ನಡೆಯುತ್ತಲೂ ನಿಂತವರು ಮತ್ತು ನಿಂತಿದ್ದೂ ನಡೆಯುವವರು

ಒಮ್ಮೆ ಹೀಗಾಗುತ್ತೆ; ಬುದ್ಧ ಅಂಗುಲೀಮಾಲನ್ನ ನೋಡೋಕೆ ಹೋಗ್ತಾನೆ.  ಅಂಗುಲೀಮಾಲ ನಿಂತಲ್ಲೇ ಕಣ್ಣು ಕೀಲಿಸಿ ನೋಡ್ತಾನೆ; ಎಲಾಎಲಾ! ನನ್ನಂಥ ನನ್ನ ಹತ್ತಿರ ಬರ್ತಿರುವ ಇಂವ ಯಾರಪ್ಪಾ!?  ‘ಏಯ್! ನಿಲ್ಲು ಅಲ್ಲೇ…’ ಅವನ ಅಬ್ಬರ. ಬುದ್ಧನಿಗೆ ನಗು.  ‘ನಾನು ನಿಂತು ಯಾವುದೋ ಕಾಲವಾಗಿದೆ… ನಡೀತಾ ಇರೋನು ನೀನು!’ ಅಂಗುಲೀಮಾಲನಿಗೀಗ ಖಾತ್ರಿ. ‘ತಲೆ ನೆಟ್ಟಗಿರುವ ಯಾವನೂ ಇತ್ತ ಬರಲಾರ. ಇವನ ಮಾತು ಕೇಳಿದರೆ ಇಂವ ಹುಚ್ಚ ಅನ್ನೋದು ನಿಜ!’ ಬುದ್ಧ ನಡೀತಲೇ ಇದ್ದ. ನಡೆದು ನಡೆದು ಹತ್ತಿರ ಬಂದ. ಬುದ್ಧನ ಹೊರಗು […]

ಸ್ವಾತಂತ್ರ್ಯ ಬಯಸಿದ ಹೆಂಡತಿ, ಮತ್ತವಳ ಗಂಡ!

ದಾಂಪತ್ಯದಲ್ಲಿ ಉತ್ಕಟ ಪ್ರೇಮ, ಅರ್ಥ ಮಾಡಿಕೊಳ್ಳುವಿಕೆ ಹಾಗೂ ಗಂಡ ಹೆಂಡತಿಯರಿಬ್ಬರಿಗೂ ಸಮಾನ ಸ್ವಾತಂತ್ರ್ಯ ಇಲ್ಲದಾಗ ಏನಾಗುತ್ತದೆ ಎಂಬುದನ್ನು ತಿಳಿಸಲು ಸ್ವಾಮಿ ರಾಮತೀರ್ಥರು ಒಂದು ದೃಷ್ಟಾಂತ ಹೇಳುತ್ತಾರೆ: ಒಂದು ಹಳ್ಳಿಯಲ್ಲಿ ರೈತ ದಂಪತಿ ವಾಸಿಸುತ್ತ ಇರುತ್ತಾರೆ. ಒಂದು ದಿನ ಹೆಂಡತಿಗೆ ಮನೆಯಿಂದ ಮನೆಗೆ ಭಿಕ್ಷೆ ಬೇಡಿಕೊಂಡು ತಿರುಗುವ ಜೋಗಯ್ಯ ಕಣ್ಣಿಗೆ ಬೀಳುತ್ತಾನೆ. ಬೇಕೆಂದಲ್ಲಿಗೆ ಓಡಾಡುವ ಅವನ ಸ್ವಾತಂತ್ರ್ಯಕ್ಕೆ ಅಸೂಯೆಪಟ್ಟು, ತಾನೂ ಅಂತಹ ಸ್ವಾತಂತ್ರ್ಯವನ್ನು ಒಂದು ದಿನದ ಮಟ್ಟಿಗಾದರೂ ಅನುಭವಿಸಲು ಬಯಸುತ್ತಾಳೆ. ಅಳುಮೋರೆ ಹಾಕಿಕೊಂಡು ಗಂಡನನ್ನೆ ಕಾಯುತ್ತ ಕೂರುತ್ತಾಳೆ. ಅವನು […]

