ತಾವೋ ತಿಳಿವು #31 ~ ಸೋಲನ್ನು ಅರಿತವನು ಗೆಲ್ಲುವನು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಷ್ಣಾತ ಯೋಧನಿಗೆ ಆಕ್ರಮಣ ಮಾಡುವ ಉತ್ಸಾಹಕ್ಕಿಂತ ಕಾಯ್ದು ಆಹ್ವಾನಿಸುವ ತಂತ್ರದ ಮೇಲೆ ನಂಬಿಕೆ ಜಾಸ್ತಿ. ಒಂದು ಹೆಜ್ಜೆ ಮುಂದಿಡುವ ಹುಂಬತನಕ್ಕಿಂತ ಹತ್ತು ಹೆಜ್ಜೆ ಹಿಂದೆ ಸರಿಯುವ ಧೈರ್ಯ ದೊಡ್ಡದು. ಇದೇ ಕದನವಲ್ಲದ ಕದನ. ತೋಳೇರಿಸಿದರೂ ಸ್ನಾಯುಗಳು ಮೌನ ಮುರಿಯಬಾರದು. ಅಪ್ರತಿಮ ಯೋಧ ಆಯುಧಗಳಿಲ್ಲದೆಯೇ ಶಸ್ತ್ರಸಜ್ಜಿತನಾಗಿರುತ್ತಾನೆ. ಆಕ್ರಮಣ ಮಾಡುವವನ ಎದುರು ಪ್ರತಿಸ್ಪರ್ಧಿಯನ್ನು ನಿಲ್ಲಿಸಬಾರದು, ಸೋಲುವುದನ್ನು ಸೋಲಿಸುವುದೆಂದರೆ ಗೆಲುವನ್ನು ಬಿಟ್ಟುಕೊಟ್ಟಂತೆ. ಸಮ ಶಕ್ತಿಗಳು ಎದುರಾದಾಗ ಗೆಲ್ಲುವವನು ಸೋಲನ್ನು […]

ಬಡವರ ಮನೆಯಲ್ಲಿ ಎಲ್ಲರಿಗೂ ಜಾಗವಿದೆ!

ಮುಲ್ಲಾ ನಸ್ರುದ್ದೀನ್ ತನ್ನ ಬಡ ಗುಡಿಸಲಿನಲ್ಲಿ ಹೆಂಡತಿಯೊಡನೆ ಖುಷಿಯಿಂದಲೇ ಜೀವನ ನಡೆಸುತ್ತಿದ್ದ. ಅವನ ಕುಟುಂಬದ ಮತ್ತೊಂದು ಸದಸ್ಯನೆಂದರೆ, ಅವನ ಕತ್ತೆ. ಅದು ನಸ್ರುದ್ದೀನನ ಆಪ್ತ ಸ್ನೇಹಿತನೂ ಏಕೈಕ ಚರಾಸ್ತಿಯೂ ಆಗಿತ್ತು. ಒಂದು ಮಳೆಗಾಲ ನಸ್ರುದ್ದೀನನ ಊರಿನಲ್ಲಿ ಜೋರು ಮಳೆ ಬರಲು ಶುರುವಿಟ್ಟಿತು. ಗುಡುಗು, ಸಿಡಿಲು, ಗಾಳಿ ವಿಪರೀತವಾಗಿತ್ತು. ನಸ್ರುದ್ದೀನ್ ಮಳೆಯ ಆರ್ಭಟ ಕಂಡು ಮನೆಯಲ್ಲಿಯೆ ಕೌದಿ ಹೊದ್ದು ಕುಳಿತುಬಿಟ್ಟ. ಆಗ ಮುಸ್ಸಂಜೆಯಾಗತೊಡಗಿತ್ತು. ಗುಡಿಸಲಿನ ಒಳಗೆ ಚಿಮಣಿ ಬುಡ್ಡಿ ಹಚ್ಚಿಕೊಂಡು ಗಂಡ ಹೆಂಡತಿ ಹಾಗೇ ನೆಲದ ಮೇಲೆ ಉರುಳಿಕೊಂಡು […]

ಸ್ಯೂಸ್ ದೇವ ಸೃಷ್ಟಿಸಿದ ಪ್ರಳಯ ಮತ್ತು ಜೀವಜಂತುಗಳ ಪುನರ್ ಸೃಷ್ಟಿ : ಗ್ರೀಕ್ ಪುರಾಣ ಕಥೆಗಳು ~ 11

