ಅಧ್ಯಾತ್ಮ ಡೈರಿ : ಮಡಕೆಯೊಳಗೆ ಕೈಹಾಕಿದ ಮಂಗನ ಸ್ಥಿತಿ ನಮ್ಮದು

ಸಂಬಂಧದ ಸವಿಯನ್ನು ನಾವು ಉಣ್ಣಬೇಕು. ಹಾಗೆ ಉಣ್ಣಬೇಕೆಂದರೆ ಅದನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಮಡಕೆಯನ್ನು ಬೋರಲು ಹಾಕಿದರೆ ಒಳಗಿರುವ ತಿನಿಸು ಹೊರಗೆ ಬರುತ್ತದೆ ಎಂದು ಯೋಚಿಸುವ ವ್ಯವಧಾನವೂ ನಮಗಿರುವುದಿಲ್ಲ. ನಾವು ಸಂಬಂಧವನ್ನು ಹಿಡಿದಿಟ್ಟುಕೊಂಡು ಅನುಭವಿಸಲು ಬಯಸುತ್ತೇವೆ ~ ಅಲಾವಿಕಾ

ಅಧ್ಯಾತ್ಮ ಡೈರಿ : ಉಪ್ಪಿಟ್ಟು ಹೋಟೆಲಿನ ಹುಡುಕಾಟ ಮತ್ತು ವಾರಾಂತ್ಯದ ಗೊಣಗಾಟ

ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು, ಅವನ್ನು ನಮ್ಮದಾಗಿಸಿಕೊಳ್ಳಲು ನಾವು ಅದೆಷ್ಟು ಕಣಿ ಹಾಡುತ್ತೇವೆಂದರೆ, ತೋಳು ತೆರೆಯಲಿಕ್ಕೇ  ನೂರೊಂದು ನೆವ ಹೇಳುತ್ತೇವೆ. ನಮ್ಮದೇನಿದ್ದರೂ ಗುರುತು ಪರಿಚಯ ಇರುವ ಏರಿಯಾದಲ್ಲಷ್ಟೆ ವ್ಯವಹಾರ. ಇದೊಂದು ಮಜವಾದ ಸಂಗತಿ. ನಮ್ಮಲ್ಲಿ ಬಹಳಷ್ಟು ಜನ ಹೀಗೆ ಮಾಡುತ್ತೇವೆ. ಕಶ್ಮೀರಕ್ಕೆ ಹೋಗಿ ಇಡ್ಲಿ, ಉಪ್ಪಿಟ್ಟು ಸಿಗುವ ಹೋಟೆಲ್ ಹುಡುಕುತ್ತೇವೆ. ಅಲ್ಲಿನ ಸೌಂದರ್ಯವನ್ನು ಮನಸಾರೆ ಅನುಭವಿಸಿಯೂ ಇನ್ನೇನು ಊರು ತಲುಪಲಿದ್ದೇವೆ ಅನ್ನುವಾಗ “ಎಷ್ಟು ದೇಶ ಸುತ್ತಿದರೂ ನಮ್ಮ ಊರೇ ನಮಗೆ ಚೆಂದ” ಅಂತ ಡೈಲಾಗು ಹೊಡೆಯುತ್ತೇವೆ. ನಾವ್ಯಾಕೆ […]

