ಕುರುಕ್ಷೇತ್ರ ದಿನಚರಿ : ಆ 18 ದಿನಗಳಲ್ಲಿ ಏನೇನಾಯಿತು ಗೊತ್ತೆ?

ಕೌರವ – ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧ 18 ದಿನಗಳ ಕಾಲ ನಡೆಯಿತು. ಅಂತಿಮವಾಗಿ ಕೌರವರಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಪಾಂಡವರೇ ವಿಜಯಿಗಳಾದರು. ಈ ಯುದ್ಧದ 18 ದಿನಗಳ ಪ್ರತಿದಿನದ ಕಾಲಾನುಕ್ರಮ ಸಾರಾಂಶ ಇಲ್ಲಿದೆ … ದಿನ 1 : ಮೊದಲ ದಿನ ಕೌರವರ ಕೈಮೇಲಾಗಿ ಪಾಂಡವ ಸೇನೆಗೆ ದೊಡ್ಡ ನಷ್ಟ ಉಂಟಾಯಿತು. ದಿನ 2 : ಎರಡನೇ ದಿನ ಪಾಂಡವರು ಚೇತರಿಸಿಕೊಂಡು, ದಿನಾಂತದಲ್ಲಿ ಕೌರವರ ಸೇನೆಯನ್ನು ಮಣಿಸಿದರು. ಈ ದಿನ ಕೌರವಸೇನೆ ಅಪಾರ ನಷ್ಟ ಅನುಭವಿಸಿತು ದಿನ […]

ಯುದ್ಧ ಮತ್ತು ಬದುಕು : ಭಗವದ್ಗೀತೆಯ 8 ಪಾಠಗಳು

ಬದುಕೇ ಒಂದು ಯುದ್ಧ. ಯುದ್ಧ ಪ್ರಕ್ರಿಯೆ ಕೂಡಾ ಬದುಕಿನ ಸವಾಲುಗಳಿಗಿಂತ ಬೇರೆಯಲ್ಲ. ಯುದ್ಧಕ್ಕೂ ಬದುಕಿಗೂ ಹೊಂದುವಂಥ ಬೋಧನೆಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅವುಗಳಲ್ಲಿ 8 ಮುಖ್ಯ ಹೇಳಿಕೆಗಳು ಇಲ್ಲಿವೆ… 1.ಯುದ್ಧವಿರಲಿ, ಬದುಕು… ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕು. ದೇಶ – ಕಾಲ – ಸಮಯ – ಸಂದರ್ಭದ ಜೊತೆ ನಮ್ಮ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ಅಗತ್ಯವಾಗಿ ದೊರೆಯುವುದು.  2. ನಾನು ಯುದ್ಧ ಮಾಡುವುದಿಲ್ಲವೆಂದು ಅರ್ಜುನ ತಲೆ ತಗ್ಗಿಸಿದಾಗ ‘ಹೇಡಿಯಂತಾಡಬೇಡ ಪಾರ್ಥ!” ಎಂದು ತಿವಿಯುತ್ತಾನೆ ಗೀತಾಚಾರ್ಯ. ಎಂಥದೇ ಸವಾಲು […]

ಶತ್ರುವಿನೊಡನೆ ಯುದ್ಧ ಹೂಡುವ ಮುನ್ನ : ಚಾಣಕ್ಯನ 5 ನೀತಿ ಪಾಠಗಳು

ಅಪ್ರತಿಮ ರಾಜನೀತಿಜ್ಞ ಚಾಣಕ್ಯ, ಶತ್ರುಗಳನ್ನು ಹೇಗೆ ಮಣಿಸಬೇಕು ಎಂಬುದರ ಜೊತೆಗೆ, ಯುದ್ಧ ಹೂಡುವ ಮುನ್ನ ಯಾವುದೆಲ್ಲ ಸಂಗತಿಗಳ ಕಡೆ ಗಮನ ಹರಿಸಬೇಕೆಂದೂ ಸಲಹೆ ನೀಡುತ್ತಾನೆ. ಅಂತಹಾ ಸಲಹೆಗಳಲ್ಲಿ 5 ಇಲ್ಲಿವೆ:  1. ಕೆರಳಬೇಡಿ, ಸಂಯಮ ವಹಿಸಿ 2. ಅಧ್ಯಯನ ಮಾಡಿ, ತಂತ್ರ ಹೆಣೆಯಿರಿ 3. ಸಂದರ್ಭ ಬರುವವರೆಗೆ ಕಾಯಿರಿ 4. ದ್ವೇಷದಲ್ಲಿ ಕುರುಡಾಗಬೇಡಿ 5. ಕೊನೆಯ ಆಯ್ಕೆಯಾಗಿರಲಿ  