ಸೌಹಾರ್ದ ಹೃದಯದ ಸಾಮ್ರಾಟ ಶಿವಾಜಿ

ಶಿವಾಜಿಯ ಆಧ್ಯಾತ್ಮಿಕಪ್ರವೃತ್ತಿಗೆ ಆತನ ಸರ್ವಧರ್ಮ ಸಮಭಾವವೇ ಸಾಕ್ಷಿ. ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದ ಶಿವಾಜಿ,  ಈ ಎರಡೂ ಹೋರಾಟಗಳಲ್ಲಿ ಯಶ ಕಂಡವನು.  ಶಿವಾಜಿ ಸಮರ್ಥ ರಾಮದಾಸರ ಶಿಷ್ಯರಾಗಿದ್ದ. ರಾಮದಾಸರ ಚಿಂತನೆಗಳು ಅವರ ಮೇಲೆ ಅಸೀಮ ಪ್ರಭಾವ ಬೀರಿದ್ದವು. ತೀವ್ರ ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿದ್ದ ಶಿವಾಜಿ ಒಂದು ಹಂತದಲ್ಲಿ ರಾಜ್ಯಭಾರ ತೊರೆದು ರಾಮದಾಸರ ಶಿಷ್ಯವೃತ್ತಿ ಮಾಡಿಕೊಂಡು ಇದ್ದುಬಿಡುತ್ತೇನೆಂದು ಹೊರಟುಬಿಟ್ಟಿದ್ದ ಅನ್ನುತ್ತದೆ ಇತಿಹಾಸ. ಆದರೆ, ಕಾಲ ಸಂದರ್ಭಕ್ಕೆ ಶಿವಾಜಿ ರಾಜನಾಗಿ ಮುಂದುವರೆಯುವುದೇ ಹೆಚ್ಚು ಅಗತ್ಯವಾಗಿತ್ತು. ಆದ್ದರಿಂದ ಅವನನ್ನು ತಡೆದ ಗುರು ರಾಮದಾಸರು ಶಿವಾಜಿಗೆ […]

ನೀನು ಏನಾಗಿದ್ದೀಯೋ ಅದುವೇ ಜಗತ್ತಿಗೆ ನಿನ್ನ ಕೊಡುಗೆಯಾಗಿರುತ್ತದೆ

ಗುಲಾಮರು ಮತ್ತೊಬ್ಬ ಗುಲಾಮನನ್ನು ಹುಟ್ಟುಹಾಕಬಲ್ಲರಷ್ಟೆ. ಸ್ವತಂತ್ರ ವ್ಯಕ್ತಿಯು ಸ್ವಾತಂತ್ರ್ಯವನ್ನು ಹುಟ್ಟುಹಾಕುವನು. ಜ್ಞಾನಿಯು ನಿಮ್ಮನ್ನೂ ಅರಿವಿನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತಾನೆ. ಯಾರು ಸ್ವತಃ ಬಂಧಿತರಾಗಿರುತ್ತಾರೋ ಅವರು ನಿಮ್ಮನ್ನೂ ಸಿಲುಕಿಸಲು ಪ್ರಯತ್ನಿಸುತ್ತಾರೆ. ನಾನು ಏನಾಗಿದ್ದೀನೋ ಜಗತ್ತಿಗೆ ನನ್ನ ಕೊಡುಗೆ ಅದೇ ಆಗಿರುತ್ತದೆ. ನಾನು ಏನಲ್ಲವೋ ಅದನ್ನು ಹೇಗೆ ತಾನೆ ಜಗತ್ತಿಗೆ ಕೊಡಲು ಸಾಧ್ಯ? ನನ್ನ ಬಳಿ ಏನಿಲ್ಲವೋ ಅದನ್ನು ನಾನು ಹೇಗೆ ತಾನೆ ಕೊಡಬಲ್ಲೆ!? ~ Whosoever  ನಾವು ಬೇಸರದಲ್ಲಿ ಮುಳುಗಿದ್ದೇವೆ. ನಮಗೆ ವಿಪರೀತ ಬೋರ್ ಹೊಡೆಯುತ್ತದೆ. ಬೇಸರವನ್ನೆ ಹಾಸು […]