ಅಧ್ಯಾತ್ಮ ಡೈರಿ ~ ಕಳೆದುಕೊಳ್ಳುವುದರ ಸುಖ ದುಃಖ

ಯಾವುದೇ ವಸ್ತು – ವ್ಯಕ್ತಿಗಳ ಪಾತ್ರವಿಷ್ಟೇ –  ನಮ್ಮ  ಜೀವನದ ತಿರುವುಗಳಿಗೆ, ಅನುಭವಗಳಿಗೆ, ಸುಖ ದುಃಖಗಳಿಗೆ ನಿಮಿತ್ತವಾಗುವುದು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ಆಯುಷ್ಯವೇ ನಮ್ಮ ಕಣ್ಣೆದುರು ಕಳೆದುಹೋಗುತ್ತಿರುವಾಗ, ವಸ್ತುಗಳ ಬಗ್ಗೆ ಎಷ್ಟು ಕಾಲ ಶೋಕಿಸಬಲ್ಲೆವು? ~ ಅಲಾವಿಕಾ ಕಳಕೊಳ್ಳುವ ನೋವು, ಕಳಕೊಂಡವರಿಗಷ್ಟೆ ಗೊತ್ತು! ನಿಜ… ಆದರೆ ಕಳಕೊಳ್ಳುವುದು ಎಂದರೆ ಹಗುರಾಗುವುದು ಕೂಡಾ!ಏನನ್ನಾದರೂ ಕಳಕೊಂಡಾಗ ನಾವು ಅದನ್ನು ಹುಡುಕಲು ಯತ್ನಿಸುತ್ತೇವೆ. ಅದು ನಮ್ಮ ಜವಾಬ್ದಾರಿಯೂ ಹೌದು. ಆ ವಸ್ತು ಸಿಗುವುದಿಲ್ಲ  ಎಂದರಿವಾದಾಗಲೂ ಹುಡುಕಾಟ  ಮುಂದುವರೆಸುತ್ತೇವೆ. ಉದಾಹರಣೆಗೆ, ನಾವು […]

ಅಧ್ಯಾತ್ಮ ಡೈರಿ : ಇರುವಲ್ಲೇ ಖುಷಿ ಕಾಣದೆ ಹೋದರೆ…

“ನೀನು ಇರೋ ಕಡೇನೇ ನಿನಗೆ ಆನಂದ ಸಿಗ್ತಾ ಇಲ್ಲ ಅಂತಾದರೆ ನೀನು ಬೇರೆ ಕಡೆ ಅದನ್ನ ಹುಡುಕೋದು ವ್ಯರ್ಥ” ಅಂತಾನೆ ಡೋಜೆನ್. ಈ ಮಾತು ಎಷ್ಟು ನಿಜ ನೋಡಿ! ನಿಮಗೆ ಕೆಲಸದಲ್ಲಿ ಖುಷಿ ಸಿಗಲಿಲ್ಲ ಎಂದಾದರೆ ಸಂಸಾರದಲ್ಲೂ ಖುಷಿ ಸಿಗುವುದಿಲ್ಲ. ಲೌಕಿಕದಲ್ಲಿ ನೀನು ಆನಂದದಿಂದ ಇರಲು ಸಾಧ್ಯವಾಗದೆ ಹೋದರೆ, ಅಧ್ಯಾತ್ಮದಲ್ಲೂ ನೀವು ಆನಂದದಿಂದ ಇರಲಾರಿರಿ ~ ಅಲಾವಿಕಾ ಇಲ್ಲ… ಎಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, […]

ಅಧ್ಯಾತ್ಮ ಡೈರಿ : ಉದ್ದನೆಯ ಹಾಸಿಗೆಯನ್ನು ಹೊಂದಿಸುವುದು

ಬಹುತೇಕರ ಪಾಲಿಗೆ ಜೀವನ ಅಂದರೇನೇ ಉದ್ದನೆ ಹಾಸಿಗೆಯನ್ನು ಹೊಂದಿಸುವುದು. ಅವರಿಗೆ ಇದ್ದುರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕುವುದರಲ್ಲಿ ಆಸಕ್ತಿಯಿಲ್ಲ. ಇಲ್ಲದುದಕ್ಕೆ ಹಂಬಲಪಡದೆ ಸಂತೃಪ್ತರಾಗಿ ಬದುಕುವ ಆಲೋಚನೆ ಮಾಡಲಿಕ್ಕಂತೂ ಅವರಿಂದ ಸಾಧ್ಯವೇ ಇಲ್ಲ! ~ ಅಲಾವಿಕಾ ಕಾಲು ಚಾಚಿ ಮಲಗೋದಂದರೆ ಎಲ್ಲರಿಗೂ ಇಷ್ಟ. ಯಾರು ತಾನೇ ಕಾಲು ಮಡಚಿಕೊಂಡು ಮಲಗುತ್ತಾರೆ? ಕೆಲವರು ಇರುತ್ತಾರೆ. ಹಾಸಿಗೆ ಚಿಕ್ಕದಾಗಿ ಚಾಚಿದ ಕಾಲು ನೆಲದ ಮೇಲೆ ಹೋದರೆ ಅವರಿಗೇನೂ ಚಿಂತೆ ಇಲ್ಲ. ಅವರಿಗೆ ಚಿಕ್ಕ ಹಾಸಿಗೆಯಲ್ಲೂ ಕಾಲುಚಾಚಿ ಮಲಗಿ ನಿದ್ರಿಸುವ ಕಲೆ ಸಿದ್ಧಿಸಿದೆ. ಅವರು […]

