ಏಕಾಂತದ ಸುಖ

ಜಗತ್ತು ಏಕಾಂತ ಪ್ರಿಯರನ್ನು ಒಂಟಿ ಜನ ಎಂದು ಅನುಮಾನದಿಂದ ನೋಡಿದರೆ, ಕ್ಲಿನಿಕಲ್ ಸೈಕಾಲಜಿಯಲ್ಲಿ ಇದನ್ನು Introspective cognition ಎಂದು ಹೇಳಲಾಗುತ್ತದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಸೈಕಾಲಜಿಯ ಪ್ರಕಾರ, ಜಗತ್ತಿನಲ್ಲಿ ಏಕಾಂಗಿಯಾಗಿರುವುದು ಕೆಲವರಿಗೆ ಎಷ್ಟು ಇಷ್ಟ ಎಂದರೆ, ಜನ ಅವರನ್ನು antisocial ಮತ್ತು ಸೀನಿಕರು ಎಂದು ಗುರುತಿಸತೊಡಗುತ್ತಾರೆ. ಇವರು ನಾಚಿಕೆಯ ಸ್ವಭಾವದವರು ಎನ್ನುವುದು ನಿಜವಲ್ಲ, ಬದಲಾಗಿ ಇವರ ಮನಸ್ಸಿನ ವೈರಿಂಗ್ ಬೇರೆಯವರಿಗಿಂತ ವಿಭಿನ್ನವಾಗಿರುತ್ತದೆ. ಇವರಿಗೆ ಪಾರ್ಟಿಗಳ ಗದ್ದಲವನ್ನು ಸೇರುವುದಕ್ಕಿಂತ, ತಮ್ಮ ಜೊತೆ ಏಕಾಂತವನ್ನು ಅನುಭವಿಸುತ್ತ, ತಮ್ಮ ಕಲ್ಪನೆಗಳಲ್ಲಿ ಮುಳುಗಿಹೋಗುವುದು, ಅಥವಾ ಯಾವುದೋ ವಿಷಯದ ಮೇಲೆ ರಾತ್ರಿಯೆಲ್ಲ ಎಚ್ಚೆತ್ತು ಅಧ್ಯಯನ ಮಾಡುವುದು ಹೆಚ್ಚು ಇಷ್ಟದ ಸಂಗತಿಯಾಗಿರುತ್ತದೆ.

ಜಗತ್ತು ಇವರನ್ನು ಒಂಟಿ ಜನ ಎಂದು ಅನುಮಾನದಿಂದ ನೋಡಿದರೆ, ಕ್ಲಿನಿಕಲ್ ಸೈಕಾಲಜಿಯಲ್ಲಿ ಇದನ್ನು Introspective cognition ಎಂದು ಹೇಳಲಾಗುತ್ತದೆ. ಸಾಮಾನ್ಯ ಜನರಿಗೆ ಗದ್ದಲದಲ್ಲಿ ಅಥವಾ ಸೋಷಿಯಲೈಸ್ ಮಾಡುವಾಗ ಡೋಪೋಮಿನ್ ಕಿಕ್ ಸಿಗುತ್ತದೆ. ಆದರೆ ಅತ್ಯಂತ ಬುದ್ಧಿವಂತ ಜನರ ಮನಸ್ಸು ಬೇರೆಯೇ ಒಂದು ಆಟವನ್ನು ಆಡುತ್ತಿರುತ್ತದೆ. ಅವರಿಗೆ ಇದೇ ಡೋಪೋಮಿನ್ ರಶ್, ಯಾವುದೋ ಒಂದು ಸಮಸ್ಯೆಯನ್ನು ಪರಿಹರಿಸುವಾಗ, ಹೊಸ ಐಡಿಯಾಗಳನ್ನು ಶೋಧಿಸುವಾಗ ಅಥವಾ ಮೌನದಲ್ಲಿ ಲಭ್ಯವಾಗುತ್ತದೆ.

ಈ ಜನರಿಗೆ small talks, ಯಾವ ಹಿಂಸೆಗಿಂತ ಕಡಿಮೆಯೇನಲ್ಲ. ಇದು antisocial ಆಗುವುದಿಲ್ಲ, ಇದು ಅವರು ತಮ್ನ ಎನರ್ಜಿಯನ್ನು ರಕ್ಷಿಸಿಕೊಳ್ಳುವ ವಿಧಾನ. ಒಬ್ಬ ಬುದ್ಧಿವಂತ ವ್ಯಕ್ತಿಗೆ, ನಕಲಿ ಜನರ ನಡುವೆ ನಿಂತುಕೊಂಡು ತಮ್ಮ ಎನರ್ಜಿಯನ್ನು drain ಮಾಡಿಕೊಳ್ಳುವುದಕ್ಕಿಂತ, ತಮ್ಮ ಸ್ವಂತದ ವಿಚಾರಗಳ ಜೊತೆ ಸಮಯ ಕಳೆಯುವುದು ಒಳ್ಳೆಯದು ಎನ್ನುವುದು ಗೊತ್ತಿರುತ್ತದೆ. ಇವರಿಗೆ ಏಕಾಂತ ಅಥವಾ ಒಂಟಿತನ ಯಾವ ಶಿಕ್ಷೆ ಅಲ್ಲ, ಬದಲಾಗಿ ಇದು ಅವರಿಗೆ ಒಂದು ಐಷಾರಾಮಿ. ನೀವು ಕೂಡ ಒಂಟಿಯಾಗಿ ಇರುವಾಗ ಹೆಚ್ಚು ಸಮಾಧಾನವನ್ನು ಅನುಭವಿಸುತ್ತೀರಾದರೆ, ನಿಮ್ಮದು ವಿಚಿತ್ರ ಸ್ವಭಾವ ಎಂದುಕೊಳ್ಳುವುದನ್ನು ನಿಲ್ಲಿಸಿಬಿಡಿ. ಏಕೆಂದರೆ ನೀವು ಏಕಾಂಗಿ ಅಲ್ಲ, ಈ ಗದ್ದಲದ ಜಗತ್ತಿನಲ್ಲಿ ನಿಮ್ಮ ಸಮಾಧಾನವನ್ನು ರಕ್ಷಿಸಿಕೊಳ್ಳುವುದನ್ನ ನೀವು ಕಲಿತುಕೊಂಡು ಬಿಟ್ಟಿದ್ದೀರ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.