ಧ್ಯಾನ : ಏಕಾಗ್ರತೆ ಗದ್ದಲವನ್ನು ನಿಯಂತ್ರಿಸುತ್ತದೆ, ಮೌನವನ್ನು ತರುವುದಿಲ್ಲ

ಮನಸಿನ ಪರದೆಯ ಮೇಲೆ ಅಚ್ಚೊತ್ತಿದ ಚಿತ್ರಗಳು ಸ್ವಲ್ಪ ಪರುಸೊತ್ತು ಸಿಕ್ಕರೂ ಆಟೋ ರನ್ ಆಗುವಂತೆ ತನ್ನಿಂತಾನೆ ಚಲಿಸಲು ಆರಂಭವಾಗುತ್ತವೆ. ಈ ಅನಿರೀಕ್ಷಿತ, ಓತಪ್ರೋತ ಚಲನೆ ಅಂತರಂಗದಲ್ಲಿ ಕಂಪನವನ್ನು ಹುಟ್ಟಿಸುತ್ತದೆ. ಈ ಕಂಪನವೇ ನಮ್ಮೊಳಗೆ ತರಂಗಗಳನ್ನು ಹುಟ್ಟಿಸುವುದು. ಈ ತರಂಗಗಳೇ ನಮ್ಮೊಳಗಿನ ಶಬ್ದರಹಿತ ಗದ್ದಲವಾಗಿ ಮೌನವನ್ನು ಮುರಿಯುವುದು. ನಮ್ಮ ಈ ಹಿಂದಿನ ಪ್ರಶ್ನೆ : ಮೌನವನ್ನು ಸಾಧಿಸುವುದು ಹೇಗೆ? ಆಲೋಚನಾ ತರಂಗಗಳನ್ನು ಶಬ್ದರಹಿತ ಮಾತು ಎನ್ನಲಾಯಿತು. ಹಾಗಾದರೆ ಆಲೋಚನಾ ತರಂಗಗಳು ಏಳದೆ ಇರುವ ಸ್ಥಿತಿಯೇ ಮೌನ ಎಂದಾಗುವುದಲ್ಲವೆ? ಆದರೆ ನಾವು ಆಲೋಚನೆ […]

ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?

ಒಮ್ಮೆ ಪಂಚಾಯ್ತಿ ಕಟ್ಟೆಯಲ್ಲಿ ಭಾರೀ ಚರ್ಚೆ ಏರ್ಪಟ್ಟಿತು. ಹಳ್ಳಿಯ ಹತ್ತು ಸಮಸ್ತರು ಬಂದು ಕುಳಿತಿದ್ದರು. ತತ್ತ್ವಜ್ಞಾನಿಗಳು, ಪಂಡಿತರು ಅಲ್ಲಿದ್ದರು. “ಜಗತ್ತು ಯಾವಾಗ ಕೊನೆಗೊಳ್ಳುತ್ತದೆ” ಎನ್ನುವುದು ಅವರ ಚರ್ಚೆಯ ವಿಷಯವಾಗಿತ್ತು. ಸಂಜೆ ಮುಗಿದರೂ ಅವರ ಚರ್ಚೆ ಮುಗಿಯುವ ಲಕ್ಷಣಗಳು ಕಾಣಲಿಲ್ಲ. ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಕೆಂಬಣ್ಣದ ಹಿನ್ನೆಲೆಯಲ್ಲಿ ಮುಲ್ಲಾ ನಸ್ರುದ್ದಿನ್ ಕತ್ತೆ ಹೊಡೆದುಕೊಂಡು ಬರುತ್ತಿರುವುದು ಕಾಣಿಸಿತು. ಇನ್ನು ಮಾತಾಡಿ ಉಪಯೋಗವಿಲ್ಲ ಎಂದು ಬಟ್ಟೆ ಕೊಡವಿಕೊಂಡು ಏಳುತ್ತಿದ್ದವರೆಲ್ಲ ಹಾಗೇ ಕುಳಿತರು. ಸಮಸ್ತರಲ್ಲಿ ಒಬ್ಬ ಮುಲ್ಲಾ ನಸ್ರುದ್ದೀನನನ್ನು ತಡೆದು, “ನೋಡು, ಬೆಳಗಿನಿಂದ […]

'ಲಾ ಚಿತ್ರ

ನಿಮ್ಮ ಹಸಿವೊಂದು ತಪಸ್ಸಾಗಿರಲಿ! ~ ಗಿಬ್ರಾನ್ ಕಾವ್ಯ

ಮೂಲ: ಖಲೀಲ್ ಗಿಬ್ರಾನ್, ‘ದ ಪ್ರಾಫೆಟ್’ ಅನುವಾದ : ಪುನೀತ್ ಅಪ್ಪು. ಛತ್ರ ಕಾಯುತ್ತಿದ್ದ ವೃದ್ಧನೊಬ್ಬ ಕೇಳುತ್ತಿದ್ದ ‘ಆಹಾರ’ದ ಬಗ್ಗೆ ಹೇಳು. ಅಲ್ ಮುಸ್ತಾಫ ನಗುತ್ತಿದ್ದ; ನೀವೇನು ಸಸ್ಯಗಳಂತೆ ಭೂಮಿಯ ಸುಗಂಧದಿಂದ, ಸೂರ್ಯನ ಬೆಳಕಿನಿಂದ ಬದುಕಬಲ್ಲಿರೆ? ಆಹಾರಕ್ಕಾಗಿ ಕೊಲ್ಲಲೇ ಬೇಕಾದರೆ, ಆಗ ತಾನೆ ಜನಿಸಿದ ಕರುವಿನಿಂದ ಅದರ ತಾಯಿಯ ಹಾಲನ್ನು ಕಸಿಯುವುದರಿಂದಲೇ, ನಿಮ್ಮ ದಾಹ ತಣಿಯುವುದಾದರೆ, ನಿಮ್ಮ ಹಸಿವೊಂದು ತಪಸ್ಸಾಗಿರಲಿ! ನಿಮ್ಮ ಒಲೆಗಳನು ಹೊಕ್ಕು ಭಸ್ಮವಾಗುವ ಆ ಪರಿಶುದ್ಧ, ಮುಗ್ಧ ಕಾಡಿನ ಕಟ್ಟಿಗೆಗಳಿಗಿಂತಲೂ ನಿಮ್ಮ ಮನಸ್ಸು ಮುಗ್ಧವಾಗಿರಲಿ! ಆ […]