ಯುದ್ಧ ~ ಒಂದು ಗಿಬ್ರಾನ್ ಕಥೆ : Tea time story

ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ರಾಜನ ಅರಮನೆಯಲ್ಲಿ ಸಂಭ್ರಮದ ಔತಣ ಕೂಟ ಏರ್ಪಾಡಾಗಿತ್ತು. ಮಂತ್ರಿಗಳು, ಅಧಿಕಾರಿಗಳು ಎಲ್ಲ ಮೋಜಿನಲ್ಲಿ ಮಗ್ನರಾಗಿದ್ದರು. ಅದೇ ಸಮಯಕ್ಕೆ ಆ ಜಾಗಕ್ಕೆ ವ್ಯಕ್ತಿಯೊಬ್ಬನ ಪ್ರವೇಶವಾಯಿತು. ಅ ವ್ಯಕ್ತಿ ರಾಜನ ಮುಂದೆ ಹೋಗಿ ನಿಂತ. ಅಲ್ಲಿ ಸೇರಿದ್ದ ಎಲ್ಲರೂ ಆ ವ್ಯಕ್ತಿಯನ್ನು ಗಾಬರಿಯಿಂದ ನೋಡತೊಡಗಿದರು. ಅವನ ಕಣ್ಣಿನ ಗುಡ್ಡೆ ಹೊರ ಬಂದಿತ್ತು, ಕಣ್ಣಿಂದ ರಕ್ತ, ಧಾರಾಕಾರವಾಗಿ ಹರಿಯುತ್ತಿತ್ತು. “ ಏನಾಯ್ತು ನಿನಗೆ?, ನಿನ್ನ ಈ ಸ್ಥಿತಿಗೆ ಯಾರು ಕಾರಣ?” ರಾಜ […]

ಬಾಕ್ಸಿಂಗ್ ರಿಂಗ್’ನಿಂದ ಸೂಫಿ ಪ್ರೇಮದೆಡೆಗೆ : ಅಲಿ ಪಯಣದ ಹಾದಿ

ಮಹಮ್ಮದ್ ಅಲಿ ಬದುಕಿನ ಅತಿ ಶ್ರೇಷ್ಠ ಸಾಧನೆ ಅವರ ಯುದ್ಧ ನಿರಾಕರಣೆ. ಯುದ್ಧಕ್ಕೆ ಬೆನ್ನು ತಿರುಗಿಸೋದು ಎಲ್ಲ ಸಲವೂ ಹೇಡಿಗಳ ಲಕ್ಷಣವೇ ಆಗಿರೋದಿಲ್ಲ. ಬಹಳ ಸಲ ಅದಕ್ಕೆ ಹೆಚ್ಚಿನ ಎದೆಗಾರಿಕೆಯೇ ಬೇಕಾಗುತ್ತೆ. ಬಲವಿದ್ದೂ ಯುದ್ಧ ನಿರಾಕರಿಸುವುದು ಧೀರರಿಂದಷ್ಟೇ ಸಾಧ್ಯವಾಗುವ ಕೆಲಸ. ಮಹಮ್ಮದ್ ಅಲಿ ಅಂತಹ ಧೀರರಲ್ಲಿ ಒಬ್ಬರಾಗಿದ್ದರು ~ ಚೇತನಾ “ನಾನು ಯುದ್ಧಕ್ಕೆ ಹೋಗೋದಿಲ್ಲ. ನಾನು ಬಾವುಟಗಳನ್ನ ಸುಡೋದಿಲ್ಲ. ಕೆನಡಾಕ್ಕೆ ಓಡೋ ಧಾವಂತ ನನಗಿಲ್ಲ. ನಾನಿಲ್ಲೇ ಇರುವವನು. ನನ್ನನ್ನ ನೀವು ಸೆರೆಮನೆಗೆ ಕಳಿಸ್ತೀರೇನು!? ಒಳ್ಳೆಯದು!! ಈಗಲೇ ಆ […]

