಮಾನವಿಕ ಕ್ರಿಯೆ (human activity) ಆಗಿತ್ತು. ಅವನ ಪ್ರಕಾರ ಸಾಮಾನ್ಯ ಮನುಷ್ಯರ ನಿತ್ಯದ ಬದುಕು ಕೂಡ ಆರೋಗ್ಯ ಪೂರ್ಣವಾಗಬಲ್ಲದು ಒಂದುವೇಳೆ ( ಮತ್ತು ಈ ಬೇಡಿಕೆ ಮಹತ್ವದ್ದು), ಅವರ ಎಲ್ಲ ಕ್ರಿಯೆಗಳು “well being” ನತ್ತ ನಿರ್ದೇಶಿತವಾಗಿದ್ದಾಗ ಹಾಗು ಅವರು ತಮ್ಮ ಕಾಮನೆಗಳನ್ನ ಹಾಗು ದೇಹವನ್ನ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾದಾಗ (Thomas Aquinas, Summa, 2-2:182,183;1-2:4,6).

ಆದರೆ ಗಾಢ ಚಿಂತನೆಯ ಬದುಕು ( vita contemplativa) ಮತ್ತು ಕ್ರಿಯಾತ್ಮಕ ಬದುಕುಗಳ ಸಮಸ್ಯೆ (vita activa) ಈ ಅಂಶಕ್ಕಿಂತ ಇನ್ನೂ ಮುಂದೆ ಹೋಗುವಂಥದು. ಥಾಮಸ್ ನ ದೃಷ್ಟಿಕೋನವನ್ನು ಸ್ವಲ್ಪ ಮಟ್ಟಿಗೆ ಒಂದು ನಿರ್ದಿಷ್ಟ ಹೊಂದಾಣಿಕೆಯದು ಎನ್ನಬಹುದು, Master Eckhart ನ ಸಮಕಾಲೀನನಾದ The Cloud of Unknowing ನ ಲೇಖಕ ಕ್ರಿಯಾತ್ಮಕ ಬದುಕಿನ ಮೌಲ್ಯದ ವಿರುದ್ಧ ತೀವ್ರವಾಗಿ ವಾದ ಮಾಡಿದರೆ, Master Eckhart ಪರವಾಗಿ ವಕಾಲತ್ತು ವಹಿಸುತ್ತಾನೆ. ಈ ವೈರುಧ್ಯ ಕಣ್ಣಿಗೆ ಕಾಣಿಸುವಷ್ಟು ತೀವ್ರ ಇಲ್ಲ ಏಕೆಂದರೆ ಎಲ್ಲರಿಗೂ ಕ್ರಿಯಾತ್ಮಕತೆ ಎನ್ನುವುದು “ಪರಿಪೂರ್ಣ” (wholesome) ವಾಗುವುದು ಅದರ ಬೇರುಗಳು ಆಳವಾಗಿದ್ದಾಗ ಮತ್ತು ಅದು ಆತ್ಯಂತಿಕ ನೈತಿಕ ಮತ್ತು ಅಧ್ಯಾತ್ಮಿಕ ಬೇಡಿಕೆಗಳನ್ನು ಅಭಿವ್ಯಕ್ತಿಸುತ್ತಿದ್ದಾಗ ಎನ್ನುವುದರ ಕುರಿತಾಗಿ ಒಪ್ಪಿಗೆ ಇರುವುದರಿಂದ. ಈ ಕಾರಣವಾಗಿಯೇ ಈ ಎಲ್ಲ ಟೀಚರ್ಸ ಗಳ ಪ್ರಕಾರ, ಅವಿಶ್ರಾಂತತೆ (busyness) ಎನ್ನುವುದು, ಯಾವುದು ಜನರ ಅಧ್ಯಾತ್ಮಿಕ ಮನೋಭೂಮಿಕೆಯಿಂದ ಹೊರತಾಗಿದೆಯೋ ಅಂಥಹದನ್ನ ತಿರಸ್ಕರಿಸಬೇಕು. * (*The writings of W. Lange, N. Lobkowicz & D. Mieth (1971) can provide further insights into this problem of contemplative life & active life)

ಒಬ್ಬ ವ್ಯಕ್ತಿಯಾಗಿ ಮತ್ತು ಒಬ್ಬ ಚಿಂತಕನಾಗಿ Spinoza, ನಾಲ್ಕು ಶತಮಾನಗಳಷ್ಟು ಮೊದಲಿನ Eckhart ನ ಕಾಲದಲ್ಲಿ ಪ್ರಚಲಿತದಲ್ಲಿದ್ದ spirit & values ನ ತನ್ನೊಳಗೆ ಒಂದಾಗಿಸಿಕೊಂಡಿದ್ದ, ಆದರೆ ಅವನು ಕೂಡ ಸಮಾಜದಲ್ಲಿ ಮತ್ತು ಸಾಮಾನ್ಯ ಮನುಷ್ಯನಲ್ಲಿ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ . Spinoza ಆಧುನಿಕ ವೈಜ್ಞಾನಿಕ ಮನಶಾಸ್ತ್ರದ ಸಂಸ್ಥಾಪಕ; ಪ್ರಜ್ಞಾಹೀನತೆಯ (unconscious) ಆಯಾಮದ ಸಂಶೋಧಕರಲ್ಲಿ ಒಬ್ಬ, ಮತ್ತು ಈ ಶ್ರೀಮಂತ ಒಳನೋಟಗಳ ಕಾರಣದಿಂದಾಗಿ ಅವನು ಕ್ರಿಯಾತ್ಮಕತೆ ಮತ್ತು ನಿಷ್ಕ್ರಿಯಾತ್ಮಕತೆಯ ನಡುವಿನ ವ್ಯತ್ಯಾಸದ ಬಗ್ಗೆ ತನ್ನ ಹಿಂದಿನ ಚಿಂತಕರಿಗಿಂತ ಹೆಚ್ಚು ನಿಖರವಾಗಿ, ಹೆಚ್ಚು ವ್ಯವಸ್ಥಿತವಾದ ವಿಶ್ಲೇಷಣೆ ಮಾಡಿದ.

1 Comment

Leave a Reply