ಸ್ಯೂಸ್ ಸಂಕಲ್ಪಿಸಿದಂತೆ ಕಾರ್ಮೋಡ ಕವಿದು ಭಾರೀ ಪ್ರಮಾಣದ ಸಿಡಿಲು ಗುಡುಗು ಶುರುವಾಯಿತು. ಧೋ ಎಂದು ಧಾರಾಕಾರ ಮಳೆ ಸುರಿಯತೊಡಗಿತು. ಮಳೆ ಬೀಳುವ ಹೊಡೆತಕ್ಕೆ ಮನೆಗಳು ಉರುಳಿಬಿದ್ದವು. ಕೆಲವೇ ಗಂಟೆಗಳ ಒಳಗೆ ಇಡಿಯ ಭೂಮಿ ನೀರಿನಿಂದ ತುಂಬಿಹೋಯ್ತು. ಜಲಪ್ರಳಯ ಉಂಟಾಗಿ ಭೂಮಿಯ ಮೇಲಿನ ಜೀವಸಂಕುಲಗಳು ಕೊಚ್ಚಿಹೋದವು. ಒಂಭತ್ತು ಹಗಲು, ಒಂಬತ್ತು ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಭೂಮಿ ಸಂಪೂರ್ಣ ನಾಶವೇ ಆಗಿಹೋಯಿತು…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಒಮ್ಮೆ ಸ್ಯೂಸ್ ಮಹಾದೇವನಿಗೆ ಭೂಲೋಕದಲ್ಲಿ ಮನುಷ್ಯರು ಸತ್ಯವಂತರಾಗಿ […]

ಅರಳಿಬಳಗದ ಪ್ರಕಟಣೆ : broadcastಗೆ ಜೊತೆಯಾಗಿ!

ಅರಳಿಮರ broadcast ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ; ಅರಳಿಮರ ವೆಬ್ ಸೈಟ್’ನ ನಿರಂತರ ಅಪ್’ಡೇಟ್ ಪಡೆಯಿರಿ. Broadcastಗೆ ನೋಂದಾಯಿಸಿಕೊಳ್ಳುವುದು ಬಹಳ ಸುಲಭ : 1. ನಿಮ್ಮ ಸೆಲ್ ಫೋನ್’ನಲ್ಲಿ +916361885804 ಸಂಖ್ಯೆಯನ್ನು ‘araLimara’ ಎಂದು ಸೇವ್ ಮಾಡಿಕೊಳ್ಳಿ.  2. ಈ ಸಂಖ್ಯೆಗೆ ADD ME ಎಂದು ನಿಮ್ಮ Whatsappನಿಂದ ಸಂದೇಶ ಕಳುಹಿಸಿ. 3. ಮರುಕ್ಷಣದಲ್ಲೇ ನಿಮ್ಮ ಹೆಸರು ನಮ್ಮ broadcast listನಲ್ಲಿ ಸೇರ್ಪಡೆಯಾಗುತ್ತದೆ. broadcast ಲಾಭಗಳು : * ಸಂದೇಶ ಕಳುಹಿಸುವಾಗ ನೀವು ನಿಮ್ಮ ಹೆಸರನ್ನು […]