ಯುದ್ಧ ಮತ್ತು ಸಣ್ಣ ದೇಶಗಳು : ಒಂದು ಖಲೀಲ್ ಗಿಬ್ರಾನ್ ಕಥೆ

ಅನುವಾದ : ಚಿದಂಬರ ನರೇಂದ್ರ ಬೆಟ್ಟದ ತಪ್ಪಲಲ್ಲಿ ಒಂದು ಕುರಿ ತನ್ನ ಮರಿಯೊಂದಿಗೆ ಆನಂದದಿಂದ ಹುಲ್ಲು ಮೇಯುತ್ತ ಹಾಯಾಗಿ ಓಡಾಡುತ್ತಿದ್ದರೆ, ಮೇಲೆ ಆಕಾಶದಲ್ಲಿ ಒಂದು ಹಸಿದ ರಣಹದ್ದು ಕುರಿಮರಿಯ ಮೇಲೆ ಹೊಂಚು ಹಾಕಿ ಅವಕಾಶಕ್ಕಾಗಿ ಕ್ಷಣಗಣನೆ ಮಾಡುತ್ತಿತ್ತು. ಇನ್ನೇನು ಹದ್ದು ವೇಗದಿಂದ ಹಾರುತ್ತ ಕುರಿಮರಿಯ ಹತ್ತಿರ ಬರುತ್ತಿದ್ದಂತೆಯೇ, ಇನ್ನೊಂದು ರಣಹದ್ದು ಅಷ್ಟೇ ರಭಸದಿಂದ ಕುರಿಮರಿಯ ಮೇಲೆ ಆಕ್ರಮಣ ಮಾಡಿತು. ಎರಡೂ ಹದ್ದುಗಳು ಭೀಕರವಾಗಿ ಒಂದನ್ನೊಂದು ಚುಚ್ಚುತ್ತ, ಜೋರಾಗಿ ಆಕ್ರಂದನ ಮಾಡುತ್ತ ಆಕಾಶದ ತುಂಬ ಗದ್ದಲ ಹಾಕತೊಡಗಿದವು. ಈ […]

ದಾವೂದ ಆರಿಸಿದ ಕುದುರೆಗಳ ವೈಶಿಷ್ಟ್ಯ

ಇಸ್ರೇಲಿನ ದೊರೆ ದಾವೂದ ತನ್ನ ಸೇನಾಬಲವನ್ನು ವಿಸ್ತರಿಸುತ್ತಿದ್ದ. ಆಶ್ವದಳಕ್ಕೆ ಹೊಸ ಕುದುರೆಗಳನ್ನು ಸೇರಿಸಬೇಕಾಗಿತ್ತು. ಅದಕ್ಕಾಗಿ ಇಬ್ಬರು ಅಶ್ವದಳದ ಮೇಲ್ವಿಚಾರಕರನ್ನು ನಿಯೋಜಿಸಿದ. ವಾರಗಳ ನಂತರ ತಲಾ ಆರು ಕುದುರೆಗಳೊಂದಿಗೆ ಮರಳಿ ಬಂದ ಅಶ್ವದಳದ ಮೇಲ್ವಿಚಾರಕರು ದಾವೂದನ ಎದುರು ಅವನ್ನು ನಿಲ್ಲಿಸಿದರು. ದಾವೂದ ಮೊದಲನೆಯ ಮೇಲ್ವಿಚಾರಕನ್ನು ಕುರಿತ, “ನೀನು ತಂದಿರುವ ಕುದುರೆಗಳ ವೈಶಿಷ್ಟ್ಯತೆ ಏನು?” ಎಂದು ಕೇಳಿದ. ಅವನು ಕುದುರೆಗಳಿಗೆ ಸನ್ನೆ ಮಾಡಿದ. ಮೊದಲನೆ ಕುದುರೆ ಹಿಂಗಾಲುಗಳ ಮೇಲೆ ನಿಂತಿತು. ಎರಡನೆಯದು ಮುಂಗಾಲುಗಳ ಮೇಲೆ ನಿಂತಿತು. ಮೂರನೆಯದು ಹಾರುವ ಭಂಗಿಯಲ್ಲೂ […]