ಅಧ್ಯಾತ್ಮ ಡೈರಿ : ಕೊಟ್ಟ ಕುದುರೆಯ ಬಿಟ್ಟು ಹಲಬುವ…

ಚಿಕ್ಕ  ಚಿಕ್ಕ ವಿಷಯಕ್ಕೆ ನೀವು ಪಡುವ ಫ್ರಸ್ಟ್ರೇಶನ್ ನಿಮ್ಮ ಮುಂದಿನ ಕೆಲಸಗಳ ಮೇಲೆ ನಿಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಾ, ಒಂದಕ್ಕೊಂದು ಢಿಕ್ಕಿ ಹೊಡೆಯುವ ಲೋಲಕಗಳಂತೆ ಹೊಯ್ದಾಡತೊಡಗುತ್ತದೆ. ಹಾಗೇ, ಇಷ್ಟು ಚಿಕ್ಕ ವಿಷಯದಲ್ಲಿ, ಕೈಲಿರುವುದಕ್ಕೆ ತೃಪ್ತಿಪಡಲು ಕಲಿತಿರದ ನೀವು, ದೊಡ್ಡ ನಿರೀಕ್ಷೆಗಳ ವಿಷಯದಲ್ಲಿ ಹೇಗೆ ವರ್ತಿಸುವಿರಿ!? ಯೋಚಿಸಿ. ಯಾವುದೋ ಒಂದು ಫನ್ ಗೇಮ್ ಕಾಂಪಿಟೇಶನ್. ಅದರಲ್ಲಿ ನಿಮಗೆ ಬಹುಮಾನ ಬಂದಿರುತ್ತದೆ. ನಿಮ್ಮ ಗೆಳೆಯರಿಗೂ ಬಂದಿರುತ್ತದೆ. ಬಹುಮಾನ ರೂಪದಲ್ಲಿ ನಿಮಗೆ ಕೊಡಲಾಗಿರುವ ವಸ್ತು ಏನಿರಬಹುದು ಅನ್ನುವಷ್ಟೇ, ಅಥವಾ ಅದಕ್ಕಿಂತ ಹೆಚ್ಚಿನ […]

ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?

ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. ಶಿಷ್ಯರು ಕೆಲವೊಮ್ಮೆ ಹುಡುಕುವ ಪ್ರಕ್ರಿಯೆಯಲ್ಲಿ ಕಲಿಯುತ್ತಿದ್ದರು. ಕೆಲವೊಮ್ಮೆ ಉತ್ತರ ಕಂಡುಕೊಂಡ ಮೇಲೆ ಅವರ ಕಲಿಕೆ ಪೂರ್ಣಗೊಳ್ಳುತ್ತಿತ್ತು. ವಾ-ಐನ್-ಸಾಇಲ್‌ ಆಶ್ರಮದಲ್ಲಿದ್ದಾಗ ನಡೆದ ಘಟನೆ ಇದು. ನಸುಕಿನ ಗಂಟೆ ಬಾರಿಸಿತು ಶಿಷ್ಯರೆಲ್ಲಾ ಬಂದು ನಿಂತರು. ಹಿಂದಿನ ರಾತ್ರಿಯ ಪಾನೀಯ ಸಾಧನೆಯಿಂದಲೋ ಅಥವಾ ಮತ್ಯಾವ ಕಾರಣದಿಂದಲೋ ರಾ-ಉಮ್ ಏಳುವಾಗ ತಡವಾಗಿತ್ತು. ಬೆಳಗಿನ ಉಪಾಹಾರವೂ […]