ಸ್ಪಿರಿಚುವಲ್ ಲೈಫ್ ಸ್ಟೈಲ್ : ನೆಮ್ಮದಿ ನೀಡುವ ಮದ್ದು

ನಾವು ಮತ್ಸರವನ್ನಿಟ್ಟುಕೊಂಡು ಗೆಳೆಯರೊಡನೆ ಪಾಸಿಟಿವ್ ಆಗಿ ವರ್ತಿಸಲಾಗುವುದಿಲ್ಲ. ಲೋಭವಿಟ್ಟುಕೊಂಡು ವ್ಯವಹಾರ ನಡೆಸಲಾಗುವುದಿಲ್ಲ. ಮೋಹವಿಟ್ಟುಕೊಂಡು ಸಮಾಜದಲ್ಲಿ ಬೆರೆಯಲಾಗುವುದಿಲ್ಲ. ಆದ್ದರಿಂದ ನಮ್ಮ ಸಾಧ್ಯತೆಯ ಮಟ್ಟದಲ್ಲಿ ಈ ಎಲ್ಲವುಗಳಿಂದ ಹೊರತಾಗಿ ಬದುಕುವ ಪರಿಯೇ ಇಂದಿನ ಸ್ಪಿರಿಚುವಲ್ ಲೈಫ್‍ಸ್ಟೈಲ್  ~ ಚಿತ್ಕಲಾ ಆಧ್ಯಾತ್ಮಿಕತೆ ಏನೆಲ್ಲವನ್ನು ನೀಡುತ್ತದೆ? ಅದು ಮಕ್ತಿಪಥದಲ್ಲಿ ನಮ್ಮನ್ನು ನಡೆಸುತ್ತದೆ ಅನ್ನೋದು ಸಾಧಕರ ಮಾತು. ಸದ್ಯದ ಜೀವನದಲ್ಲಷ್ಟೆ ನಂಬಿಕೆ ಇದ್ದು, ಸಾವಿನ ಅನಂತರದ ವಿದ್ಯಮಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ `ಮುಕ್ತಿ’ ಅಷ್ಟೇನೂ ಸ್ವಾರಸ್ಯಕರ ಸಂಗತಿಯಲ್ಲ. ಹಾಗಾದರೆ ಅಂಥವರಿಗೆ ಆಧ್ಯಾತ್ಮಿಕ ಬದುಕಿನ ಅವಶ್ಯಕತೆ […]

ಜುವಾಂಗ್ ತ್ಸೆ ~ ನಾಲ್ಕು ಕಥನ ಕವಿತೆಗಳು

ಅನುವಾದ : ಚಿದಂಬರ ನರೇಂದ್ರ 1. ಜುವಾಂಗ್ ತ್ಸೆ ಹೇಳಿದ ಕಥೆ ಸಂತನೊಬ್ಬ ತನ್ನ ದೋಣಿಯಲ್ಲಿ ಶಿಷ್ಯನೊಂದಿಗೆ ನದಿ ದಾಟುತ್ತಿದ್ದ. ದೋಣಿ, ನದಿಯ ನಡುವೆ ಬರುತ್ತಿದ್ದಂತೆಯೇ ಒಂದು ಖಾಲಿ ದೋಣಿ ಇವರ ದೋಣಿಗೆ ಡಿಕ್ಕಿ ಹೊಡೆಯಿತು. ಶಿಷ್ಯನಿಗೆ ಭಾರಿ ಸಿಟ್ಟು ಬಂತು ಆದರೆ ಯಾರಿಗೆ ಬಯ್ಯುತ್ತಾನೆ? ಸುಮ್ಮನಾದ. “ಅಕಸ್ಮಾತ್ ದೋಣಿಯಲ್ಲಿ ಯಾರಾದರೂ ಇದ್ದರೆ, ಏನು ಮಾಡುತ್ತಿದ್ದೆ? “ ಸಂತ, ಶಿಷ್ಯನನ್ನು ಕೇಳಿದ. “ಬಾಯಿಗೆ ಬಂದಹಾಗೆ ಬಯ್ಯುತ್ತಿದ್ದೆ ಒಂದು ಸಾರಿಯಲ್ಲ, ಹತ್ತು ಸಾರಿ ಬಯ್ಯುತ್ತಿದ್ದೆ ನಾಶ ಆಗು ಎಂದು […]

ಇಲ್ಲಿಯೂ ಎಲ್ಲ ಅಂಥವರೇ!

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ. ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ? ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ […]

ಡಯೋನಿಸಸ್ ಎಂಬ ದ್ವಿಜ : ಗ್ರೀಕ್ ಪುರಾಣ ಕಥೆಗಳು ~ 10

ದುಃಖಿತನಾದ ಸ್ಯೂಸ್, ಸೆಮಿಲಿಯ ಮಗುವನ್ನಾದರೂ ಜೋಪಾನ ಮಾಡಬೇಕೆಂದು ನಿಶ್ಚಯಿಸಿದ. ಇನ್ನೂ ಸಂಪೂರ್ಣ ಬೆಳೆದಿರದ ಆರು ತಿಂಗಳ ಆ ಭ್ರೂಣವನ್ನು ತನ್ನ ತೊಡೆ ಸಿಗಿದು, ಅದರಲ್ಲಿಟ್ಟುಕೊಂಡ. ಮೂರು ತಿಂಗಳ ಕಾಲ ಅದರ ಆರೈಕೆ ಮಾಡಿದ. ಒಂಭತ್ತನೇ ತಿಂಗಳಿಗೆ ಗಂಡು ಮಗುವೊಂದು ಸ್ಯೂಸನ ತೊಡೆಯಿಂದ ಹುಟ್ಟಿಬಂತು. ~ ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಸ್ಯೂಸ್ ದೇವನ ಪ್ರಣಯ ಲೀಲೆಗಳು ಅಪಾರ. ಆತನ ಪಟ್ಟದರಸಿ ಹೀರಾ ದೇವಿಯಲ್ಲದೆ ದೇವ, ದಾವನ, ಮಾನವರಲ್ಲೂ ಅವನಿಗೆ ಪ್ರೇಯಸಿಯರಿದ್ದರು. ಅವರಿಂದ ಮಕ್ಕಳೂ ಇದ್ದವು. […]