ರಾಮಕೃಷ್ಣರು ಹೇಳಿದ ಒಂದು ದೃಷ್ಟಾಂತ ಕಥೆ

ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು.  ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು. ಮರುದಿನ ಆ ಶಿಷ್ಯ ಚಿಕ್ಕದೊಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು. ಆನೆಯ ಮೇಲಿದ್ದ ಮಾವುತನು ದಾರಿಹೋಕರಿಗೆ  “ಆನೆಗೆ ಮದವೇರಿದೆ, ನನ್ನ ಅಂಕುಶಕ್ಕೂ ಮಣಿಯುತ್ತಿಲ್ಲ, ರಸ್ತೆಯಿಂದ ದೂರ ಸರಿಯಿರಿ” ಎಂದು ಕೂಗಿ ಹೇಳುತ್ತಿದ್ದ. ಶಿಷ್ಯನಿಗೂ ಈ ಕೂಗು ಕೇಳಿಸಿತು. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, […]

ರಾಮಕೃಷ್ಣರ ಸತ್ಯ ದರ್ಶನ : ದಾರ್ಶನಿಕ ಕವಿ ಕುವೆಂಪು ಕಂಡಂತೆ

“ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ, ಯೋಗಪ್ರವೀಣರು. ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲಹೃದಯದಿಂದಲೂ ಪರೀಕ್ಷಿಸಿ ಸಮನ್ವಯತತ್ತ್ವಸಿದ್ಧರಾದವರು. ಸರ್ವಧರ್ಮಸಮನ್ವಯಾಚಾರ್ಯರಾದವರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ದಾರಿಗಳು ಎಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ. ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸ್ಯಸತ್ಯವಾಗಿತ್ತು.” ಎಂದು ಬರೆಯುತ್ತಾರೆ ದಾರ್ಶನಿಕ ಕವಿ ಕುವೆಂಪು.  “ಎಷ್ಟು ಮತಗಳಿವೆಯೋ ಅಷ್ಟು ಪಥಗಳಿವೆ. ನೀರನ್ನು ಯಾವ ಭಾಷೆಯಲ್ಲಿ ಕರೆದರೂ ಅದು ನೀರೇ ಆಗಿರುತ್ತದೆಯಲ್ಲವೆ? ಹಾಗೆಯೇ ಭಗವಂತನನ್ನು ಯಾವ ಹೆಸರಿನಿಂದ ಕರೆದರೂ ಆತ […]

ರಾಮಕೃಷ್ಣ ಪರಮಹಂಸ ಜಯಂತಿ

ರಾಮಕೃಷ್ಣ ಪರಮಹಂಸ, ಆಧುನಿಕ ಭಾರತ ಕಂಡ ಶ್ರೇಷ್ಠ ಅಧ್ಯಾತ್ಮ ಸಾಧಕರಲ್ಲಿ ಒಬ್ಬರು. ತಮ್ಮ ಶಿಷ್ಯ ಪರಂಪರೆಯ ಮೂಲಕ ದೇಶಕ್ಕೂ ಸಮಾಜಕ್ಕೂ ಹಲವು ಬಗೆಯ ಕೊಡುಗೆಗಳನ್ನು ನೀಡುವ ಮೂಲಕ ಭಾರತದ ಪುನರುತ್ಥಾನಕ್ಕೂ ಕಾರಣರಾದವರು. ಸರ್ವಧರ್ಮ ಸಾಧನೆಯನ್ನು ಸ್ವತಃ ಮಾಡಿ, ಸಿದ್ಧಿಸಿಕೊಂಡು ಸಮನ್ವಯತೆಯನ್ನು ಬೋಧಿಸಿದ ಮಹಾಗುರು ಶ್ರೀ ರಾಮಕೃಷ್ಣ ಪರಮಹಂಸರು.  ಫೆಬ್ರವರಿ 17 ರಾಮಕೃಷ್ಣರ ಜನ್ಮದಿನ. ಕೆಲವೆಡೆ ಇದನ್ನು 18ರಂದು ಆಚರಿಸಲಾಗುತ್ತದೆ.