ತಾವೋ ತಿಳಿವು #30 ~ ತಾವೋ ಜಾಲದ ಹೆಣಿಗೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಧೈರ್ಯ ಮತ್ತು ಹುಂಬತನ ಸಾವಿನೆಡೆ ಕರೆದೊಯ್ದರೆ ಧೈರ್ಯ ಮತ್ತು ಎಚ್ಚರಿಕೆ ಬಾಳಿನೆಡೆಗೆ. ಯಾವುದು ಸರಿ? ಯಾವುದು ತಪ್ಪು? ಸಂತನಿಗೂ ಬಗೆಹರಿಯದ ಬೆರಗು. ತಾವೋ, ಸ್ಪರ್ಧಿಸದಿದ್ದರೂ ಎಲ್ಲಕ್ಕಿಂತ ಮುಂದೆ, ಮಾತಿಲ್ಲದಿದ್ದರೂ ಕರಾರುವಾಕ್ ಆದ ಉತ್ತರ, ಆಹ್ವಾನವಿಲ್ಲದಿದ್ದರೂ ಖಚಿತ ಹಾಜರಿ, ಲೆಕ್ಕಾಚಾರವಿಲ್ಲದೆ ಸಾಧಿಸುವುದು. ಅಂತೆಯೇ ತಾವೋ ನೆಲೆ ಸಮಾಧಾನದಲ್ಲಿ. ತಾವೋ ಜಾಲ ಇಡೀ ಬ್ರಹ್ಮಾಂಡವನ್ನು ಆವರಿಸಿದೆ. ಜಾಲದ ಹೆಣಿಗೆ ಸಾಕಷ್ಟು ವಿಶಾಲವಾಗಿದ್ದರೂ ಯಾವುದೂ ನುಣುಚಿಕೊಳ್ಳುವ ಸಾಧ್ಯತೆಯೇ ಇಲ್ಲ.

ಸ್ವರ್ಗ ಎಂದರೇನು? ನರಕ ಎಂದರೇನು? : ನೊಬುಶಿ ಪ್ರಶ್ನೆಗೆ ಹಕುಇನ್ ಉತ್ತರ

ನೊಬುಶಿ ಒಬ್ಬ ಸಮುರಾಯ್. ಅವನು ಒಮ್ಮೆ ಝೆನ್ ಗುರು ಹಕುಇನ್‌ ಬಳಿ ಬಂದ. ಅವನಿಗೆ ಸ್ವರ್ಗ, ನರಕಗಳ ಬಗ್ಗೆ ಕೇಳುವುದಿತ್ತು. “ಮಾಸ್ಟರ್, ಸ್ವರ್ಗ ಎಂದರೇನು? ನರಕ ಎಂದರೇನು?” ಅವನು ಕೇಳಿದ. “ನೀನು ಯಾರು ಅನ್ನೋದನ್ನು ಮೊದಲು ಹೇಳು” ವಿಚಾರಿಸಿದ ಹಕುಇನ್‌. “ನಾನೊಬ್ಬ ಸಮುರಾಯ್” ನೊಬುಶಿ ಉತ್ತರಿಸಿದ. “ಓಹೋ! ನೀನೊಬ್ಬ ಸಮುರಾಯ್!! ಅಂದರೆ ನೀನು ಯೋಧನೋ?” ಎಂದು ಕೇಳಿದ ಹಕುಇನ್‌, “ಯಾವ ಮೂರ್ಖ ದೊರೆ ನಿನ್ನನ್ನು ತನ್ನ ರಕ್ಷಣೆಗೆ ಇಟ್ಟುಕೊಳ್ಳುವನು? ನಿನ್ನನ್ನು ನೋಡಿದರೆ ಕೆಲಸಕ್ಕೆ ಬಾರದ ತಿರುಕನಂತೆ ಅನ್ನಿಸುತ್ತದೆ” […]